ಪೈಲ್ಸ್ – ನೋವು….. ಭಯಂಕರ!

ಮನುಷ್ಯನ ಗುದದ್ವಾರದಲ್ಲಿ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್… ಮೂಲವ್ಯಾಧಿ ಎನ್ನುತಾರೆ!
ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕರ ವ್ಯಾಧಿ ಎಂದರೆ ಪೈಲ್ಸ್. ಇದನ್ನು `ಭಯಂಕರ ವ್ಯಾಧಿ ಎಂತಲೇ ಹೇಳಬಹುದು. ಮಲ ವಿಸರ್ಜನೆಯ ಸಮಯದಲ್ಲಿ ಪುಷ್ಟದಲ್ಲಿ ನೋವು, ಉರಿ, ರೋದನೆ, ರಕ್ತ ಸೋರುವುದು, ಗುದದ್ವಾರದ ನಾಳಗಳು ಹೊರಗೆ ಬರುವುದು, ವಿಸರ್ಜನೆಗೆ ತಿಣುಕಾಡುವುದು… ಇಂಥ ಪ್ರಕ್ರಿಯೆ ಪೈಲ್ಸ್‍ನಿಂದ ಆಗುವಂತಹವು.
ಪೈಲ್ಸ್ ಬಾಧೆ ಬಹಳ ಕಷ್ಟ. ಆದರೂ ಇದೊಂದು ಗುಣಪಡಿಸಲಾಗದ ಸಮಸ್ಯೆಯಲ್ಲ. ಆದರೆ ಕೆಲವು ಜಾಗರೂಕತೆ ಕ್ರಮಗಳನ್ನು ನಿರ್ವಹಿಸಿದರೆ ಖಂಡಿತಾ ಉಪಶಮನವನ್ನು ಕಾಣಬಹುದು. ಪೈಲ್ಸ್ ಬಾಧಿತರು ಸಣ್ಣಸಣ್ಣ ಉಪಶಮನಕಾರಿ ಮದ್ದು, ಮಾರ್ಗಗಳನ್ನು ಕಂಡುಕೊಂಡು ಹಾಗೆಯೇ ಸುಮ್ಮನಿದ್ದು ಬಿಡುತ್ತಾರೆ. ಏಕೆ ಹೀಗಾಗುತ್ತದೆ? ಎನ್ನುವುದು ಮಾತ್ರ ಗೊತ್ತಿಲ್ಲ. ಪೈಲ್ಸ್ ಬಗ್ಗೆ ತಿಳಿವಳಿಕೆ ಅತಿಮುಖ್ಯ.
ಯಾರ್ಯಾರಿಗೆ?
ಪೈಲ್ಸ್ ವ್ಯಾಧಿ.. ಗಂಡು, ಹೆಣ್ಣು ಎಂಬ ಯಾವ ಭೇದ-ಭಾವವೂ ಇಲ್ಲದೆ ಯಾರಿಗಾದರೂ ಬರಬಹುದು. 40-65 ವರ್ಷ ದಾಟಿದವರಿಗೂ ಬರುವ ಅವಕಾಶಗಳು ಹೆಚ್ಚು. ಗರ್ಭವತಿಯರಿಗೂ ಪೈಲ್ಸ್ ಬಂದರೆ ಪ್ರಸವದ ಅನಂತರ ತಂತಾನೆ ಸರಿಹೋಗುತ್ತದೆ. ಟೀನೇಜ್, ಕಾಲೇಜ್ ಓದುವ ಯುವಕರಿಗೆ ಬರುತ್ತದೆ. ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚು ತಿಣುಕುವವರಿಗೆ. ವೆರಿಕೋಸ್ ವೆಯಿನ್ಸ್ ಇರುವವರಿಗೆ.
ಸತತವಾಗಿ (ಕ್ರಾನಿಕ್) ಡಯೇರಿಯಾ, ಡೀಸೆಂಟ್ರಿ (ಆಮಶಂಕೆ) ಇರುವಂಥವರಿಗೆ. ಮಲಬದ್ಧತೆ ಇರುವವರಿಗೆ. ಹೆಚ್ಚು ಸಮಯ ಆಸನದಲ್ಲಿ ಕದಲದೆ ಕುಳಿತುಕೊಳ್ಳುವವರಿಗೆ. ಯಾವ ವಿಧವಾದ ವ್ಯಾಯಾಮವನ್ನು ಮಾಡದವರಿಗೆ. ಕೆಲ ಆಹಾರ ಸೇವನೆಯಿಂದ. ಉಪ್ಪಿನಕಾಯಿ, ಚಟ್ನಿ, ಹಸಿ ಮೆಣಸಿಕಾಯಿ, ಮಿತಿಮೀರಿ ಶುಂಠಿ, ಮೆಣಸು ಇಂಥ ಖಾರವಾದ ಪದಾರ್ಥಗಳನ್ನು ಅಧಿಕವಾಗಿ ಬಳಸುವವರಿಗೆ. ಅಧಿಕವಾಗಿ ಶ್ರಮ ಜೀವನ, ಮಾನಸಿಕ ಒತ್ತಡ ಮತ್ತು ಸ್ಥೂಲಕಾಯ ದೇಹ, ಅಶಾಂತಿ ಇರುವಂಥವರಿಗೆ ಪೈಲ್ಸ್ ಬರುವ ಸಾಧ್ಯತೆ ಅಧಿಕ.
ಆರಂಭ ಹೇಗೆ?
ಪೈಲ್ಸ್ ಎಲ್ಲರಲ್ಲೂ ಇರುತ್ತದೆ. ಸಾಮಾನ್ಯವಾಗಿ ಇದರಿಂದ ಯಾರಿಗೂ ಏನೇ ತೊಂದರೆ ಆಗುವುದಿಲ್ಲ. ಆದರೆ ಗುದ ನಾಳದೊಳಗಡೆ ಇರುವ ರಕ್ತನಾಳಗಳು ಉಬ್ಬಿದಾಗ ಪೈಲ್ಸ್ ಹೊರಕ್ಕೆ ಬರುತ್ತದೆ. ಬರದಿದ್ದರೂ ಬಾಧೆ ತಪ್ಪದು. ಆಗ ನೋವು, ಬಾಧೆ, ಉರಿ, ರಕ್ತ ಸೋರುವುದರಿಂದ ಆರಂಭವಾಗುತ್ತದೆ. ಕ್ರಮೇಣ ಹೀಗೆ ಮೆಲ್ಲಗೆ ತಿಣುಕಿದರೂ ಗುದದ್ವಾರಗಳಿಂದ ರಕ್ತಸ್ರಾವವಾಗುತ್ತದೆ. ಇದು ಬರಬರುತ್ತ ರಕ್ತವು ಕಪ್ಪು ಬಣ್ಣವಾಗಿ ಸ್ರಾವವಾಗುತ್ತದೆ. ಕೆಮ್ಮಿದರೆ ಏನಾದರೂ ಹೆಚ್ಚು ಶ್ರಮವಾದರೂ ರಕ್ತ ಸ್ರಾವವಾಗುತ್ತದೆ.
ನಾನಾ ವಿಧ 
ಗುದದ್ವಾರದಲ್ಲಿ ಒಳಗಡೆ ಇರುವ ಪೈಲ್ಸ್‍ನ್ನು ಅಂತರರ್ಗತ ಪೈಲ್ಸ್ ಎನ್ನುತ್ತಾರೆ. ಅದು ಹೊರಗಡೆ ಬಂದರೆ ಬಹಿರ್‍ಗತ ಪೈಲ್ಸ್ ಅಂತಾರೆ. ಸಾಧಾರಣವಾಗಿ ಅಂತರರ್ಗತ ಪೈಲ್ಸ್‍ನಲ್ಲಿ ನೋವು ಅಷ್ಟಾಗಿ ತಿಳಿಯುವುದಿಲ್ಲ. ಬಹಿರ್‍ಗತ ಪೈಲ್ಸ್‍ನಲ್ಲಿ ವಿಪರೀತವಾದ ಸಹಿಸಲಾಗದ ನೋವು ಇರುತ್ತದೆ. ಇದರಲ್ಲಿ ರಕ್ತ ಹೆಪ್ಪುಗಟ್ಟಿದರೇ ನೋವು ಇನ್ನೂ ಹೆಚ್ಚಾಗುತ್ತದೆ. ಸೋಂಕು ಅಂತೂ ಭಯಂಕರ ನೋವುಂಟಾಗುತ್ತದೆ.
ಅಂತರರ್ಗತ ಪೈಲ್ಸ್‍ನಲ್ಲಿ 4 ಹಂತಗಳಿವೆ. ಆರಂಭಿಕ ಹಂತ ಹೊರಕ್ಕೆ ಕಾಣವುದು. ಎರಡನೇ ಹಂತದಲ್ಲಿ ಮಲ ವಿಸರ್ಜನೆಯ ಸಮಯದಲ್ಲಿ ಹೊರಕ್ಕೆ ಬರುವುದು. ಥಟ್ಟನೇ ಒಳಗೆ ಹೋಗಿಬಿಡುವುದು. ಮೂರನೇಯ ಹಂತದಲ್ಲಿ ಕೈಯಿಂದ ಗಟ್ಟಿಯಾಗಿ ಒಳಕ್ಕೆ ತಳ್ಳಿದರೂ ಒಳಕ್ಕೆ ಹೋಗುವುದಿಲ್ಲ ಹಾಗೂ ನಾಲ್ಕನೇ ಹಂತ. ಅದನ್ನು ಒಳಕ್ಕೆ ತಳ್ಳುವುದು ಬಹಳ ತ್ರಾಸದಾಯಕವಾಗುವುದು, ಹೊರಗೆ ಇದ್ದು ಹೋಗುತ್ತದೆ.
ಬಾಧಕಗಳಂತೂ…
ಪೈಲ್ಸ್ ಬಂದರೆ ಸರಿಯಾಗಿ ಕೂರಲಾಗದು… ಸರಿಯಾಗಿ ನಿಲ್ಲಲಾಗದು..! ಹೆಚ್ಚಾಗಿ ರಕ್ತಸ್ರಾವಾಗುತ್ತಿದ್ದರೆ ಮನಸ್ಸಿನಲ್ಲಿ ನೀರಸ ಉಂಟಾಗುತ್ತದೆ. ಕೋಪ, ಅಶಾಂತಿ ಹೆಚ್ಚಾಗುತ್ತದೆ. ಸೊಂಟ ನೋವು, ಮಲಬದ್ಧತೆ, ಹೃದ್ರೋಗಗಳು ಹೈಪೋಕಾಂಡ್ರಿಯಾಸಿಸ್, ಪ್ರಾಲಾಪ್ಸ್, ಉರಿ, ಹೊಟ್ಟೆಯಲ್ಲಿ ಶೂಲೆ, ರಾತ್ರಿ ವೇಳೆಯಲ್ಲಿ ನಡುಕ, ಭಯ ಉಂಟಾಗುವುದು. ಕಾಲುಗಳ ಸೆಳೆತ ವಿಪರೀತವಾಗಿರುತ್ತದೆ. ಸೋಂಕು ಆಗಬಹುದು. ರಕ್ತಹೀನತೆ-ಅನಿಮೀಯ ಆಗಬಹುದು. ಕ್ಯಾನ್ಸರ್ ಆಗುವ ಅವಕಾಶಗಳೂ ಇವೆ.
ಎಚ್ಚರಿಕೆ ಅಗತ್ಯ
ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು. ಮಲವಿಸರ್ಜನೆ ಸಮಯದಲ್ಲಿ ತಿಣುಕಬಾರದು. ನಿತ್ಯವೂ ಒಂದು ನಿಗದಿತ ಸಮಯದಲ್ಲಿ ಟಾಯ್ಲೆಟ್‍ಗೆ ಹೋಗಬೇಕು. ಅವಸರವಾದರೂ ಸ್ವಲ್ಪವೂ ಮಾನಸಿಕ ಆಂದೋಲನವಿಲ್ಲದೆ ಟಾಯ್ಲೆಟ್‍ಗೆ ಹೋಗಬೇಕು. ಕುಳಿತುಕೊಳ್ಳುವ ಆಸನ ಮೃದುವಾಗಿರುವಂತೆ ನೋಡಿಕೊಳ್ಳಿರಿ. ನಾಟಿ ವೈದ್ಯರಿಂದ ಪರಿಸ್ಥಿತಿ ವಿಷಮಗೊಳ್ಳುತ್ತದೆ.
ತಿನ್ನಬಾರದು….
ಖಾರದ ಪದಾರ್ಥಗಳನ್ನು, ಮಸಾಲೆ ಪದಾರ್ಥಗಳು, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಹಸಿ ಎಳ್ಳು, ಹುಣಸೇಹಣ್ಣು, ಉಪ್ಪಿನಕಾಯಿ, ಗೋಧಿ, ಜೋಳ ಮುಂತಾದ ಗಟ್ಟಿ ಪದಾರ್ಥಗಳನ್ನು ಸೇವಿಸಬಾರದು.
ತಿಂದರೆ ಒಳ್ಳೆಯದು!
ನಾರಿನಾಂಶ ಇರುವ ತರಕಾರಿಗಳು, ಹಸಿರು ಸೊಪ್ಪುಗಳು, ಚಹಾ ಸೇವಿಸಬಹುದು. ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥ. ಉಷ್ಣವಾದಾಗ ಹಣ್ಣುಗಳು ತಂಪು ನೀಡುವ ಹಣ್ಣುಗಳು, ಎಳೆನೀರು, ಅನ್ನದ ಗಂಜಿ, ರಾಗಿ ಮುದ್ದೆ (ಅಲ್ಪ ಪ್ರಮಾಣದಲ್ಲಿ) ಗೆಣಸಿನ ಪಲ್ಯ, ಉಪ್ಪು ಸಹಿತ ಮಜ್ಜಿಗೆ, ಮೊಸರು ಸಕ್ಕರೆಯೊಂದಿಗೆ. ಬಿಳಿ ಬದನೇಕಾಯಿ ಪೈಲ್ಸ್‍ಗೆ ಒಳ್ಳೆಯದು.
ಬಾಳೆಕಾಯಿ ಸಾಂಬಾರು, ಬಾಳೆಹಣ್ಣು ಸೇವನೆ ಉತ್ತಮ. ಹಣ್ಣಿನ ರಸಕ್ಕಿಂತ ನೇರವಾಗಿ ಹಣ್ಣುಗಳನ್ನು ತಿನ್ನುವುದು ಉತ್ತಮ. ಹೆಚ್ಚಾಗಿ ನೀರಿನಾಂಶವಿರುವ ಹಣ್ಣು, ತರಕಾರಿಗಳನ್ನು ಬಳಸಬೇಕು. ಯಥೇಚ್ಛವಾಗಿ ನೀರನ್ನು ಕುಡಿಯಬೇಕು. ವೈದ್ಯರ ಸಲಹೆ ಮೇರೆಗೆ ಮಾತ್ರ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಸ್ವಲ್ಪ ವ್ಯಾಯಾಮ, ನಡಿಗೆಯನ್ನು ಮಾಡಿ ಒಂದು ಶಿಸ್ತಿನ ಜೀವನ ನಡೆಸಿದರೆ ಭಯಂಕರ ವ್ಯಾಧಿ `ಪೈಲ್ಸ್’ ಗೆ ಖಂಡಿತಾ ಗುಡ್‍ಬೈ ಹೇಳಬಹುದು.
ಡಾ.ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, #82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      www.vims.ac.in
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!