ಬೇವು – ಉಪಯುಕ್ತ ಔಷಧಿ

ಬೇವು ಆಯುರ್ವೇದದಲ್ಲಿ ಉಪಯುಕ್ತ ಔಷಧಿ. ಮಧುಮೇಹ ನಿಯಂತ್ರಣಕ್ಕೆ ಬೇವು ತುಂಬಾ ಸಹಾಯಕಾರಿ.ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಚರ್ಮ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

neem ಬೇವು - ಉಪಯುಕ್ತ ಔಷಧಿಆಯುರ್ವೇದದಲ್ಲಿ ಬೇವು ಉಪಯುಕ್ತ ಔಷಧಿಯಾಗಿದೆ. ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಈ ದಿನ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಜಳಕ ಮಾಡುವುದು, ಬೇವು ಬೆಲ್ಲ ಸೇವನೆ ರೂಢಿಯಲ್ಲಿದೆ. ಹೀಗೆ ಮಾಡುವದರಿಂದ ದೇಹ ಶುದ್ಧಿಯಾಗುತ್ತದೆ ಮತ್ತು ಆ ಖುತವಿನಲ್ಲಿ ಬರಬಹುದಾದ ಚರ್ಮ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಬೇವಿಗೆ ಆಯುರ್ವೇದದಲ್ಲಿ ನಿಂಬ ಎಂದು ಕರೆಯುತ್ತಾರೆ. ಇದನ್ನು ಅರಿಷ್ಟ, ಹಿಂಗುನಿರ್ಯಾಸ, ಪಿಚುಮರ್ದ, ಸುಭರ್ದ ಎಂಬ ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ದೊಡ್ಡ ಮರವಾಗಿದ್ದು ಸರಾಸರಿ 18ಅಡಿ ಎತ್ತರದ, ಬಿಳಿಹೂವು, ಹಳದಿ ಬಣ್ಣದ ಹಣ್ಣು ಹೂಂದಿರುತ್ತದೆ.

ಉಪಯೋಗಗಳು

1. ಬೇವು ಚರ್ಮರೋಗಗಳಿಗೆ ರಾಮಬಾಣ. ಗಾಯ, ತುರಿಕೆ ಇದ್ದಲಿ ಬೇವಿನ ಎಲೆಗಳನ್ನು(10-15) ತೆಗೆದುಕೊಂಡು ಚನ್ನಾಗಿ ನೀರಿನಲ್ಲಿ ತೊಳೆದು, ಸ್ವಲ್ಪ ಅರಿಷಿಣ, ಹಾಕಿ ರುಬ್ಬಿಕೊಳ್ಳಬೇಕು. ನಂತರ ಇದನ್ನು 2-3 ಬಾರಿ ಲೇಪ ಮಾಡಬೇಕು.

2. ಮಧುಮೇಹ ನಿಯಂತ್ರಣಕ್ಕೆ ಬೇವು ತುಂಬಾ ಸಹಾಯಕಾರಿ. ಎರಡು ಲೋಟ ನೀರಿಗೆ ಕಾಂಡ ಸಹಿತ ಒಂದು ಮುಷ್ಟಿ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿದ ಕಷಾಯವನ್ನು ಎರಡು ಬಾರಿ ಸೇವಿಸಬೇಕು.

3. ಬೇವಿನ ಎಲೆಗಳನ್ನು (10-15) ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೂಳ್ಳಬೇಕು. ನಂತರ ಈ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ತಲೆಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು, ಹೇನು ಸಮಸ್ಯೆ ಕಡಿಮೆಯಾಗುತ್ತದೆ.

4. ಬೇವಿನ ಚಿಕ್ಕಟೊಂಗೆ ತೆಗೆದುಕೂಂಡು ಶುಚಿಗೊಳಿಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ.

5. ಬೇವಿನ ಎಲೆ, ಹಣ್ಣು, ಬೇರು, ಟೊಂಗೆ, ಎಲ್ಲ ವನ್ನು ತುಪ್ಪ ದಲ್ಲಿ ಹಾಕಿ ಅದರ ಹೊಗೆ ತೆಗೆದು ಕೊಳ್ಳುವದರರಿಂದ ಜ್ವರ ಕಡಿಮೆಯಾಗುತ್ತದೆ.

ಆಧುನಿಕ ಸಂಶೋಧನೆ:

neem ಬೇವು - ಉಪಯುಕ್ತ ಔಷಧಿರಸಾಯನಿಕ ಸಂಘಟನೆಗಳು: azadiractanin, nimbin, nimbidin, azadiractin.
ಉಪಯುಕ್ತ ಭಾಗಗಳು: ಬೇರು, ಕಾಂಡ, ಹೂವು, ಎಲೆ, ಬೀಜ

1. ಬೇವಿನ ಎಲೆಯಲ್ಲಿ azadiractin ಇರುವ ದರಿಂದ ಮಧುಮೇಹ ನಿಯಂತ್ರಣ ಮಾಡುವ ಗುಣವಿದೆ (anti diabetic activity).

2. ಬೇವಿನಲ್ಲಿ ಕ್ರಿಮಿನಾಶಕ (anti bacterial activity) ಗುಣವಿದೆ ಎಂದು ಸಂಶೋಧನೆಯಿಂದ ತಿಳದು ಬಂದಿದೆ. ಆದ್ದರಿಂದ ಇದನ್ನು ದೀರ್ಘ ಕಾಲದ ಇಸುಬು, ಚರ್ಮರೋಗ ಸಮಸ್ಯೆಗಳಿಗೆ ಔಷಧವಾಗಿ ಬಳಸಬಹುದು.

3. ಹಲವಾರು ಆಯುರ್ವೇದ ಔಷಧಗಳಲ್ಲಿ ಬೇವನ್ನು(ನಿಂಬ) ಬಳಸಲಾಗುತ್ತದೆ. ಉದಾಹರಣೆಗೆ: ನಿಂಬಾದಿ ತೈಲ, ನಿಂಬಾದಿ ಚೂರ್ಣ, ನಿಂಬ – ಹರಿದ್ರಖಂಡ, ಪಂಚನಿಂಬಚುರ್ಣ.

ಡಾ. ಶ್ವೇತಾ ಕುಲಕರ್ಣಿ ನಂ. 101ಎ, ಗುರು ಮಹಿಪತಿಧಾಮ ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ವಿದ್ಯಾರಣ್ಯಪುರ, ಬೆಂಗಳೂರು ಮೊ.:9986080320;    shwetasn24@gmail.com

ಡಾ. ಶ್ವೇತಾ ಕುಲಕರ್ಣಿ
ನಂ. 101ಎ, ಗುರು ಮಹಿಪತಿಧಾಮ
ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ವಿದ್ಯಾರಣ್ಯಪುರ, ಬೆಂಗಳೂರು
ಮೊ: 99860 80320;    shwetasn24@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!