ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ -ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್.‌ಜಿ.ಯು.ಹೆಚ್.‌ಎಸ್) ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ರಾಷ್ವ್ರಿಯ ಸೇವಾ ಯೋಜನೆಯ ಅಧಿಕಾರಿಗಳಿಗೆ 06 ದಿನಗಳ ಕಾಲ ಜೀವನ ಕೌಶಲ್ಯ ತರಬೇತಿ ಕಾರ್ಯಗಾರ ಆಯೋಜಿಸಿದೆ.ಈ ತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎಸ್.‌ ಸಚ್ಚಿದಾನಂದರವರು ಉದ್ಘಾಟಿಸಲಿದ್ದಾರೆ. 

rajeev-gandhi-health-university

ಬೆಂಗಳೂರು, ಮಾರ್ಚ್-14 : ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್.‌ಜಿ.ಯು.ಹೆಚ್.‌ಎಸ್) ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟ ರಾಷ್ವ್ರಿಯ ಸೇವಾ ಯೋಜನೆಯ ಅಧಿಕಾರಿಗಳಿಗೆ ದಿನಾಂಕ:15.03.2021 ರಿಂದ 20.03.2021 ರವರೆಗೆ 06 ದಿನಗಳ ಕಾಲ ಜೀವನ ಕೌಶಲ್ಯ ತರಬೇತಿ ಕಾರ್ಯಗಾರವನ್ನು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನಿಮ್ಹಾನ್ಸ್‌ ಸಹಯೋಗದೊಂದಿಗೆ ನಿಮ್ಹಾನ್ಸ್‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎಸ್.‌ ಸಚ್ಚಿದಾನಂದರವರು ಉದ್ಘಾಟಿಸಲಿದ್ದಾರೆ. ನಿಮ್ಹಾನ್ಸ್‌ನ ನಿರ್ದೇಶಕರಾದ ಡಾ||ಗುರುರಾಜ್‌, ಕೇಂದ್ರ ಸರ್ಕಾರದ ರಾ.ಸೇ.ಯೋ ಪ್ರಾದೇಶಿಕ ನಿರ್ದೇಶಕರಾದ ಶ್ರೀ.ಖಾದ್ರಿ ನರಸಿಂಹಯ್ಯ, ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ.ಪ್ರತಾಪ್‌ ಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

06 ದಿನಗಳ ತರಬೇತಿ ಶಿಬಿರದ ಮುಖ್ಯ ಉದ್ದೇಶ ಧನಾತ್ಮಕ ಚಿಂತನೆಯ ಮೂಲಕ ಸಮಾಜದಲ್ಲಿ ಬದಲಾವಣೆ ಹೇಗೆ ಸಾಧ್ಯ ಎನ್ನುವ ಮೂಲ ಉದ್ದೇಶದೊಂದಿಗೆ ಜೀವನ ಕೌಶಲ್ಯಗಳಾದ ಪರಿಣಾಮಕಾರಿ ಸಂವಹನ, ಮಾನಸಿಕ ಒತ್ತಡ ನಿರ್ವಹಣೆ, ಕ್ರಿಯಾಶೀಲ ನಾಯಕತ್ವ, ಸಮುದಾಯ ಸೇವೆ, ಸ್ವಯಂ ಅರಿವು, ಪರಿಣಾಮಕಾರಿಯಾಗಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ, ಮೌಲ್ಯಾಧಾರಿತ ವ್ಯಕ್ತಿತ್ವ ನಿರ್ಮಾಣಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕಾವಾದ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!