ಬೇಡದ ಕೂದಲು ನಿವಾರಣೆ

ದೇಹದ ಮೇಲಿರುವ ಕೂದಲು ವ್ಯಕ್ತಿಯ ಚಹರೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತಲೆಯ ಮೇಲಿರುವ ಉತ್ತಮವಾದ, ದಟ್ಟವಾದ ಮತ್ತು ಕಡು ವರ್ಣದ ಕೂದಲು ಯೌವ್ವನ ಮತ್ತು ಆರೋಗ್ಯದ ಪ್ರತೀಕವನ್ನು ಪ್ರತಿಬಿಂಬಿಸುತ್ತದೆ. ಆದರೆ, ಅದೇ ಕೂದಲು ಮಹಿಳೆಯರ ಮುಖ ಮತ್ತು ದೇಹದಲ್ಲಿ ಅತಿಯಾದಾಗ ಕಿರಿಕಿರಿ ಉಂಟು ಮಾಡುತ್ತದೆ. ತೋಳು ರಹಿತ ವಸ್ತ್ರಗಳು ಅಥವಾ ಕೂದಲು ಅಧಿಕವಾಗಿರುವ ಸ್ಥಳಗಳ ಮೂಲಕ ಇಣುಕುವ ಕೂದಲು ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ.
ಮೃದುವಾದ ಹಾಗೂ ಕೋಮಲವಾದ ಚರ್ಮ ಹೊಂದಿರಬೇಕು ಎಂಬುದು ಪ್ರತಿ ಮಹಿಳೆಯರ ಕನಸಾಗಿರುತ್ತದೆ! ವನಿತೆಯರಲ್ಲಿ ವಿಪರೀತವಾಗಿರುವ ದೇಹದ ಕೂದಲು ಚರ್ಮಕ್ಕಿಂತ ಆಳವಾಗಿದ್ದು ಇದು ಹಾರ್ಮೋನು ಕ್ರಮಬದ್ದತೆ ಇಲ್ಲದಿರುವಿಕೆಯ ಸೂಚಕವಾಗಿರುತ್ತದೆ. ಇದನ್ನು ಹಿರುಸುಟಿಸಂ ಅಥವಾ ವಿರಿಲೈಸೇಷನ್ ಎಂದು ಕರೆಯುತ್ತಾರೆ. ಅಂದರೆ ಇದನ್ನು ಮುಖದ ಮೇಲೆ ಬೇಡದ ರೋಮಗಳು ಎನ್ನಬಹುದು. ಇತರೆ ಕ್ಲಿನಿಕಲ್ ಸ್ಥಿತಿಗಳ ಇರುವಿಕೆಯನ್ನು ಇದು ಅವಲಂಬಿಸಿರುತ್ತದೆ.
ವಿಶ್ವಾದ್ಯಂತ ಕೂದಲು ಕಡಿಮೆ ಮಾಡಿಕೊಳ್ಳುವುದು ಒಂದು ತೀರಾ ಸಾಮಾನ್ಯ ಸೌಂದರ್ಯ ಚಿಕಿತ್ಸಾ ವಿಧಾನವಾಗಿದೆ. ಈ ವಿಷಯದಲ್ಲಿ ಪುರುಷರು ಕೂಡ ಮಹಿಳೆಯರಿಗಿಂತ ಹಿಂದಿಲ್ಲ. ಪುರುಷರು ತಮಗೆ ಬೇಡದ ರೋಮದಿಂದ ಮುಕ್ತಿ ಪಡೆಯಲು ವ್ಯಾಕ್ಸಿಂಗ್, ಥ್ರೆಡಿಂಗ್ ವಿಧಾನಗಳಿಗೆ ಸಾಮಾನ್ಯವಾಗಿ ಮೊರೆ ಹೋಗುತ್ತಾರೆ. ಪುರುಷರು ತಮ್ಮ ಸಿಕ್ಸ್ ಮತ್ತು ಎಯ್ಟ್ ಪ್ಯಾಕ್‍ಗಳ ಕಟ್ಟು ಮಸ್ತಾದ ಶರೀರವನ್ನು, ಹುರಿಗಟ್ಟಿದ ಮೈಯನ್ನು ಪ್ರದರ್ಶಿಸಲು ಬಯಸುವುದರೊಂದಿಗೆ ತಮಗೆ ಇರಿಸುಮುರಿಸು ಉಂಟು ಮಾಡುವ ರೋಮಗಳಿಂದ ಮುಕ್ತಿ ಪಡೆಯುವುದು ಅವರಿಗೆ ಅನಿವಾರ್ಯವಾಗಿದೆ.
ಬೇಡದ ಕೂದಲುಗಳ ನಿವಾರಣೆಗೆ ಡಿಪಿಲೋಟರಿ ಕ್ರೀಮ್‍ಗಳು, ವ್ಯಾಕ್ಸಿಂಗ್, ಪ್ಲಕಿಂಗ್, ಥ್ರೇಡಿಂಗ್ ಹಾಗೂ ಶೇವಿಂಗ್‍ನಂಥ ವಿವಿಧ ವಿಧಾನಗಳನ್ನು ತಾತ್ಕಲಿಕವಾಗಿ ಅನುಸರಿಸಲಾಗುತ್ತದೆ. ಈ ವಿಧಾನಗಳು ಗುಳ್ಳೆಗಳು ಮತ್ತು ಕಪ್ಪು ಕಲೆಗಳಿಗೆ ಎಡೆ ಮಾಡಿಕೊಡಬಹುದು. ಇನ್ನು ಎಲೆಕ್ಟ್ರೋಲಿಸಿಸ್ ಸಹ ಕಲೆ ಗುರುತು ಉಂಟು ಮಾಡುತ್ತದೆ. ಕೂದಲು ನಿವಾರಣೆಗೆ ಬಹು ವ್ಯಾಪಕವಾಗಿ ಬಳಸುವ ವಿಧಾನವೆಂದರೆ ಲೇಸರ್‍ಗಳು. ಆದರೆ, ಲೇಸರ್ ತಂತ್ರಜ್ಞಾನಗಳ ಬಗ್ಗೆ ಇರುವ ವಾಸ್ತವಗಳು ಅಥವಾ ಸಂವಹನ ಇಲ್ಲದಿರುವಿಕೆಯ ತಪ್ಪು ಅರ್ಥೈಸುವಿಕೆಯಿಂದಾಗಿ ಬಹುತೇಕ ನಮ್ಮಲ್ಲಿ ಈ ಬಗ್ಗೆ ಭಯ ಮತ್ತು ಆತಂಕ ಸೃಷ್ಟಿಯಾಗಿದೆ. ಲೇಸರ್ ತಂತ್ರಜ್ಞಾನವು ಆಯ್ಡ ಫೋಟೋಥೆರ್‍ಮೊಲಿಸಿಸ್ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ರೋಮ ರಂಧ್ರದಲ್ಲಿರುವ ಮೆಲನಿನ್‍ನಿಂದ ಲೇಸರ್ ಶಕ್ತಿಯನ್ನು ಹೀರಲ್ಪಡುತ್ತದೆ. ಆ ಮೂಲಕ ಆಯ್ದ ರೋಮ ರಂಧ್ರಗಳನ್ನು ನಾಶ ಪಡಿಸಲಾಗುತ್ತದೆ. ಈ ವಿಧಾನದಲ್ಲಿ ಒಂದೇ ಬಾರಿಗೆ ಕೂದಲು ನಿವಾರಣೆಯಾಗಿದೆ ಎಂದು ಯಾರಿಗಾದರೂ ಭಾಸವಾಗಬಹುದು. ಆದರೆ, ಇಲ್ಲ ! ಲೇಸರ್ ಮೂಲಕ ಕೂದಲನ್ನು ಕಡಿಮೆ ಮಾಡಲು ಹಾಗೂ ಉತ್ತಮ ಸೌಂದರ್ಯದ ಫಲಿತಾಂಶ ಹೊಂದಲು ಹಲವಾರು ಬಾರಿ ಈ ವಿಧಾನಕ್ಕೆ ಒಳಪಡಬೇಕಾಗುತ್ತದೆ. ಏಕೆಂದರೆ, ಕೂದಲಿನ ಜೀವ ಚಕ್ರದ ಬೆಳೆಯುವ ಹಂತದಲ್ಲಿ ಮಾತ್ರ ಈ ನಿರ್ಮೂಲನೆಗಾಗಿ ಗರಿಷ್ಠ ಮಟ್ಟದ ಮೆಲನಿನ್‍ನನ್ನು ಇದು ಒಳಗೊಂಡಿರುತ್ತದೆ. ಬಹು ಚಿಕಿತ್ಸೆಯಿಂದ ಬಹುತೇಕ ಕೂದಲನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬಹುದು. ಕೆಲವು ರೋಮ ರಂಧ್ರಗಳು ಸಂಪೂರ್ಣವಾಗಿ ನಾಶವಾಗುತ್ತದೆ ಹಾಗೂ ಆದಕಾರಣ ಅವು ಗಾತ್ರದಲ್ಲಿ ಕಿರಿದಾಗಿರುತ್ತವೆ, ಬಣ್ಣ ತಿಳಿಯಾಗಿರುತ್ತದೆ ಮತ್ತು ಮೃದುವಾಗಿರುತ್ತವೆ. ಆದ್ದರಿಂದ ಇದನ್ನು ಲೇಸರ್ ಮೂಲಕ ಕೂದಲನ್ನು ನಿರ್ಮೂಲನೆ ಮಾಡುವುದಕ್ಕಿಂತ ಕೂದಲನ್ನು ಕಡಿಮೆ ಮಾಡುವುದು ಎಂದು ಕರೆಯಲಾಗುತ್ತದೆ. ಇಲ್ಲಿ ನೆನಪಿನಲ್ಲಿ ಇಡಬೇಕಾದ ಸಂಗತಿ ಎಂದರೆ, ಮೆಲನಿನ್ ಲೇಸರ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಬೂದು ಬಣ್ಣದ ಕೂದಲು ಮೆಲನಿನ್‍ನನ್ನು ಒಳಗೊಂಡಿರದ ಕಾರಣ. ಅದು ಲೇಸರ್ ಎನರ್ಜಿಯನ್ನು ಹೀರಿಕೊಳ್ಳುವುದಿಲ್ಲ. ಹೀಗಾಗಿ ಅದು ಲೇಸರ್ ಹೇರ್ ರಿಡಕ್ಷನ್ ಚಿಕಿತ್ಸೆಗೆ ಪ್ರತಿಕ್ರಿಯಿಸುವುದಿಲ್ಲ. ಇನ್‍ಟೆನ್ಸ್ ಪಲ್ಸ್ ಲೈಟ್, ಯಾಗ್ ಮತ್ತು ಡಿಯೊಡ್ ಲೇಸರ್‍ಗಳನ್ನು ಲೇಸರ್ ಮೂಲಕ ಕೂದಲು ಕಡಿಮೆ ಮಾಡಲು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಸಂಪ್ರದಾಯಿಕ ಲೇಸರ್ ತಂತ್ರಜ್ಞಾನಗಳು ಅಧಿಕ ಶಕ್ತಿಯನ್ನು ಹೊರ ಹೊಮ್ಮಿಸಿ ಅಂಗಾಂಶಗಳು ಮತ್ತು ಜೀವಕೋಶಗಳು ಹಠಾತ್ ಬಿಸಿಯಾಗುವಂತೆ ಮಾಡುತ್ತದೆ. ಇದು ಚರ್ಮ ಸುಟ್ಟು ಹೋಗುವಿಕೆ, ಹೊಪ್ಪಳೆ, ಬೊಬ್ಬೆ ಹಾಗೂ ತೀವ್ರ ನೋವಿಗೆ ಎಡೆ ಮಾಡಿಕೊಡಬಹುದು. ಹಾಗಾಗಿ ಸಂಪ್ರದಾಯಿಕ ಲೇಸರ್ ತಂತ್ರಜ್ಞಾನಗಳು ಸೂಕ್ಷ್ಮ ಚರ್ಮಕ್ಕೆ ಹಾಗೂ ಮುಖ, ತೋಳು ಮತ್ತು ಬಿಕಿನಿ ಪ್ರದೇಶಗಳಂಥ ಸೂಕ್ಷ್ಮ ಸ್ಥಳಗಳಿಗೆ ಸುರಕ್ಷಿತವಲ್ಲ. ಸ್ವಚ್ಚತೆಯ ದೃಷ್ಟಿಯಿಂದ ಕಂಕಳು ಮತ್ತು ಗುಪ್ತ ಸ್ಥಳಗಳಲ್ಲಿ ಕೂದಲನ್ನು ಆಗಾಗ ಕಡಿಮೆ ಮಾಡಬೇಕಾಗುತ್ತದೆ ಹಾಗೂ ಈ ಸ್ಥಳಗಳಲ್ಲಿ ರೂಢಿಗತ ಲೇಸರ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಲೇಸರ್ ಟೆಕ್ನಿಕ್ ಅತ್ಯಂತ ಸುರಕ್ಷಿತ ಎನ್ನುತ್ತಾರೆ ತಜ್ಞರು. ಈ ತಂತ್ರಜ್ಞಾನದಲ್ಲಿ ಕಡಿಮೆ ಶಕ್ತಿಯ ಲೇಸರ್ ಪೂರೈಕೆಯನ್ನು ಪುನರಾವರ್ತನೆ ಮಾಡಲಾಗುತ್ತದೆ. ಹೀಗಾಗಿ ಇದು ನಿಧಾನವಾಗಿ ರೋಮ ರಂಧ್ರಗಳನ್ನು ನಿಧಾನವಾಗಿ ಬಿಸಿ ಮಾಡುತ್ತದೆ. ಹೀಗಾಗಿ ಲೇಸರ್ ಸುಟ್ಟಗಾಯಗಳ ಅಪಾಯ ಇರುವುದಿಲ್ಲ. ಲೇಸರ್ ಎನರ್ಜಿ ಚರ್ಮದಲ್ಲಿ ನಿಧಾನವಾಗಿ ನಿರ್ಮಾಣಗೊಳ್ಳುವುದರಿಂದ ಚರ್ಮಕ್ಕೆ ಯಾವುದೇ ಹಾನಿಯ ಅಪಾಯವಿಲ್ಲದೇ ಅಧಿಕ ಶಕ್ತಿಗಳನ್ನು ಈ ವಿಧಾನದಲ್ಲಿ ಬಳಸಬಹುದಾಗಿದೆ. ಅಂದರೆ ಈ ಮೆಷಿನ್ ಸಹಾಯದಿಂದ ಬೇಡದ ಕೂದಲನ್ನು ಕಡಿಮೆ ಮಾಡಬಹುದಾಗಿದೆ. ಇದು ಇತರ ಲೇಸರ್‍ಗಳಿಗಿಂತ ತುಂಬಾ ಪ್ರಯೋಜನಕಾರಿ. ಬಹುತೇಕ ಮಹಿಳೆಯರು ಉತ್ತಮ ಕೂದಲನ್ನು ಹೊಂದಿರುವುದರಿಂದ ಇದು ಹೆಚ್ಚು ಸುರಕ್ಷಿತ. ನಿರಂತರ ತರಂಗ ಬಡಿತ (ವೇವ್ ಪಲ್ಸ್) ತಂತ್ರಜ್ಞಾನದ ಮೂಲಕ ಚರ್ಮಕ್ಕೆ ಎನರ್ಜಿಯನ್ನು ನೀಡಲಾಗುತ್ತದೆ. ದೀರ್ಘ ಬಡಿತ ಹೊಂದಿರುವ ಮೊದಲ ಪಲ್ಸ್ ಜೀವಕೋಶಗಳನ್ನು ಮುನ್ನವೇ ಬಿಸಿ ಮಾಡುತ್ತದೆ ಹಾಗೂ ಲಘುವಾಗಿರುವ ಎರಡನೇ ಪಲ್ಸ್ ರೋಮ ರಂಧ್ರಗಳನ್ನು ಪರಿಣಾಮಕಾರಿಯಾಗಿ ನಾಶಗೊಳಿಸುತ್ತದೆ. ಲೇಸರ್ ಉಷ್ಣದ ನಿಧಾನ ನಿರ್ಮಾಣ ಹಾಗೂ ಸಫೈರ್ ಡುಯಲ್ ಚಿಲ್ ಟಿಪ್‍ನಿಂದ ಚರ್ಮವನ್ನು ತುಂಬಾ ಸಮರ್ಥವಾಗಿ ತಣ್ಣಗಾಗಿಸುತ್ತದೆ. ಇದು ಅನೆಸ್ತೆಟಿಕ್ ಕ್ರೀಮ್ ಲೇಪನದ ಅಗತ್ಯವನ್ನು ತಪ್ಪಿಸುತ್ತದೆ. ಹೀಗಾಗಿ ಈ ವಿಧಾನವು ಅಪಾಯಕಾರಿಯಲ್ಲ. ಆದ್ದರಿಂದ ಈ ತಂತ್ರಜ್ಞಾನ ಮೃದು ಚರ್ಮ ಹೊಂದಲು ಬಯಸುವವರಿಗೆ ವರದಾನ. ಅದರೆ, ರೂಢಿಗತ ಲೇಸರ್ ಹೇರ್ ರಿಡಕ್ಷನ್‍ಗೆ ಶಾಪವಲ್ಲ.
ಲೇಸರ್ ಚರ್ಮವನ್ನು ಕಪ್ಪಾಗಿಸುತ್ತದೆ ಎಂದು ಜನರು ಅಗಾಗ ಯೋಚಿಸುತ್ತಾರೆ. ಆದರೆ ಇದು ಸುಳ್ಳು ಮತ್ತು ಸತ್ಯಕ್ಕೆ ದೂರವಾದುದು. ಕಪ್ಪು ಕೂದಲುಗಳ ಕೂದಲ ಮೊಗ್ಗುಗಳು ಸಾಕಷ್ಟು ಮೆಲನಿನ್‍ನನ್ನು ಹೊಂದಿರುತ್ತವೆ ಹಾಗೂ ಇದು ಚರ್ಮದ ಗಾಢ ಛಾಯೆಗೆ ಕಾರಣವಾಗುತ್ತದೆ. ಕೂದಲುಗಳನ್ನು ಕಡಿಮೆ ಮಾಡುವಾಗ, ಇಂಥ ದಟ್ಟ, ಕಪ್ಪು ಕೂದಲ ಬೇರುಗಳಿಂದ ಚರ್ಮದ ಕಪ್ಪುತನ ಕಡಿಮೆಯಾಗುತ್ತದೆ ಹಾಗೂ ಚರ್ಮವು ಹೆಚ್ಚು ತೆಳು ಛಾಯೆಯಲ್ಲಿ ಗೋಚರಿಸುತ್ತದೆ. ಕಂಕುಳದ ಕೆಳಗೆ ಅಥವಾ ಕೆನ್ನೆ ಮೇಲೆ ದಟ್ಟ ಕೂದಲು ಬೆಳೆಯುವ ಮಹಿಳೆಯರಲ್ಲಿ ಹಾಗೂ ಕಿವಿಗಳ ಮೇಲೆ ಹೆಚ್ಚು ಕೂದಲಿರುವ ಪುರುಷರಲ್ಲಿ ಈ ಬದಲಾವಣೆಯು ಹೆಚ್ಚು ಪ್ರಶಂಸೆಗೆ ಒಳಪಡುತ್ತದೆ. ಲೈಟ್ ಥೆರಪಿ ವಿಷಯಕ್ಕೆ ಬಂದಾಗ ಇದು ಚರ್ಮ ಕ್ಯಾನ್ಸರ್‍ಗಳಿಗೆ ಕಾರಣವಾಗುವ ಆತಂಕ ಉಂಟು ಮಾಡುತ್ತದೆ. ಮೆಲನಿನ್ (ಕ್ರೋಮೊಫೋರ್) ರೀತಿಯ ರಚನೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಳ್ಳುವ ಮೂಲಕ ಇವು ಲೇಸರ್‍ನಿಂದ ವಿಶೇಷವಾಗಿ ಹೀರಲ್ಪಡುತ್ತವೆ. ಆದರೆ, ಲೇಸರ್ ಹೇರ್ ರಿಡಕ್ಷನ್‍ನಿಂದ ಚರ್ಮ ಕ್ಯಾನ್ಸರ್‍ನ ಸಂಭವ ಇರುವುದಿಲ್ಲ. ಇದರಲ್ಲಿ ಸುರಕ್ಷತೆ ಮುಖ್ಯವಾಗಿರುತ್ತದೆ.

 

 

 

 

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!