ಔಷಧೀಯ ಗುಣಗಳ ಆಗರ ಏಲಕ್ಕಿ

ಔಷಧೀಯ ಗುಣಗಳ ಆಗರ ಏಲಕ್ಕಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ ಕೇವಲ ಅಡುಗೆಯ ಪದಾರ್ಥವಲ್ಲ, ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ.

ಔಷಧೀಯ ಗುಣಗಳ ಆಗರ ಏಲಕ್ಕಿಏಲಕ್ಕಿ ಭಾರತದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಹೂವಿನಂತ ಸುವಾಸನೆ ಹಾಗೂ ಸಿಹಿ, ಖಾರ ರುಚಿಯನ್ನು ಹೊಂದಿರುವ ಏಲಕ್ಕಿ, ವಿವಿಧ ಖಾದ್ಯಗಳಿಗೆ ವಿಶೇಷ ರುಚಿ ಹಾಗೂ ಪರಿಮಳವನ್ನು ನೀಡುತ್ತದೆ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ, ಕೇವಲ ಒಂದು ಅಡುಗೆಯ ಪದಾರ್ಥವಲ್ಲ. ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ. ದೇಹದಲ್ಲಿನ ಉಷ್ಣತೆ, ಪಿತ್ತದಂತ , ಉರಿಯನ್ನು ಕಡಿಮೆಮಾಡಿ, ದೇಹದಲ್ಲಿನ ನೀರಿನಂಶವನ್ನು ಕಾಯ್ದಿರಿಸುವ ಗುಣವಿದೆ.

1. ಜೀರ್ಣಶಕ್ತಿ ಹೆಚ್ಚಿಸುತ್ತದೆ: ಊಟದ ನಂತರ ಸೋಂಪಿನೊಂದಿಗೆ ಏಲಕ್ಕಿ ಸೇವಿಸುವುದರಿಂದ ಅಥವಾ ಏಲಕ್ಕಿಯನ್ನು ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಶೀಘ್ರವಾಗುತ್ತದೆ. ಏಲಕ್ಕಿಯಲ್ಲಿರುವ ಎಣ್ಣೆಯಾಂಶ ಲಾಲಾಸ್ರಾವವನ್ನು, ಜಠರದಲ್ಲಿನ ಹಲವು ಸ್ರಾವಗಳನ್ನು ಪ್ರಚುರಗೊಳಿಸಿ ಸ್ರಾವಗಳನ್ನು ಉತ್ಪತ್ತಿಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿನ ಉಷ್ಣತೆ ಅಥವಾ ಆಸಿಡಿಕ್ ಅಂಶ ಕಡಿಮೆಗೊಳ್ಳುತ್ತದೆ ಮತ್ತು ಹೊಟ್ಟೆ ಉರಿ, ಎದೆಉರಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

2. ವಾಂತಿ ಬೇದಿ ನಿಯಂತ್ರಿಸುತ್ತದೆ: ಒಂದು ಗ್ಲಾಸ್ ನಿಂಬೆಹಣ್ಣಿನ ಶರಬತ್ತಿಗೆ 3 ಚಿಟಿಕೆ ಏಲಕ್ಕಿಪುಡಿ ಸಕ್ಕರೆ ಹಾಗೂ ಚಿಕಿಕೆ ಉಪ್ಪನ್ನು ಬೆರೆಸಿ ಸೇವಿಸುವುದರಿಂದ ವಾಂತಿ ನಿಲ್ಲುತ್ತದೆ ಮತ್ತು ವಾಂತಿ ಬೇದಿಯ ನಂತರ ಉಂಟಾಗುವ ನೀರಿನಾಂಶದ ವ್ಯತ್ಯಾಸವನ್ನು ಉತ್ತಮಗೊಳಿಸಬಹುದು.

ಔಷಧೀಯ ಗುಣಗಳ ಆಗರ ಏಲಕ್ಕಿ3. ಬಾಯಿಯ ದುರ್ವಾಸನೆ ನಿವಾರಿಸುತ್ತದೆ: ಆಹ್ಲಾದಕರ ಪರಿಮಳ, ವಿಶೇಷವಾದ ರುಚಿ ಮತ್ತು ಬ್ಯಕ್ಟಿರಿಯಾ ಸೋಂಕನ್ನು ತಡೆಗಟ್ಟುವ ಗುಣದಿಂದಾಗಿ ಬಾಯಿಯ ದುರ್ವಾಸನೆ ನಿವಾರಿಸುತ್ತದೆ. ಪ್ರತಿದಿನ ಏಲಕ್ಕಿಯನ್ನು ಬಾಯಲ್ಲಿ ಜಗಿಯುವುದರಿಂದ ಪ್ರಾಕೃತವಾಗಿ ಬಾಯನ್ನು ಶುದ್ದಗೊಳಿಸಿ ಹಲವು ಸೋಂಕನ್ನು ತಡೆಗಟ್ಟುತ್ತದೆ.

4. ಕೆಮ್ಮು, ದಮ್ಮು, ಶ್ವಾಸರೋಗಗಳ ನಿವಾರಣೆ: ಏಲಕ್ಕಿ ರಕ್ತಚಲನೆಯನ್ನು ವೃದ್ದಿಸಿ, ಉಸಿರಾಟದ ತೊಂದರೆಗಳಾದ ಶೀತ, ಕೆಮ್ಮು, ಉಸಿರಾಟದ ರೋಗಗಳನ್ನು ನಿವಾರಿಸುತ್ತದೆ. ಉಷ್ಣ ಗುಣದಿಂದ ದೇಹದಲ್ಲಿ ಶೇಖರಿತ ಅತಿಯಾದ ಶೀತ, ಕಫವನ್ನು ಕಡಿಮೆಮಾಡಿ ಎದೆಗೂಡಿನಲ್ಲಿರುವ ಕಫದಾಂಶವನ್ನು ಹೊರಹಾಕಲು ಸಹಕಾರಿಯಾಗುತ್ತದೆ. ಹೃದಯದ ಕ್ರಿಯೆಯನ್ನು ಕಾಯ್ದಿರಿಸುತ್ತದೆ.

ಏಲಕ್ಕಿಯಲ್ಲಿ ಪೊಟಾಶಿಯಂ, ಕ್ಯಾಲ್ಶಿಯಂ, ಮೆಗ್ನೀಶಿಯಂ ನಂತಹ ಖನಿಜಾಂಶ ಹೇರಳವಾಗಿದೆ. ಪೊಟಾಶಿಯಂ ಅಂಶವು ದೇಹದಲ್ಲಿನ ವಿವಿಧ ಸ್ರಾವ, ರಕ್ತ ಹಾಗೂ ಜೀವಕೋಶಗಳಲ್ಲಿರುವ್ ಒಂದು ಪ್ರಮುಖ ಖನಿಜಾಂಶ. ಪೊಟಾಶಿಯಂ ಅನ್ನು ಪ್ರಮುಖವಾಗಿ ಹೊಂದಿರುವ ಏಲಕ್ಕಿಯು ಹೃದಯ ಬಡಿತ ಹಾಗೂ ಅದರ ಪ್ರಾಕೃತ ಕ್ರಿಯೆಗೆ ಅತ್ಯಂತ ಉಪಯುಕ್ತ.

5. ರಕ್ತಹೀನತೆಗೆ ರಾಮಬಾಣ: ಕಾಪರ್, ಕಬ್ಬಿಣ, ವಿಟಮಿನ್ ಹೆಚ್ಚಗಿರುವುದರಿಂದ ರಕ್ತದಲ್ಲಿನ ಕೆಂಪು ಕಣಗಳನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ರಕ್ತಹೀನತೆಯಲ್ಲಾಗುವ ಹಲವು ಅಡ್ಡಪರಿಣಮಗಳನ್ನು ನಿವಾರಿಸುತ್ತದೆ. 1 ಗ್ಲಾಸ್ ಬಿಸಿ ಹಾಲಿಗೆ 1 ಚಿಟಿಕೆ ಅರಿಶಿಣ ಮತ್ತು 2 ಚಿಟಿಕಿ ಏಲಕ್ಕಿಪುಡಿಯನ್ನು ಬೆರೆಸಿ ಸೇವಿಸುವುದರಿಂದ ರಕ್ತಹೀನತೆಯಿಂದಾಗುವ ಸುಸ್ತು, ಆಯಾಸ ಮೈನೋವು ಕಡಿಮೆಯಾಗುತ್ತದೆ.

6. ದೇಹವನ್ನು ಶುದ್ದಗೊಳಿಸುತ್ತದೆ:

ಹೇರಳವಾದ ಮ್ಯಂಗನೀಸ್ ಕಣಗಳು ಕೆಲವು ಸ್ರಾವಗಳನ್ನು ಉತ್ಪತ್ತಿಮಾಡುತ್ತದೆ. ಈ ಸ್ರಾವವು ದೇಹದಲ್ಲಿ ಶೇಖರಿತವಾಗುವ ಅನಗತ್ಯ ವಿಷದಂತಹ ಅಂಶ ಅಥ್ವಾ ಟಾಕ್ಸಿನ್ಸ್ ಅನ್ನು ದೇಹದಿಂದ ಹೊರಹಾಕಿ ದೇಹವನ್ನು ಶುದ್ದಗೊಳಿಸುತ್ತದೆ ಮತ್ತು ಇಂತಹ ಟಾಕ್ಸಿನ್ಸ್ ನಿಂದಾಗಿ ಉತ್ಪತ್ತಿಯಾಗುವ ಹಲವಾರು ಮಾರಕ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

7. ಕಾಮಶಕ್ತಿಯನ್ನು ಹೆಚ್ಚಿಸುತ್ತದೆ: ಏಲಕ್ಕಿ ದೇಹಕ್ಕೆ ಬಲವನ್ನು ಆಹ್ಲಾದವನ್ನು ನೀಡುವ ಒಂದು ಉತ್ತಮ ಟಾನಿಕ್, ಅಲ್ಲದೆ ಲೈಂಗಿಕ ಸಮಸ್ಯೆಗಳಾದ ಶೀಘ್ರಸ್ಖಲನ, ನರದೌರ್ಬಲ್ಯತೆಗೆ ಉತ್ತಮ ಔಷಧಿ. ದೇಹದಲ್ಲಿನ ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುವುದರಿಂದ ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ. 1 ಗ್ಲಾಸ್ ಬಿಸಿಹಾಲಿಗೆ, 1 ಚಿಟಿಕೆ ಏಲಕ್ಕಿ ಪುಡಿ ಮತ್ತು 1/2 ಚಮಚ ಬಾದಾಮಿ ಪುದಿಯನ್ನು ಬೆರೆಸಿ ಸೇವಿಸುವುದರ್‍ಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ.

ಡಾ. ಮಹೇಶ್ ಶರ್ಮಾ ಎಂ. , ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ

ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ಞರು, ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊ.: 9964022654   email : drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!