ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್‍ನಾಲಜಿ

ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್‍ನಾಲಜಿ.ಈ ತರಹದ ಸಂಶೋಧನೆಗಳಿಂದ ಆಹಾರ, ಆರೋಗ್ಯ, ರಕ್ಷಣೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಹೋಸ ಆಯಾಮವನ್ನೇ ಸೃಷ್ಟಿಸಬಹುದು.

ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್‍ನಾಲಜಿಈ ಕಾಲದ ಉನ್ನತ ಸಂಶೋಧನೆಯಲ್ಲಿರುವುದು ನ್ಯಾನೋ ಟೆಕ್‍ನಾಲಜಿ – ಅಂದರೆ ಸೂಕ್ಷ್ಮವಸ್ತು ವಿಜ್ಞಾನ. ಇದರ ಬಗೆಗಿನ ಸಂಶೋಧನೆ 20ನೇ ಶತಮಾನದಲ್ಲಿ ಚಾಲನೆಗೆ ಬಂತು. ನ್ಯಾನೋ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಗಿಡ್ಡಾ ಎಂದರ್ಥ. ಒಂದುವಸ್ತುವನ್ನು ಅದರ ಮಾಲಿಕ್ಯುಲ್, ಆಟಮ್ಗಳ (ಅಣುವಿನ) ಮಟ್ಟದಲ್ಲಿ ಅದರ ಗಾತ್ರ, ರೂಪ, ಗುಣಗಳನ್ನು ಬದಲಾಯಿಸುವ, ಕೂಡಿಸುವ, ಮುಂತಾದ ಕ್ರಿಯೆಗಳಿಂದ ಸಂಶೋಧಿಸುವುದು. ಇಲ್ಲಿ ವಸ್ತುವಿನ ಗಾತ್ರ ,ಮೀಟರ್‍ನ 10ಸಾವಿರ ಕೋಟಿ ಸಾರಿವಿಭಜಿಸಿದಾಗ ಸಿಗುವ ಗಾತ್ರದಲ್ಲಿರುತ್ತದೆ. ಅದನ್ನು ನಾವು ನ್ಯಾನೋಮಿಟರ್ ಎಂದು ಕರೆಯುತ್ತೆವೆ. 1 ನ್ಯಾನೋಮಿಟರ್ = 1/100000000 ಮಿಟರ್ ಎಂದು. ಉದಾಹರಣೆಯೊಂದಿಗೆ ಹೇಳುವುದಾದರೆ ಒಂದು ಕೂದಲಿನ 25 ಸಾವಿರ ಭಾಜಿಸಿದಾಗ ಸಿಗುವ ರೂಪ. ಭೂಮಿಯ ನ್ಯಾನೊರೂಪ ಒಂದು ಆಯತಾಕಾರದ ಮಾರ್‍ಬಲ್‍ನಷ್ಟು.

ಭಾರತೀಯ  ರಸಶಾಸ್ತ್ರದಲ್ಲಿ  1ನೇ ಶತಮಾನದಲ್ಲಿ ನ್ಯಾನೋ ಟೆಕ್‍ನಾಲಜಿ:

ಯಾವುದೇ ವಸ್ತುವಿನ ಗುಣಧರ್ಮಗಳ ಬದಲಾವಣೆ, ಒಂದೇ ವಸ್ತುವಿನಲ್ಲಿ ಬಹುವಸ್ತುಗಳ ಜೋಡಣೆಯಿಂದ ಹೊಸ ವಸ್ತುವಿನ ಉಗಮ. ರಾಸಾಯನಿಕ ಬೌತಿಕ ಗುಣಗಳ ಬದಲಾವಣೆಯ ಕ್ಲಿಷ್ಟತೆಯನ್ನು ಸರಾಗವಾಗಿ ನ್ಯಾನೋ ಟೆಕ್‍ನಾಲಜಿಯಿಂದ ಕಾಣಬಹುದು. ಈ ತರಹದ ಸಂಶೋಧನೆಗಳಿಂದ ಆಹಾರ, ಆರೋಗ್ಯ, ರಕ್ಷಣೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಹೋಸ ಆಯಾಮವನ್ನೇ ಸೃಷ್ಟಿಸಬಹುದು. ಇದಕ್ಕೋಸ್ಕರ ಹಲವಾರು ರಾಷ್ಟ್ರಗಳು ಬಿಲಿಯನ್‍ಗಟ್ಟಲೆ ಹಣವನ್ನು ನ್ಯಾನೋ ಟೆಕ್‍ನಾಲಜಿಯ ಸಂಶೋಧನೆಗೆಂದು ಮೀಸಲಿಟ್ಟಿದೆ. ಇದರ ಬಗೆಗಿನ ಸಂಶೋಧನೆಯು ಭಾರತೀಯ ರಸಾಯನ ಶಾಸ್ತ್ರವಾದ ರಸಶಾಸ್ತ್ರದಲ್ಲಿ ಸುಮಾರು 1ನೇ ಶತಮಾನದಲ್ಲಿ ನಡೆದಿದೆ ಎಂಬುದು ವಿಷೇಶ. ನಾಗಾರ್ಜುನನೆಂಬ ಮಹಾನ್ ಬೌದ್ಧಬಿಕ್ಷುವು ಇದರ ರೂವಾರಿ.

ಹಿಂದಿನ ಕಾಲದಲ್ಲಿ ಸಂಸಾರದಿಂದ ಮುಕ್ತಿಪಡೆಯಲು ಹಲವಾರು ಸಂಶೋಧನೆಗಳನ್ನು ನಡೆಸುತ್ತಿದ್ದರು. ಈ ಸಂಶೋಧನೆಯಲ್ಲಿ ಲೋಹವಾದವೆಂಬ ಸಂಶೋಧನೆಯು ನಡೆಯಿತು. ಇದರಲ್ಲಿ ಖನಿಜಗಳು ಹಾಗು ಲೋಹಗಳ ಸಹಾಯದಿಂದ ಪಾದರಸ(ಮರ್‍ಕ್ಯುರಿ)ದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಲಾಯಿತು. ಇದರ ಅಂತಿಮ ರೂಪ ಅಷ್ಟಾದಶ ಸಂಸ್ಕಾರ. ಪಾದರಸವನ್ನು ಹಲವಾರು ರಸಕ್ರಿಯೆಗೆ ಒಡ್ಡಿದಾಗ ಅದನ್ನು ಅಂತಿಮವಾಗಿ ವೇದಕ್ರಿಯೆಗೆ ಪ್ರಯೋಗಿಸಲಾಗುತ್ತದೆ. ಇದರಿಂದ ದೊರೆತ ಪಾದರಸವನ್ನು ಯಾವುದೇ ಕ್ಷೀಣಧಾತುವಿಗೆ ಬೆರೆಸಿದಾಗ ಅದು ಸಹಾ ಬಂಗಾರವಾಗಿ ಮಾರ್ಪಡುತ್ತಿತ್ತು. ಇದನ್ನು ಭಕ್ಷಿಸಿದ ಮನುಷ್ಯನು ಅಷ್ಟಸಿದ್ದಿಯೊಂದಿಗೆ ಮುಕ್ತಿಯನ್ನು ಪಡೆಯುತ್ತಿದ್ದನು. ಇಲ್ಲಿ ನಾವು ಕಾಣಬೇಕಾದ ಅಂಶವೆಂದರೆ ಪಾದರಸ ಹಾಗೂ ಬಂಗಾರಕ್ಕೆ ಒಂದು ಸಂಖ್ಯೆಯ ಅಣ್ವಂಶದ ವ್ಯತ್ಯಾಸ. ಇಲ್ಲಿ ವೈಜ್ಞಾನಿಕವಾಗಿ ಸಂಖ್ಯೆಯನ್ನು ಪ್ರಯೋಗಗಳಿಂದ ಬದಲಿಸಲಾಗಿದೆ.

ಅಣುವಿನ ಸ್ಥರದಲ್ಲಿ ಅದರ ರೂಪವನ್ನು ಬದಲಿಸಿ ಇನ್ನೊಂದು ವಸ್ತುವಾಗಿ ಮಾರ್ಪಡಿಸುವ ರೂಪ. ಅಷ್ಟೇ ಅಲ್ಲದೆ, ರಸಶಾಸ್ತ್ರದಲ್ಲಿ ಔಷಧಿಗಳಲ್ಲೂ ಹಲವು ಸಂಶೋಧನೆಗಳು ನಡೆದವು. ಇದರ ಅಂತಿಮ ರೂಪವೆ ಭಸ್ಮ. ಭಸ್ಮ ಎಂದರೆ ಒಂದು ವಸ್ತುವನ್ನು ಅದರ ಮೂಲರೂಪದಲ್ಲಿ ಇಲ್ಲವಾಗಿಸಿ, ಅದನ್ನು ಅತಿಸೂಕ್ಷ್ಮ ನ್ಯಾನೊರೂಪಕ್ಕೆ ಕೊಂಡೊಯ್ಯುವುದು. ತನ್ನಲ್ಲಿ ಇರುವ ಔಷಧಿಯನ್ನು ಅಥವ ಔಷಧೀಯ ಗುಣಗಳನ್ನು ಬೇಕಾದ ಸ್ಥಳಕ್ಕೆ ಸಾಗಿಸುವುದು. ದೇಹದಲ್ಲಿ ನಡೆಯುವ ಜೀವರಾಸಾಯನಿಕ ಕ್ರಿಯೆಗಳ ರೂವಾರಿಯಾಗಿ(ಕೆಟಲಿಸ್ಟ) ಅಷ್ಟೆ ಅಲ್ಲದೆ ಹಾರ್ಮೋನ್‍ಗಳ ರೂಪದಲ್ಲಿ ಕೆಲಸ ಮಾಡಲು ಶಕ್ತಿಯನ್ನು ಪಡೆಯುತ್ತದೆ. ತನ್ನ ಸೂಕ್ಷತೆಯ ಗುಣದಿಂದ ಅತ್ಯಂತ ವಿಷಯುಕ್ತ ಖನಿಜವಾಗಿದ್ದರೂ ದೇಹಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಏಕೆಂದರೆ ಇದರ ಸೂಕ್ಷ್ಮ ರೂಪದಲ್ಲಿ ಗುಣವನ್ನು ಬದಲಿಸಲಾಗಿರುತ್ತದೆ. ಇಂತಹ ಸಂಶೋಧನೆಯನ್ನು ನಾವು ಈಗಿನ ಕಾಲದಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ ನೀರಿನಲ್ಲಿ ಕರಗದ ಬಂಗಾರವನ್ನು ನೀರಿನಲ್ಲಿ ಕರಗಿಸಬಹುದು, ಅತಿ ಕಡಿಮೆ ಕಬ್ಬಿಣ ಬಳಸಿ ಮನೆ ಕಟ್ಟಲು ಅಷ್ಟೆ ಶಕ್ತಿಯೊಂದಿಗೆ ಬಳಸಬಹುದು. ಅತೀ ಸೂಕ್ಷ್ಮ ತಾಮ್ರವನ್ನು ಬಳಸಿದರೆ ಸೋಲಾರ್‍ನಲ್ಲಿ ಹೆಚ್ಚು ಶಕ್ತಿಯನ್ನು ಪಡೆಯಬಹುದು, ಇಲ್ಲಿ ತಾಮ್ರಭಸ್ಮವನ್ನು ಬಳಸಬಹುದಲ್ಲವೆ? ಅಬ್ರಕದಲ್ಲಿರುವ ಅಲ್ಯುಮಿನಿಯಂ ಬೆಂಕಿಗೆ ಕರಗುವುದಿಲ್ಲ, ಅಬ್ರಕದಿಂದ ಪಡೆದ ಸತ್ವವು ಅಲ್ಯುಮಿನಿಯಂ ಆಗಿದ್ದು ಇದರ ಭಸ್ಮವು ಬೆಂಕಿಯಲ್ಲಿ ಕರಗಬಲ್ಲದು.

ಡಾ. ಸುದರ್ಶನ್ ಕೆ. ಆಚಾರ್ ಉದ್ಗೀತಾ ಕ್ಲಿನಿಕ್, ಎಸ್‍ಎಲ್‍ಎನ್ ಟೆಂಪಲ್ ರೋಡ್, ಓಲ್ಡ್ ಟೌನ್, ಭದ್ರಾವತಿ Dr Sudarshan K Achar Shivamogga Udgeetha Ayurvedic Clinic

ಡಾ. ಸುದರ್ಶನ್ ಕೆ. ಆಚಾರ್
ಉದ್ಗೀತಾ ಕ್ಲಿನಿಕ್, ಎಸ್‍ಎಲ್‍ಎನ್ ಟೆಂಪಲ್ ರೋಡ್, ಓಲ್ಡ್ ಟೌನ್, ಭದ್ರಾವತಿ
ಮೊ.: 9964278800 ; E mail: sudarshan.k.achar@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!