ಪ್ರಪಾತಕ್ಕೆ ಬಿದ್ದ‌ ಡ್ರೋನ್ – ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?

ಪ್ರಪಾತಕ್ಕೆ ಬಿದ್ದ‌ ಡ್ರೋನ್‌ ಘಟನೆ ಮಾನಸಿಕತೆಯ ಹಲವಾರು ಅಯಾಮಗಳನ್ನು ತೋರಿಸುತ್ತಿದೆ. ಅಸಲು ಈ ಹುಡುಗನ ಮಾನಸಿಕತೆ ಅಥವಾ ಮನಶಾಸ್ತ್ರಜ್ಞರ ಕಣ್ಣಿಂದ ನೋಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.ಕಲ್ಪನಾ‌ಲೋಕದಲ್ಲೆ ವಿಹರಿಸುವ ಜನರಿಗೆ ವಾಸ್ತವದ ಅರಿವು ಈಗಲಾದರೂ ಆದಿತೆ ?

ಪ್ರಪಾತಕ್ಕೆ ಬಿದ್ದ‌ ಡ್ರೋನ್- ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?ಹುಡುಗನೊಬ್ಬ ಡ್ರೋನ್ ತಯಾರಿಸುವ ವಿಜ್ಞಾನಿ ಎಂದು ಘೋಷಿಸಿಕೊಳ್ಳುತ್ತಾನೆ‌. ಅದರ ನಂತರ ನಡೆದ ವಿದ್ಯಮಾನಗಳು ಬಲು ವಿಚಿತ್ರ. ಹಲವಾರು ವಾಹಿನಿಯವರು ಆತನ ಸಂದರ್ಶನ ಮಾಡುತ್ತಾರೆ, ಹುಡುಗ ಆತ್ಮವಿಶ್ವಾಸದಿಂದ ಹಲವು ವಿಷಯಗಳನ್ನು, ಅತೀಶಯೋಕ್ತಿಗಳನ್ನು ಹೇಳುತ್ತಾನೆ, ಜನ ನಂಬುತ್ತಾರೆ. ಚಪ್ಪಾಳೆ, ಹಣ, ವಿದೇಶ ಪ್ರವಾಸ, ಹೊಗಳಿಕೆ, “ಮೆಡಲ್‌ಗಳ” ಸುರಿಮಳೆ. ತಾನು ಹಾರಿಸಿದ ” ಡ್ರೋನ್ ” ಮೇಲೆ ಕುಳಿತ ಹುಡುಗ ಆಕಾಶದಲ್ಲಿ ತೇಲಾಡುತಿರುತ್ತಾನೆ‌.

ನಂತರ ಸತ್ಯಾಸತ್ಯತೆಯ ಅರಿವಾಗಿ ಹುಡುಗನ “ಡ್ರೋನ್ ” ಆಕಾಶದಲ್ಲೆ “ಪಂಚರ್ ” ಆಗಿ ಆಕಾಶದಿಂದ ” “ಪ್ರಪಾತಕ್ಕೆ” ಬಿದ್ದಾಗ, ಆತನ ಪ್ರತಾಪವೆಲ್ಲ ಪರಿತಾಪವಾಗಿ ಬದಲಾಗುತ್ತದೆ. ನಿಜ ಹೇಳಬೇಕಂದರೆ, ಈ ಹುಡುಗ ನಮ್ಮ ಸಮಾಜಕ್ಕೆ ಕನ್ನಡಿ ಹಿಡಿದ, ಸದ್ಯದಲ್ಲಿ ಮೈ ಪರಚಿಕೊಳ್ಳುವ ವಾಹಿನಿ, ಸಹಾಯ ಮಾಡಿದವರು” ನೀನು ಸಮಾಜಕ್ಕೆ ಕನ್ನಡಿ ಯಾಕೆ ಹಿಡಿದೆ” ಎಂದು ಜರೆಯುತ್ತಿದ್ದಂತೆ ಅನಿಸುತಿದೆ.

ಸುಮಾರು ಪ್ರಸಿದ್ದ ವ್ಯಕ್ತಿಗಳು, ಬಾಲಕನ ಮಾತುಗಳ ಸತ್ಯಾಸತ್ಯತೆ ಕಂಡುಹಿಡಿಯಲಾದಷ್ಟು ಅಮಾಯಕರಾ ? ಎಂಬ ಪ್ರಶ್ನೆ ಉದ್ಭವವಾದರೆ. ನಮ್ಮ ನಾಯಕರ ಬುದ್ದಿಮತ್ತೆಯ ಬಗ್ಗೆ ಬೇಸರವೂ ಆಗುತ್ತದೆ. ಈ ಬಾಲಕನ ಘಟನೆಯಿಂದ ಜೇನುಗೂಡಿಗೆ ಕಲ್ಲೆಸೆದಂತೆ ‌ಹಲವಾರು ವಿಷಯಗಳು ಹೊರಬರುತ್ತಿವೆ. ಬಾಲಕ ಸುಳ್ಳು ಹೇಳಿರಬಹುದು ಅಥವಾ ಚಿಕ್ಕ ಪ್ರಯತ್ನವನ್ನು ಸಾವಿರಾರು ಪಟ್ಟು ಉತ್ಪ್ರೇಕ್ಷಿಸಿ ಹೇಳಿರಬಹುದು, ಇದನ್ನೆಲ್ಲ ಸರಿ ಎಂದು‌ ನಂಬಿದವರ ಬುಧ್ದಿವಂತಿಕೆ ಎಷ್ಟಿರಬಹುದು?

ಹಲವಾರು ಸುಳ್ಳುಗಳು, ಭಾರದ ವಸ್ತುಗಳ ಸೋಟಕೇಸ್ ಎತ್ತುವುದರಿಂದ ಹಿಡಿದು, ಎಪ್ಪತ್ತು ಸಾವಿರ ರಿಸರ್ಚ ಕಾಗದ ಓದುವುದು, ನೋಬೇಲ್ ಆಕಾಂಕ್ಷಿ(?)ಗಳು ಚಡ್ಡಿ ಹಾಕಿಕೊಂಡು ನಿಂತಿರೋದು, ಈ ತರಹ ಹಲವಾರು ಮಾತುಗಳು. ಇದರಲ್ಲಿ ಪ್ರಮುಖವಾಗಿ ಕಾಣುವ “ಹೈಲೈಟ್” ಮಾತುಗಳು, “ಹಳ್ಳಿ ಹುಡುಗ, ರೈತನ ಮಗ, ಬಡವ, ಸಾಧನೆ, ಯಾರೂ ಸಹಾಯ ಮಾಡಲ್ಲ” ಇತ್ಯಾದಿ. ಒಂದು ಹಂತಕ್ಕೆ ಹುಡುಗನ ಮಾತಿನ ಲಹರಿ, ವಿನಮ್ರತೆಯಿಂದ ಅಹಂಕಾರದೆಡೆಗೆ ಜಾರಿದಂತೆ. ಕೊನೆಗೆ ಆತ ಒಬ್ಬ “ಮೋಟಿವೇಶನಲ್ ಸ್ಪೀಕರ್” ತರಹ ಮಾತನಾಡಿ, ತನ್ನ( ಇಲ್ಲದ) ಕಷ್ಟಗಳನ್ನು ವರ್ಣಿಸಿ ಕೊನೆಗೆ ಸುಖಾಂತ್ಯ ಮಾಡಿ ಮಾತಿನಲ್ಲೆ ಸಿನೆಮಾ ತೋರಿಸಿದ. ಮಾತುಗಳಲ್ಲಿ ತಂತ್ರಜ್ಞಾನದ ಒಂದು ಶಬ್ದವಿಲ್ಲ, ನಿಖರತೆಯಿಲ್ಲ, ಬರಿ ಹೊಗಳಿಕೆಗೆ, ಉತ್ಪ್ರೆಕ್ಷೆಗಳು.

ಈ ಹುಡುಗ ಮಾನಸಿಕತೆಯ ಹಲವಾರು ಅಯಾಮಗಳನ್ನು ತೆರೆದ:

ಪ್ರಪಾತಕ್ಕೆ ಬಿದ್ದ‌ ಡ್ರೋನ್ - ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?

ಕೈಲಾಗದ ವಿದ್ಯಾರ್ಥಿಯೊಬ್ಬ ತನ್ನ ನ್ಯೂನ್ಯತೆ ಸರಿದೂಗಿಸಲು (Compensation), “ನಾನು ಈ ತರಹ ಆಗಿದಿದ್ದರೆ?” ಎಂದು ಕಲ್ಪನೆಗೆ ಜಾರಿ, ಕಲ್ಪನಾ ಲೋಕದಲ್ಲಿ ವಿಹರಿಸಿ ಹೊರಬರಲಾಗದೆ, ಕಲ್ಪನೆಯನ್ನೆ ವಾಸ್ತವವೆಂದು ಕೊಂಡು ಅದನ್ನೆ ಬಿಂಬಿಸಿ ಜನರ ಗಮನ ತನ್ನೆಡೆಗೆ ಸೆಳೆದು ತನ್ನಲ್ಲಿನ “ಕಡಿಮೆ” ತನವನ್ನು ಸರಿದೂಗಿಸಿಕೊಳ್ಳುತ್ತಾನೆ. “ನಾನೊಬ್ಬ ಮೇಧಾವಿ, ನನಗೆ ಅಪಾರ ಬುಧ್ದಿ, ಜಾಣತನ, ನಾನು ತುಂಬ ಜನಗಳಿಗೆ ಬೇಕಾಗಿದ್ದೆನೆ, ಹಲವಾರು ಸಂಘ ಸಂಸ್ಥೆಗಳು ನನಗೆ ಕೆಲಸ ಕೊಡಲು ಹಾತೋರೆಯುತ್ತಿವೆ. ನನ್ನ ಕೈಕೆಳಗೆ ತುಂಬ ಹಿರಿಯರೂ ಕೆಲಸ ಮಾಡುತ್ತಾರೆ, ನೋಬೆಲ್ ಮಟ್ಟದ ವಿಜ್ಞಾನಿಗಳ ಹೆಗಲಿಗೆ ಹೆಗಲು ಹಚ್ಚಿದ್ದೆ ” ಮೇಗಾಲೋಮೇನಿಯಾ” (Megalomania) ಎಂಬ ಮಾನಸಿಕ ‌ಕಾಯಿಲೆಯ ಸುಳಿವು ಕೊಡುತ್ತಾನೆ. ಇದು ಯಾರ ಗಮನಕ್ಕೂ ಬರುವದಿಲ್ಲ. ಒಟ್ಟಾರೆ ತಲೆ ಬುಡವಿಲ್ಲದೆ ಮಾತನಾಡುವ ವಾಹಿನಿಗಳಿಗೆ “ತಿರುಳಿರುವ” ಮಾತು ಹೇಳಲು ತಲೆಯಲ್ಲಿ ತಿರುಳಿರಬೇಕೆಂಬುದು ಗೊತ್ತಿಲ್ಲ. ಅಸಲು ಈ ಹುಡುಗನ ಮಾನಸಿಕತೆ ಅಥವಾ ಮನಶಾಸ್ತ್ರಜ್ಞರ ಕಣ್ಣಿಂದ ನೋಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.

ಪರ್ಯಾಯವಾಗಿ, ಇದೆ ರೀತಿ ಮಾಧ್ಯಮಗಳಿಂದ ಪ್ರಸಿದ್ದವಾಗಿ, ಮಾಧ್ಯಮಗಳಿಂದಲೆ ಕುಪ್ರಸಿದ್ದನಾಗಿ, ಕೊನೆಗೆ ಎಲ್ಲೆಂದರಲ್ಲಿ ಏಟು ತಿಂದ ಅಮಾಯಕ ಮಾನಸಿಕರೋಗಿಯೊಬ್ಬನ ನೆನೆಸಿಕೊಳ್ಳೋಣ. ಈತನ ಆರೋಹಣ, ಅವರೋಹಣದ ಹಿಂದೆ ವಾಹಿನಿಯವರೆ. ಆತ ತನ್ನ ಹೆಸರಿನಲ್ಲೆ ಮಾನಸಿಕ ರೋಗದ ಬಗ್ಗೆ ಡಂಗುರ ಸಾರಿದರೂ ಜನರಿಗೆ ಅರ್ಥವಾಗಲಿಲ್ಲ, ಕೇವಲ ತಮ್ಮ ವೀಕ್ಷಕರ ಸಂಖ್ಯೆ ಹೆಚ್ಚಿಸಲು ನಿಷ್ಪ್ರಯೋಜಕ ವಿಡಿಯೋ ತೋರಿಸಿ, ಆ ಅಮಾಯಕನನ್ನು ರಸ್ತೆಯಯಲ್ಲಿ ಪ್ರಾಣಿಯಂತೆ ಹೊಡೆಯುವ ಹಾಗೆ ಮಾಡಿದುದು ಮಿಡಿಯಾದವರ ಕುಕೃತ್ಯವೆ. ನೆಲದ ಮೇಲೆ ಬಿದ್ದು ಕೈಕಾಲು ಮುದುರಿಸಿಕೊಂಡು ಏಟು ತಿಂದ “ಒಂದು ಕಾಲದ” ಬೆಂಕಿ ಉಗುಳುವ ಸ್ಟಾರ್‌ನ ” ಮುಖ ಮನಕಲುಕುತ್ತದೆ, ಮನುಷತ್ವ ಉಳ್ಳವರಿಗೆ. ಹಾಗಾದರೆ ಮೀಡಿಯಾದವರಿಗೆ ಮನುಷತ್ವವಿಲ್ಲವಾ? ಎಂಬ ಪ್ರಶ್ನೆಗೆ ಮಿಡಿಯಾದವರು ತಮ್ಮ ವಿಡಿಯೋಗಳಿಂದಾದ ಅವಾಂತರಗಳನ್ನು ನೋಡಿ ಮನಃಸಾಕ್ಷಿಯಾಗಿ ಉತ್ತರಿಸಬೇಕು.

“ನನಗೆ ಗರ್ಲಫ್ರೆಂಡ್ ಇಲ್ಲದ್ದಕ್ಕೆ ನಾನು ಇಷ್ಟು ” ಅಚೀವ್ ” ಮಾಡ್ದೆ ” :

ವಿಷಯಾಂತರ ಬೇಡ ಬನ್ನಿ ಡ್ರೋನ್ ಹಾರಿಸೋಣ…. ಓ ಸಾರಿ, ಲಹರಿಯಲ್ಲಿ ನಾನೂ ಹರಿದು ಹೋದೆ. ಹಾಂ …. ಈ ಹುಡುಗ “ನನಗೆ ಗರ್ಲಫ್ರೆಂಡ್ ಇಲ್ಲದ್ದಕ್ಕೆ ನಾನು ಇಷ್ಟು ” ಅಚೀವ್ ” ಮಾಡ್ದೆ ” ಎಂದೂ ಹೇಳಿದ. ಈ ಅನವಶ್ಯಕ ಮಾತಿನ ಕಡೆ ಲಕ್ಷ‌್ಯ ವಹಿಸುವುದು ಅವಶ್ಯಕ. ಈತ ಯಾರಿಗಾದರೂ ಈ ಮಾತಿನಿಂದ ಸಂದೇಶ ಕಳಿಸುತಿದ್ದಾನಾ .?? ” ನೀನು ನನ್ನ ಗರ್ಲಫ್ರೆಂಡ್ ಆಗಲ್ಲ ಅಂದೆ. ಈಗ ನೋಡು ಇಡಿ ಜಗತ್ತೆ ನನ್ನ ಕೈಯಲ್ಲಿ .” ಎಂದಂತೆ .

ಒಬ್ಬ ಹಳ್ಳಿಯ ಹುಡುಗ ನಗರಕ್ಕೆ ಬಂದು, ಹೊಸ ಸಂಸ್ಕೃತಿಗೆ ಬೇಗನೆ ಹೊಂದಿಕೊಳ್ಳಲಾರದೆ, ಸೋತು ತನ್ನ ಮನಸ್ಸಿನಲ್ಲೆ ” ಎಲ್ಲ ನ್ಯೂನ್ಯತೆಗಳಿಗೆ ” ಈ ರೀತಿಯ ಹೊಂದಾಣಿಕೆ ಮಾಡಿಕೊಂಡನಾ …? ಇಂಜಿನಿಯರಿಂಗ್ ವಿಷಯಗಳನ್ನು ಪಾಸು ಮಾಡಲಾಗದೆ, ಕೊನೆಗೆ ಕೋರ್ಸು ಬಿಟ್ಟು, ಇನ್ನೊಂದು ಕೋರ್ಸು ಮಾಡಿ, ಅದನ್ನು ಅರ್ಧದಲ್ಲಿ ಬಿಟ್ಟು, “ಕೈಲಾಗದವನು” ಎಂಬ ಮಾತನ್ನು ತನ್ನ ತಾನೆ ಸಂತೈಸಿಕೊಳ್ಳಲು ” ನಾನು ತುಂಬ ಬುದ್ದಿವಂತ” ಎಂದು ತೋರಿಸಿಕೊಳ್ಳಲು ಈ ದಾರಿ ಹಿಡಿದ, ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?

ಹಲವಾರು ಮೋಟಿವೇಶನಲ್ ವಿಡಿಯೋ‌ನೋಡಿ, ಪ್ರಸಿದ್ದ ಪೋಲೀಸರು, ವಿಜ್ಞಾನಿಗಳು, ಪ್ರಸಿದ್ದ ವ್ಯಕ್ತಿಗಳ ಧಾಟಿಯಲ್ಲೆ, ಮಾತು, ಬುದ್ದಿಹೇಳುವ ಪರಿ ಇಪ್ಪತ್ತೆರಡನೆ ವಯಸ್ಸಿಗೆ ಅತಿ ಎನಿಸಿದರೂ ಜನ ಕೇಳಿದರ, ಮೆಚ್ಚಿದರು, ಚಪ್ಪಾಳೆ ತಟ್ಟಿದರು, ವಿಡಿಯೋಗಳನ್ನ ಶೇರ್‌ ಮಾಡದಿರು. ಕೆಲವರು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ, ಇದೆ ಹುಡುಗನ ಉದಾಹರಣೆ, ಹೊಲಿಕೆ ಕೊಟ್ಟು, ತಮ್ಮ ಮಕ್ಕಳ ಹೀಯಾಳಿಸಿ ಎಲ್ಲ ಅರಿವಾಗಿ ವಾಹಿನಿಗೆ ಕರೆ ಮಾಡಿ ತಮ್ಮ ಮರ್ಯಾದೆಯನ್ನು ತಾವೆ ಹರಾಜು ಹಾಕಿಕೊಂಡರು.

ಇದು, ವೀಕ್ಷಕ, ಪೋಷಕ, ಟಿವಿಯಲ್ಲಿ ಬಂದದ್ದೆಲ್ಲಾ ಸತ್ಯವೆ ಎಂದು ನಂಬುವ ಸಾಮಾನ್ಯ ಮನುಷ್ಯನ ಮಾನಸಿಕತೆಗೆ ಈ ಹುಡುಗ ಹಿಡಿದ ಕನ್ನಡಿ. ಇದಕ್ಕೂ ಮುಖ್ಯವಾಗಿ ಹುಡುಗನ ಮೇಲೆ “ಕೇಸ್ ” ದಾಖಲಿಸುವ ಅಭಿಪ್ರಾಯ ಕೊಟ್ಟ ಕೆಲ‌ಬುದ್ದಿವಂತರಿಗೆ, ಈ ಕೇಸಿನಿಂದ ಸಿಗಬಹುದಾದ ಲಾಭವೇನು? ಎಂಬುದು ಗೊತ್ತಿಲ್ಲ. ಕೇಸು ಹಾಕಿದರೆ ನಡೆಸುವರಾರು? ಅಸಲು, ಇರುವ ಬಲಾತ್ಕಾರ, ಅಸಿಡ್ ದಾಳಿ, ಎಂಬ ಅತಿ ಮುಖ್ಯ ಕೇಸುಗಳೆ ವರ್ಷಾನುಗಟ್ಟಲೆ ವಿಲೆವಾರಿಯಾಗದಿರುವಾಗ ಇದೊಂದು ಕೇಸು ಜಡಿದು ಯಾರು? ಯಾರಿಗೆ, ಯಾವ ಶಿಕ್ಷೆ ಕೊಡಿಸುವರು ಎಂಬುದು ಆ ” ಕೇಸಿ” ರಾಜನಿಗೆ ಗೊತ್ತಿರಬೇಕು.

ಕಲ್ಪನಾ‌ಲೋಕದಲ್ಲೆ ವಿಹರಿಸುವ ಜನರಿಗೆ ವಾಸ್ತವದ ಅರಿವು ಈಗಲಾದರೂ ಆದಿತೆ .?

ಪ್ರಪಾತಕ್ಕೆ ಬಿದ್ದ‌ ಡ್ರೋನ್- ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?ಆ ನಟನ ಹಿಂದೆ ಬೇತಾಳದಂತೆ ಬಿದ್ದ ವಾಹಿನಿ, ಆ ವಾಹಿನಿಯ ನೋಡಿದ ಕೆಲ “ಫ್ಯಾನ್”ಗಳು, ಅಗಾಗ ಅರಚಾಡಿ ಸುಮ್ಮನಾಗುತ್ತಿದ್ದವನನ್ನು ಅಕ್ಷರಶಃ ಬಟ್ಟೆ ಹರಿದುಕೊಂಡು ರಸ್ತೆಯಲ್ಲಿ ಏಟು ತಿನ್ನುವಂತಾಗುವವರೆಗೂ ಬಿಡಲಿಲ್ಲ. ಮಾನಸಿಕ ರೋಗಿಯೋಬ್ಬನ ” ಹುಚ್ಚನಾಗಿಸಿ” ರಸ್ತೆಯಲ್ಲಿ ಏಟು ತಿನ್ನುವಂತೆ ಮಾಡಿದುದರ  ಹಿಂದೆ ಮುಂದೆ ಇರುವ ಪ್ರತಿ ವ್ಯಕ್ತಿ ಗೂ ಧಿಕ್ಕಾರವಿರಲಿ. ನಮ್ಮ ಮನೆಯ ಮಗುವೊಂದು ಹತಾಶೆಗೆ ಗುರಿಯಾಗಿ ಹೇಳಿದ ಸುಳ್ಳನ್ನು ” ನಂಬಿ ನಾವೆ ಆತನ ಮೇಲೆ ಕೋರಿಸಿ, ಈಗ ಆತನ ವಾಚಾಮಗೋಚರವಾಗಿ‌ ಬೈದು ನಾವೆ ನಮ್ಮ “ಬುದ್ದಿವಂತಿಕೆ” ತೋರಿಸುತಿದ್ದೆವೆ.

ಕೋರೋನಾದ ಕಾಲದಲ್ಲಿ ಸಮಾಜ ಸ್ನೇಹಿ ಕಾರ್ಯಕ್ರಮ ಮಾಡುವದ ಬಿಟ್ಟು ತಾವೆ ಮಾಡಿದ ತಪ್ಪನ್ನ ಎತ್ತಿ ಎತ್ತಿ ತೋರಿಸಿ,ಅದರ ಬಗ್ಗೆ ಬಡಾಯಿ ಕೊಚ್ಚಕೊಳ್ಳುವ ಕೆಲವು T V ಮಾಧ್ಯಮಗಳ ಮುಂದೆ ಈ ಹುಡುಗ ತುಂಬ ಪ್ರಬುಧ್ದರಂತೆ, ತನ್ನೆಲ್ಲ ತಿರುಚಿದ ಹೇಳಿಕೆಗಳನ್ನು “ಮರುತಿರುಚಿ” ಸರಿಮಾಡಿಸುವ ಪ್ರಯತ್ನ ಮಾಡುತ್ತಾನೆ. ಕಿಂಚಿತ್ತೂ ಬೇಸರ, ಹಣೆಯ ಮೇಲೆ ಬೇವರೂ, ಉಹೂಂ. ತಾನು ಮಾಡಿದದು ಸರಿ ಎಂದುಕೊಂಡವನಿಗೆ ಜಗತ್ತೆ ತಪ್ಪಿತಸ್ಥನೆಂದರೂ ಒಪ್ಪಿಕೊಳ್ಳುವದಿಲ್ಲ.

ಜಗತ್ತೆ ಸರಿ ಎಂದು ತನ್ನ ಕಣ್ಣಲ್ಲೆ ತಾನು ಕೀಳಾದವನು ಖಿನ್ನನಾಗುತ್ತಾನೆ, ಖಿನ್ನತೆಯ ಮುಂದಿನ ಹಂತಕ್ಕೆ ತಲುಪುತ್ತಾನೆ. ಇಲ್ಲಿ” ಡಿನಯಲ್ ” ಅಥವಾ ತನ್ಮ ತಪ್ಪು “ನಿರಾಕರಿಸುವ ” ಮನಸ್ಥಿತಿ ” ಸದ್ಯಕ್ಕೆ ಹುಡುಗನ ಖಿನ್ನತೆಯಿಂದ ಕಾಪಾಡಬಹುದು.ಇದು ಮೇಲ್ನೋಟಕ್ಕೆ ಕಾಣುವ ಮನಸ್ಥಿತಿ, ಆ ಹುಡುಗ ನಮಗೆಲ್ಲ ಕಾಣಲಾರದ ” ಯಾವ ತರಹದ, ಖಿನ್ನತೆ, ಹತಾಶೆಗೆ ” ಜಾರಿದ್ದಾನೆ ಎಂಬುದು ಅವನಿಗೆ ಗೊತ್ತು .

ನಮ್ಮ ಮನೆಯ ಮಗು ಹಗರಣ ಮಾಡಲಿಲ, ಯಾವಾ ಪಾಪ ಮಾಡಲಿಲ್ಲ, ಆತ ಹೇಳಿದ ಉತ್ಪ್ರೇಕ್ಷೆ ನಂಬಿ, ಅದರ ಸತ್ಯಾಸತ್ಯತೆ ಪರೀಶೀಲಿಸದೆ ” ಚಪ್ಪಾಳೆ ” ತಟ್ಟಿದುದು ನಮ್ಮ ತಪ್ಪು. ಈ ವಿಷಯ ಇಲ್ಲಿಗೆ ಬಿಟ್ಟು, ಹುಡುಗನ, ಪರ ವಿರೋಧ ಮಾತನಾಡುವ ಅಗತ್ಯವಿಲ್ಲ. ಹುಡುಗನ ಮಾನಸಿಕ ತಜ್ಞರ ಜೊತೆ ಸಮಾಲೋಚನೆ ಮಾಡಿಸಿ, ಆತನಿಗೆ ಸೂಕ್ತ ಚಿಕಿತ್ಸೆ, ಪ್ರೋತ್ಸಾಹ ನೀಡಿದರೆ ಅತ ನಿಜವಾಗಿ ವಿಜ್ಞಾನಿಯಾಗಬಹುದು …..ಪ್ರಪಾತಕ್ಕೆ ಬಿದ್ದ‌ ಡ್ರೋನ್ – ಸೋತ ಹುಡುಗನ ಹತಾಶೆಯ ಇನ್ನೊಂದು ಮುಖವಾ?

ಅಬುಯಹ್ಯಾ

Dr-Salim-nadaf

ಡಾ. ಸಲೀಮ್ ನದಾಫ್ – ಸಮುದಾಯ ಆರೋಗ್ಯ ತಜ್ಞ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!