ಸೋರಿಯಾಸಿಸ್ : ಚರ್ಮವನ್ನೇ ಪುಡಿ ಪುಡಿಯಾಗಿಸುವ ವ್ಯಾಧಿ

ಸೋರಿಯಾಸಿಸ್ ಚರ್ಮವನ್ನೇ ಪುಡಿ ಪುಡಿಯಾಗಿಸುವ ವ್ಯಾಧಿ. ಈ ವ್ಯಾಧಿಯು ಚರ್ಮದ ಅಂದವನ್ನು ಕೆಡಿಸುವುದಲ್ಲದೆ ಬಳಲುವ ವ್ಯಕ್ತಿಯ ಮನಸ್ಸುಮತ್ತು ಜೀವನದ ಮೇಲೆ ಪರಿಣಾಮಬೀರುತ್ತದೆ. ಈ ಚರ್ಮವನ್ನೇ ಸೋರಿಸುವ ಖಾಯಿಲೆಯ ಬಗ್ಗೆ ಬೆಳಕು ಚಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

Psoriasis-Tejaswi.ಒಂದುದಿನ ನನ್ನ ಹಳೆಯ ಪೇಶೆಂಟ್ ಒಬ್ಬರು ಅವರ ಕೊಲೀಗ್ ಒಬ್ಬರಾದ ಫಾತಿಮಾ ಎಂಬವರನ್ನು ನನ್ನ ಕ್ಲಿನಿಕ್ ಗೆ ಕರೆತಂದರು. ಫಾತಿಮಾ ಒಬ್ಬ ಖಾಸಗಿ ಶಾಲೆಯಲ್ಲಿ ಟೀಚರ್, ಎರಡು ಮಕ್ಕಳ ತಾಯಿ, ಗಂಡ ದುಬೈನಲ್ಲಿ ಕೆಲಸಮಾಡುತ್ತಿದ್ದರು. ಸುಮಾರು 6-7 ವರ್ಷಗಳಿಂದ ಇವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ, ಚಳಿಗಾಲವಂತೂ ಅವರಿಗೆ ನರಕ ಸದೃಶ, ಅವರು ಕೂತಲ್ಲಿ, ಮಲಗಿದ್ದಲ್ಲಿ ದೇಹದಿಂದ, ತಲೆಯಿಂದ ಬಿಳೀ ಹೊಟ್ಟು ಬಿದ್ದಿರುತ್ತಿತ್ತು, ಕೆಲವೊಮ್ಮೆ ಸಹಿಸಲಾರದಷ್ಟು ತುರಿಕೆ, ಬೇಸರದಿಂದ ಅವರು ಡಾಕ್ಟರುಗಳ ಬಳಿಗೆ ಹೋಗುವದನ್ನೇ ಇತ್ತೀಚಿಗೆ ನಿಲ್ಲಿಸಿದ್ದರು. ಕೊನೆಗೆ ನನ್ನ ಹಳೆಯ ಪೇಶೆಂಟ್ ಸಲಹೆಯ ಮೇರೆಗೆ ನನ್ನ ಸಂದರ್ಶನಕ್ಕೆ ಬಂದರು.

ಅವರನ್ನು ಪರಿಶೀಲಿಸಿದಾಗ ಕೈ, ಕಾಲು ಮತ್ತು ತಲೆಯ ಮೇಲೆ ಬಿಳಿಯ ಹೊಟ್ಟಿನಂತ ಹೊದಿಕೆಯುಳ್ಳ ವೃಣಗಳು ಕಂಡುಬಂದವು. ಕೆಲವು ಪರೀಕ್ಷೆಗಳನಂತರ ಇದು ಸೋರಿಯಾಸಿಸ್ ಎಂಬ ಚರ್ಮ ವ್ಯಾಧಿ ಎಂದು ತಿಳಿಯಿತು. ಫಾತಿಮಾ ಅವರಿಗೆ ಅವರು ಬಳಲುತ್ತಿರುವ ತೊಂದರೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ, ಕೆಲವು ಸಲಹೆ ಡಯೆಟ್ ಚಾರ್ಟ್ ಮತ್ತು ಅವರ ದೇಹ ಪ್ರಕೃತಿ (constitution) ಆಧಾರಿಸಿ ಪಲ್ಸಟಿಲ್ಲ ಎಂಬ ಔಷಧಿ ನೀಡಿ ಕಳುಹಿಸಿದೆ. ಹೀಗೆ ಸುಮಾರು 6 ತಿಂಗಳು ಚಿಕಿತ್ಸೆ ನಡೆಯಿತು, ಈಗ ಅವರ ಸ್ಥಿತಿ ಸುಧಾರಿಸಿದೆ, ಕಳೆದುಹೋಗಿದ್ದ ಆತ್ಮವಿಶ್ವಾಸ, ಲವಲವಿಕೆ ಮರಳಿಬಂದಿದೆ ಎನ್ನುತ್ತಾರೆ ಫಾತಿಮಾ.

 ಸೋರಿಯಾಸಿಸ್ ಎಂಬ ಚರ್ಮ ರೋಗ:

ಸೋರಿಯಾಸಿಸ್ ಎಂಬ ಚರ್ಮದಲ್ಲಿ ಉಂಟಾಗುವ ಖಾಯಿಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರಲ್ಲಿ ಕಂಡುಬರುತ್ತದೆ, ಆರಂಭದಲ್ಲಿ ಬರೀ ಚರ್ಮದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಸಮಸ್ಯೆ ಸೂಕ್ತವಾದ ಚಿಕಿತ್ಸೆ ಪಡೆಯದಿದ್ದರೆ ಇದು ದೇಹದ ಇತರ ಅಂಗಾಂಗಗಳಿಗೆ ವಿಸ್ತರಿಸುವ ಸಾಧ್ಯತೆಗಳು ಹೆಚ್ಚು. ಈ ವ್ಯಾಧಿಯು ಚರ್ಮದ ಅಂದವನ್ನು ಕೆಡಿಸುವುದಲ್ಲದೆ ಬಳಲುವ ವ್ಯಕ್ತಿಯ ಮನಸ್ಸುಮತ್ತು ಜೀವನದ ಮೇಲೆ ಪರಿಣಾಮಬೀರುತ್ತದೆ. ರೋಗಿಯ ಜೀವನದ ಗುಣಮಟ್ಟ (quality of life ) ಕುಸಿಯುತ್ತದೆ, ಇಂತವರಲ್ಲಿ ಆತ್ಮ ವಿಶ್ವಾಸದ ಕೊರತೆ, ಮಾನಸಿಕ ಖಿನ್ನತೆ (depression), ಸಾಮಾಜಿಕ ಪ್ರತ್ಯೇಕತೆ (social isolation) ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹಿನ್ನೆಡೆ ಮತ್ತು ಅದರಿಂದ ಆರ್ಥಿಕ ಹಿನ್ನಡತೆ ಉಂಟಾಗುವ ಸಾಧ್ಯತೆಗಳಿವೆ.

ಸೋರಿಯಾಸಿಸ್ ಇತ್ತೀಚಿಗೆ ವೈದ್ಯವಿಜ್ಞಾನಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ ಇದರ ನಿಯಂತ್ರಣ ಮತ್ತು ನಿವಾರಣೆ ವೈದ್ಯ ಮತ್ತು ರೋಗಿ ಇಬ್ಬರಿಗೂ ಕಗ್ಗಂಟಾಗಿದೆ. ಸೋರಿಯಾಸಿಸ್ ಎಂಬುದು ದೀರ್ಘಕಾಲೀನವಾದ ಒಂದು auto immune ( ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ವೈಪರೀತ್ಯ) ರೋಗವಾಗಿದ್ದು, ಇದು ಇನ್ನೊಬ್ಬರಿಗೆ ಸಂಪರ್ಕದಿಂದ ಹರಡುವತಹದ್ದಲ್ಲ. ಸಾಮಾನ್ಯವಾಗಿ ತಲೆ, ಕಿವಿಯ ಹಿಂದೆ, ಮೊಣಕೈ,ಮೊಣಕಾಲು, ಹೊಕ್ಕಳು, ಜನನಾಂಗಗಳು ಮತ್ತು ನಿತಂಬಗಳು (buttocks) ಮೇಲೆ ಕಂಡುಬರುತ್ತದೆ. ಸೋರಿಯಾಸಿಸ್ ವ್ಯಾಧಿಯಿಂದ ಕೆಂಪು ಬಣ್ಣದ ವೃಣಗಳು ಉಂಟಾಗಿ ಅವುಗಳ ಮೇಲೆ ಬಿಳಿಯಾದ ಮೀನಿನ ಚರ್ಮದಂತೆ ಕಾಣಿಸುವ ಪದರಗಳು ಇರುತ್ತವೆ.

ಸೋರಿಯಾಸಿಸ್–ಕಾರಣಗಳು:

1. ಈ ವ್ಯಾಧಿಗೆ ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲ. ಆದರೇ ಅನುವಂಶಿಕತೆ (Heredity), ಸ್ಥೂಲಕಾಯ (Obesity), ಮಾನಸಿಕ ಒತ್ತಡ ಇತ್ಯಾದಿಗಳು ಸೋರಿಯಾಸಿಸ್ ಉಂಟಾಗುವ ಸಂಭವನೀಯತೆಯನ್ನು ಹೆಚ್ಚಿಸುತ್ತವೆ.

2. ಮಾನವನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ದೋಷದಿಂದ ಉಂಟಾಗುತ್ತದೆ. ಈ ದೋಷದಿಂದ ಚರ್ಮದ ಜೀವಕೋಶಗಳ ಉತ್ಪಾದನೆಯು ಅವಶ್ಯಕತೆಗಿಂತ ಹೆಚ್ಚಾಗಿ ಚರ್ಮದ ಪದರುಗಳು ಒಂದರಮೇಲೊಂದು ಕ್ರೋಡೀಕರಣಗೊಂಡು ಚರ್ಮ ಪದರು ಪದರಾಗಿ ಬೀಳುತ್ತಲಿರುತ್ತದೆ. ತಲೆಯಿಂದ, ದೇಹದಿಂದ ಬಿಳಿ ಬಣ್ಣದ ಹೊಟ್ಟು ತಲೆದಿಂಬು, ಕುಳಿತ ಜಾಗದಲ್ಲಿ ಅಥವಾ ಉಡುಪನ್ನು ಕಳಚುವಾಗ ಪುಡಿ ಪುಡಿಯಾಗಿ ಬೀಳುವುದನ್ನು ಗಮನಿಸಿರಬಹುದು.

ಸೋರಿಯಾಸಿಸ್- ಪ್ರಚೋದಕ ಅಂಶಗಳು:

1. ಗಂಟಲ ಸೋಂಕು (esp. streptococcal sore throat)

2. ಚರ್ಮಕ್ಕಾದ ಗಾಯ, ತರಚುವಿಕೆ, ಸನ್ ಬರ್ನ್

3. ಚಳಿಯ ವಾತಾವರಣ

4. ಮಾನಸಿಕ ಒತ್ತಡ

5. ಅತಿಯಾದ ಧೂಮಪಾನ ಮತ್ತು ಮದ್ಯ ಸೇವನೆ

6. ಮಾನಸಿಕ ರೋಗ, ಅತಿಯಾದ ರಕ್ತದೊತ್ತಡ, ಮಲೇರಿಯಾಗಳಂತಹ ತೊಂದರೆಗಳಿಗೆ ಸೇವಿಸುವ ಕೆಲವು ಔಷಧಿಗಳು (Lithium, Beta blockers etc)

ಸೋರಿಯಾಸಿಸ್ ಗುಣ ಲಕ್ಷಣಗಳು:

ಇವು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಕೆಂಪು ವೃಣಗಳು ಇದ್ದು ಅವುಗಳ ಮೇಲೆ ಬಿಳಿ ಪದರುಗಳು ಅಥವಾ ಹೊಟ್ಟಿನಂತಹ ಪುಡಿ ಕಂಡುಬರುತ್ತದೆ, ತುರಿಕೆ, ಉರಿ ಕೆಲವೊಮ್ಮೆ ಚರ್ಮದಲ್ಲಿ ಸೀಳುಗಳಾಗಿ ರಕ್ತ ಒಸರಬಹುದು. ಅನಿಯಂತ್ರಿತ ಸಂದರ್ಭಗಳಲ್ಲಿ ಉಗುರುಗಳು ದಪ್ಪವಾಗಿ ವಿಕಾರಕ್ಕೆ ತಿರುಗುತ್ತವೆ ಮತ್ತು ಆಥ್ರ್ರೈಟಿಸ್ (Psoriatic arthritis) ಉಂಟಾಗುತ್ತದೆ.

ಸೋರಿಯಾಸಿಸನ್ನು ಹೋಲುವ ಇತರ ವ್ಯಾಧಿಗಳು:

ಕೆಲವು ಚರ್ಮದ ವ್ಯಾಧಿಗಳಾದ ತಲೆ ಹೊಟ್ಟು (seborrhic dermatitis), ಫಂಗಸ್ಸಿನ ಸೋಂಕು (Ring worm), ಗಳು ಸೋರಿಯಾಸಿಸ್ ವ್ಯಾಧಿಯನ್ನು ತುಸು ಹೋಲುತ್ತವಾದ್ದರಿಂದ ಸೋರಿಯಾಸಿಸ್ ವ್ಯಾಧಿಯನ್ನು ಖಚಿತ ಪಡಿಸಿಕೊಳ್ಳಲು ವೈದ್ಯರನ್ನು ಸಂಪರ್ಕಿಸಿ ಅಗತ್ಯವಾದ ತಪಾಸಣೆ ಬಹು ಮುಖ್ಯ. ನನ್ನ ವೈದ್ಯಕೀಯ ಅನುಭವದಲ್ಲಿ ಹೀಗೊಂದು ಪ್ರಕರಣ ನಡೆಯಿತು. ನನ್ನ ಪೇಷಂಟ್ ಒಬ್ಬರ ಮಗಳು ತುಂಬಾ ತಲೆಹೊಟ್ಟಿನ (Dandruff) ಸಮಸ್ಯೆ ಅನುಭವಿಸುತ್ತಿದ್ದಳು. ಅವಳಿಗೆ ಅವಳ ಗೆಳತಿಯರು ಇದು ಸೋರಿಯಾಸಿಸ್ ಎಂದರು, ಅವಳು ಇಂಟರ್ನೆಟ್ನಲ್ಲಿ ಜಾಲಾಡಿ ತನಗೆ ಸೋರಿಯಾಸಿಸ್ ಇದೆ ಎಂದು ನಿಶ್ಚಯಿಸಿ ತುಂಬಾ ನೊಂದುಕೊಂಡಳು ಮತ್ತು ಕಾಲಾಂತರ ಮಾನಸಿಕ ಖಿನ್ನತೆಗೂ ಒಳಗಾಗಿದ್ದಳು.

ನಾನು ಆಕೆಯ ಕೂಲಂಕುಶ ತಪಾಸಣೆ ಕೈಗೊಂಡಾಗ ಅದು ಸೋರಿಯಾಸಿಸ್ ಆಗಿರಲಿಲ್ಲ. seborrhic dermatitis ಎಂಬ ತೊಂದರೆಯಾಗಿತ್ತು, ಇದನ್ನು ಅವಳಿಗೆ ತಿಳಿಹೇಳಿ, ಸೂಕ್ತ ಔಷಧಿ ಹಾಗು ಕೆಲವು ನೈರ್ಮಲ್ಯದ ಬಗೆಗಿನ ಸಲಹೆಗಳನ್ನು ಕೊಟ್ಟಾಗ ಅದು ಕೆಲವೇ ದಿನಗಳಲ್ಲಿ ಗುಣವಾಗಿತ್ತಲ್ಲದೆ ಆಕೆಯ ಖಿನ್ನತೆಯನ್ನೂ ದೂರಗೊಳಿಸಿತ್ತು. ಇನ್ನುಕೆಲವೊಮ್ಮೆ ತಪ್ಪು ತಿಳುವಳಿಕೆ ಮತ್ತು ನಿರ್ಲಕ್ಷದಿಂದ ತಲೆ ಹೊಟ್ಟು ಮತ್ತು ದೇಹದ ಮೇಲಿನ ಕೆಂಪು ವೃಣಗಳನ್ನು ಸಾಧಾರಣ dandruff (ತಲೆ ಹೊಟ್ಟು) ಮತ್ತು ಅಲರ್ಜಿ ಎಂದು ತಿಳಿದು ನಿರ್ಲಕ್ಷಮಾಡಿ ಕೊನೆಗೆ ಅತಿರೇಕಕ್ಕೆ ಹೋದಾಗ ವೈದ್ಯರಬಳಿಗೆ ಬಂದು ತಪಾಸಣೆಗೊಳಗಾದಾಗ ಸೋರಿಯಾಸಿಸ್ ಎಂದು ನಿರ್ಧಾರವಾಗಿದ್ದೂ ಉಂಟು. ಆದ್ದರಿಂದ ಸೊರಿಯಾಸಿಸ್ ಹೌದೊ ಅಲ್ಲವೋ ಎಂದು ತಿಳಿಯಲು ವೈದ್ಯರ ತಪಾಸಣೆ ಮತ್ತು ಸಲಹೆ ಅತ್ಯಗತ್ಯ. ಒಂದು ಪಕ್ಷ ಸೋರಿಯಾಸಿಸ್ ಆಗಿದ್ದರೆ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆದರೆ ಅನುಕೂಲಕರ.

ಸೋರಿಯಾಸಿಸ್ ನಿಯಂತ್ರಣ

1.  ವ್ಯಾಧಿಯಿಂದ ಬಳಲುವವರು ಕೆಲವು ಮುಂಜಾಗ್ರತೆಗಳನ್ನೂ ವಹಿಸಬೇಕಾಗುತ್ತದೆ

2. ಪ್ರತಿನಿತ್ಯ ಸ್ನಾನ ಮಾಡುವುದು- ಇದರಿಂದ ಚರ್ಮದ ಪದರುಗಳು ಉದುರಿ, ಇರಿಟೆಶನ್ ಮತ್ತು ತುರಿಕೆ ಕಡಿಮೆಯಾಗುತ್ತದೆ.

3. ಮಾಯಿಸ್ಚರೈಸರ್ ಲೇಪನದಿಂದ ಚರ್ಮ ಒಣಗುವುದು ತಪ್ಪುತ್ತದೆ

4.  ವ್ಯಾಧಿಯ ಪ್ರಚೋದನಕಾರಿ ಅಂಶಗಳ ಬಗ್ಗೆ ಜಾಗ್ರತೆವಹಿಸುವುದು.

5. ಬೆಳಗ್ಗಿನ ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡುವುದು ಒಳ್ಳೆಯದು.

6. ಮಾನಸಿಕ ಒತ್ತಡವನ್ನು ನಿಯಂತ್ರಿಸುವುದಲ್ಲದೇ, ಜೀವನಶೈಲಿಯ ಬದಲಾವಣೆ ಅತ್ಯಗತ್ಯ.

7. ಸೊರಿಯಾಸಿಸ್ ನಿಯಂತ್ರಣಕ್ಕೆ ಅಹಾರ ಸೇವನೆಯಲ್ಲಿ ಜಾಗ್ರತೆ ಇರಬೇಕಾಗುತ್ತದೆ. ಕೊಬ್ಬಿನಾಂಶ ಉಳ್ಳ ಪದಾರ್ಥಗಳು, ರೆಡ್ ಮೀಟ್ (mutton, Beef, Pork etc) ಹುಳಿಯಾಗಿರುವ ಹಣ್ಣುಗಳು, ಕೆಫೀನ್ (eg coffee, cold beverages), ಮದ್ಯ ಇವುಗಳ ಸೇವನೆಯಿಂದ ಸೊರಿಯಾಸಿಸ್ ಉಲ್ಬಣಗೊಳ್ಳುತ್ತದೆ.

8. ಹಸಿರು ಸೊಪ್ಪು,ತರಕಾರಿ, ಹಣ್ಣು, ಅಗಸೆಬೀಜ (flax seeds) ಮೀನುಗಳ ಸೇವನೆ ಸೊರಿಯಾಸಿಸ್ ನಿಯಂತ್ರಣಕ್ಕೆ ಸಹಕಾರಿ.

ಸೋರಿಯಾಸಿಸ್- ಚಿಕಿತ್ಸೆ:

psoriasisಸೋರಿಯಾಸಿಸ್‍ನಿಂದ ಬಳಲುವ ಅನೇಕರು ಗುಣಕಾಣದೇ ಹತಾಶ ಪರಿಸ್ಥಿತಿಗೆ ಒಳಪಡುತ್ತಾರೆ. ಹಲವಾರು ವೈದ್ಯರು, ತಜ್ಞರು ಆಸ್ಪತ್ರೆ ಸುತ್ತು ಹಾಕಿದರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ. ಸೋರಿಯಾಸಿಸ್ ವ್ಯಾಧಿಯ ನಿಯಂತ್ರಣ ಮತ್ತು ಗುಣಪಡಿಸುವಿಕೆ ಸುಲಭದ ಕೆಲಸವಲ್ಲ, ಇಲ್ಲಿ ರೋಗಿ ಮತ್ತು ವೈದ್ಯರಿಬ್ಬರಿಗೂ ಸಾಕಷ್ಟು ತಾಳ್ಮೆ, ನಂಬಿಕೆ ಇರುವುದು ಅತ್ಯಗತ್ಯ. ಈ ವ್ಯಾಧಿಯೇ ಅಂತಹದ್ದು ಇದರ ನಿಯಂತ್ರಣ ಕಷ್ಟವೆನಿಸಿದರೂ ಅಸಾಧ್ಯವಲ್ಲ. ಸಾಮಾನ್ಯವಾಗಿ ಇದನ್ನು ನಿಯಂತ್ರಿಸಲು ಸ್ಟಿರಾಯ್ಡ್ ಔಷಧಿಗಳು, methotrixate, ಮತ್ತು ಲೇಪನಗಳು (ointment & cream) ಬಳಸಲ್ಪಡುತ್ತವೆ, ಇವುಗಳಿಂದ ಶೀಘ್ರವಾಗಿ ಸೋರಿಯಾಸಿಸ್ ಹತೋಟಿಗೆ ಬರುತ್ತಾದರೂ ಇವುಗಳ ಬಳಕೆ ಸೀಮಿತಾವಧಿಗೆ ಮಾತ್ರ, ಇವುಗಳ ಧೀರ್ಘಕಾಲದ ಬಳಕೆ ಅನೇಕ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಸೊರಿಯಾಸಿಸ್ ನಿಯಂತ್ರಣಕ್ಕೆ ಬಳಸುವ ಫೋಟೋ ಥೆರಫಿ ಚಿಕಿತ್ಸೆ ಕೆಲವೊಂದು ರೋಗಿಗಳಲ್ಲಿ ಫಲಕಾರಿ.

ಸೊರಿಯಾಸಿಸ್ ಹೋಮಿಯೋ ಚಿಕಿತ್ಸೆ:

ಹೋಮಿಯೋಪತಿ ವೈದ್ಯ ಪದ್ದತಿಯಲ್ಲಿ ಸೋರಿಯಾಸಿಸ್ ವ್ಯಾಧಿಗೆ ಸೂಕ್ತ ಔಷಧಿಗಳಿವೆ. ಈ ಔಷಧಗಳಿಂದ ಯಾವುದೇ ಅಡ್ಡ ಪರಿಣಾಮಗಳು (side-effects) ಇರುವುದಿಲ್ಲ. ಸೊರಿಯಾಸಿಸ್ ಗುಣಲಕ್ಷಣಗಳು ಒಬ್ಬರಿಂದೊಬ್ಬರಿಗೆ ವಿಭಿನ್ನವಾಗಿರುತ್ತವೆ ಆದ್ದರಿಂದ ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗದ ವಿಶೇಷ ಗುಣಲಕ್ಷಣಗಳು (peculiarity of lesions), ರೋಗಿಯ ಮಾನಸಿಕ ಮತ್ತು ದೈಹಿಕ ಗುಣಲಕ್ಷಣಗಳು ಹಾಗೂ ಮೂಲ ದೋಷ (Miasm) ಗಳನ್ನಾಧರಿಸಿ ನೀಡುವ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸಿದಾಗ ತುಂಬಾ ಪರಿಣಾಮಕಾರಿ. ಹಲವಾರು ಪೇಷಂಟ್ಗಳು ಡಾಕ್ಟ್ರೇ ಈ ಸಕ್ಕರೆ ಗುಳಿಗೆಯಲ್ಲಿ ಇಷ್ಟು ಶಕ್ತಿಯುಂಟೇ ? ! ಎಂದು ಅಚ್ಚರಿ ಹಾಗು ಸಂತಸ ವ್ಯಕ್ತಪಡಿಸಿದ್ದುಂಟು.

Also watch our video: ಸೋರಿಯಾಸಿಸ್ ಎಂಬ ಚರ್ಮವ್ಯಾದಿಗೆ ಕಾರಣಗಳು ಹಾಗೂ ಪರಿಹಾರ..! | Homeopathic treatment for Psoriasis

ಡಾ. ತೇಜಸ್ವಿ ಕೆ.ಪಿ. ಸುರಭಿ ಹೋಮಿಯೋ ಕ್ಲಿನಿಕ್

ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್, ಶಾಪ್ ನಂ.2, #823, 6ನೇ ಮುಖ್ಯರಸ್ತೆ,
7ನೇ ಅಡ್ಡರಸ್ತೆ, 4ನೇ ಬ್ಲಾಕ್, ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್‍ಮಾರ್ಕ್ –  ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 9731133819

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!