ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ ಪಾಸಿಟಿವ್ ಎನರ್ಜಿ

ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ, ಪಾಸಿಟಿವ್ ಎನರ್ಜಿ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾರ್ಯಸಿದ್ದಿ ಮುಂತಾದ ಫಲ ಹೊಂದಬಹುದು. ಮನೆಯಲ್ಲೂ ಪಾಸಿಟಿವ್ ಎನರ್ಜಿ ಇದ್ದರೆ, ನಗು ಇರುತ್ತದೆ, ನಗುವಿದ್ದರೆ ನೆಮ್ಮದಿ ಇರುತ್ತದೆ, ನೆಮ್ಮದಿ ಇದ್ದರೆ ಮನೆ ನಂದನವನವಾಗುತ್ತದೆ ಎಂಬ ನಂಬಿಕೆ ಇದೆ.

Gems-and-stones/ ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ ಪಾಸಿಟಿವ್ ಎನರ್ಜಿ

ರತ್ನಗಳು ಮತ್ತು ಹರಳುಗಳಿಗೆ ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಇವುಗಳು ವೈಜ್ಞಾನಿಕವಾಗಿಯೂ ಮಹತ್ವ ಪಡೆದಿವೆ. ಇವುಗಳನ್ನು ಧರಿಸುವುದರಿಂದ ಕೆಡಕುಗಳು ದೂರಾಗಿ, ಸರ್ವ ದೋಷಗಳು ನಿವಾರಣೆಯಾಗಿ ಕ್ಷೇಮ ಪ್ರಾಪ್ತಿಯಾಗುತ್ತದೆ. ನೈಜ ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾರ್ಯಸಿದ್ದಿ ಮುಂತಾದ ಫಲ ಹೊಂದಬಹುದು.

ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಜೋತಿಷ್ಯ ಶಾಸ್ತ್ರಕ್ಕೆ ಅತ್ಯಂತ ಮಹತ್ವವಿದೆ. ಜೋತಿಷ್ಯ ವೇದದ ಶಿರೋಭಾಗವೆಂದೇ ಪುರಾಣ, ಪುಣ್ಯ ಕಥೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ಜ್ಯೋತಿಷ್ಯ ಶಾಸ್ತ್ರದ ಉಪಶಾಸ್ತ್ರವೇ ರತ್ನ ಶಾಸ್ತ್ರ. ನವಗ್ರಹ, ರತ್ನಗಳು ಹಾಗೂ 27 ಉಪ ರತ್ನಗಳ ಮಹತ್ವದ ಬಗ್ಗೆ ವರಾಹಮಿಹಿರನ ಸುಪ್ರಸಿದ್ದ ಜೋತಿಷ್ಯ ಗ್ರಂಥ ಬೃಹತ್ ಸಂಹಿತೆಯಲ್ಲಿ ತಿಳಿಸಲಾಗಿದೆ. ಅವುಗಳ ಧಾರಣೆಯಿಂದ ಕೆಡುಕಾಗುವುದಿಲ್ಲ ಎಂಬ ನಂಬಿಕೆ ಭಾರತೀಯರಲ್ಲಿದೆ.

ರತ್ನಗಳನ್ನು ಧರಿಸುವುದರಿಂದ ಕ್ಷೇಮ ಪ್ರಾಪ್ತವಾಗುತ್ತದೆ. ಎಲ್ಲ ತೊಂದರೆಗಳಿಗೂ ರತ್ನಗಳು ಪರಿಹಾರ ಸೂಚಿಸುತ್ತವೆ ಎಂಬ ನಂಬಿಕೆ ಇದೆ. ಜನ್ಮ ಕುಂಡಲಿ ಮೂಲಕ ಪ್ರತಿಯೊಬ್ಬ ಮನುಷ್ಯನ ಗ್ರಹಗತಿಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಯಬಹುದು. ಸಮಸ್ಯೆ ತಿಳಿದು ಅದರ ಪರಿಹಾರಕ್ಕಾಗಿ ಸೂಕ್ತ ರತ್ನಗಳು ಮತ್ತು ಹರಳುಗಳನ್ನು ಧರಿಸಬಹುದು. ವಾಸ್ತು ಶಾಸ್ತ್ರದಲ್ಲಿಯೂ ಇವುಗಳ ಬಗ್ಗೆ ಉಲ್ಲೇಖಿಸಲಾಗಿದೆ. ನೈಜ ರತ್ನಗಳನ್ನು ಮನೆಯಲ್ಲಿ ಹಾಕುವುದರಿಂದ ದುಷ್ಟ ಶಕ್ತಿಗಳು ಪ್ರವೇಶಿಸುವುದಿಲ್ಲ. ದೇವತಾ ಪ್ರತಿಷ್ಠಾಪನೆ ಸಂದರ್ಭದಲ್ಲೂ ವಿಗ್ರಹಗಳ ಕೆಳಗೆ ನವರತ್ನಗಳನ್ನು ಹಾಕಲಾಗುತ್ತದೆ.

ನೀವು ಧರಿಸುವ ರತ್ನಗಳು ಮತ್ತು ಹರಳುಗಳು ಅಸಲಿ ಎಂಬುದನ್ನು ದೃಢಪಡಿಸಿಕೊಳ್ಳಲು ಪರೀಕ್ಷೆ ಮಾಡಲಾಗುತ್ತದೆ. ರತ್ನಗಳ ಕಠಿಣತೆ, ನಿರ್ದಿಷ್ಟ ಗುರುತ್ವಾಕರ್ಷಣೆ (ಸ್ಪೆಸಿಫಿಕ್ ಗ್ರ್ಯಾವಿಟಿ) ಹಾಗೂ ವಕ್ರೀಭವನ ಸೂಚಿಕೆ (ರಿಫ್ರೆಕ್ಟಿವ್ ಇಂಡೆಕ್ಸ್) ಇದನ್ನು ಜೆಮ್ ಟೆಸ್ಟ್ ಲ್ಯಾಬ್‍ಗಳಲ್ಲಿ ಪರೀಕ್ಷಿಸಿದ ನಂತರವೇ ಅವುಗಳ ಗುಣಮಟ್ಟ ನಿರ್ಧರಿಸಿ ಜನರಿಗೆ ನೀಡಲಾಗುತ್ತದೆ. ನವಗ್ರಹಗಳಿಂದ ಹೊರ ಹೊಮ್ಮುವ, ಜೀವಿಗಳ ಮೇಲೆ ಪ್ರಭಾವ ಬೀರುವ ವಿಶಿಷ್ಟ ಶಕ್ತಿಯು, ಕಿರಣಗಳನ್ನು ಪ್ರತಿರೋಧಿಸುವ ಶಕ್ತಿಯೂ ರತ್ನಗಳಿಗಿವೆ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ.

ಸರಿಯಾದ ರತ್ನ ಮತ್ತು ಹರಳುಗಳನ್ನು ಧರಿಸುವುದರಿಂದ ಮಾತ್ರ ಜೀವನದಲ್ಲಿ ಉಂಟಾಗುವ ಏರುಪೇರುಗಳನ್ನು ಸರಿಪಡಿಸಬಹುದು. ಧರಿಸುವ ಮುನ್ನ ರತ್ನದ ತೂಕ ಎಷ್ಟಿರಬೇಕು. ಯಾವ ರತ್ನವನ್ನು ಯಾವ ಬೆರಳಿಗೆ ಹಾಗೂ ಯಾವ ದಿನ ಧರಿಸಬೇಕು ಎಂಬುದನ್ನು ಗಮನಿಸಬೇಕಾಗುತ್ತದೆ. ನೈಜ ರತ್ನಗಳ ಧಾರಣೆಯಿಂದ ಮಾತ್ರ ಆತ್ಮಬಲ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾರ್ಯಸಿದ್ದಿ ಮುಂತಾದ ಫಲ ಹೊಂದಬಹುದು.

Watch Video: ಕಾಲುಂಗುರ ಏಕೆ ಹಾಕಬೇಕು?

ಸಂಖ್ಯಾಶಾಸ್ತ್ರದಲ್ಲಿದೆ ವ್ಯಕ್ತಿತ್ವ

ಸಂಖ್ಯೆಗಳು ನಮ್ಮ ಒಡನಾಡಿಗಳು. ಸಂಖ್ಯೆಗಳಿಲ್ಲದ ಪ್ರಪಂಚವನ್ನು ನಾವು ಊಹಿಸಲೂ ಸಾಧ್ಯವಾಗದು. ಬೆಳಗಿನಿಂದ ಸಂಜೆ ತನಕ ಸಂಖ್ಯೆಗಳೊಂದಿಗೆ ನಮ್ಮ ಒಡನಾಡ ಇದ್ದೇ ಇರುತ್ತದೆ. ಸಂಖ್ಯೆಗಳು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನಾಂಕಕ್ಕೆ ಅನುಗುಣವಾಗಿ ಜೀವನದ ಅನೇಕ ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಬಹುದಾಗಿದೆ ಎನ್ನುತ್ತದೆ ಸಂಖ್ಯಾಶಾಸ್ತ್ರ.

ವಾಸ್ತು ಶಾಸ್ತ್ರ ಮತ್ತು ಪಾಸಿಟಿವ್ ಎನರ್ಜಿ

ವಾಸ್ತು ಆರ್ಕಿಟೆಕ್ಚರ್ ಮತ್ತು ಕನ್‍ಸ್ಟ್ರಕ್ಷನ್‍ಗೆ ಸಂಬಂಧಿಸಿದ ಕಲೆ. ಹಿಂದಿನ ಕಾಲದಲ್ಲಿ ದೇಗುಲಗಳನ್ನು ನಿರ್ಮಿಸಬೇಕಾದರೆ ಪಾಸಿಟಿವ್ ಎನರ್ಜಿ ಪ್ರವಹಿಸುವಂತೆ ಮಾಡಲಾಗುತ್ತಿತ್ತು. ಕಳಶವೂ ಪಾಸಿಟಿವ್ ಎನರ್ಜಿಯನ್ನು ಎಳೆದುಕೊಳ್ಳುತ್ತಿತ್ತು. ಅದೇ ರೀತಿ ಮನೆಯಲ್ಲೂ ಪಾಸಿಟಿವ್ ಎನರ್ಜಿ ಇರುವಂತೆ ನಿರ್ಮಿಸಬೇಕಾಗುತ್ತದೆ. ಪ್ರಕೃತಿಗೆ ಅನುಗುಣವಾಗಿ ಗುರುತ್ವಾಕರ್ಷಣಾ ಶಕ್ತಿಯನ್ನೊಳಗೊಂಡ ಮನೆ ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ. ನೆಗೆಟಿವ್ ಎಜರ್ನಿ ದೂರ ಸರಿಯುತ್ತದೆ. ಪಾಸಿಟಿವ್ ಎನರ್ಜಿ ಇದ್ದರೆ, ನಗು ಇರುತ್ತದೆ, ನಗುವಿದ್ದರೆ ನೆಮ್ಮದಿ ಇರುತ್ತದೆ, ನೆಮ್ಮದಿ ಇದ್ದರೆ ಮನೆ ನಂದನವನವಾಗುತ್ತದೆ ಎಂಬ ನಂಬಿಕೆ ಇದೆ.

geowellness

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!