ಪುರುಷರಲ್ಲಿ ಕೂದಲು ಉದುರುವುದು ತಡೆಯಲು ಆಯುರ್ವೇದದ ಮಾರ್ಗ

ಪುರುಷರಲ್ಲಿ ಕೂದಲು ಉದುರುವುದು ಕೆಲವೊಮ್ಮೆ ಎಚ್ಚರಿಕೆಯ ಕರೆಯಾಗಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.ಆಯುರ್ವೇದ ನಿಮ್ಮ ನಿರ್ದಿಷ್ಟವಾದ ಈ ಸಂಕಟಗಳಿಗೆ ಚಿಕಿತ್ಸೆ ನೀಡಬಹುದು. ಏಕೆಂದರೆ ಅವು ಹೆಚ್ಚು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಇತರೆ ರಾಸಾಯನಿಕ ಔಷಧಗಳಿಗೆ ಹೋಲಿಸಿದಲ್ಲಿ ಯಾವುದೇ ದುಷ್ಪರಿಣಾಮ ಹೊಂದಿರುವುದಿಲ್ಲ.

ಪುರುಷರಲ್ಲಿ ಕೂದಲು ಉದುರುವುದು ತಡೆಯಲು ಆಯುರ್ವೇದದ ಮಾರ್ಗ

 

ಕೂದಲಿಗೆ ಸಂಬಂಧಿಸಿದಂತೆ ಸಣ್ಣ ಸಮಸ್ಯೆಗಳಾಗಿ ಕಾಣಬಹುದಾದಂತಹ, ತಲೆಹೊಟ್ಟು, ತಲೆಯಲ್ಲಿನ ತ್ವಚೆ ಒಣಗುವುದು, ಕೂದಲು ಉದುರುವುದು ಮುಂತಾದವುಗಳನ್ನು ನಾವು ತಾತ್ಕಾಲಿಕ ತೊಂದರೆಗಳೆಂದು ಹೆಸರಿಸುತ್ತೇವೆ. ಬಹುತೇಕ ಸಮಯದಲ್ಲಿ ನಾವು ಈ ವಿಷಯದಲ್ಲಿ ಸರಿಯಾಗಿರಬಹುದು. ಆದರೆ, ಯಾವಾಗಲೂ ಅಲ್ಲ. ಕೆಲವೊಮ್ಮೆ ಪುರುಷರಲ್ಲಿ ಕೂದಲು ಉದುರುವುದು ಎಚ್ಚರಿಕೆಯ ಕರೆಯಾಗಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು. ಆಯುರ್ವೇದ ನಿಮ್ಮ ಈ ಸಂಕಟಗಳಿಗೆ ಚಿಕಿತ್ಸೆ ನೀಡಬಹುದು. ಆದರೆ, ನೀವು ಮೊದಲು ಆಯುರ್ವೇದ ವೈದ್ಯರನ್ನು ಭೇಟಿಯಾಗುವುದು ಮೊದಲ ಹೆಜ್ಜೆಯಾಗಿರುತ್ತದೆ. ಅವರು ನಿಮ್ಮ ನಿರ್ದಿಷ್ಟವಾದ ಕೇಶ ತೊಂದರೆ ಕುರಿತು ಸರಿಯಾದ ಮತ್ತು ಸ್ವಾಭಾವಿಕವಾಗಿ ಪರಿಣಾಮಕಾರಿಯಾದ ಚಿಕಿತ್ಸಾ ಕ್ರಮವನ್ನು ಸೂಚಿಸುವರು.

ಕೂದಲು ಉದುರುವ ತೊಂದರೆಗೆ ಚಿಕಿತ್ಸೆ

ಕೂದಲು ಉದುರುವುದಕ್ಕೆ ಚಿಕಿತ್ಸೆಗಳ ವಿಷಯಕ್ಕೆ ಬಂದಾಗ ಆಯುರ್ವೇದ ಚಿಕಿತ್ಸಾ ವಿಧಾನಗಳು ಅತ್ಯಂತ ನಂಬಿಕಾರ್ಹವಾಗಿರುತ್ತದೆ. ಏಕೆಂದರೆ ಅವು ಹೆಚ್ಚು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಇತರೆ ರಾಸಾಯನಿಕ ಔಷಧಗಳಿಗೆ ಹೋಲಿಸಿದಲ್ಲಿ ಯಾವುದೇ ದುಷ್ಪರಿಣಾಮ ಹೊಂದಿರುವುದಿಲ್ಲ. ಹಾಗೂ 5000 ವರ್ಷಗಳ ಜ್ಞಾನದ ಬೆಂಬಲ ಹೊಂದಿರುತ್ತವೆ. ಜೊತೆಗೆ ಕೂದಲು ಉದುರುವುದಕ್ಕೆ ಆಯುರ್ವೇದದ ಪರಿಹಾರ ಬಹಳಷ್ಟು ಕಡಿಮೆ ವೆಚ್ಚದ್ದಾಗಿರುತ್ತದೆ. ಆಯುರ್ವೇದದ ಪ್ರಕಾರ ದೇಹವನ್ನು ತ್ರಿದೋಷಗಳು ನಿಯಂತ್ರಿಸುತ್ತವೆ. ಇವುಗಳಲ್ಲಿ ವಾತ, ಪಿತ್ತ ಮತ್ತು ಕಫ ಸೇರಿರುತ್ತವೆ.

ಅತ್ಯುತ್ತಮ ಮಟ್ಟದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉಳಿಸಿಕೊಳ್ಳುವುದಕ್ಕೆ ಈ ತ್ರಿದೋಷಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ. ಈ ದೋಷಗಳಲ್ಲಿ(ವಾತ, ಪಿತ್ತ ಮತ್ತು ಕಫ) ಯಾವುದೇ ಅಸಮತೋಲನ ಉಂಟಾದರೆ ಇದರಿಂದ ದೇಹದಲ್ಲಿ ರೋಗಗಳು ಕಾಣಿಸಿಕೊಳ್ಳಬಹುದು. ಇದು ನಿಮ್ಮ ಕೂದಲು ಉದುರುವುದರ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಉಂಟುಮಾಡಬಹುದು. ಈ ಮೂರು ದೋಷಗಳಲ್ಲಿ ಪ್ರಾಥಮಿಕವಾಗಿ ಪಿತ್ತ ದೋಷದ ಅಸಮತೋಲನದಿಂದ ಅನೇಕ ಸ್ವಯಂ ನಿರೋಧಕ ರೋಗಗಳಿಗೆ ಮತ್ತು ಇದರಿಂದ ಉಂಟಾಗಬಹುದಾದ ಕೂದಲು ಉದುರುವ ತೊಂದರೆಗೆ ದಾರಿಯಾಗುತ್ತದೆ.

ಪಿತ್ತ ದೋಷ   ಸಮತೋಲನಗೊಳಿಸುವುದು ಹೇಗೆ?

ಪಿತ್ತದ ಅಸಮತೋಲನವು ಹಲವಾರು ಅಂಶಗಳಿಂದ ಉಂಟಾಗುತ್ತದೆ. ಇವುಗಳಲ್ಲಿ ತಪ್ಪಾದ ಆಹಾರ ಸೇವನೆ, ರಾಸಾಯನಿಕಗಳು ಮತ್ತು ಸಂರಕ್ಷಕಗಳನ್ನು ಒಳಗೊಂಡ ಪದಾರ್ಥಗಳ ಸೇವನೆ, ದೀರ್ಘಕಾಲ ಬಿಸಿಲಿಗೆ ಮೈ ಒಡ್ಡುವುದು, ಒತ್ತಡ ಮತ್ತು ಧೂಮಪಾನಗಳು ಸೇರಿವೆ. ಪಿತ್ತದೋಷದ ಸಮತೋಲನ ಕಾಯ್ದುಕೊಳ್ಳಲು ಈ ಮೂರು ಅಂಶಗಳನ್ನು ಮುಖ್ಯವಾಗಿ ಅನುಸರಿಸಬೇಕು : ಆಹಾರ ಕ್ರಮ, ವ್ಯಾಯಾಮ ಮತ್ತು ಚಿಕಿತ್ಸೆಗಳು ಇದರಲ್ಲಿ ಸೇರಿವೆ. ಕೂದಲು ಉದುರುವುದನ್ನು ನೈಸರ್ಗಿಕವಾಗಿ ಈ ಮೂರು ಅಂಶಗಳು ಯಾವ ರೀತಿ ತಡೆಯುತ್ತದೆ ಎಂಬುದನ್ನು ಈಗ ನಾವು ನೋಡೋಣ.

ಕೂದಲು ಉದುರುವುದಕ್ಕೆ ಆಹಾರ ನಿಜವಾದ ಔಷಧ 

ಕೂದಲು ಉದುರುವುದಕ್ಕೆ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಆಹಾರ ನಿಜವಾದ ಔಷಧವಾಗಿರುತ್ತದೆ. ಉಲ್ಬಣಗೊಂಡ ಪಿತ್ತದ ಮಟ್ಟವನ್ನು ಇಳಿಸುತ್ತವೆ ಎಂದು ನಿರೂಪಿತವಾದ ಈ ಕೆಳಗಿನ ಆಹಾರ ಪದಾರ್ಥಗಳನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವ ಖಾತ್ರಿ ಮಾಡಿಕೊಳ್ಳಿ.

1. ಪ್ರತಿ ದಿನ ನಿಮ್ಮ ಊಟದಲ್ಲಿ 1/4 ಟೀ ಸ್ಪೂನ್‍ನಷ್ಟು ತುಪ್ಪವನ್ನು ಸೇರಿಸಿಕೊಳ್ಳಿ. ಪುರಾತನ ಆಯುರ್ವೇದಿಯ ಪುಸ್ತಕಗಳ ಪ್ರಕಾರ, ತುಪ್ಪ ಅಥವಾ ಕ್ಲಾರಿಫೈಡ್ ಬಟರ್ ದೇಹವನ್ನು ತಂಪಾಗಿಸುವ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿರುತ್ತದೆ. ಪಿತ್ತದ ತೊಂದರೆಗೆ ಇದು ಶ್ರೇಷ್ಟ ಪರಿಹಾರವಾಗಿರುತ್ತದೆ.

2. ದೇಹವನ್ನು ತಂಪಾಗಿಸುವ ಆಹಾರಗಳೆಂದು ಪರಿಗಣಿಸಲಾಗಿರುವ ಪದಾರ್ಥಗಳಲ್ಲಿ ರಸಪೂರಿತ ಹಣ್ಣುಗಳು, ಹಾಲು, ತೆಂಗಿನಕಾಯಿ, ಬಾದಾಮಿ ಮತ್ತು ಖರ್ಜೂರ ಮುಂತಾದವುಗಳು ಸೇರಿರುತ್ತವೆ. ಉಪಹಾರಗಳಾಗಿ ಖಾರ ಮತ್ತು ಮಸಾಲೆ ಹೊಂದಿರುವ ಚಿಪ್ಸ್‍ಗಳನ್ನು ಸೇವಿಸುವುದರ ಬದಲಿಗೆ ಈ ಮೇಲಿನವುಗಳನ್ನು ಸೇವಿಸುವುದು ಒಳ್ಳೆಯದು.

3. ತರಕಾರಿಗಳಾದ ಕ್ಯಾರೆಟ್‍ಗಳು, ಅಸ್ಪರಾಗಸ್, ಕಹಿಯಾದ ಹಸಿರು ಸೊಪ್ಪು, ತರಕಾರಿ, ಫೆನಲ್, ಹೂಕೋಸು, ಹಸಿರು ಹುರುಳಿಕಾಯಿ ಮತ್ತು ಹಾಗಲಕಾಯಿ ಮುಂತಾದವುಗಳು ಪಿತ್ತದ ಮಟ್ಟಗಳನ್ನು ಕೆಳಗಿಳಿಸಲು ಉತ್ತಮವಾಗಿರುತ್ತವೆ.

4. ಪಿತ್ತದ ಸಮತೋಲನ ಉಳಿಸಿಕೊಳ್ಳಲು  ಅಕ್ಕಿ ಮತ್ತು ಗೋಧಿ ಉತ್ತಮವಾಗಿರುತ್ತದೆ.

5. ಅರಿಶಿನ, ಜೀರಿಗೆ, ಕೊತ್ತಂಬರಿ, ಏಲಕ್ಕೆ ಮತ್ತು ಮೆಂತ್ಯ ಮುಂತಾದ ಆಯುರ್ವೇದದ ಮಸಾಲೆ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ನಿಮ್ಮ ಆಹಾರದೊಳಕ್ಕೆ ಬಳಸಿರಿ.

6. ಉಪ್ಪು ಹೆಚ್ಚಾಗಿರುವ ಘಾಟು ಹೊಂದಿರುವ ಅಥವಾ ಹುಳಿ ಹೆಚ್ಚಾಗಿರುವ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಿ.

7. ಟೊಮೊಟೊ, ಆಲೂಗಡ್ಡೆ ಮತ್ತು ಬದನೆಕಾಯಿ ತರಕಾರಿಗಳ ಸೇವನೆಯನ್ನು ತಪ್ಪಿಸಿ.

ಕೂದಲು ಉದುರುವ ತೊಂದರೆಗೆ ಆಯುರ್ವೇದ ಚಿಕಿತ್ಸೆಗಳು

ಸೂಕ್ತ ಆಹಾರಕ್ರಮ ಮತ್ತು ಯೋಗ ಅಲ್ಲದೆ, ಔಷಧಗಳು, ಮಸಾಜ್‍ಗಳು ಮತ್ತು ತೈಲಗಳ ರೂಪದಲ್ಲಿ ಪರಿಣಾಮಕಾರಿ ಚಿಕಿತ್ಸೆಗಳು ಕೂದಲು ಉದುರುವುದನ್ನು ತಡೆಯಬಹುದು. ನರಸಿಂಹ ರಾಸಾಯನದಂತಹ ಔಷಧಗಳು ಕೂದಲ ಬೆಳವಣಿಗೆಗೆ ಸಹಾಯ ಮಾಡುವುದು ಕಂಡುಬಂದಿದೆ. ಅದರಲ್ಲಿಯೂ ಮುಖ್ಯವಾಗಿ ಹಾರ್ಮೋನ್‍ಗಳ ಅಸಮತೋಲನದಿಂದ ಉಂಟಾಗುವ ಕೂದಲು ಉದುರುವಿಕೆಗೆ ಇದು ಪರಿಣಾಮಕಾರಿಯಾಗಿರುತ್ತದೆ. ನರಸಿಂಹ ರಾಸಾಯನವನ್ನು ಹಾಲು, ತುಪ್ಪ, ಜಠಮಾನ್ಸಿ, ಬ್ರಹ್ಮಿ ಮತ್ತು ಭೃಂಗರಾಜ ಮುಂತಾದ ಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಪುರುಷರಲ್ಲಿ ಕೂದಲು ಉದುರುವ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಇದು ತೋರಿಸಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಕೂದಲು ಉದುರುವಿಕೆ ನಿಮ್ಮ ದೇಹದಲ್ಲಿನ ಯಾವುದಾದರೊಂದು ಹಾರ್ಮೋನ್ ಸಂಬಂಧಿತ ತೊಂದರೆಯನ್ನು ಸೂಚಿಸಬಹುದು. ಇದು ದೋಷಗಳ ಅಸಮತೋಲನ ಇದು ದೋಷಗಳ ಅಸಮತೋಲನದಿಂದ ಅದರಲ್ಲಿಯೂ ಪ್ರಾಥಮಿಕವಾಗಿ ಪಿತ್ತದೋಷದ ಅಸಮತೋಲನದಿಂದ ಉಂಟಾಗಬಹುದು. ಆಹಾರಕ್ರಮ, ವ್ಯಾಯಾಮ ಮತ್ತು ಚಿಕಿತ್ಸೆಗಳ ಮಿಶ್ರಣದೊಂದಿಗೆ ನಿಮ್ಮ ಕೂದಲನ್ನು ನೀವು ಇಷ್ಟಪಟ್ಟಂತೆ ಉಳಿಸಿಕೊಳ್ಳಲು ಆಯುರ್ವೇದ ನಿಮಗೆ ನೆರವಾಗುತ್ತದೆ.
Dr-Rashmi-kalkura

ಡಾ. ರಶ್ಮಿ ಕಲ್ಕೂರ. ಕೆ.

ಸಹಾಯಕ ಪ್ರೊಫೆಸರ್ – ಕಾಯಚಿಕಿತ್ಸಾ ವಿಭಾಗ
ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಹೆಲ್ತ್ ಸೈನ್ಸಸ್
ಮಣಿಪಾಲ – ಕರ್ನಾಟಕ.

(ಲೇಖಕರು ಆಯುರ್ವೇದ ವೈದ್ಯರು ಮತ್ತು ತರಬೇತಿ ಹೊಂದಿರುವ ಮತ್ತು ಪ್ರಾಮಾಣೀಕೃತ ಯೋಗ ಪರಿಣತರು)

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!