ಪುರುಷ ಬಂಜೆತನ: ಸ್ವಯಂ ಪರೀಕ್ಷಾ ಸಾಧನ

Buy now

ಗಂಡಸರಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು ಮತ್ತು ಫಲವತ್ತಾದ ವೀರ್ಯಾಣುಗಳು ಕ್ಷೀಣಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚು ಪ್ರಕರಣಗಳಲ್ಲಿ ಸಂತಾನೋತ್ಪತ್ತಿ ಆಗದಿರಲು ಸ್ತ್ರೀಯರೇ ಕಾರಣ ಎಂದು ದೂಷಿಸಲಾಗುತ್ತದೆ.
ಮಕ್ಕಳಾಗದಿದ್ದಾಗ ಪತ್ನಿಯನ್ನೇ ಪದೇ ಪದೇ ವೈದ್ಯರ ಬಳಿ ಕರೆದುಕೊಂಡು ಹೋಗಿ, ವಿಧವಿಧವಾದ ಪರೀಕ್ಷೆ ಮಾಡಿಸಲಾಗುತ್ತದೆ.ವೈದ್ಯರ ಸೂಚನೆ ಇದ್ದಾಗ್ಯೂ, ‘ಗಂಡ’ ಮಾತ್ರ ತನ್ನ ಸಂತಾನೋತ್ಪತ್ತಿ ‘ಶಕ್ತಿ’ ಬಗ್ಗೆ ಮರೆ ಮಾಚುತ್ತಲೇ ಇರುತ್ತಾನೆ.
ತನಗೆ ವಂಶಾಭಿವೃದ್ಧಿಗೆ ಬೇಕಾದ ವೀರ್ಯಾಣುಗಳು ಉತ್ಪಾದನೆ ಆಗದಿರುವುದನ್ನು ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲು ಪುರುಷ ಪ್ರತಿಷ್ಠೆ (Male Ego) ಅಡ್ಡಿ ಬರುತ್ತದೆ.ಸಮಾಜದಲ್ಲಿ ತನ್ನ ಬಗ್ಗೆ ಅಗೌರವ ಅಥವಾ ಕೀಳಾಗಿ ಮಾತನಾಡುತ್ತಾರೆ ಎಂಬ ಆತಂಕ ಬಹಳಷ್ಟು ಪುರುಷರಲ್ಲಿದೆ.
ನಪುಂಸಕತ್ವದ ಆತಂಕ ಹೊಂದಿರುವ ಗಂಡಸರ ಅನುಕೂಲಕ್ಕೆ ಹೊಸ ವೈದ್ಯಕೀಯ ಸಾಧನ ಆವಿಷ್ಕಾರ ಮಾಡಲಾಗಿದೆ. ಸ್ಪರ್ಮ ಟೆಸ್ಟ ಕಿಟ್ (Sperm Test Kit) ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. “ಯೊ ಹೊಂ ಸ್ಪರ್ಮ ಟೆಸ್ಟ್ ಕಿಟ್” (Yo Home Sperm Test Kit) ಹೆಸರಿನ ಈ ಸಾಧನವನ್ನು ಬಳಸಿ ಮನೆಯಲ್ಲೇ ವೀರ್ಯಾಣುಗಳ ಗುಣಮಟ್ಟ ಪರೀಕ್ಷೆ ಮಾಡಬಹುದು.ವೈದ್ಯರ ಬಳಿ ಹೋಗಲು ಹಿಂದೇಟು ಹಾಕುವ ಪುರುಷರು ತಮ್ಮ ಮನೆಯಲ್ಲಿ ತಮ್ಮ ವೀರ್ಯದ ಗುಣಮಟ್ಟ ಪರೀಕ್ಷೆ ಮಾಡಿಕೊಳ್ಳಬಹುದು.ಅನಗತ್ಯವಾಗಿ, ಆತಂಕ ಪಡುವ ಬದಲು ಮತ್ತು “ಹೆಣ್ಣನ್ನೇ ಎಲ್ಲದಕ್ಕೂ ಹೊಣೆ” ಮಾಡಿ, ಸಂಸಾರ ಕಲಹಕ್ಕೆ ಕಾರಣ ಆಗುವುದನ್ನು ತಪ್ಪಿಸಲು ಈ ಹೊಸ ಸಾಧನ ನೆರವಾಗಲಿದೆ.
ಸದ್ಯ ‘ಆನ್‍ಲೈನ್’ ಮಾರುಕಟ್ಟೆಯಲ್ಲಿ ಮಾತ್ರ ಈ ಸಾಧನ ಲಭ್ಯವಿದೆ. ಕೆಲಸದ ಒತ್ತಡ, ಆಹಾರಕ್ರಮ ಮತ್ತು ಜೀವನ ಶೈಲಿಯ ಕಾರಣಗಳಿಗಾಗಿ ಪುರುಷರಲ್ಲಿ ಬಂಜೆತನ ಹೆಚ್ಚುತ್ತಲೇ ಇದೆ. ಇದರಿಂದಾಗಿ ಸಂಸಾರಿಕ ಸುಖ ಇಲ್ಲದಾಗುತ್ತಿದೆ. ಮಕ್ಕಳಾಗದಿರುವ ದಂಪತಿಗಳಲ್ಲಿ ಪರಸ್ಪರ ಅಪನಂಬಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಪರಿಹರಿಸಲು ವಿರ್ಯಾಣು ಪರೀಕ್ಷೆ ಸಾಧನ ನೆರವಾಗಲಿದೆ. ಲೈಂಗಿಕ ಜೀವನ ಸುಖಕರವಾಗಲು ಈ ಸಾಧನ ಉಪಯುಕ್ತವಾಗಲಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!