ಔಷಧೀಯ ಗುಣಗಳ ಒಂದೆಲಗ

 
ಹತ್ತೊಕ್ಕಲು ಶಿವರಾಮ ಭಟ್
ಮೊ. : 9449452130
ಒಂದು ಬೇರಿಗೆ ಒಂದೇ ಎಲೆ ಇರುವುದರಿಂದ ಈ ಸಸ್ಯವನ್ನು ಒಂದೆಲಗ ಎಂದು ಕರೆಯಲಾಗುತ್ತದೆ.  ಎಲ್ಲಾ ರೀತಿಯ  ಸೊಪ್ಪುಗಳಲ್ಲೂ ಪೋಷಕಾಂಶಗಳು, ಖನಿಜಾಂಶಗಳು ಇರುತ್ತವೆ.  ಆದರೆ ಕೆಲವೊಂದು ಸೊಪ್ಪುಗಳಲ್ಲಿ ಅಂತಹ ಅಮೂಲ್ಯ ಔಷಧೀಯ ಗುಣಗಳೂ ಇರುತ್ತವೆ.  ಅಮೂಲ್ಯ ಔಷಧೀಯ ಸಸ್ಯಗಳಲ್ಲಿ ಒಂದೆಲಗವೂ ಒಂದು.
  • ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಲೆ ಒಂದೆಲಗವನ್ನು ಸೇವಿಸಿವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
  • ಒಂದೆಲಗ ರೋಗ ನಿವಾರಕವು ಹೌದು.
  • ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ಮಧುಮೇಹಿಗಳಿಗೆ ದಿನನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು.
  • ಒಂದೆಲಗ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಎರಡು ಗಂಟೆಗಳ ಕಾಲ ನೆನೆದು ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ.
  • ಒಂದೆಲಗ ಸೊಪ್ಪಿನಿಂದ ಈ ಕೆಳಕಂಡ ಕೆಲವು ಖಾದ್ಯಗಳನ್ನೂ ತಯಾರಿಸಬಹುದು. ಇವು ರುಚಿಕರವಾಗಿಯೂ ಇದ್ದು ಆರೋಗ್ಯಕ್ಕೂ ಒಳ್ಳೆಯದು.
ಒಂದೆಲಗ ತಂಬುಳಿ : 
ಬೇಕಾಗುವ ಪದಾರ್ಥಗಳು : 1 ಕಟ್ಟು ಒಂದೆಲಗ ಸೊಪ್ಪು, 1 ಕಪ್ ಮೊಸರು, ಹಸಿ ಕೊಬ್ಬರಿ ಸ್ವಲ್ಪ, ಜೀರಿಗೆ ಮೆಣಸ್ಸು ತಲಾ ಒಂದು ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಒಂದೆಲಗ ಸೊಪ್ಪನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಿ.  ನಂತರ ಹಸಿಕೊಬ್ಬರಿ, ಜೀರಿಗೆ, ಮೆಣಸ್ಸು ಎಲ್ಲವನ್ನು ರುಬ್ಬಿಕೊಂಡು ಗಟ್ಟಿಯಾದ ಮೊಸರಿಗೆ ಹಾಕಿ, ಉಪ್ಪು ಹಾಕಿ ಕಲಸಿ ಒಗ್ಗರಣೆ ಹಾಕಿದರೆ ರುಚಿಯಾದ ತಂಬುಳಿ ಸಿದ್ಧವಾಗುತ್ತದೆ.
ಒಂದೆಲಗ ಚಟ್ನಿ
ಬೇಕಾಗುವ ಪದಾರ್ಥಗಳು : ಒಂದೆಲಗ ಸೊಪ್ಪು 2 ಕಟ್ಟು, 2 ಚಮಚ ತೊಗರಿ ಬೇಳೆ, 3-4 ಒಣ ಮೆಣಸಿನಕಾಯಿ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತುಪ್ಪ.
ಮಾಡುವ ವಿಧಾನ : ಸೊಪ್ಪನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.  ತೊಗರಿಬೇಳೆಯನ್ನು ಹುರಿದುಕೊಳ್ಳಬೇಕು.  ಹುರಿದ ತೊಗರಿ ಬೇಯಿಸಿದ ಉಪ್ಪು ಮತ್ತು ಒಣಮೆಣಸಿನಕಾಯಿ, ಹುಣಸೆ ಹಣ್ಣು, ಸ್ವಲ್ಪ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ ರುಬ್ಬಿಕೊಂಡು ತುಪ್ಪದ ಒಗ್ಗರಣೆ ಹಾಕಿದರೆ ಒಂದೆಲಗ ಚಟ್ನಿ ಸಿದ್ಧವಾಗುತ್ತದೆ. (ಬೇಕಾದಲ್ಲಿ ಬೆಳ್ಳುಳ್ಳಿಯನ್ನು ಬಳಸಬಹುದು.)
ಒಂದೆಲಗ ಪಲ್ಯ
ಬೇಕಾಗುವ ಪದಾರ್ಥಗಳು : 2 ಕಟ್ಟು ಒಂದೆಲಗ ಸೊಪ್ಪು, 3-4 ಒಣ ಮೆಣಸಿನಕಾಯಿ, ಅರ್ಧಕಪ್ ತೊಗರಿ ಬೇಳೆ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಸೊಪ್ಪನ್ನು ಚೆನ್ನಾಗಿ ತೊಳೆದು ಅದರ ಜೊತೆಗೆ ಅರ್ಧ ಕಪ್ ತೊಗರಿ ಬೇಳೆ, ಮೆಣಸಿನ ಕಾಯಿ ಮತ್ತು ಉಪ್ಪು ಬೆರಿಸಿ, ಕುಕ್ಕರಿನಲ್ಲಿ ಹಾಕಿ ಬೇಯಿಸಿಕೊಳ್ಳಿ.  ಅನಂತರ ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿ, ಬೇಯಿಸಿದ ಸೊಪ್ಪನ್ನು ಹಾಕಿ, ಸ್ವಲ್ಪ ಬೆಲ್ಲವನ್ನು ಹಾಕಿ ಗಟ್ಟಿಯಾಗುವ ತನಕ ಕುದಿಸಿದರೆ ರುಚಿಯಾದ ಒಂದೆಲಗ ಪಲ್ಯ ಸಿದ್ಧವಾಗುತ್ತದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!