ರೇಕಿ ಚಿಕಿತ್ಸೆ ಎಂದರೇನು?-ಅದು ಹೇಗೆ ಉಪಯುಕ್ತವಾಗಿದೆ?

ರೇಕಿ ಪ್ರಾಚೀನ ವೈದ್ಯ ಪದ್ಧತಿ. ಈ ಸಿದ್ದಾಂತ ವಿದ್ಯೆಯು ಭಾಗದ ವಿಶ್ಲೇಷಣೆ ಅಥವಾ ಚಿಕಿತ್ಸೆಗೆ ಬದಲಾಗಿ ಇಡೀ ಶರೀರದ ಸಮಗ್ರವನ್ನು ಪರಿಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡುವ ಹೋಲಿಸ್ಟಿಕ್ ವಿಧಾನದ ಭಾರತೀಯ ಸಿದ್ಧಾಂತದಷ್ಟೇ ಪುರಾತನವಾದುದು. ಅದರ ಸಾಕ್ಷ್ಯವೇ ಅದರ ಸಾಂಗತವಾಗಿದೆ. ರೇಕಿ ವಯಸ್ಸು ಕಾಲರಹಿತವಾದುದು. ಅತಿ ಪ್ರಾಚೀನವಾದ ರೇಕಿ ವಿದ್ಯೆಯು ರೋಗ ಪ್ರಕ್ರಿಯೆಯನ್ನು ತಡೆಗಟ್ಟಲು ಪುನಶ್ಚೇತನ ಮತ್ತು ರೋಗ ಉಪಶಮನ ಮಾಡುವತ್ತ ಬೆಳಕು ಚೆಲ್ಲಲಿದೆ ಹಾಗೂ ಗರಿಷ್ಠ ಆರೋಗ್ಯ ಸ್ಥಿತಿಯನ್ನು ಕಾಪಾಡುತ್ತದೆ. ಪುನಶ್ಚೇತನ ಚಿಕಿತ್ಸಾ ವಿಧಾನವನ್ನು ರೇಕಿ ಎಂದು ಕರೆಯಲಾಗುತ್ತಿದೆ. ಈ ವಿದ್ಯೆಯಲ್ಲಿ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯು ದೇಹ, ಮನಸ್ಸು ಮತ್ತು ಚೈತನ್ಯದ ರೂಪಾಂತರ ಸಂಬಂಧಕ್ಕೆ ಕಾರಣವಾಗುತ್ತದೆ.
ಅನಿಯತ, ಬೇಕಾಬಿಟ್ಟಿ ಜೀವನ ಶೈಲಿ ಮತ್ತು ದೋಷಪೂರಿತ ಆಹಾರ ಅಭ್ಯಾಸಗಳಿಂದ ಜನರ ಆರೋಗ್ಯ ಮತ್ತು ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ. ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದ್ರೋಗ, ಆಸ್ತಮಾ, ಸಂಧಿವಾತ ಇತ್ಯಾದಿಯಂಥ ರೋಗಗಳು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಈ ಎಲ್ಲ ಅನಾರೋಗ್ಯ ಮತ್ತು ರೋಗಗಳಿಗೆ ಚಿಕಿತ್ಸೆ ನೀಡಲು ಅನೇಕ ಚಿಕಿತ್ಸಾ ವಿಧಾನಗಳು, ಔಷಧಿಗಳು ಮತ್ತು ಔಷಧಿರಹಿತ ಚಿಕಿತ್ಸಾ ಪದ್ದತಿಗಳು ಅಸ್ತಿತ್ವದಲ್ಲಿದೆ.

ಔಷಧಿರಹಿತ ಚಿಕಿತ್ಸಾ ವಿಧಾನಕ್ಕೆ ಸಮಯ ಮತ್ತು ಪರಿಶ್ರಮ ಎರಡೂ ಬೇಕಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ  ರೋಗಿಗಳು ಕೂಡ ತಮ್ಮ ಆರೋಗ್ಯದ ಬಗ್ಗೆ ಸಕ್ರಿಯ ಆಸಕ್ತಿ ವಹಿಸುವುದಕ್ಕಿಂತ ಸುಲಭವಾಗಿಯೇ ತಮ್ಮ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗಬೇಕೆಂಬುದನ್ನು ಬಯಸುತ್ತಾರೆ. ತಾವು ಅಸೌಖ್ಯತೆಗೆ ಒಳಗಾದಾಗ ವೈದ್ಯರನ್ನು ಭೇಟಿ ಮಾಡಿದರೆ ತಮ್ಮ ಸಮಸ್ಯೆ ಬಗೆಹರಿದಂತೆ ಎಂಬ ಭಾವನೆ ಅವರಲ್ಲಿ ಬೇರೂರಿದೆ.ಆದಾಗ್ಯೂ, ಔಷಧಿ ಚಿಕಿತ್ಸೆಗಳ ಅನಾನುಕೂಲಗಳು ಮತ್ತು ದುಷ್ಟರಿಣಾಮಗಳ ಬಗ್ಗೆ ನಿಧಾನವಾಗಿ ಜನರಿಗೆ ಅರಿವಾಗುತ್ತಿದೆ. ಬಹುತೇಕ ಔಷಧಿ ಆಧಾರಿತ ಆಧುನಿಕ ಚಿಕಿತ್ಸೆಗಳು ರೋಗದ ಮೂಲ ಕಾರಣ (ಅಂದರೆ ದೇಹ ಶಕ್ತಿಯ ಅಸಮತೋಲನ) ಶಮನಗೊಳಿಸುವುದಕ್ಕಿಂತ ಹೆಚ್ಚಿಗೆ ರೋಗ ಲಕ್ಷಣಗಳನ್ನು ದೂರಗೊಳಿಸಲು ಯತ್ನಿಸುತ್ತವೆ.

  • ಸಾಮಾನ್ಯವಾಗಿ,  ಚಿಕಿತ್ಸೆಗಳು ರೋಗವನ್ನು ಉಪಶಮನ ಮಾಡುತ್ತವೆಯಾದರೂ ಅವು ಮತ್ತೆ ಅಮರಿಕೊಳ್ಳುವ ಸಾಧ್ಯತೆ ಬಗ್ಗೆ ಗಮನ ನೀಡುವುದಿಲ್ಲ.
  • ಎರಡನೆಯದಾಗಿ ಔಷಧಿ ಉತ್ಪನ್ನಗಳು ಅಡ್ಡ ಪರಿಣಾಮಗಳನ್ನು (ಕೆಲವೊಮ್ಮೆ ಮರಣಾಂತಿಕ) ಉಂಟು ಮಾಡುತ್ತವೆ.
  • ಮೂರನೆಯದಾಗಿ ಸೂಪರ್-ಸ್ಪೆಷ್ಪಾಲಿಟಿ ವೈದ್ಯರುಗಳ ಪ್ರವೇಶದೊಂದಿಗೆ ಫೈವ್ ಸ್ಟಾರ್ ಆಸ್ಪತ್ರೆಗಳು, ಹೈಟೆಕ್ ಸಾಧನಗಳು, ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ದಿನೇ ದಿನೇ ಹೆಚ್ಚು ಹೆಚ್ಚು ದುಬಾರಿಯಾಗುತ್ತಿದ್ದು, ಬಡವರು ಮತ್ತು ಮಧ್ಯಮವರ್ಗದ ಜನರ ಕೈಗೆಟುಕದಂತೆ ಗಗನಕುಸುಮವಾಗಿದೆ.
  •  ಅಂತಿಮವಾಗಿ ವೈದ್ಯಕೀಯ ವಿಜ್ಞಾನಗಳು ಹೆಚ್ಚು ಅವೈಯಕ್ತಿಕ ಮತ್ತು ತಾಂತ್ರಿಕವಾಗಿ ಪರಿವರ್ತಿತವಾಗುತ್ತಿದ್ದು, ವೈದ್ಯರು ರೋಗಿಗಿಂತ ರೋಗದ ಬಗ್ಗೆ ಹೆಚ್ಚು ಆಸಕ್ತಿ ವಹಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಜನರಲ್ಲಿ ಔಷಧಿಗಳ ಅನಾನುಕೂಲಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ರಾಸಾಯನಿಕ ಔಷಧಿಗಳಿಗಿಂತ ಒಂದು ಅಥವಾ ಅದಕ್ಕಿಂತ ಹೆಚ್ಚು ಉಪಶಮನ ಶಕ್ತಿಯನ್ನು ಬಳಸುವ ಪರ್ಯಾಯ ಚಿಕಿತ್ಸಾ ವಿಧಾನದತ್ತ ಆಸಕ್ತಿ ತೋರುತ್ತಿದ್ದಾರೆ.

ರೇಕಿ ಚಿಕಿತ್ಸೆ:

ರೇಕಿ-ಇದು ಜಪಾನಿನ ಎರಡು ಪದಗಳ ಸಂಯೋಜನೆಯಾಗಿದೆ. ರೇ ಎಂದರೆ ವಿಶ್ವ ಮತ್ತು ಕೀ ಎಂದರೆ ಜೀವ ಶಕ್ತಿ ಅಥವಾ ಚೈತನ್ಯ ಎಂದರ್ಥ. ರೇಕಿಯು ಒಂದು ಉಪಶಮನ ಶಕ್ತಿಯಾಗಿದ್ದು ಇದು ಈ ಜಗತ್ತಿನಲ್ಲಿ ಯಥೇಚ್ಚವಾಗಿದೆ. ರೇಕಿ ಚಿಕಿತ್ಸೆಯಲ್ಲಿ ಈ ಶಕ್ತಿಯನ್ನು ದೈಹಿಕ ಬಲ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಈ ಮೂಲಕ ಆರೋಗ್ಯವನ್ನು ನಿರ್ವಹಣೆ ಮಾಡಬಹುದು,ನಿಯಂತ್ರಿಸಬಹುದು, ಉಪಶಮನ ಮಾಡಬಹುದು ಅಥವಾ ಗುಣಪಡಿಸಬಹುದು. ಈಗ ಬಳಕೆಯಲ್ಲಿರುವ ಅನೇಕ ಶಕ್ತಿ ಚಿಕಿತ್ಸೆಗಳಲ್ಲಿ ಅಂದರೆ ಅಕ್ಯುಪ್ರೆಷರ್, ಅಕ್ಯುಪಂಕ್ಚರ್, ಪ್ರಾಣಿಕ್ ಹೀಲಿಂಗ್, ಯೋಗಿಕ್ ಹೀಲಿಂಗ್ ಸ್ಪಿರುಚ್ಯುಯಲ್ ಹೀಲಿಂಗ್, ರೇಡಿಯೋನಿಕ್ಸ್, ಬಯೋ ಎನರ್ಜಿಟಿಕ್ ಇತ್ಯಾದಿಯಲ್ಲಿ ಅತ್ಯಂತ ಸರಳ ಮತ್ತು ಸುಲಭವಾದ ಚಿಕಿತ್ಸಾ ವಿದ್ಯೆ ಮತ್ತು ಪದ್ದತಿ ಎಂದರೆ ರೇಕಿ.
ಹಿಂದಿನ ವೈಜ್ಞಾನಿಕ ಮತ್ತು ವೈದ್ಯಕೀಯ ಜ್ಞಾನ ಇಲ್ಲದವರೂ ಒಳಗೊಂಡಂತೆ ಎಲ್ಲರಿಂದಲೂ ಇದರ ಉಪಯೋಗವನ್ನು ಕಲಿಯಬಹುದು. ಚಿಕಿತ್ಸೆ ನೀಡುವಾಗ ಚಿಕಿತ್ಸಕನು ರೋಗಿ ಮೇಲೆ ಅಥವಾ ಆತನ/ಆಕೆಯ ರೋಗದ ಸ್ಥಳದ ಮೇಲೆ ಕೇವಲ ತನ್ನ ಕೈಗಳನ್ನು (ಹಸ್ತಗಳನ್ನು) ಇರಿಸಬೇಕಾಗುತ್ತದೆ. ಶರೀರದ ಮೇಲೆ ನಿಗದಿಗೊಳಿಸಲಾದ 26 ಸ್ಥಳಗಳಲ್ಲಿ ಹಸ್ತವನ್ನು ಮೂರು ನಿಮಿಷಗಳ ಕಾಲ ಇಡುತ್ತಾ ಹೋಗುವುದೇ ದಿನ ನಿತ್ಯದ ಸಾಧನೆ. ಸಮಸ್ಯೆ-ತೊಂದರೆ ಇರುವ ಭಾಗದಲ್ಲಿ ಹೆಚ್ಚು ಹೊತ್ತು ಹಸ್ತವನ್ನು ಇಡುತ್ತಾ ಹೋಗಬೇಕು. ಇದನ್ನು ಹೊರತುಪಡಿಸಿ ಬೇರೆ ಏನೂ ಮಾಡದೇ ಇರುವುದು ರೇಕಿ ಚಿಕಿತ್ಸೆಯ ವಿಶೇಷತೆ.

ಇದಕ್ಕಾಗಿ ಸಕ್ರಿಯ ಪ್ರಯತ್ನ (ನೈಪುಣ್ಯತೆ) ಅಥವಾ ಏಕಾಗ್ರತೆಯ ಅಗತ್ಯವಿರುವುದಿಲ್ಲ. ರೋಗಿಯ ಮೇಲೆ ತನ್ನ ಹಸ್ತಗಳನ್ನು ಚಿಕಿತ್ಸಕನು ಇರಿಸಿದ ಕ್ಷಣದಿಂದ ರೇಕಿ ಶಕ್ತಿ ಪ್ರೇರಣೆಗೊಂಡು ಮೊದಲಿಗೆ ತನ್ನ ದೇಹದಲ್ಲಿ ಅದು ಪ್ರವಹಿಸುತ್ತದೆ ಮತ್ತು ನಂತರ  ಕೈಗಳಿಂದ ಹೊರಹೊಮ್ಮಿ ರೋಗಿಯ ದೇಹವನ್ನು ಪ್ರವೇಶಿಸುತ್ತದೆ. ಇದು ರೋಗಿಯ ಅಗತ್ಯವು ತೃಪ್ತಿಯಾಗುವ ತನಕ ಪ್ರವಹಿಸುವಿಕೆಯು ಮುಂದುವರಿಯುತ್ತದೆ. ಚಿಕಿತ್ಸಕನು ಬ್ರಹ್ಮಾಂಡ ಶಕ್ತಿ (ಅಂದರೆ ರೇಕಿ) ಮತ್ತು ರೋಗಿಯ ಶಕ್ತಿಯ ನಡುವೆ ಒಂದು ವಾಹಿನಿಯಾಗಿ ಅಥವಾ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಇತರ ಶಕ್ತಿ ಔಷಧಿ ರೂಪಗಳಂತಲ್ಲದೆ ರೇಕಿ ಚಿಕಿತ್ಸೆಯಲ್ಲಿ ರೋಗಿಯ ಶಕ್ತಿ ಕ್ಷೇತ್ರದ ಅಸಮತೋಲನವನ್ನು ನಿರ್ಧರಿಸುವ ಅಗತ್ಯವಿರುವುದಿಲ್ಲ. ರೇಕಿ ಚಿಕಿತ್ಸೆಯಲ್ಲಿ ಚಿಕಿತ್ಸಕನು ಮಾರ್ಗದ ಮೇಲೆ ತುಂಬಾ ಕಡಿಮೆ ಪ್ರಾಬಲ್ಯ ಹೊಂದಿರುತ್ತಾನೆ, ರೋಗಿಯ ದೇಹಕ್ಕೆ ರೇಕಿ ಪ್ರವಹಿಸುವ ತೀವ್ರತೆ ಅಥವಾ ಮೊತ್ತಗಳನ್ನು ರೇಕಿಯೇ ನಿರ್ಧರಿಸುತ್ತದೆ.
ರೇಕಿ ಥೆರಪಿ ಇತರ ಅನೇಕ ಪ್ರಯೋಜಗಳನ್ನೂ ಒಳಗೊಂಡಿದೆ. ರೋಗ ಉಪಶಮನಗೊಳಿಸುವ ಜೊತೆಗೆ ರೋಗವನ್ನು ತಡೆಗಟ್ಟುವ ಅಂಶವೂ ಇದರಲ್ಲಿದೆ. ನಿಯತವಾಗಿ ರೇಕಿ ಚಿಕಿತ್ಸೆ ಪಡೆಯುವ ಆರೋಗ್ಯಕರ ವ್ಯಕ್ತಿಯ ಹತ್ತಿರ ರೋಗರುಜಿನಗಳು ಸುಳಿಯದು.ರೇಕಿಯು ರೋಗಿಯನ್ನು ಪ್ರವೇಶಿಸುವುದಕ್ಕೆ ಮೊದಲು ಚಿಕಿತ್ಸಕ ದೇಹದೊಳಗೆ ಪ್ರವಹಿಸುತ್ತದೆ. ಇತರ ಚಿಕಿತ್ಸಾ ವಿಧಾನಗಳಲ್ಲಿ ಚಿಕಿತ್ಸೆ ನೀಡುವವರು ರೋಗಿಯ ರೋಗವನ್ನು ಉಪಶಮನಗೊಳಿಸಿದರೆ, ರೇಕಿ ಚಿಕಿತ್ಸೆಯಲ್ಲಿ ಮೊದಲು ಚಿಕಿತ್ಸಕನೇ ಉಪಶಮನಹೊಂದಿತ್ತಾನೆ. ಚಿಕಿತ್ಸಕನು ರೋಗ ಗುಣಪಡಿಸುವುದಕ್ಕಾಗಿ ತನ್ನದೇ ಆದ ಶಕ್ತಿಯನ್ನು ಬಳಸುವುದಿಲ್ಲ ಮತ್ತು ಆತನ ಶಕ್ತಿ ಎಂದೂ ಬರಿದಾಗುವುದಿಲ್ಲ.
ಔಷಧಿ ಸೇರಿದಂತೆ ಇತರ ಚಿಕಿತ್ಸೆ ವಿಧಾನದೊಂದಿಗೂ ರೇಕಿ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಸಂಯೋಜನೆ ಮಾಡಬಹುದು. ಇದೇ ಕಾರಣಕ್ಕಾಗಿ ರೇಕಿ ಚಿಕಿತ್ಸೆಯು ಹೆಚ್ಚು ಹೆಚ್ಚು ವೈದ್ಯರ ಇಷ್ಟವಾಗುತ್ತಿದೆ. ರೇಕಿ ಚಿಕಿತ್ಸಾ ವಿಧಾನವನ್ನು ಆಲೋಪತಿ, ಹೋಮಿಯೋಪತಿ, ಆಯುರ್ವೇದ, ಸಿದ್ದ, ಯುನಾನಿ, ರೋಗ, ವ್ಯಾಯಾಮ, ಧ್ಯಾನ ಮುಂತಾದವುಗಳೊಂದಿಗೆ ಅನ್ವಯಿಸಬಹುದಾಗಿದ್ದು, ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ಚಿಕಿತ್ಸಾ ಪರಿಣಾಮ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ ಮತ್ತು ಉತ್ತಮವಾಗುತ್ತದೆ. ರೋಗಿಗೆ ಈಗಾಗಲೇ ಯಾವುದಾದರೂ ಪದ್ದತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, ರೇಕಿ ಚಿಕಿತ್ಸೆಯೊಂದಿಗೆ ಅದನ್ನು ಮುಂದುವರಿಸಬಹುದಾಗಿದೆ. ಬೇರೆ ಚಿಕಿತ್ಸಾ ಪದ್ದತಿಯೊಂದಿಗೆ ರೇಕಿ ಸೇರ್ಪಡೆಯಾದರೂ ಪೂರಕ ಪರಿಣಾಮ ತ್ವರಿತವಾಗಿ ದೊರೆಯುತ್ತದೆ ಎಂಬುದು ಕೆಲವು ಸಂಶೋಧನೆಗಳಿಂದ ದೃಢಪಟ್ಟಿದೆ.
ರೇಕಿ ಚಿಕಿತ್ಸೆಯು ರೋಗ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಒಂದು ಅತ್ಯುತ್ತಮ ಮಾನಸಿಕ ಚಿಕಿತ್ಸೆ ರೂಪವೂ ಆಗಿದೆ. ರೇಕಿ ಸ್ವೀಕರಿಸಿದವರಲ್ಲಿ ಇದು ಆಳವಾದ ಮತ್ತು ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ರೇಕಿ ವಿದ್ಯೆಯನ್ನು ಅಭ್ಯಾಸ ಮಾಡಿದವರಲ್ಲಿ ಶಾಂತ ಸ್ಥಿತಿ, ಪ್ರಶಾಂತತೆ ಮತ್ತು ನಿರ್ಮಲ ಮನಸ್ಸು ಇರುತ್ತದೆ. ಇವರು ಎಂಥ ಕ್ಲಿಷ್ಟ ಪರಿಸ್ಥಿತಿ ಮತ್ತು ಸನ್ನಿವೇಶಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದರಿಂದ ಒತ್ತಡವನ್ನು ತುಂಬಾ ಸುಲಭವಾಗಿ ನಿರ್ವಹಣೆ ಮಾಡಲು ಸಮರ್ಥರಾಗುತ್ತಾರೆ. ರೇಕಿ ಅಭ್ಯಾಸ ಮಾಡುವವರಲ್ಲಿ ಅವರ ಜೀವನದ ಧೋರಣೆಗಳು ಉತ್ತಮ ರೀತಿಯಲ್ಲಿ ಬದಲಾವಣೆಯಾಗುತ್ತದೆ. ಅವರ ಕಲ್ಪನೆ ಮತ್ತು ಸೃಜನಶೀಲತೆ ಶಕ್ತಿಯು ಹೆಚ್ಚಾಗುತ್ತದೆ. ರೇಕಿ ವಿದ್ಯೆಯನ್ನು ಕರಗತ ಮಾಡಿಕೊಂಡವರಲ್ಲಿ ಹೆಚ್ಚುವರಿ ಸಂವೇದನಾ ಇಂದ್ರಿಯ ಶಕ್ತಿಗಳು ಅಭಿವೃದ್ಧಿಯಾಗುವುದು ಕಂಡುಬಂದಿದೆ.

ಡಾ.ಪಾರ್ವತಿ ಭಟ್
ಯೋಗ ಪ್ರವೀಣೆ ಮತ್ತು ರೇಖಿ ಚಿಕಿತ್ಸಕರು
ಸ್ವಾಮಿ ವಿವೇಕಾನಂದ ಯೋಗ ಕೇಂದ್ರ,
1172, ಬ್ಲೂ ಹುಂಡೈ ಕಾರ್ ಶೋರೂಂ ಎದುರು,
ಡಾ. ರಾಜ್‍ಕುಮಾರ್ ರಸ್ತೆ (ರಾಜರಾಜೇಶ್ವರಿ ಕಲ್ಯಾಣ ಮಂಟಪ ಸಮೀಪ),
2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – 560 010 ಮೊ.: 9449445892

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!