ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ ಈ ನಿಸರ್ಗ ಚಿಕಿತ್ಸೆ.

ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ – ಅಲ್ಲೊಂದು ನಿಯಮದ ಕಟ್ಟುಪಾಡು ಇಡಲೇಬೇಕಾಗಿದೆ. ಕೆಲವೊಮ್ಮೆ ಕಿರಿಕಿರಿಯಾಗುವ ತಲೆಸಿಡಿತ, ಹಲ್ಲು, ಕಿವಿ ನೋವುಗಳು ಹೀಗೆ ಹಲವು ರೀತಿಯಿಂದ ನಮ್ಮನ್ನು ಸತಾಯಿಸುತ್ತಿರುವುದಕ್ಕೆ ಮಣ್ಣು, ಗಾಳಿ, ಬಿಸಿಲಿನ ಸಹಕಾರದಿಂದ ಚಿಕಿತ್ಸೆಯನ್ನು ಮಾಡಬಹುದು. ಪಂಚಭೂತಗಳಾದ ಪೃಥ್ವಿ, ಜಲ, ತೇಜ, ಆಕಾಶ, ವಾಯು ಎಂಬ ಪಂಚ ಪ್ರಾಕೃತಿಕ ದೇವತೆಗಳು ಜಾತ್ಯಾತೀತವಾಗಿ ನಮ್ಮನ್ನು ರಕ್ಷಿಸುತ್ತದೆ ಎನ್ನುವ  ಮೂಲತತ್ವವೇ ಈ ನಿಸರ್ಗ ಚಿಕಿತ್ಸೆ.

ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ ಈ ನಿಸರ್ಗ ಚಿಕಿತ್ಸೆ.

ಪ್ರತಿನಿತ್ಯವೂ ನಿಗದಿತ ಸಮಯ್ಕಕೆ ಏಳುವ ಹಾಗೆ ನಿಯಮವಿಟ್ಟುಕೊಂಡಲ್ಲಿ ಬಹಳಷ್ಟು ಸುಲಭ ಅನ್ನಬಹುದು. ಒಬ್ಬೊಬ್ಬರ ಕಸುಬು ಒಂದೊಂದಾಗಿ ಹಂಚಿ ಹೋಗಿರುವಾಗ ಎಲ್ಲರಿಗೂ ಒಂದೇ ನಿಯಮ ಅನುಸರಿಸಲು ಸಾಧ್ಯವಾಗದು. ಕೆಲವರಿಗೆ ಹಗಲು ಪಾಳಿ, ಹಲವರಿಗೆ ರಾತ್ರಿಯ ದುಡಿತ, ಇನ್ನು ಕೆಲವರಿಗೆ ಹಗಲು ರಾತ್ರಿ ಎನ್ನದೇ ದುಡಿತ ಅನಿವಾರ್ಯ. ಬೆಳಗ್ಗಿನ ನಿದ್ರೆಗೆ ಇರುವಷ್ಟು ಪ್ರಾಧಾನ್ಯತೆ ಮತ್ತೆಲ್ಲಾ ಸಮಯಕ್ಕೆ ಅನ್ವಯವಾಗುವುದಿಲ್ಲ. ನಾವೊಂದು ಒಮ್ಮತದ ತೀರ್ಮಾನಕ್ಕೆ ಬರುವಾಗ ಅಲ್ಲೊಂದು ನಿಯಮದ ಕಟ್ಟುಪಾಡು ಇಡಲೇಬೇಕಾಗಿದೆ.

ಇದು ನಿಸರ್ಗ ಚಿಕಿತ್ಸಾ ವಿಧಾನದ ಮೇಲ್ನೋಟ. ಈ ಪದ್ಧತಿ ಪ್ರಕಾರ ಯಾವುದೇ ರೋಗ ನಮ್ಮನ್ನು ಬಾಧಿಸಿದ ಬಳಿಕ ನಾವು ಔಷಧಿಗಾಗಿ ತಡಕಾಡುವ ಸಂದರ್ಭ ಇರದು. ಇಷ್ಟಕ್ಕೂ ಈ ಚಿಕಿತ್ಸೆಯಲ್ಲಿ ಮಾತ್ರೆ, ಕಷಾಯ, ಲೇಹ, ಚೂರ್ಣ ಇತ್ಯಾದಿ ಯಾವುದೇ ವಿಧಾನವೂ ಇಲ್ಲದೆ ಪ್ರಕೃತಿ ದತ್ತವಾಗಿಯೇ ನಮಗೆ ಬಾಧಿಸಿದ, ನಾವು ರೋಗ ಎಂದು ಕರೆಯಲ್ಪಡುವ ಅಡ್ಡಿ ಆತಂಕಗಳು ಇಲ್ಲದಾಗುತ್ತದೆ. ಪಂಚಭೂತಗಳಾದ ಪೃಥ್ವಿ, ಜಲ, ತೇಜ, ಆಕಾಶ, ವಾಯು ಎಂಬ ಪಂಚ ಪ್ರಾಕೃತಿಕ ದೇವತೆಗಳು ಜಾತ್ಯಾತೀತವಾಗಿ ನಮ್ಮನ್ನು ರಕ್ಷಿಸುತ್ತದೆ ಎನ್ನುವ  ಮೂಲತತ್ವವೇ ಈ ನಿಸರ್ಗ ಚಿಕಿತ್ಸೆ.

1. ಪ್ರಾತಃಕಾಲ 4 ಗಂಟೆಯ ನಂತರ 5ರ ಒಳಗೆ ನಾವು ದೈನಂದಿನ ಚಟುವಟಿಕೆಗೆ ಸಿದ್ಧರಾಗಿರಬೇಕಾಗಿದೆ. ಸಾಧಾರಣ 5ರ ಒಳಗೆ ಹಾಸಿಗೆ ಬಿಟ್ಟು ಏಳುವುದು ಸೂಕ್ತಕರ. ಎದ್ದು ಮೊತ್ತ ಮೊದಲಾಗಿ ಚಾಪೆಯಲ್ಲಿ ಕುಳಿತುಕೊಂಡು ಒಂದು ಕ್ಷಣ ನಾವು ನಂಬುವ ಶಕ್ತಿ ಕೇಂದ್ರಕ್ಕೆ ವಂದಿಸಿಕೊಳ್ಳೋಣ. ಮಾತೃಪಿತೃಗಳ ಸ್ಮರಣೆಯೊಂದಿಗೆ ಅಂದಿನ ದಿನ ಆರಂಭಿಸಲು ಒಪ್ಪಿಗೆ ಮಾಡಿಕೊಂಡೆವು ಎಂದಾದರೆ ತದನಂತರ ಪ್ರಾತಃಕಾಲದ ವಿಧಿಗಳಿಗೆ ಸಿದ್ಧರಾದೆವು ಎಂದೇ ಅರ್ಥ.

2. ಆದರೆ, ನಾವು ಮಾಡಲೇಬೇಕಾದ ಆರೋಗ್ಯದ ಸರಳ ಸಂವಿಧಾನ ಆರಂಭಿಸುವ ಶುಭಗಳಿಗೆಯಲ್ಲಿ ನಮ್ಮ ಖಾಲಿ ಹೊಟ್ಟೆಗೆ ಆಹಾರ ಸೇರುವ ಮೊದಲು ಪರಿಶುದ್ಧವಾದ ತಣ್ಣೀರು ಒಂದೆರಡು ಲೀಟರಿನಷ್ಟು ಕುಡಿಯುವುದು ಸೂಕ್ತ. ಇದರಿಂದ ಶೌಚಾದಿಗಳಿಗೆ ಬಹಳಷ್ಟು ಸುಲಭವಾಗುತ್ತದೆ ಎಂಬುದು ನಿಮ್ಮ ಬಾಯಿಯಿಂದಲೇ ಹೇಳಲ್ಪಡುತ್ತದೆ. ಎಲ್ಲಾ ರೋಗಗಳಿಗೂ ಮೂಲ ಕಾರಣ ಮಲಬದ್ಧತೆ ಅಂದರೆ ನಿಯಮಿತವಾಗಿ ಶೋಧನೆ ಆಗದಿರುವುದು. ಹೊಟ್ಟೆಯೊಳಗೆ ಅವಿತಿರುವ ಜೀರ್ಣಿಸಿಕೊಂಡ ಆಹಾರದ ಶೇಷಾಂಶಗಳು ಯಾವುದೇ ತಡೆಯಿಲ್ಲದೆ ಸಲೀಸಾಗಿ ಹೊರದೂಡಲು ಒಳ ಸೇರಿದ ನೀರು ಬಹಳಷ್ಟು ಸಹಕರಿಸಬಲ್ಲುದು.

Also Read: ಮಲಬದ್ಧತೆ : ಆಹಾರ ಕ್ರಮದಲ್ಲಿನ ಅಬದ್ಧತೆ

3. ಶೌಚಾಲಯದ ಒಳ ಸೇರಿದ ಮೇಲೆ ನೀರಿನ ಧಾರೆ ಕಿಬ್ಬೊಟ್ಟೆಯ ಮೇಲೆ ಬೀಳುವ ಹಾಗೆ ಅವರವರ ಸ್ಥಿತಿಗತಿಗೆ ತಕ್ಕಂತೆ ಅಳವಡಿಸಿಕೊಂಡ ವಿಧಾನವನ್ನು ಬಳಸಲು ಆರಂಭಿಸಬಹುದು. ತಣ್ಣೀರು ಆದರೆ ಉತ್ತಮ ಎಂದಾದರೂ ಹವಾಮಾನ ವೈಪರೀತ್ಯತೆಯಿಂದ ಕೆಲಮೊಮ್ಮೆ ಬಿಸಿ ನೀರನ್ನೂ ಬಳಸಿಕೊಳ್ಳಬಹುದು. ಹಸಿಬಿಸಿ ಯಾವುದೇ ನೀರಾದರೂ ಧಾರಾ ರೂಪದಲ್ಲಿ ಹೊಟ್ಟೆಯ ಮೇಲೆ ಒಮ್ಮೊಮ್ಮೆ ಬೆನ್ನು ಶಿರದ ಮೇಲೆ ಬೀಳುತ್ತಾ ಹೋಗುತ್ತಿರಲಿ. ಈ ರೀತಿಯ ಧಾರಾಕಾರ್ಯವು ಕನಿಷ್ಟ ಅರ್ಧ ಗಂಟೆಯಾದರೂ ಪ್ರತಿನಿತ್ಯವೂ ಪ್ರಾತಃಕಾಲ ಹಾಗೂ ಸಂಧ್ಯಾ ಕಾಲದಲ್ಲಿ ನಾವು ಮಾಡುತ್ತಲೇ ಇದ್ದು ಸಮಯ ಸಂದರ್ಭ ಹೊಂದಿಕೊಂಡು ಅವಧಿಯನ್ನು ಗರಿಷ್ಟ ಗಂಟೆಯವರೆಗೆ ಏರಿಸಿಕೊಂಡು ಮುಖ ಮಾರ್ಜನ ಶೌಚಾದಿಗಳ ರೀತಿ ಇದನ್ನು ಹೊಂದಿಸಿಕೊಂಡು ಹೋದಲ್ಲಿ ಬದುಕಿನ ಎಲ್ಲಾ ರಂಗಗಳಲ್ಲಿಯೂ ನಾವು ಬಹಳಷ್ಟು ನಿರೋಗಿಗಳಾಗಿಯೇ ಜೀವಿಸಲು ಸಾಧ್ಯವಿದೆ.

4. ಶೌಚಗೃಹದಿಂದ ತಣ್ಣೀರಿನ ಜಳಕ ಮುಗಿಸಿದ ಬಳಿಕ ಸ್ವಲ್ಪ ಹೊತ್ತು ಧ್ಯಾನ ಮುದ್ರೆ, ಯೋಗಾಭ್ಯಾಸ ಅಥವಾ ಪ್ರಾತಃಕಾಲದ ವಾಕಿಂಗ್ ಎನ್ನುವ ನಿಯಮಗಳಿಗೆ ನಮ್ಮನ್ನು ಒಡ್ಡಿಕೊಳ್ಳಬಹುದು. ಬೆಳಗ್ಗಿನ ಉಪಹಾರವನ್ನು ಕನಿಷ್ಠ ಅಂದರೆ ಹೊಟ್ಟೆ ತುಂಬ ಎನ್ನು ಶಬ್ದಕ್ಕೆ ಒತ್ತು ಕೊಡದೆ ಇನ್ನಷ್ಟು ಬೇಕು ಎಂದಾಗ `ಬ್ರೇಕು’ ತೆಗೆದುಕೊಳ್ಳುವ ರೂಢಿ ಒಳ್ಳೆಯದು.

5. ಹಾಗೆಯೇ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಲು ಹೇಳಿಕೊಳ್ಳುವ ಕ್ರಮ ಅತೀ ಮುಖ್ಯ. ಬಳಸಿದ ಸಾಮಾಗ್ರಿಗಳು ಬಟ್ಟಲಿನಲ್ಲಿ ಉಳಿಯದೆ ಹೊಟ್ಟೆ ಸೇರುವ ಹಾಗೆ ನಾವು ಜಾಗ್ರತೆವಹಿಸಬೇಕು. ಊಟವಾದ ಕೂಡಲೇ ಮಲಗಿ ಅಥವಾ ಕುಳಿತು ವಿರಾಮ ಗಳಿಸಿಕೊಳ್ಳುವುದಕ್ಕಿಂತ ಸ್ವಲ್ಪ ದೂರ ನಡಿಗೆಮಾಡಿ ತದನಂತರ ವಿಶ್ರಾಂತಿಯ ಕ್ರಮ ಒಳ್ಳೆಯದು. ರಾತ್ರಿಯಂತೂ ಇದನ್ನು ಸರಿಯಾಗಿ ಪಾಲಿಸಬೇಕು.

ಮಣ್ಣಿನ ಚಿಕಿತ್ಸೆ

ಕೆಲವೊಮ್ಮೆ ಕಿರಿಕಿರಿಯಾಗುವ ತಲೆಸಿಡಿತ, ಹಲ್ಲು, ಕಿವಿ ನೋವುಗಳು ಹೀಗೆ ಹಲವು ರೀತಿಯಿಂದ ನಮ್ಮನ್ನು ಸತಾಯಿಸುತ್ತಿರುವುದಕ್ಕೆ ಮಣ್ಣು, ಗಾಳಿ, ಬಿಸಿಲಿನ ಸಹಕಾರದಿಂದ ಚಿಕಿತ್ಸೆಯನ್ನು ಮಾಡಬಹುದು. ಮಣ್ಣು ಎಂದಾಗ ಹುಬ್ಬೇರಿಸದಿರಿ ನೀರಿಗೆ ಇರುವಷ್ಟೇ ಮಹತ್ವ ಇನ್ನುಳಿದ ಪ್ರಾಕೃತಿಕ ಶಕ್ತಿಗಳಿಗಿವೆ. ಗದ್ದೆಯಲ್ಲಿ ಬೆಳೆ ಬೆಳೆಯಬೇಕಿದ್ದರೆ, ತೋಟದಲ್ಲಿ ಅಡಿಕೆ, ತೆಂಗು, ಬಾಳೆಕಾಯಿ ಮುಂತಾದ ಕೃಷಿ ಸಂಪತ್ತು ಅಭಿವೃದ್ಧಿಯಾಗುವಲ್ಲಿ ಈ ಪಂಚ ಶಕ್ತಿಗಳ ಹೊಂದಾಣಿಕೆಯ ಅಗತ್ಯತೆ ಕೃಷಿಕರೆಲ್ಲರಿಗೂ ಇದೆ. ನಾವು ಬಳಸಲ್ಪಡುವ ಮಣ್ಣು ಭೂಮಿಯ ಅಡಿಯಿಂದ ಹೊಂದಿಸಿಕೊಳ್ಳುವಂತಹುದು ಒಳ್ಳೆಯದು.

ಈ ಚಿಕಿತ್ಸೆಗೆ ಬಳಸಲ್ಪಡುವ ಮಣ್ಣು ಹಳ್ಳಿ ಭಾಷೆಯಲ್ಲಿ `ಸೇಡಿ’ ಎಂದು ಕರೆಯಲ್ಪಡುತ್ತದೆ. ಚಿಕಿತ್ಸೆಗೆ ನುಣುಪಿನ ಹೊಯ್ಗೆ ರಹಿತ ಸೇಡಿಯೇ ಆಗಬೇಕು. ಒಂದು ವೇಳೆ ಅದು ಸಿಗದೆ ಮರಳು ಸಹಿತ ಮಣ್ಣು ಸಿಕ್ಕಿದಲ್ಲಿ ಅದನ್ನು ಬಳಸಿಕೊಳ್ಳುವ ಒಂದು ಸರಳ ವಿಧಾನ ಹೀಗಿದೆ : ಒಂದು ಪಾತ್ರೆಯಲ್ಲಿ ಇಂತಹ ಮಣ್ಣನ್ನು ಹಾಕಿ ದೋಸೆಯ ಹಿಟ್ಟಿಗಿಂತಲೂ ತೆಳುವಾಗಿ ಇರುವ ಹಾಗೆ ಹೊಂದಿಸಿಕೊಳ್ಳಿ, ಅದರ ಮೇಲ್ಭಾಗಕ್ಕೆ ತುಂಬಾ ನೀರನ್ನು ಹಾಕಿ ಒಂದು ದಿನ ಹಾಗೆಯೇ ಬಿಡಿ. ಈಗ ಶುಭ್ರವಾದ ತೆಳು ಬಟ್ಟೆಯೊಂದನ್ನು ಇನ್ನೊಂದು ಪಾತ್ರೆಯ ಮೇಲ್ಭಾಗಕ್ಕೆ ಹೊದಿಸಿ ಈ ಮಣ್ಣು ನೀರಿನ ಪಾಕವನ್ನು ಚೆನ್ನಾಗಿ ಗಾಳಿಸಿದರೆ ಕಲ್ಲು ಮಣ್ಣು ರಹಿತವಾದ ಸೇಡಿ ಮಣ್ಣು ಲಭ್ಯವಾಗುತ್ತದೆ. ಅದನ್ನು ಉಂಡೆ ಕಟ್ಟಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡರೆ ಗೋಪಿಚಂದನದಂತೆ ಕಾಣಿಸಿಕೊಳ್ಳುವ ಪರಿಶುದ್ಧವಾದ ಮಣ್ಣು ಬಳಸಿಕೊಳ್ಳಲು ಲಭ್ಯ. ಇಂತಹ ಮಣ್ಣನ್ನು ಜ್ವರದ ತೀವ್ರಗತಿ, ಹೊಟ್ಟೆನೋವು, ಸಾಮಾನ್ಯವಾದ ಕಜ್ಜಿ ತುರಿಕೆಗಳ ಚಿಕಿತ್ಸೆಯಲ್ಲಿ ಲೇಪ ಅಥವಾ ಪಾಲಿಷ್ ಮಾಡಲು ಬಳಸಲಾಗುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!