ಸಪ್ತಚಕ್ರ – ನಮ್ಮ ದೇಹದ ಶಕ್ತಿ ಕೇಂದ್ರಗಳು

ಸಪ್ತಚಕ್ರ – ನಮ್ಮ ದೇಹದ ಶಕ್ತಿ ಕೇಂದ್ರಗಳು. ಇವತ್ತಿನ ದಿವಸ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಔಷಧಿಗಳನ್ನು ತೆಗೆದುಕೊಳ್ಳುವ ಪದ್ಧತಿ ಇದೆ. ನಮ್ಮ ಋಷಿಮುನಿಗಳು ಸೂಚಿಸಿದಂತೆ, ಪ್ರಾಣಾಯಾಮ, ವ್ಯಾಯಾಮ, ಧ್ಯಾನ, ಆಹಾರ ಪದ್ಧತಿ ಮತ್ತು ವಿಚಾರಮಾಡುವ ಪದ್ಧತಿಯಲ್ಲಿ ಮಾರ್ಪಾಡು ತಂದರೆ, ನಮ್ಮ ಆರೋಗ್ಯ ಸುಧಾರಿಸುವುದು.

ಪೂರ್ಣಾನಂದ ಸ್ವಾಮಿಗಳು 1577ರಲ್ಲಿ ಸಂಸ್ಕøತದಲ್ಲಿ ``ಸಪ್ತಚಕ್ರ ನಿರೂಪಣೆ’’ ಪುಸ್ತಕ ಬರೆದರು. ಈ ಪುಸ್ತಕದಲ್ಲಿ ತೇಜೋವಂತ ಮತ್ತು ಶಕ್ತಿಯುತವಾದ ದೇಹದಲ್ಲಿಯ 7 ಕೇಂದ್ರಬಿಂದುಗಳ ಬಗ್ಗೆ ವಿಸ್ತಾರವಾಗಿ ಬರೆದರು. ಋಗ್ವೇದದಲ್ಲಿಯ ಸ್ತೋತ್ರ 10.136 ರಲ್ಲಿ ಈ ಚಕ್ರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮಾನವನ ಶರೀರವು ಎರಡು ಸಮಾನಾಂತರದ ಆಯಾಮಗಳಲ್ಲಿ ಇರುತ್ತವೆ.

  • ಸ್ಥೂಲ ಶರೀರ – ನಮ್ಮೆಲ್ಲರ ಕಣ್ಣಿಗೆ ಕಾಣುವ ಭೌತಿಕ ಶರೀರ, ಪ್ರತಿಯೊಬ್ಬರು ಈ ಶರೀರವನ್ನು ನೋಡುತ್ತಾರೆ. ಮುಟ್ಟುತ್ತಾರೆ ಮತ್ತು ಅನುಭವಿಸುತ್ತಾರೆ.
  • ಸೂಕ್ಷ್ಮ ಶರೀರ – ಇದು ಸಾಮಾನ್ಯ ಜನರ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಅರಿವಿಗೆ ಬರುವುದಿಲ್ಲ. ಆದರೆ, ಈ ಸೂಕ್ಷ್ಮ ಶರೀರವು ನಮ್ಮ ಶಕ್ತಿ ಪುಂಜವಾಗಿದ್ದು, ಋಷಿ ಮುನಿಗಳು ಈ ಸೂಕ್ಷ್ಮ ಶರೀರವನ್ನು ಕಂಡುಕೊಂಡಿದ್ದಾರೆ.

ನಮ್ಮ ದೇಹದಲ್ಲಿಯ ಚಕ್ರ ಪದ್ಧತಿಯು 1500-500 ಬಿಸಿ ಸಮಯದಲ್ಲಿ ವೇದಗಳಲ್ಲಿ ಪ್ರಸ್ತಾಪವಾಗಿದೆ. ಚಕ್ರಪದ್ಧತಿಯ ಪ್ರಮಾಣವು ಶ್ರೀ ಜಾಬಾಲ ದರ್ಶನ ಉಪನಿಷತ್ತು, ಶ್ರೀ ಚೂಡಾಮಿನಿ ಉಪನಿಷತ್ತು, ಯೋಗ ಶಿಕ್ಷ ಉಪನಿಷತ್ತು, ಶಾಂಡಿಲ್ಯ ಉಪನಿಷತ್ತು ಮತ್ತು ಪರಮಹಂಸ ಸ್ವಾಮಿ ಮಹೇಶ್ವರಾನಂದರು ಬರೆದ ಸುಪ್ತ ಶಕ್ತಿಗಳು, ಚಕ್ರಗಳು ಮತ್ತು ಕುಂಡಲಿನಿ ಶಕ್ತಿ ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಿರುವರು. ಮಾನವ ದೇಹದಲ್ಲಿ ಚಕ್ರ ಎಂದರೆ ಒಂದು ತಿರುಗುವ ಶಕ್ತಿ ಕೇಂದ್ರ.

ಈ ಶಕ್ತಿಕೇಂದ್ರವು ಮಾನವನ ದೇಹವನ್ನು ನಿಯಂತ್ರಿಸುತ್ತದೆ. ದೇಹದ ಎಲ್ಲ ವ್ಯವಸ್ಥೆಗಳು, ಎಲ್ಲ ಅವಯವಗಳು ಮತ್ತು ಎಲ್ಲ ಕೋಶಗಳಿಗೆ ಶಕ್ತಿಯನ್ನು ಪೂರೈಸುತ್ತದೆ ಮತ್ತು ನಿಯಂತ್ರಿಸುತ್ತದೆ. ಪ್ರಮುಖ ಶಕ್ತಿ ಕೇಂದ್ರಗಳನ್ನು (ಚಕ್ರಗಳನ್ನು) ಹಿಂದು ಮತ್ತು ಬೌದ್ಧ ಧಾರ್ಮಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಿದ್ದಾರೆ. ಈ ಚಕ್ರಗಳು ಬೆನ್ನೆಲುಬಿನ ಎರಡೂ ಕಡೆಗಳಲ್ಲಿ ತಲೆಯಿಂದ ಕೆಳಗೆ ಸಾಲಾಗಿ ಹಬ್ಬಿವೆ. ಈ ಚಕ್ರಗಳನ್ನು ಪರ್ಯಾಯ ಶಬ್ಧಗಳಿಂದಲೂ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಇವುಗಳು ಚಕಿರಗಳು, ಪದ್ಮಗಳು, ಆಧಾರಗಳು ಮತ್ತು ಲಕ್ಷ್ಯಗಳು.

ಕ್ರಿ.ಶಕ 600-1300ರಲ್ಲಿ ಹೆಚ್ಚು ಪ್ರಚಲಿತ ಇದ್ದ ತಾಂತ್ರಿಕ ಯೋಗ ಶಾಸ್ತ್ರದಲ್ಲಿ ಈ ಚಕ್ರಗಳನ್ನು 5 ಚಕ್ರಗಳ ವ್ಯವಸ್ಥೆ, 7 ಚಕ್ರಗಳ ವ್ಯವಸ್ಥೆ, 9 ಚಕ್ರ, 15 ಚಕ್ರ, 21 ಚಕ್ರ ಮತ್ತು 114 ಚಕ್ರ ವ್ಯವಸ್ಥೆ ಎಂದು ಪ್ರಸ್ತಾಪಿಸಿದ್ದಾರೆ. 7 ಚಕ್ರಗಳ ವ್ಯವಸ್ಥೆ ಇವತ್ತು ಭಾರತದಲ್ಲಿ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಲಿತದಲ್ಲಿದೆ. ಈ ಚಕ್ರಗಳು ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪುರ ಚಕ್ರ, ಅನಾಹತ ಚಕ್ರ, ವಿಶುದ್ಧ ಚಕ್ರ, ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರ.

ವೈದ್ಯರ ವಿಶ್ಲೇಷಣೆ :

ಅಂಗವಿಚ್ಛೇದನ ತಂತ್ರದ ವಿದ್ಯಾರ್ಥಿಯಾಗಿ ಈ ಚಕ್ರಗಳ ಸ್ಥಾನವನ್ನು ವಿಶ್ಲೇಷಿಸಿದಾಗ ಈ ಚಕ್ರಗಳು ನಮ್ಮ ದೇಹದಲ್ಲಿಯ ನರಮಂಡಲ ಮತ್ತು ನಿರ್ನಾಳ ಗ್ರಂಥಿಗಳ ಸಮೂಹವಾಗಿರುತ್ತದೆ.

ಚಕ್ರದ ಕಾರ್ಯಗಳು :

ದೇಹದಲ್ಲಿ ಜರುಗುವ ಪ್ರತಿಯೊಂದು ದೇಹದ ಚಟುವಟಿಕೆಗಳನ್ನು ನರಮಂಡಲವು ಮತ್ತು ನಿರ್ನಾಳ ಗ್ರಂಥಿಗಳು ಸ್ರವಿಸುವ ಪುಷ್ಠಿಕಾರಕ ಸತ್ವಗಳು ರಕ್ತನಾಳಗಳಲ್ಲಿ ಸ್ರವಿಸಿ, ದೇಹದ ಪ್ರತಿಯೊಂದು ಕೋಶಕ್ಕೆ ಹೋಗಿ, ಆ ಕೋಶದ ಕೆಲಸವನ್ನು ನಿಯಂತ್ರಿಸುತ್ತದೆ. ಈ ಸಪ್ತ ಚಕ್ರಗಳಲ್ಲಿ ಯಾವುದಾದರೂ ಒಂದು ಚಕ್ರವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ಅಡಚಣೆಯಾಗಿದ್ದರೆ, ಹೆಚ್ಚು ಕೆಲಸಮಾಡಿದರೆ, ಕಡಿಮೆ ಕೆಲಸ ಮಾಡಿದರೆ ಇದರ ಅರ್ಥ ಸಂಬಂಧಪಟ್ಟ ನಿರ್ನಾಳ ಗ್ರಂಥಿಗಳ ಕಾರ್ಯದಲ್ಲಿ ವ್ಯಥೆ ಕಂಡು ಬರುವುದು. ಈ ನ್ಯೂನತೆಗಳು ಭೌತಿಕವಾಗಿ ಇಲ್ಲವೆ ಮಾನಸಿಕವಾಗಿ ತೊಂದರೆಗಳನ್ನುಂಟು ಮಾಡುತ್ತದೆ.

ಚಕ್ರಗಳನ್ನು ನಿಯಂತ್ರಿಸುವುದು :

ಸಪ್ತ ಚಕ್ರಗಳನ್ನು ಕ್ರಮಬದ್ಧವಾಗಿ ಉಸಿರಾಡುವುದರಿಂದ (ಪ್ರಾಣಾಯಾಮ), ಧ್ಯಾನ, ವಿಶ್ರಾಂತಿ, ವ್ಯಾಯಾಮ ಮತ್ತು ಊಟದ ಪದ್ಧತಿಯಿಂದ ನಿಯಂತ್ರಿಸಬಹುದು. ಒಂದು ಚಕ್ರವನ್ನು ಉತ್ತೇಜಿಸಿ, ಎಲ್ಲ ಚಕ್ರಗಳನ್ನು ಉತ್ತೇಜಿಸಬಹುದು. ಪ್ರತಿಯೊಂದು ಚಕ್ರಕ್ಕೆ ಒಂದು ಬೀಜ ಮಂತ್ರ ಇದೆ, ಒಂದು ಬಣ್ಣ ಇದೆ ಮತ್ತು ಒಂದು ದೇವತೆ ಇದೆ.

ಬೀಜಮಂತ್ರಗಳು ಮತ್ತು ಬಣ್ಣ

ಮೂಲಾಧಾರ ಚಕ್ರ – ಲಮ್ – ಕೆಂಪು ಬಣ್ಣ
ಸ್ವಾಧಿಷ್ಠಾನ ಚಕ್ರ – ವಾಮ್ – ಕಿತ್ತಳೆ ಬಣ್ಣ
ಮಣಿಪುರ ಚಕ್ರ – ರಮ್ – ಹಳದಿ ಬಣ್ಣ
ಅನಾಹತ ಚಕ್ರ – ಯಮ್ – ಹಸಿರು ಬಣ್ಣ
ವಿಶುದ್ಧ ಚಕ್ರ – ಹಮ್ – ನೀಲಿ ಬಣ್ಣ
ಅಜ್ಞಾ ಚಕ್ರ – ಓಂ – ಇಂಡಿಗೋ ತಿಳಿ ನೀಲಿ ಬಣ್ಣ
ಸಹಸ್ರಾರ ಚಕ್ರ – ಓಂ – ಬಿಳಿ ಬಣ್ಣ (ಕೆಂಪು ಬಣ್ಣ)

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್

# 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : +91-80-49069000 Extn: 1147/1366

Email: info@vims.ac.in 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!