ಸೌಂದರ್ಯಕ್ಕಾಗಿ ಆಯುರ್ವೇದ -ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ??

ಸೌಂದರ್ಯಕ್ಕಾಗಿ ಆಯುರ್ವೇದ – ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ? ? ತ್ವಚೆಯ ಸಂರಕ್ಷಣೆ  ಹಾಗು ಇದರ ಸುಲಭೋಪಾಯ, ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮ ತಿಳಿಯೋಣ.

ಸೌಂದರ್ಯಕ್ಕಾಗಿ ಆಯುರ್ವೇದ -ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ??ಮಾನವನು ತನ್ನ ಮೌಲ್ಯಗಳನ್ನು ಕಳೆದುಕೊಂಡು ಕಾಲಕ್ಕೆ ತಕ್ಕಂತೆ ನರ್ತಿಸುವ ಕಾಲದಲ್ಲಿ “ಮುಖ ನೋಡಿ ಮಣ್ಣೆ” ಹಾಕುವವರೆ ಹೆಚ್ಚು, ಆದುದರಿಂದಲೆ ಆಂತರಿಕ ಸೌಂದರ್ಯಕ್ಕಿಂತ, ಬಾಹ್ಯ ಸೌಂದರರ್ಯದ ಬಗೆಯ ಕಾಳಜಿ ಹೆಚ್ಚಾದಂತಿರಬೇಕು. ಈ ಕಾರಣಗಳಿಂದಲೇ ಮಾರುಕಟ್ಟೆಯಲ್ಲಿ ದಿನಕ್ಕೊಂದು ವಿಧ ವಿಧವಾದ ಸೌಂದರ್ಯ ವರ್ಧಕಗಳ ಹಾವಳಿ ನಡೆದಿರುವುದು.

ಸೌಂದರ್ಯದ ಪರಿ ಪಾಟನ ಕೇಳಿದರೆ ಏಲ್ಲರು ಸಾಮಾನ್ಯವಾಗಿ ನೀಡುವ ಮೊದಲ ಉತ್ತರ ಅಂದವಾದ ಕಾಂತಿಯುಕ್ತ ಕಲೆ-ಮೊಡವೆ ರಹಿತ ಮುಖ. ಇಂತಹ ಸಮಯದಲ್ಲಿ ಸರ್ವೆ ಸಾಮಾನ್ಯವಾಗಿ ಮೂಡುವ ಪ್ರಶ್ನೆ ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು?? ಪ್ರಾಕೃತಿಕವಾಗಿ ಅಂದ ತಕ್ಷಣ ಥಟ್ ನೆನಪಿಗೆ ಬರುವುದು ಆಯುರ್ವೇದ ಹಾಗು ಅದರ ಮನೆ ಮದ್ದು.

ನಿಜ ಸೌಂದರ್ಯ ನೋಡುವವರ ಕಣ್ಣಲಿ ಎಂಬುದು ಎಷ್ಟು ಸತ್ಯವೊ ಅಷ್ಟೆ ಸತ್ಯ ಒಬ್ಬ ವ್ಯಕ್ತಿಯ ಮಾನಸಿಕ ಹಾಗು ದೈಹಿಕ ಆರೋಗ್ಯ. ಈಗ ಮುಖದ ಸೌಂದರ್ಯ ಅಥವ ಚರ್ಮದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕಾರಣಗಳನ್ನು ತಿಳಿಯೋಣ-

ತ್ವಚೆಯ ಆರೋಗ್ಯ ಹಾನಿಗೆ ಪ್ರಮುಖ ಕಾರಣಗಳು:

• ಖುತು ವೈಪರಿತ್ಯ
• ದೋಷ ವೈಪರಿತ್ಯ
• ವಾಯು, ನೀರು, ದೇಶ, ಕಾಲದ ಪರಿಣಾಮವಾಗಿ
• ರಾತ್ರಿ ಜಾಗರಣೆ
• ವ್ಯಕ್ತಿಯ ಪ್ರಕೃತಿ
• ಅತಿಯಾದ ಸೂರ್ಯನ ತಾಪಕ್ಕೆ ಹೋಗುವುದು.

ತ್ವಚೆಯ ಸಂರಕ್ಷಣೆ  ಹಾಗು ಇದರ ಸುಲಭೋಪಾಯ:

1. ಖುತುವಿನ ತಕ್ಕ ಹಾಗೆ ಊಟೋಪಚರ ಹಾಗೂ ಶೋಧನ ಕಾರ್ಯಗಳು; ವಸಂತದಲ್ಲಿ ವಮನ; ಶರದಿನಲ್ಲಿ ವಿರೇಚನ ಹಾಗು ವರ್ಷದಲ್ಲಿ ಬಸ್ತಿ ಕರ್ಮ ನಿಯಮಿತವಾದ ಶೋಧನ ಕ್ರಿಯೆಗಳು ದೋಷ ವೈಷಮ್ಯತೆಯನ್ನು ಹೋಗಲಾಡಿಸಿ; ಶರೀರದ ಆರೋಗ್ಯವನ್ನು ಕಾಪಾಡುತ್ತದೆ. ಆಗಲೆ ಹೇಳಿದಂತೆ ತ್ವಚೆಯು ಆರೋಗ್ಯದ ಕೈಗನ್ನಡಿ, ಈ ಶೋಧನ ಕ್ರಿಯೆಯು ಕಾಂತಿಯನ್ನು ಹೆಚ್ಚಿಸುತ್ತದೆ.

2. ನಿದ್ರೆಯು ಸೌಂದರ್ಯ ಕಾಪಾಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಕಾಲ-ಪ್ರಮಾಣದ ನಿದ್ರೆ ಕಾಂತಿ, ತ್ವಚೆಗೆ ಕಾರಣವಾದರೆ, ಕಮ್ಮಿ ಪ್ರಮಾಣದ ನಿದ್ರೆಯು ತ್ವಚೆಯನ್ನು ಕಪ್ಪಾಗಿಸಿ; ಕಾಂತಿಯನ್ನು ಹಾಳು ಮಾಡುತ್ತದೆ. ಅತಿಯಾದ ನಿದ್ರೆ ಮೊಡವೆಗಳಿಗೆ ಕಾರಣವಾಗಬಹುದು.

3. ವಾಯು, ನೀರು, ದೇಶ, ಕಾಲದ ಪರಿಣಾಮವಾಗಿ ದೇಹದಲ್ಲಿನ ದೋಷಗಳ ಅವಸ್ಥೆಯು ಬದಲಾಗುತ್ತದೆ, ಹಾಗಾಗಿ ಸಮಾಲೋಚಿಸಿ ವಿಶೇಷವಾದ ಮುಖ ಲೇಪಗಳ (face pack) ಪ್ರಯೋಗ ಮಾಡಬೇಕು.

4. ವ್ಯಕ್ತಿಯ ಪ್ರಕೃತಿಯ ಮೇಲೆಯೆ ಅವನ ಆರೋಗ್ಯ-ಅನಾರ‍ೋಗ್ಯದ ನಿರ್ಧರವಾಗುತ್ತದೆ; ತ್ವಚೆಯ ವಿಷಯದಲ್ಲು ಇದು ಅಷ್ಟೆ ನಿಜ. ಉದಾಹರಣೆಗೆ – ವಾತ ಪ್ರಕೃತಿಯ ವ್ಯಕ್ತಿಯ ತ್ವಚೆ ಬಹಳ ರುಕ್ಷತೆಯಿಂದ (dry skin) ಕಾಂತಿ ಹೀನವಾದರೆ, ಕಫ ಪ್ರಕೃತಿಯ ವ್ಯಕ್ತಿಯ ತ್ವಚೆ ಜಿಡ್ಡಿನಂಶದಿಂದ (oily skin) ಕೂಡಿರುತ್ತದೆ, ಪಿತ್ತಪ್ರಕೃತಿಯ ವ್ಯಕ್ತಿಯನ್ನು ಮೊಡವೆ (Pimples and black heads) ಬಹಳ ಬಾದಿಸುತ್ತದೆ.

5. ಅತಿಯಾದ ಸೂರ್ಯನ ತಾಪಕ್ಕೆ ಹೋಗುವುದರಿಂದ ತ್ವಚೆಯ ರಚನೆ ಹಾಗು ಕ್ರಿಯೆಯಲ್ಲಿ ಏರು-ಪೇರಾಗುವುದರಿಂದ ಕಾಂತಿ ಹೀನವಾಗಿ ಹಲವು ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. ಅದಕ್ಕಾಗಿ ಬಿಸಿಲಿಗೆ ಹೋಗುವಾಗ ಚತ್ರಿಬಳಸುವುದು; ಅಥವ ಸೂಕ್ತವಾದ ಸನ್ ಸ್ಕ್ರಿನ್ ಲೊಶನ್ ಬಳಸುವುದು ಅತ್ಯಗತ್ಯ.

ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮ:

turmeric and skin careಇವೆಲ್ಲ ವಿಷಯ ತಿಳಿದ ಮೇಲೆ ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮಗಳನ್ನು ತಿಳಿಯೋಣ-
• ಮೊಡವೆ ಹಾಗೂ ಮುಖದ ಕಲೆ ನಿವಾರಣೆಗೆ – ಅಮಲಕ್ಕಿ ಕಷಾಯದಿಂದ ಮುಖ ತೋಳೆಯುವುದು.
• ರುಕ್ಷತೆಯಿಂದ ಕಾಂತಿ ಹೀನವಾದ ತ್ವಚೆಗೆ – ಹಾಲಿನ ಕೆನೆಗೆ ಚಿಟಕೆ ಅರಿಶಿಣ ಹಾಕಿ; ಇದರಿಂದ ಮುಖಕ್ಕೆ ಮಸಾಜ್ ಮಾಡುವುದು.
• ತ್ವಚೆಯ ಜಿಡ್ಡಿನಂಶದ ಸಮಸ್ಯೆಗೆ – ಹೆಸರುಕಾಳಿನ ಹಿಟ್ಟಿನಿಂದ ದಿನಕ್ಕೆ ಎರಡು ಬಾರಿ ಮುಖ ತೊಳೆಯುವುದು.
• ಸೂರ್ಯನ ತಾಪದಿಂದ ತ್ವಚೆಯ ಬಣ್ಣ ಕಪ್ಪಗಿದ್ದಲಿ ಲೊಳೆ ರಸದಿಂದ ಮುಖಕ್ಕೆ ಮಸಾಜ್ ಮಾಡುವುದು ಲಾಭದಾಯಕ.

ಕೊನೆಯದಾಗಿ ನೆನಪಿರಲಿ ತಲೆಗೆಲ್ಲ ಒಂದೆ ಮದ್ದಲ್ಲ, ಹಾರ್ಮೊನಿನ ಸಮಸ್ಯೆಗೆ, ಮಾತೃ-ಪಿತೃಗಳಿಂದ ಬಂದ ದೋಷಕ್ಕೆ ಮೇಲೆ ಹೆಳಿರುವ ಪರಿಹಾರಗಳು ಮದ್ದಾಗಲಾರವು. ಸಂಶಯ ಇದ್ದಲ್ಲಿ ವೈದ್ಯರ ಭೇಟಿ ಸೂಕ್ತ.

Dr-ashwini- ಡಾ || ಅಶ್ವಿನಿ . ಎನ್ ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಕಾಲೇಜು ನಾಗರೂರು, ನೆಲಮಂಗಲ,, ಬೆಂಗಳೂರು ಉತ್ತರ- 562123 Ph: 7026362663

ಡಾ || ಅಶ್ವಿನಿ . ಎನ್
ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಕಾಲೇಜು
ನಾಗರೂರು, ನೆಲಮಂಗಲ,, ಬೆಂಗಳೂರು ಉತ್ತರ- 562123
Ph: 7026362663

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!