ಸಂತೃಪ್ತ ಜೀವನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ. ದೀರ್ಘಕಾಲ ಬಾಳಿಕೆಯ ಉತ್ಪಾದಕತೆ, ಕಾರ್ಯಕ್ಷಮತೆ, ನೆನಪಿನಶಕ್ತಿ ಮತ್ತು ಗಂಭೀರ ರೋಗಗಳನ್ನು ತಡೆಯಲು ಉತ್ತಮ ನಿದ್ರೆ ಅತ್ಯಗತ್ಯವಾಗಿದೆ.
ಹೆಚ್ಚುತ್ತಿರುವ ವೇತನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ. ಉತ್ಪಾದಕತೆ ಮತ್ತು ನಿದ್ರೆಗಳ ನಡುವೆ ನೇರ ಸಂಬಂಧವಿದೆ. ಸಂತೃಪ್ತ ಜೀವನದೊಂದಿಗೆ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟ ನೇರವಾಗಿ ಸಂಬಂಧ ಹೊಂದಿದೆ. ಅತ್ಯಂತ ಕಡೆಗಣಿಸಲಾದ ನೈಸರ್ಗಿಕ ಸಂಪನ್ಮೂಲ ಅಂದರೆ ಅದು ನಿದ್ರೆ ಆಗಿದೆ. ದೀರ್ಘಕಾಲ ಬಾಳಿಕೆಯ ಉತ್ಪಾದಕತೆ, ಕಾರ್ಯಕ್ಷಮತೆ, ನೆನಪಿನಶಕ್ತಿ ಮತ್ತು ಗಂಭೀರ ರೋಗಗಳನ್ನು ತಡೆಯಲು ಉತ್ತಮ ನಿದ್ರೆ ಅತ್ಯಗತ್ಯವಾಗಿದೆ.
ರಾತ್ರಿ ಬಹಳ ಹೊತ್ತಿನವರೆಗೆ ಪಾರ್ಟಿ ಮಾಡುವವರು ಮತ್ತು ಕೆಲಸ ಮಾಡುವವರು ಗುಣಮಟ್ಟದ ನಿದ್ರೆಯನ್ನು ಕಳೆದುಕೊಳ್ಳುತ್ತಿರುತ್ತಾರೆ.ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳು ನಿದ್ರೆ ಕಳೆದುಕೊಳ್ಳುತ್ತಾರೆ. ಅವರು ತಮ್ಮ ತಲೆಗೆ ಹೆಚ್ಚಿನ ವಿಷಯವನ್ನು ತುಂಬಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ, ಹೆಚ್ಚಿನ ಮಟ್ಟಿನ ಮಾಹಿತಿಯನ್ನು ಮೆದುಳು ಹೀರಿಕೊಳ್ಳುವ ಆಳವಾದ ನಿದ್ರೆಯ ಹಂತವಾದ ಆರ್‍ಇಎಂ ಫೇಸ್ ಅನ್ನು ಅವರು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವುದಿಲ್ಲ. ತಡವಾಗಿ ನಿದ್ರೆ ಮಾಡುವುದರಿಂದ ವಿದ್ಯಾರ್ಥಿಗಳು ಈ ಹಂತವನ್ನು ಕಳೆದುಕೊಳ್ಳುತ್ತಾರೆ.
Also Read: Insomnic diet : What to eat for sound sleep?
1. ಚೆನ್ನಾಗಿ ನಿದ್ರೆ ಮಾಡುವವರಲ್ಲ ಮೂರನೇ ಎರಡರಷ್ಟು ಜನರು ತಮ್ಮ ಕೆಲಸದಲ್ಲಿ ತಾವು ಶೇ. 100 ಉತ್ಪಾದಕತೆ ಹೊಂದಿರುವುದಾಗಿ ನಂಬಿದ್ದಾರೆ; ಆದರೆ ಸೂಕ್ತ ನಿದ್ರೆ ಬರುತ್ತಿಲ್ಲ ಎನ್ನುವರಲ್ಲಿ ಅರ್ಧಕ್ಕೂ ಹೆಚ್ಚಿನ ಜನರು ತಾವು ಕೇವಲ ಶೇ. 75 (ಅಥವಾ ಕಡಿಮೆ) ಉತ್ಪಾದಕತೆ ಹೊಂದಿರುವುದಾಗಿ ನಂಬಿದ್ದಾರೆ. ಆಸಕ್ತಿಕರ ವಿಷಯವೆಂದರೆ, 30 ವರ್ಷಕ್ಕೂ ಕೆಳಗಿನ ವಯೋಮಿತಿಯವರು ತಮಗಿಂತಲೂ ಹೆಚ್ಚು ವಯಸ್ಸಾದವರಿಗಿಂತ ಹೆಚ್ಚು ಉತ್ತಮವಾಗಿ ನಿದ್ರಿಸುತ್ತಾರೆ.
2. 30 ವರ್ಷಕ್ಕೂ ಮೇಲ್ಪಟ್ಟ ವಯಸ್ಕರು, ನಿದ್ರಾ ಸಂಬಂಧಿ ತೊಂದರೆಗಳಿಗೆ ಗುರಿಯಾಗುವ ಸಾಧ್ಯತೆ ಎರಡುಪಟ್ಟು ಹೆಚ್ಚು, 45 ವರ್ಷಕ್ಕೂ ಮೇಲ್ಪಟ್ಟ ವಯಸ್ಕರು ನಿದ್ರಾ ಸಂಬಂಧಿ ತೊಂದರೆಗಳಿಗೆ ಗುರಿಯಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಶೇ. 40ರಷ್ಟು ಜನರು ಬೇಗ ಏಳಲು ಅಲಾರಂ ಬಳಸುತ್ತಾರೆ. ಈ ಸಂಖ್ಯೆ ಮುಂಬೈನಲ್ಲಿ ಗಮನಾರ್ಹವಾಗಿ ಉನ್ನತ ಪ್ರಮಾಣದಲ್ಲಿದ್ದು, ಅಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 50ರಷ್ಟು ಜನರು ಅಲಾರಂಅನ್ನು ದಿನಾಲು ಬಳಸುತ್ತಿದ್ದಾರೆ.
3. ಬೆಂಗಳೂರಿಗರು ಕಡಿಮೆ ಗುಣಮಟ್ಟದ ನಿದ್ರೆ ಹೊಂದಿದ್ದು, ನಿದ್ರೆ ಉಳಿಸಿಕೊಳ್ಳುವಲ್ಲಿ ಕಷ್ಟಪಡುತ್ತಾರೆ. ಅಚ್ಚರಿಯಾಗದ ವಿಷಯ ಎಂದರೆ ಬೆಂಗಳೂರಿನವರು ಎಲ್ಲರಿಗಿಂತ ಬೇಗನೆ ನಿದ್ರೆಗೆ ಜಾರುತ್ತಾರೆ(ರಾತ್ರಿ 10ರಿಂದ 11 ಗಂಟೆ ನಡುವೆ); ಆದರೆ ಮುಂಬೈನಲ್ಲಿ ಮಧ್ಯರಾತ್ರಿಯ ನಂತರ ಮಲಗುವವರ ಅತ್ಯುನ್ನತ ಪ್ರಮಾಣದಲ್ಲಿದೆ. ಬಹುಶಃ ಇದಕ್ಕೆ ಮುಂಬೈನಲ್ಲಿ ಬಹಳಷ್ಟು ಜನರು ತಮ್ಮ ಮನೆಗಳಿಗೆ ಹೋಗಲು ಬಹಳ ದೂರ ಪ್ರಯಾಣಿಸಬೇಕಾಗಿರುವುದೂ ಕಾರಣವಿರಬಹುದು. ದಿಲ್ಲಿ ಮತ್ತು ಮುಂಬೈಗಳಿಗೆ ಹೋಲಿಸಿದಲ್ಲಿ ಬೆಂಗಳೂರಿಗರು ನಿದ್ರೆಗೆ ಜಾರುವಲ್ಲಿ ಹೆಚ್ಚು ಉತ್ತಮವಾದ ದಾಖಲೆ ಹೊಂದಿದ್ದಾರೆ. ಇದಕ್ಕೆ ಮುಖ್ಯವಾಗಿ ಕಡಿಮೆ ಸದ್ದಿನ ಮಟ್ಟಗಳು ಕಾರಣ ಎನ್ನಲಾಗಿದೆ. (ಸಂಸ್ಥೆಯೊಂದರ ಅಧ್ಯಯನ ಸಂಶೋಧನೆಯ ಪ್ರಕಾರ).
4. ಒಬ್ಬರೇ ಇರುವವರು ಮತ್ತು ಮಕ್ಕಳಿರುವ ಜೋಡಿಗಳು ಉತ್ತಮವಾಗಿ ನಿದ್ರೆ ಮಾಡುತ್ತಾರೆ. ಸಾಮಾನ್ಯವಾಗಿ ಒಬ್ಬರೇ ಇರುವವರು ಮತ್ತು ಮದುವೆಯಾಗಿ ಮಕ್ಕಳಿರುವವರು (ಶಿಶುಗಳನ್ನು ಹೊಂದಿರುವ ಪೋಷಕರು ಅಥವಾ ಬೆಳೆದು ನಿಂತ ಮಕ್ಕಳನ್ನು ಹೊಂದಿರುವವರನ್ನು ಪ್ರತ್ಯೇಕಿಸದೆ) ಸಂತೃಪ್ತರಾಗಿದ್ದು, ಮದುವೆಯಾಗಿ ಮಕ್ಕಳಿಲ್ಲದ ಜೋಡಿಗಳಿಗಿಂತಲೂ ಸುಲಭವಾಗಿ ನಿದ್ರೆಗೆ ಜಾರುತ್ತಾರೆ. ಮಕ್ಕಳ ಜೊತೆಗೆ ಹಾಸಿಗೆ ಹಂಚಿಕೊಳ್ಳುವ ಪೋಷಕರು, ನಿದ್ರೆಗೆ ಜಾರುವಲ್ಲಿ ಶೇ. 50ರಷ್ಟು ಹೆಚ್ಚಿನ ತೊಂದರೆ ಹೊಂದಿರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಉತ್ತಮ ನಿದ್ರೆ ಪಡೆಯುವ ಯೋಜನೆ ಹೊಂದಿದ್ದರೆ, ಪೋಷಕರು ಮತ್ತು ಮಕ್ಕಳು ತಾವು ಮಲಗುವ ಪ್ರದೇಶವನ್ನು ಪ್ರತ್ಯೇಕಗೊಳಿಸುವುದು ಉತ್ತಮ.
5. ಮಲಗುವುದಕ್ಕಿಂತ ಕನಿಷ್ಠ 2 ಗಂಟೆಗಳಿಗಾದರೂ ಮುನ್ನ ರಾತ್ರಿ ಭೋಜನ ಸೇವಿಸಿರಿ. ಮಲಗುವುದಕ್ಕಿಂತಲೂ ಎರಡು ಗಂಟೆಗೂ ಕಡಿಮೆ ಅವಧಿಯಷ್ಟು ಮುನ್ನ ಆಹಾರ ಸೇವಿಸಿದವರು ನಿದ್ರೆ ಸಂಬಂಧಿತ ತೊಂದರೆಗಳಿಗೆ ಗುರಿಯಾಗುವ ಸಾಧ್ಯತೆ ಶೇ. 25ರಷ್ಟು ಹೆಚ್ಚು ಎಂದು ಸಂಶೋಧನಾ ವರದಿಗಳು ತೋರಿಸಿವೆ. ದಿಲ್ಲಿಯಲ್ಲಿನ ಹೆಚ್ಚಿನ ಸಂಖ್ಯೆಯ ಜನರು ರಾತ್ರಿಯ ವೇಳೆ ಹೊಟ್ಟೆ ಭಾರವಾಗುವಷ್ಟು ಭೋಜನ ಸೇವಿಸಿ ಹಾಸಿಗೆಗೆ ತೆರಳುತ್ತಾರೆ. ಆದರೆ ಮುಂಬೈ ಜನರು ರಾತ್ರಿಯ ವೇಳೆ ಹೊಟ್ಟೆಯನ್ನು ಹಗುರವಾಗಿಟ್ಟುಕೊಳ್ಳುತ್ತಾರೆ.
6. ಉತ್ತಮ ಗುಣಮಟ್ಟದ ನಿದ್ರೆಗಾಗಿ ಹಾಸಿಗೆಗಳು ಬಹಳ ಮುಖ್ಯ. ಹಳೆಯ ಹಾಸಿಗೆಗಳ ಮೇಲೆ ಮಲಗುವವರಿಗೆ ಹೋಲಿಸಿದಲ್ಲಿ ಹೊಸದಾದ(ಮೂರು ವರ್ಷಗಳಿಗೂ ಕಡಿಮೆ ಹಳೆಯದಾದ) ಹಾಸಿಗೆಗಳ ಮೇಲೆ ನಿದ್ರಿಸುವ ಜನರು ನಿದ್ರಾ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವುದು ಶೇ.20ರಷ್ಟು ಕಡಿಮೆಯಾಗಿರುತ್ತದೆ. ಫೋಮ್ ಮ್ಯಾಟ್ರೆಸಸ್‍ಗಳು(ಪಿಯು, ಲ್ಯಾಟೆಕ್ಸ್ ಮತ್ತು ಮೆಮೋರಿ ಫೋಮ್ ಮ್ಯಾಟ್ರೆಸಸ್) ಅತ್ಯಂತ ಜನಪ್ರಿಯ ಮಾದರಿಗಳಾಗಿವೆ. ಸ್ಪ್ರಿಂಗ್ ಮ್ಯಾಟ್ರೆಸಸ್‍ಗಳು ಎರಡನೇ ಅತ್ಯಂತ ಜನಪ್ರಿಯ ಮಾದರಿಗಳ ಹಾಸಿಗೆಗಳಾಗಿವೆ.
7. ಧೂಮಪಾನ ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳು ನಿದ್ರಾ ಸಂಬಂಧಿ ತೊಂದರೆಗಳನ್ನು ಹೊಂದಿರುವ ಸಾಧ್ಯತೆ ಶೇ.52ರಷ್ಟು ಹೆಚ್ಚಾಗಿರುತ್ತದೆ. ಧೂಮಪಾನಿಗಳಲ್ಲಿ ದಿನಾ ಸೇದುವ ಸಿಗರೇಟ್‍ಗಳ ಸಂಖ್ಯೆ ಹೆಚ್ಚಾದಂತೆ ಸುಲಭವಾಗಿ ನಿದ್ರೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಉದಾಹರಣೆಗೆ ದಿನಕ್ಕೆ 5 ಸಿಗರೇಟಿಗಳಿಗೂ ಕಡಿಮೆಯಷ್ಟು ಧೂಮಪಾನ ಮಾಡುವ ಜನರಿಗೆ ಹೋಲಿಸಿದಲ್ಲಿ 5 ರಿಂದ 10 ಸಿಗರೇಟುಗಳನ್ನು ಸೇದುವವರು ನಿದ್ರಾ ಸಂಬಂಧಿ ತೊಂದರೆಗಳನ್ನು ಹೊಂದಿರುವ ಸಾಧ್ಯತೆ ಶೇ10ರಷ್ಟು ಹೆಚ್ಚಿರುತ್ತದೆ.
8. ನಿದ್ರೆ ಮತ್ತು ತೂಕದ ನಡುವೆ ಸಂಬಂಧ ಬಹಳಷ್ಟು ಉನ್ನತಮಟ್ಟದ್ದಾಗಿರುತ್ತದೆ. ತಮ್ಮನ್ನು ತಾವು ಹೆಚ್ಚಿನ ತೂಕದವರೆಂದು ಪರಿಗಣಿಸದ ಜನರಿಗೆ ಹೋಲಿಸಿದರೆ ತಮ್ಮನ್ನು ತಾವು ಹೆಚ್ಚಿನ ತೂಕದವರು ಎಂದು ಪರಿಗಣಿಸುವ ಜನರು ಶೇ.2.5ಪಟ್ಟು ಹೆಚ್ಚಿನ ನಿದ್ರಾ ಸಮಸ್ಯೆಗಳನ್ನು ಹೊಂದಿರುತ್ತಾರೆ.
9. ನಿದ್ರೆ ಮತ್ತು ವ್ಯಾಯಾಮಗಳ ನಡುವೆ ದೃಢವಾದ ಸಂಬಂಧವಿದೆ. ನಿಗದಿತವಾಗಿ (ಪ್ರತಿ ವಾರ ಕನಿಷ್ಟ 2-3 ಬಾರಿ ಜಿಮ್‍ಗೆ ತೆರಳುವವರು)ವ್ಯಾಯಾಮ ಮಾಡುವ ಜನರಿಗೆ ಹೋಲಿಸಿದಲ್ಲಿ ವ್ಯಾಯಾಮ ಮಾಡದ ಜನರು ನಿದ್ರಾ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ. ದಿನಾಲೂ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ 15 ನಿಮಿಷದಿಂದ ಒಂದು ಗಂಟೆಯ ಪ್ರಯಾಣ ನಡೆಸುವವರಿಗೆ ಹೋಲಿಸಿದಲ್ಲಿ ಒಂದು ಗಂಟೆಗೂ ಹೆಚ್ಚಿನ ಪ್ರಯಾಣ ನಡೆಸುವ ಜನರು ಉತ್ತಮವಾಗಿ ನಿದ್ರೆ ಹೊಂದಿರುತ್ತಾರೆ.
Also Read: ನಿದ್ದೆಯಿದ್ದರೆ ಸುಖ ನಿದ್ದೆಯಿರದಿರೆ ದುಖ ಅತಿನಿದ್ರೆಯೆಂಬುದದು ರೋಗ
ಡಾ. ಸಿದ್ದುಕುಮಾರ್ ಘಂಟಿ
ಮಹಾಲಕ್ಷ್ಮಿ ಆಯುರ್ವೇದಿಕ್ ಸೆಂಟರ್
116/13, 12 ನೇ ಮುಖ್ಯ ರಸ್ತೆ, ICICI ಎಟಿಎಂ ಹತ್ತಿರ
ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-76
ದೂ : 98450 42755