ಪೆಟ್ ಶಾಪ್‌ಗಳ ಮೇಲೆ ದಾಳಿ ಮಾಡಿ ಬಂಧಿಯಾಗಿದ್ದ ಪ್ರಾಣಿಗಳ ರಕ್ಷಣೆ

petshopp

ಬೆಂಗಳೂರು: ಕೊರೋನಾದಿಂದಾಗಿ ಲಾಕ್ ಡೌನ್ ಆದ ಪರಿಣಾಮ ಕೇವಲ ಜನ ಜೀವನದ ಮೇಲಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳ ಮೇಲೆಯೂ ಅತೀವ ಪರಿಣಾಮ ಆಗುತ್ತಿರುವ ಪ್ರಕರಣಗಳು ಈಗಾಗಲೇ ದಾಖಲಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ನಗರದ ಕೆಲ ಪ್ರಾಣಿ ದಯಾ ಸಂಘಗಳ ಜೊತೆಗೂಡಿ ಕಳೆದ ಭಾನುವಾರದಿಂದ ಹಲವು ಪೆಟ್ ಶಾಪ್‌ಗಳ ಮೇಲೆ ಸತತ ದಾಳಿ ನಡೆಸುತ್ತಿದೆ. ಎಲ್ಲ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಲು ಸೂಚಿಸಿರುವುದನ್ನೇ ನೆಪ ಮಾಡಿಕೊಂಡ ಹಲವು ಮಾಲೀಕರುಗಳು ಪೆಟ್ ಶಾಪ್‌ಗಳನ್ನು ಬಂದ್ ಮಾಡಿಕೊಂಡು ಹೋಗಿರುವ ಪರಿಣಾಮ ಅನೇಕ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಸಂಗತಿಗಳು ಈ ದಾಳಿಯ ವೇಳೆ ಅಧಿಕಾರಿಗಳಿಗೆ ಕಂಡುಬರುತ್ತಿವೆ.

ಸತತ ಮೂರು ದಿನಗಳಿಂದ ದಾಳಿ ಮಾಡುತ್ತಿರುವ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್,  ಬೆಂಗಳೂರು ದಕ್ಷಿಣ ಭಾಗದ ಅನೇಕ ಪೆಟ್ಶಾಪ್‌ಗಳ  ಸ್ಥಿತಿಗತಿಗಳನ್ನ ಪರಿಶೀಲಿಸಿದರು. ದಿಢೀರ್ ಎಂದು ಭೇಟಿ ನೀಡಿದ ಪರಿಣಾಮ ಅತೀವ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ವಾಸ್ತವ ಸ್ಥಿತಿ ಅಧಿಕಾರಿಗಳ ಗಮನಕ್ಕೆ ಬಂದಿತು. ಹಲವು ಶಾಪ್‌ಗಳು ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ರಾಜಾ ರೋಷವಾಗಿ ಪ್ರಾಣಿ ಪಕ್ಷಿಗಳನ್ನ ಹಿಡಿದು ಹಾಕಿರುವುದು, ಮಾರಾಟ ಮಾಡುತ್ತಿರುವುದು ಈ ದಾಳಿಯ ವೇಳೆ ಬಹಿರಂಗವಾಗಿದೆ. ಈ ಎಲ್ಲಾ ಅಂಗಡಿ ಮಾಲೀಕರುಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.

pets-ಈ ವೇಳೆ ದಾಳಿ ಕುರಿತು ಸಂಪೂರ್ಣ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್, “ಕಳೆದ ಮೂರು ದಿನಗಳಿಂದ ಸುಮಾರು 13 ಪೆಟ್ ಶಾಪ್ ಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಅಂಗಡಿ ಮಾಲೀಕರುಗಳು ಇಲಾಖೆಯಿಂದ ಅನುಮತಿ ಪಡೆಯದೆ ವಿವಿಧ ಪ್ರಾಣಿ, ಪಕ್ಷಿಗಳನ್ನ ಸಾಕುತ್ತಿರುವುದು, ಮಾರಾಟ ಮಾಡುತ್ತಿರುವುದು ಕೆಲವೆಡೆ ಅಗತ್ಯ ಕಾಳಜಿ ವಹಿಸದೆ ಕೂಡಿ ಹಾಕಿರುವುದು ಕಂಡು ಬಂದಿದೆ. ಅಂತಹ ಶಾಪ್‌ಗಳನ್ನು ಸೀಜ್‌ಮಾಡಿದ್ದೇವೆ. ಅಲ್ಲಿರುವ ಪ್ರಾಣಿ, ಪಕ್ಷಿಗಳನ್ನ ಪುನರ್ವಸತಿ ಕೇಂದ್ರಗಳಿಗೆ ಕಳಿಸಿದ್ದೇವೆ. ಈ ಕುರಿತು ಸಮಗ್ರ ವರದಿಯನ್ನ ಮೇಲಧಿಕಾರಿಗಳಿಗೆ ಸಲ್ಲಿಸಿ, ಆ ನಂತರದಲ್ಲಿ ದಾಳಿ ಮಾಡಿದ ಶಾಪ್ ಓನರ್ ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಹೇಳಿದರು.

ದಾಳಿಯ ವೇಳೆ ಅಲಸೂರನಲ್ಲಿನ ಪೆಟ್ ಶಾಪ್ ಒಂದರಲ್ಲಿ ಪ್ರಾಣಿ, ಪಕ್ಷಿಗಳು ತೀರಾ ದಯನೀಯ ಸ್ಥಿತಿಯಲ್ಲಿದ್ದದ್ದು ಕಂಡು ಬಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ಇಲ್ಲದೇ ಒಳಗಡೆಯೇ ಪರದಾಡುತ್ತಿದ್ದ ಕರುಣಾಜನಕ ನೋಟ ಮನಕಲಕುವಂತಿತ್ತು. ಅದಾಗಲೇ ಅಲ್ಲಿ ಎರಡು ಮೊಲಗಳು, ಪ್ರಾಣ ಬಿಟ್ಟಿದ್ದು, ದೇಹ ಕೊಳೆತು ದುರ್ನಾತ ಹರಡಿತ್ತು. ಮಾಲೀಕರು ಕಳೆದ ಕೆಲ ದಿನಗಳಿಂದ ಶಾಪ್ ತೆರೆದೆ ಇಲ್ಲ ಎಂಬುದು ಅಲ್ಲಿನ ಸ್ಥಿತಿಯಿಂದ ಸ್ಪಷ್ಟವಾಗಿ ಮನವರಿಕೆಯಾಗುತ್ತಿತ್ತು. ಈ ವೇಳೆ ಶಾಪ್‌ನ ಮಾಲೀಕರಿಗೆ ವಾರ್ನ್ ಮಾಡಿದ ಶಿವಾನಂದ ಡಂಬಳ್ ಪ್ರಾಣಿ, ಪಕ್ಷಿಗಳನ್ನ ಅಲ್ಲಿಂದ ಬಿಡುಗಡೆಗೊಳಿಸಿ ಕೂಡಲೇ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದರು.

ಕಳೆದ ಮೂರು ದಿನಗಳಿಂದ ಆಯಿಲ್ ಮಿಲ್ ರೋಡ್, ಅಶೋಕ್ ಪಿಲ್ಲರ್, ಕೋರಮಂಗಲ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಬಸವೇಶ್ವರನಗರ, ಅಲಸೂರು ಹೀಗೆ ನಗರದ ವಿವಿಧ ಭಾಗಗಳಲ್ಲಿ ಪೆಟ್ ಶಾಪ್ಗಣಳ ಮೇಲೆ ದಾಳಿ ಮಾಡಲಾಗಿದೆ. ಎಲ್ಲೆಲ್ಲಿ ಅನಧಿಕೃತವಾಗಿ ಪ್ರಾಣಿ, ಪಕ್ಷಿಗಳನ್ನ ಕೂಡಿ ಹಾಕಲಾಗಿದೆಯೋ ಅಲ್ಲಿಂದ ಅವುಗಳನ್ನ ಮುಕ್ತಗೊಳಿಸಲಾಗಿದೆ. ಹಾಗೇ ದಾಳಿಯಲ್ಲಿ ಒಟ್ಟು 2 ಪರ್ಶಿಯನ್ ಬೆಕ್ಕುಗಳು, 8 ಮೊಲಗಳು, 10 ಪಾರಿವಾಳ ವೈವಿಧ್ಯಮಯ ಗಿಣಿಗಳು, ಲವ್ ಬಡ್ರ್ಸ್ ಗಳು ಸೇರಿದಂತೆ 100ಕ್ಕೂ ಅದಿಕ ಪಕ್ಷಿಗಳನ್ನ ಶಾಪ್ ಗಳಿಂದ ಮುಕ್ತಗೊಳಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಈ ಮೂಲಕ ಎಲ್ಲಾ ಪೆಟ್ ಶಾಪ್ ಓನರ್ಗಸಳಿಗೂ ಕಡ್ಡಾಯವಾಗಿ ಅಂಗಡಿ ತೆರೆದಿಟ್ಟುಕೊಳ್ಳುವಂತೆ ಸೂಚಿಸಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ  ಈ ನಿಟ್ಟಿನಲ್ಲಿ ಯಾವುದೇ ನೆರವಿನ ಅಗತ್ಯವಿದ್ದರೂ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಹಾಗೆಯೇ ಪ್ರಾಣಿ, ಪಕ್ಷಿಗಳನ್ನ ಮಾರಾಟ ಮಾಡಲು ಪಶುಸಂಗೋಪನಾ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!