ಫಿಟ್ಸ್ ನಿವಾರಣೆಗೆ ಸೂಕ್ಷ್ಮ ನ್ಯೂರೋಸರ್ಜರಿ ಚಿಕಿತ್ಸೆ

ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಅತ್ಯಂತ ಸೂಕ್ಷ್ಮ ನ್ಯೂರೋಸರ್ಜರಿ ಚಿಕಿತ್ಸೆಯಿಂದ ಮೂರ್ಛೆ ರೋಗದಿಂದ ನರಳುತ್ತಿರುವವರು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿದೆ.
ಮೂರ್ಛೆರೋಗ ಆಕ್ರಮಣಗಳಿಗೆ ಒಳಗಾಗುವ ವ್ಯಕ್ತಿಯೊಬ್ಬರನ್ನು ನೋಡುವುದು ಅ ಸ್ಥಿತಿಗಿಂತಲೂ ಹೆಚ್ಚು ಭಯಾನಕವಾಗಿರುತ್ತದೆ. ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುವ ರೋಗವನ್ನು ಮೂರ್ಛೆರೋಗ ಅಥವಾ ಅಪಸ್ಮಾರ ಎಂದು ಕರೆಯುತ್ತೇವೆ. ರೂಢಿಯಲ್ಲಿರುವ ಪದವೆಂದರೆ ಫಿಟ್ಸ್. ಮೆದುಳಿನ ನರಗಳ ಕೋಶಗಳು ಅಥವಾ ನ್ಯೂರಾನ್‍ಗಳು ಅಸಾಧಾರಣ ವಿದ್ಯುತ್ ಚಟುವಟಿಕೆಯನ್ನು ಉತ್ಪಾದಿಸಿದಾಗ ಮೆದುಳಿನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇದು ವ್ಯಕ್ತಿಯು ವಿವರಿಸಲಾಗದ ನಡವಳಿಕೆಯ ಬದಲಾವಣೆಗಳನ್ನು ವ್ಯಕ್ತಪಡಿಸುತ್ತಾ ಮೂರ್ಛೆ ಹೋಗುತ್ತಾನೆ.
ಮೂರ್ಛೆರೋಗದ ವಿಧಗಳು :
ಮೂರ್ಛೆ ರೋಗದ ಆಕ್ರಮಣಗಳು ಎರಡು ರೀತಿಯಲ್ಲಿವೆ. ಅಪಸ್ಮಾರದ ಸಾಮಾನ ಲಕ್ಷಣವೆಂದರೆ, ವ್ಯಕ್ತಿ ಹಠಾತ್ತನೆ ನೆಲದ ಮೇಲೆ ಬಿದ್ದು ಕೈಕಾಲು ಅಡಿಸುತ್ತಾ ಬಾಯಿಯಲ್ಲಿ ನೊರೆ ಸುರಿಸುತ್ತಾನೆ. ಆದರೆ, ಈ ರೀತಿಯ ಮೂರ್ಛೆರೋಗವು ಆಕ್ರಮಣಗಳಲ್ಲಿ ಶೇ.30-40ರಷ್ಟು ಇರುತ್ತದೆ. ಎರಡನೇ ಮತ್ತು ತೀರಾ ಸಾಮಾನ್ಯ ವಿಧಗಳ ಆಕ್ರಮಣಗಳೆಂದರೆ ವ್ಯಕ್ತಿಯ ನಡವಳಿಕೆಯಲ್ಲಿ ದಿಢೀರ್ ಪರಿವರ್ತನೆಗಳು ಕಂಡುಬಂದು ಆತ ಕೆಲವು ಕ್ಷಣಗಳಿಂದ ನಿಮಿಷಗಳ ತನಕ ಪರವಶತೆಯಲ್ಲಿ ಇರುತ್ತಾನೆ. ಇಂಥ ಆಕ್ರಮಣಗಳಲ್ಲಿ ಅನೇಕ ಪ್ರಕರಣಗಳು ಗಮನಕ್ಕೆ ಬರುವುದಿಲ್ಲ. ಇದರಿಂದಾಗಿ ಈ ಸಮಸ್ಯೆಯನ್ನು ಪತ್ತೆ ಮಾಡುವುದು ಹಾಗೂ ಚಿಕಿತ್ಸೆ ನೀಡುವುದು ವಿಳಂಬವಾಗುತ್ತದೆ.
ಮೂರ್ಛೆರೋಗಕ್ಕೆ ಕಾರಣಗಳು :
ಮಕ್ಕಳಲ್ಲಿ  :
  • ಅಸಾಧಾರಣ ಮೆದುಳು ರೂಪುಗೊಳ್ಳುವಿಕೆ
  • ಗರ್ಭಿಣಿಯಾಗಿದ್ದಾಗ ಸೋಂಕು ತಗಲುವಿಕೆ
  • ಜನನದ ವೇಳೆ ಪೆಟ್ಟುಗಳು. ಉದಾ: ಮೆದುಳಿಗೆ ಆಮ್ಲಜನಕದ ಕೊರತೆ, ತುಂಬಾ ಕಷ್ಟದ ಹೆರಿಗೆ ಇತ್ಯಾದಿ,
  • ಅಧಿಕ ಜ್ವರದಿಂದಾಗಿ ಜ್ವರದ ಆಕ್ರಮಣಗಳು
ವಯಸ್ಕರಲ್ಲಿ :
  • ಅಪಘಾತಗಳಲ್ಲಿ ತಲೆಗೆ ಪೆಟ್ಟುಗಳು
  • ವಯಸ್ಕ ಸೋಂಕುಗಳು. ಉದಾ: ಲಾಡಿ ಹುಳುವಿನಿಂದ ಸಿಸ್ಟಿಸರ್ಕೊಸಿಸ್, ಕ್ಷಯ
  • ಗೆಡ್ಡೆಗಳು
  • ಕೇವ್‍ಮೊಮಾಸ್ ಮತ್ತು ಎವಿಎಂಗಳಂಥ ವ್ಯಾಸ್ಕುಲರ್ ದೋಷಗಳು
  • ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳು
  • ಸಜಾತಿ ಸ್ಥಿತಿಗಳು
  • ವಂಶವಾಹಿ ಅಂಶಗಳು
  • ಔಷಧಿಗಳನ್ನು ನಿಲ್ಲಿಸುವಿಕೆ
ಔಷಧಗಳು
ಮೂರ್ಛೆ ರೋಗವನ್ನು ಗುರುತಿಸಲು ಮತ್ತು ದೃಢಪಡಿಸಿಕೊಳ್ಳಲು ತಪಾಸಣೆಗಳು ಮತ್ತು ಸ್ಕ್ಯಾನ್‍ಗಳು :
ಅಪಸ್ಮಾರ ಅಥವಾ ಎಪಿಲಿಪ್ಸಿ ರೋಗವನ್ನು ಪತ್ತೆ ಹಚ್ಚಲು ಮತ್ತು ಖಾತ್ರಿ ಮಾಡಿಕೊಳ್ಳಲು ಪರೀಕ್ಷೆ ಮತ್ತು ಸ್ಕ್ಯಾನ್‍ಗಳನ್ನು ನಡೆಸಲಾಗುತ್ತದೆ. ಮೂರ್ಛೆ ರೋಗ ಆಕ್ರಮಣದ ಸವಿವರ ಮೌಲ್ಯಮಾಪನ ಮಾಡಲು ಹಾಗೂ ನಿಖರವಾಗಿ ರೋಗ ನಿರ್ಧಾರ ಮಾಡಲು ರೋಗಿಯನ್ನು ಮುಖ್ಯವಾದ ತಪಾಸಣೆಗಳು ಹಾಗೂ ಸ್ಕ್ಯಾನಿಂಗ್‍ಗಳಿಗೆ ಒಳಪಡಿಸಲಾಗುತ್ತದೆ.
ವಿಡಿಯೋ ಇಇಜಿ : ಮೆದುಳಿನ ಮೇಲ್ಮೈನಿಂದ ಅದರ ಚಟುವಟಿಕೆಯನ್ನು ದಾಖಲಿಸಲು ನೆತ್ತಿಯ ಮೇಲೆ ಎಲೆಕ್ಟ್ರೋಡ್‍ಗಳನ್ನು ಇರಿಸಿ ಅದನ್ನು ಡಿಟೆಕ್ಟರ್ ಮಷಿನ್‍ಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಮೂರ್ಛೆ ರೋಗ ಆಕ್ರಮಣದ ವೇಳೆ, ರೋಗಿಯ ಫಿಟ್ಸ್‍ಗೆ ಒಳಗಾದಾಗ ಆತನ ಚಟುವಟಿಕೆಯನ್ನು ವಿಡಿಯೋ ರೆಕಾರ್ಡಿಂಗ್ ಜೊತೆ ವಿದ್ಯುತ್ ಚಟುವಟಿಕೆಯನ್ನು ಸೆರೆ ಹಿಡಿಯಲಾಗುತ್ತದೆ. ವಿಡಿಯೋ ಮುದ್ರಿಕೆಯೊಂದಿಗೆ ಇಇಜಿಯನ್ನು ತಾಳೆ ಮಾಡುವ ನ್ಯೂರೋಫಿಜಿಸಿಯನ್ ಮೂರ್ಛೆ ರೋಗದ ವಿಧವನ್ನು ಹಾಗೂ ಆಕ್ರಮಣದ ಜಾಗವನ್ನು ಗುರುತಿಸುತ್ತಾರೆ.
ಮೆದುಳಿಗೆ ಎಂಆರ್‍ಐ : ಮೆದುಳಿನಲ್ಲಿರುವ ಅಸಾಧಾರಣ ದೋಷಗಳನ್ನು ಪತ್ತೆ ಮಾಡಲು ಎಂಆರ್‍ಐ ನೆರವಾಗುತ್ತದೆ.
ಇಇಜಿ : ಮೆದುಳಿನ ಮೇಲ್ಮೈ ಮೇಲೆ ಎಲೆಕ್ಟ್ರೋಡ್‍ಗಳನ್ನು ಇಟ್ಟು ಚಟುವಟಿಕೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ತಲೆ ಬುರುಡೆಯು ಮೆದುಳಿನ ಚಟುವಟಿಕೆಯ ತೀವ್ರತೆಯನ್ನು 200 ಪಟ್ಟು ಕಡಿಮೆ ಮಾಡುವುದರಿಂದ ಅಸಾಮಾನ್ಯ ದೋಷಗಳನ್ನು ಪತ್ತೆ ಮಾಡಲು ಕಷ್ಟವಾಗುವುದರಿಂದ ಈ ವಿಧಾನವನ್ನು ಅನುಸರಿಸಲಾಗುತ್ತದೆ.
ಮೂರ್ಛೆರೋಗ ಚಿಕಿತ್ಸೆ ಸಂಕೀರ್ಣವಾದರೂ, ಸೂಕ್ಷ್ಮ ನ್ಯೂರೋಸರ್ಜರಿ ಚಿಕಿತ್ಸೆ ವಿಧಾನಗಳಿಂದ ಸಮಸ್ಯೆಯನ್ನು ಬಗೆಹರಿಸಬಹುದು. ಮೆದುಳಿನಲ್ಲಿ ನ್ಯೂರಾನ್‍ಗಳನ್ನು ಬಿಡುಗಡೆ ಮಾಡುತ್ತಿರುವ ಅಸಾಧಾರಣ ಪ್ರದೇಶಗಳು ಅಥವಾ ಆಕ್ರಮಣ ಕೇಂದ್ರವನ್ನು ಗುರುತಿಸುವ ಕಾರ್ಯತಂತ್ರವನ್ನು ಅನುಸರಿಸಲಾಯಿತು ಹಾಗೂ ಸಾಧ್ಯವಾದರೆ ಅದನ್ನು ತೆಗೆದು ಹಾಕುವ ಮೂಲಕ ಅಪಸ್ಮಾರವನ್ನು ಗುಣಪಡಿಸಬಹುದು. ಮೆದುಳಿನ ಅಸಾಧಾರಣ ಪ್ರದೇಶದ ಸಂಪರ್ಕ ಕಡಿತಗೊಳಿಸುವ ಅಥವಾ ಅದನ್ನು ನಿಷ್ಕ್ರಿಯೆಗೊಳಿಸಿ ಪರಿತ್ಯಕ್ತಗೊಳಿಸುವ ಮೂಲಕ ಕೆಲವು ರೋಗಿಗಳಲ್ಲಿ, ಸರಿಯಾದ ಮೂರ್ಛೆರೋಗದ ಕೇಂದ್ರೀಕೃತವಲ್ಲದ ಸರ್ಜರಿ ಕೆಲವೊಮ್ಮೆ ನೆರವಾಗುತ್ತದೆ. ಇದರಿಂದ ಅಕ್ಕಪಕ್ಕದ ಸಾಮಾನ್ಯ ಮೆದುಳಿಗೆ ಆಕ್ರಮಣಗಳು ಇನ್ನು ಮುಂದೆ ಹಬ್ಬುವುದನ್ನು ತಡೆಗಟ್ಟಬಹುದಾಗಿದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!