ನ್ಯೂಮೋನಿಯಾ ಅಥವಾ ಪುಪ್ಪುಸ ಜ್ವರ – ಉಸಿರಾಟದ ತೊಂದರೆ ಉಲ್ಬಣವಾಗುವ ಖಾಯಿಲೆ

ನ್ಯೂಮೋನಿಯಾ ಅಥವಾ ಪುಪ್ಪುಸ ಜ್ವರ ಶ್ವಾಸಕೋಶಗಳಲ್ಲಿ ಬ್ಯಾಕ್ಟೀರಿಯ, ವೈರಸ್, ಶಿಲೀಂದ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯಾತ. ನ್ಯೂಮೋನಿಯಾ ಮಾರಣಾಂತಿವಲ್ಲದಿದ್ದರೂ ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿಸಿದಲ್ಲಿ ರೋಗವನ್ನು ಅಲಕ್ಷಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

pneumonia ನ್ಯೂಮೋನಿಯಾ ಅಥವಾ  ಪುಪ್ಪುಸ ಜ್ವರ - ಉಸಿರಾಟದ ತೊಂದರೆ ಉಲ್ಬಣವಾಗುವ ಖಾಯಿಲೆ

ನ್ಯೂಮೋನಿಯ ಜ್ವರ ಶ್ವಾಸಕೋಶಕ್ಕೆ ಸಂಭದಿಸಿದ ಸಾಂಕ್ರಾಮಿಕ ಖಾಯಿಲೆಯಾಗಿರುತ್ತದೆ. ಕನ್ನಡದಲ್ಲಿ ಈ ರೋಗವನು ಪುಪ್ಪುಸ ಜ್ವರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಖಾಯಿಲೆಯು ಎಲ್ಲಾ ವರ್ಗದ ಜನರಲ್ಲಿಯೂ ಎಲ್ಲ ವಯಸ್ಸಿನವರಲ್ಲಿಯೂ ಕಂಡುಕೊಳ್ಳುತ್ತದೆ. ಶ್ವಾಸ ಕೋಶ ಗಳಲ್ಲಿ ಬ್ಯಾಕ್ಟೀರಿಯ, ವೈರಸ್, ಶಿಲೀಂದ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯಾತವನ್ನು ನ್ಯೂಮೋನಿಯಾ ಎಂದು ಕರೆಯುತ್ತಾರೆ.

ಮುಖ್ಯವಾಗಿ ಚಿಕ್ಕವಯಸ್ಸಿನ ಮಕ್ಕಳಲ್ಲಿ ಮತ್ತು ವಯೋವೃದ್ದರಲ್ಲಿ ನ್ಯೂಮೋನಿಯಾ ಹೆಚ್ಚಾಗಿ ಕಂಡುಬರುತ್ತದೆ. ಶ್ವಾಸ ಕೋಶದಲ್ಲಿ ಉರಿಯೂತವಾದಾಗ ಉರಿಯೂತಕ್ಕೊಳಗಾದ ಭಾಗ ಘಣೀಕೃತಗೊಳ್ಳುತ್ತದೆ. (ಗಟ್ಟಿಯಾಗುತ್ತದೆ) ಸ್ಪಂಜಿನಂತೆ ಮೃದುವಾಗಿದ್ದ ಶ್ವಾಸ ಕೋಶ ಭಾಗ ಸೇಬಿನಂತೆ ಗಟ್ಟಿಯಾಗುತ್ತದೆ. ಈ ಘನೀಕರಣಗೊಂಡ ಶ್ವಾಸ ಕೋಶದ ಭಾಗವನ್ನು “ಕನ್ಸಾಲಿಡೀಶನ್” ಎನ್ನುತಾರೆ. ಎದೆಗೂಡಿನ ಕ್ಷಕಿರಣವನ್ನು ತೆಗೆದು ಈ ರೀತಿಯ ಘನೀಕರಣವನ್ನು ಪತ್ತೆ ಹಚ್ಚಲಾಗುತ್ತದೆ.

ರೋಗ ಹೇಗೆ ಹರಡುತ್ತದೆ. ?

ಸಾಮಾನ್ಯವಾಗಿ ರೋಗಗ್ರಸ್ಥ ವ್ಯಕ್ತಿಯ ಜೀವರಸಗಳಿಂದ ರೋಗ ಹರಡುತ್ತದೆ. ಸಾಂಕ್ರಮಿಕ ರೋಗವಾದ ನ್ಯೂಮೋನಿಯಾ, ಕೆಮ್ಮಿದಾಗ, ಸೀಳಿದಾಗ ಮತ್ತು ಮೂಗಿನ ಸಿಂಬಳದಿಂದ ಇತರರಿಗೆ ಹರಡಬಹುದು. ಜೊಲ್ಲುರಸದ ಮುಖಾಂತರವು ಜೀವಕಣಗಳು ಹರಡಬಹುದು. ರೋಗಿ ಬಳಸಿದ ತಟ್ಟೆ, ಬಟ್ಟಲು, ಲೋಟ, ಚಮಚ, ಕರವಸ್ತ್ರ, ಟೆವೆಲ್, ಉಡುಪುಗಳಿಂದಲೂ ರೋಗ ಹರಡುವ ಸಾದ್ಯತೆ ಇರುತ್ತದೆ.

ರೋಗದ ಲಕ್ಷಣಗಳು

ವಿಪರೀತ ಜ್ವರ, ಚಲಿಯಾಗುವುದು, ಉಸಿರುಗಟ್ಟುವುದು, ಕೆಮ್ಮುಕಫ, ಕಫದಲ್ಲಿ ರಕ್ತ, ಮೈ ಕೈ ನೋವು, ಸುಸ್ತುವಾಕರಿಕೆ, ವಾಂತಿ, ಸಂದಿವಾತ, ಸ್ನಾಯು ಎಳೆತ ಇವೆಲ್ಲವು ನ್ಯೂಮೋನಿಯಾ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಸಾಮಾನ್ಯವಾಗಿ ನುರಿತ ವೈದ್ಯರು ರೋಗದ ಲಕ್ಷಣವನ್ನು ಅಭ್ಯಸಿಸಿ ರೋಗವನ್ನು ನಿರ್ಧರಿಸುತ್ತಾರೆ. ಎದೆಗೂಡಿನ ಚಲನೆ, ಎದೆಗೂಡಿನಲ್ಲಿ ಸಂಚಲನೆಗಳನ್ನು ಸ್ಟೆತೋಸ್ಕೊಪ್ ಮುಖಾಂತರ ಪರೀಕ್ಷಿಸುತ್ತಾರೆ. ಸಾಮಾನ್ಯವಾಗಿ ನ್ಯೂಮೋನಿಯಾ ಆದ ಎದೆಯ ಭಾಗದಲ್ಲಿ ಉಸಿರಾಟದ ಕ್ಷಮಿಸುವಿಕೆ ಕಂಡುಬರುತ್ತದೆ. ಶ್ವಾಸಕೋಶದ ಒಳಗೆ ನೀರು ತುಂಬಿದಾಗ, ಕೀವು ತುಂಬಿದಾಗ ಅತೀಯಾದ ಉಸಿರಾಟದ ತೊಂದರೆ ಉಂಟಾಗಬಹುದು.

ದೇಹದ ಪರೀಕ್ಷೆಯ ಜೊತೆಗೆ ಎದೆಗೂಡಿನ ಕ್ಷಕಿರಣ, ರಕ್ತ ಪರೀಕ್ಷೆ, ಕಫ ಮುಂತಾದ ಪರೀಕ್ಷೆಗಳ ಮುಖಾಂತರ ಯಾವ ಕಾರಣಕ್ಕಾಗಿ ನ್ಯೂಮೋನಿಯಾ ಎಂಬುವುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಬ್ಯಾಕ್ಟಿರಿಯಾ ನ್ಯೂಮೋನಿಯಾವನ್ನು ಬಯೋಟಿಕ್‍ಗಳ ನೆರವಿನಿಂದ ಗುಣಪಡಿಸಲಾಗುತ್ತದೆ. ಆದರೆ ವೈರಾಣುಗಳಿಂದಾಗುವ ನ್ಯೂಮೋನಿಯಾನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ರೋಗ ವಿರೋಧಕ ಶಕ್ತಿ ಕಡಿಮೆಯಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗೆ ಚಿಕಿತ್ಸೆ ಅತೀ ಅವಶ್ಯಕ.

ತಡೆಗಟ್ಟುವುದು ಹೇಗೆ ?

1. ರೋಗಿಗಳು ಬಳಸಿದ ಕರವಸ್ತ್ರ ಟೆವೆಲ್‍ಗಳನ್ನು ಬಳಸಬಾರದು.
2. ಕೆಮ್ಮು, ಜೊಲ್ಲುರಸ, ಸಿಂಬಳ, ಸೀನು ಇತ್ಯಾದಿಗಳಿಂದ ಜೀವಕಣಗಳು ಹರಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಇವುಗಳಿಂದ ದೂರವಿರಬೇಕು.
3. ರೋಗಿಗಳು ಬಳಸಿದ ಬಟ್ಟೆ, ತಟ್ಟೆ, ಲೋಟ, ಬಟ್ಟಲು, ಚಮಚ ಇತ್ಯಾದಿಗಳನ್ನು ಬಳಸಬಾರದು. ರೋಗಿಗಳು ಬಳಸಿದ ಈ ಪರಿಕರಗಳನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆಯತ್ತಕ್ಕದು.
4.ಸಾಮಾನ್ಯವಾಗಿ ವೈರಸ್ ನ್ಯೂಮೋನಿಯಾ ಅತೀಯಾದ ಸಾಂಕ್ರಾಮಿಕ ರೋಗವಾಗಿದ್ದು ರೋಗಿಯನ್ನು ಬೇರೆಯಾದ ಕೋಣೆಯಲ್ಲಿರಿಸಿ ಇತರಿಗೆ ರೋಗ ಹರಡದಂತೆ ಮುಂಜಾಗರೂಕತೆ ವಹಿಸಲಾಗುತ್ತದೆ.

ಮುಕ್ತಾಯಕ್ಕೆ ಮುನ್ನ

ನ್ಯೂಮೋನಿಯಾ ಬಹಳ ಸಾಮಾನ್ಯವಾದ ಖಾಯಿಲೆ ಎಂದು ಮೂಗು ಮುರಿಯುವುದು ತಪ್ಪಾಗುತ್ತದೆ. ರೋಗಿಯ ದೇಹ ಪ್ರಕೃತಿ ರೋಗ ನಿರೋಧಕ ಶಕ್ತಿ ಯಾವ ರೋಗಾಣು ಕಾರಣದಿಂದಾಗಿ ನ್ಯೂಮೋನಿಯಾ ಉಂಟಾಗಿದೆ ಎಂಬುವುದನ್ನು ತಿಳಿದುಕೊಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿಸಿದಲ್ಲಿ ರೋಗವನ್ನು ಅಲಕ್ಷಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲಾ ರೀತಿಯ ನ್ಯೂಮೋನಿಯಾ ಮಾರಣಾಂತಿವಲ್ಲದಿದ್ದರೂ ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಇಲ್ಲವೆಂದಿಲ್ಲ.

ಚಿಕಿತ್ಸೆ ಸರಿಯಾಗಿ, ಸರಿಯಾದ ಸಮಯದಲ್ಲಿ ನೀಡದಿದ್ದಲ್ಲಿ ಶ್ವಾಸಕೋಶದೊಳಗೆ ಕೀವು ತುಂಬಿಕೊಂಡು ಘನೀಕರಣಗೊಂಡು ಶ್ವಾಸಕೋಶದ ಆ ಭಾಗ ಜಡಗೊಂಡು ನಿಷ್ಕ್ರಿಯವಾಗಬಹುದು ಮತ್ತು ಶ್ವಾಸಕೋಶದ ಆ ಬಾಗ ಶಾಶ್ವತವಾಗಿ ಶಿಥಿಲವಾಗಬಹುದು ಮತ್ತು ಇದರಿಂದಾಗಿ ಉಸಿರಾಟದ ತೊಂದರೆ ಮತ್ತಷ್ಟು ಉಲ್ಬಣವಾಗಬಹುದು. ಆರಂಭಿಕ ಹಂತದಲ್ಲಿಯೇ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ನ್ಯೂಮೋನಿಯಾ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

Dr.-Murali-Mohana-Chuntaru.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!