ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು

ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು ಅತ್ಯಂತ ಉಪಯುಕ್ತ. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ತೀವ್ರತರ ಅಸ್ತಮಾ ಇದ್ದು ಉಸಿರಾಡಲು ತುಂಬಾ ಕಷ್ಟವಾಗಿರುವಾಗ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.

ಅಸ್ತಮಾ ನಿವಾರಣೆಗೆ ಪ್ರಕೃತಿ ಚಿಕಿತ್ಸೆಗಳು

ಮಳೆಗಾಲ, ಚಳಿಗಾಲ ಸಮೀಪಿಸುತ್ತಿದ್ದಂತೆ ಅಸ್ತಮಾ ಖಾಯಿಲೆ ಉಲ್ಬಣಗೊಳ್ಳುವ ಸಂಭವತೆ ಹೆಚ್ಚು. ಧೂಳು, ಗಾಳಿ, ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಶೀತ, ನೆಗಡಿ, ಕಫಕಟ್ಟುವುದು ಇಂತಹ ಸಮಸ್ಯೆಗಳು ಕಾಡುತ್ತವೆ. ಇದು ನಿಧಾನವಾಗಿ ಅಸ್ತಮವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇದನ್ನು ನಿವಾರಿಸಲು ಪ್ರಕೃತಿಚಿಕಿತ್ಸೆಗಳು ಬಹಳ ಸಹಾಯಮಾಡುತ್ತದೆ. ಸಮಯೋಚಿತ ಪ್ರಕೃತಿಚಿಕಿತ್ಸೆಯಿಂದಾಗಿ ನಾವು ಅಸ್ತಮಾ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು.

ಅಸ್ತಮಾ ಸಮಸ್ಯೆಗೆ ಒಳ್ಳೆಯ ಮೂರು ಪ್ರಕೃತಿ ಚಿಕಿತ್ಸೆಗಳು:

1. ಅಂತಹ ಪ್ರಕೃತಿಚಿಕಿತ್ಸೆಗಳಲ್ಲೊಂದು ಜಲನೇತಿ. ಈ ಜಲನೇತಿ ಕ್ರಿಯೆಯನ್ನು ಮಾಡುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಶ್ವಾಸಕೋಶದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅಸ್ತಮಾ ನಿಯಂತ್ರಣಕ್ಕೆ ಸಹಕರಿಸುತ್ತದೆ. ಇದನ್ನು ಒಂದು ತಿಂಗಳುಗಳಕಾಲ ದಿನಬಿಟ್ಟು ದಿನ ಮಾಡುತ್ತಾ ಬರಬೇಕು. ನಂತರದಲ್ಲಿ ವಾರಕ್ಕೆರಡುದಿನ ಮಾಡಿದರೆ ಸಾಕು. ಹೀಗೆ ಮಾಡಿದಲ್ಲಿ ಅಸ್ತಮಾ ಸಮಸ್ಯೆ ಹತೊಟಿಗೆ ಬರುವುದು.

Also Read: ಜಲನೇತಿ : ಕೋವಿಡ್ ಸೋಂಕಿನಿಂದ ಸಂಪೂರ್ಣ ರಕ್ಷಣೆ ವಿಧಾನ

2. ಅಂತೆಯೇ ಇದರ ಜೊತೆಯಲ್ಲಿಯೇ ಮಾಡಬಹುದಾದ ಪ್ರಕ್ರಿಯೆ ‘ಸೂತ್ರನೇತಿ’. ಇದೂ ಸಹ ಗಂಟಲಿನ ಭಾಗವನ್ನು ಶುದ್ಧಗೊಳಿಸುವುದಲ್ಲದೇ ಉಸಿರಾಟದ ಹಾದಿಯನ್ನು ಸುಗಮಗೊಳಿಸುತ್ತದೆ. ಅಲರ್ಜಿಯನ್ನು ಕೆರಳಿಸುವ ವಸ್ತುಗಳಮೇಲೆ ಪರಿಣಾಮಬೀರಿ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಅಸ್ತಮಾ ನಿಯಂತ್ರಣಕ್ಕೆ ಸಹಕಾರಿ.

3. ಇವುಗಳ ಜೊತೆಯಲ್ಲಿಯೇ ಮಾಡಬಹುದಾದ ಇನ್ನೊಂದು ಪ್ರಕೃತಿಚಿಕಿತ್ಸೆ ‘ವಮನಧೌತಿ’. ಹಿಮ್ಮಡಿಗಳಮೇಲೆ ಕುಳಿತಿಕೊಂಡು ಉಪ್ಪು ಸೇರಿಸಿದ ಉಗುರುಬೆಚ್ಚಗಿನ ನೀರನ್ನು7-8 ಗ್ಲಾಸ್ ಕುಡಿದು, ನಿಧಾನವಾಗಿ ಎದ್ದುನಿಂತು ಕುಡಿದ ಎಲ್ಲ ನೀರನ್ನು ಹೊರಹಾಕುವ (ವಾಂತಿ ಮಾಡುವ) ಈ ಪ್ರಕ್ರಿಯೆಯಿಂದಾಗಿ ಅಸ್ತಮಾ ಸಮಸ್ಯೆ ಹತೋಟಿಗೆ ಬರುತ್ತದೆ. ಬಾಯಿಯಿಂದ ಹೊಟ್ಟೆಯವರೆಗಿನ ಅನ್ನನಾಳವನ್ನು ಹಾಗೂ ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಇದಾಗಿದ್ದು ಅಸ್ತಮಾ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.

ಅಸ್ತಮಾ ತೊಂದರೆಗಳನ್ನು ನಿಸರ್ಗದತ್ತವಾಗಿ ನಿವಾರಿಸುವ ವಿಧಾನ: 

ತೀವ್ರತರ ಅಸ್ತಮಾ ಇದ್ದು ಉಸಿರಾಡಲು ತುಂಬಾ ಕಷ್ಟವಾಗಿರುವಾಗ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ಹೀಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಮಯೋಚಿತವಾಗಿ ತೆಗೆದುಕೊಂಡು ಈ ಪ್ರಕೃತಿ ಚಿಕಿತ್ಸೆಗಳ ಮೂಲಕ ಅಸ್ತಮಾವನ್ನು ಕಡಿಮೆಮಾಡಿಕೊಳ್ಳಬಹುದು. ಈ ಅಸ್ತಮಾ ತೊಂದರೆಗಳನ್ನು ನಿಸರ್ಗದತ್ತವಾಗಿ ನಿವಾರಿಸುವ ವಿಧಾನಗಳನ್ನು ತಿಳಿದುಕೊಳ್ಳೊಣ.

Dr.-Venkatramana-Hegde

1. ನೀರಿನ ಚಿಕಿತ್ಸೆ: ಎದೆ ಪಟ್ಟಿ, ಇದೊಂದು ಸರಳಕ್ರಮವಾಗಿದ್ದು, ಅಸ್ತಮಾ ತೊಂದರೆಯಿರುವವರು ಪ್ರತಿದಿನ ಎರಡು ಬಾರಿ 20 ನಿಮಿಷಗಳ ಕಾಲ ಎದೆಗೆ ತಣ್ಣಿರಿನ ಪಟ್ಟಿ ಮೇಲಿನಿಂದ ಉಲ್ಲನ್ ಬಟ್ಟೆ ಸುತ್ತಿಕೊಳ್ಳಬೇಕು.

2. ಅಸ್ತಮಾ ಬಾತ್: ಬಿಸಿನೀರು, ಉಗುರು ಬೆಚ್ಚಗಿನ ನೀರು, ತಣ್ಣೀರು ಉಪಯೋಗಿಸಿ ವಿಶೇಷವಾಗಿ ನಿರ್ಮಾಣ ಮಾಡಿದ ಟಬ್‍ನಲ್ಲಿ ಈ ಚಿಕಿತ್ಸೆ ನೀಡಲಾಗುವುದು.

3. ಮುಖಕ್ಕೆ ಆವಿ ಚಿಕಿತ್ಸೆ: ಇದು ಪರಿಣಾಮಕಾರಿ ಚಿಕಿತ್ಸೆಯಾಗಿದ್ದು ನೀರಿಗೆ ನೀಲಗಿರಿ ಎಲೆಯನ್ನು ಹಾಕಿ ಅದರ ಹಬೆಯನ್ನು ನೀಡಲಾಗುವುದು.

4. ಪೂರ್ಣ ಉಗಿಸ್ನಾನ: ವಿಶೇಷ ಟಬ್‍ನಲ್ಲಿ ಉಗಿಸ್ನಾನ ನೀಡಲಾಗುವುದು. ಕಫ ಕರಗಿಸಲು, ಅಸ್ತಮಾ ಹತೋಟಿಗೆ ತರಲು ಉಪಯುಕ್ತ ಚಿಕಿತ್ಸೆ.

5. ಅಂಗಮರ್ಧನ (ಮಸಾಜ್) ಹಾಗೂ ಬೆಳಕಿನ ಚಿಕಿತ್ಸೆ: ವಿಶೇಷ ರೀತಿಯ ಅಂಗಮರ್ಧನವನ್ನು ಎದೆ ಹಾಗೂ ಬೆನ್ನಿನ ಭಾಗಕ್ಕೆ ಆಯುರ್ವೇದ ತೈಲಗಳನ್ನು ಉಪಯೋಗಿಸಿ ನೀಡಿ, ಇನ್‍ಫ್ರಾರೆಡ್ ಕಿರಣಗಳನ್ನು ನೀಡಲಾಗುವುದು. ಈ ಚಿಕಿತ್ಸೆ ಸಂಕುಚಿತ ಶ್ವಾಸನಾಳಗಳು ವಿಕಸಿತಗೊಳ್ಳಲು ಹಾಗೂ ಕಫ ಕರಗಲು ಉಪಯುಕ್ತ,

6. ಯೋಗ ಚಿಕಿತ್ಸೆ: ಹೆಚ್ಚಾದ ಮಾನಸಿಕ ಒತ್ತಡ ಅಸ್ತಮಾವನ್ನು ಉಲ್ಪಣಗೊಳಿಸುತ್ತದೆ. ಯೋಗ ಚಿಕಿತ್ಸೆ, ಸರಳವಾದ ಆಸನ, ವಿಶ್ರಾಂತಿ ಕ್ರಿಯೆ, ಪ್ರಾಣಾಯಾಮ, ಧ್ಯಾನ, ಪ್ರಾರ್ಥನೆ ಹಾಗೂ ಶುದ್ಧಿಕರಣ ಕ್ರಿಯೆಗಳನ್ನು ಒಳಗೊಂಡಿರುವುದರಿಂದ ಅಸ್ತಮಾವನ್ನು ಸಂಪೂರ್ಣ ಹತೋಟಿಗೆ ತರಲು ಸಹಕರಿಸುತ್ತದೆ. ಸಂಶೋಧನೆಗಳಿಂದ ಪ್ರಮಾಣಿಕರಿಸಿದ, ಆಯ್ದ ಅಭ್ಯಾಸಗಳನ್ನು ಯೋಗ ವೈದ್ಯರಿಂದ ಕಲಿತು ಅಭ್ಯಾಸ ಮಾಡುವುದು ಒಳಿತು.

ಆಹಾರ ಹಾಗೂ ರಸಾಹಾರ:

ಹೀಗೆ ಈ ಪ್ರಕೃತಿ ಚಿಕಿತ್ಸೆಗಳು ಅಸ್ತಮಾ ಸಮಸ್ಯೆಗೆ ಒಳ್ಳೆಯದು. ಅಲ್ಲದೇ ಆಹಾರ ಪದ್ಧತಿಯನ್ನೂ ಸಹ ಅಸ್ತಮಾ ಹೊಂದಿದವರು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ಪ್ರಕೃತಿ ಚಿಕಿತ್ಸೆಯಲ್ಲಿ ಆಹಾರವೇ ನಿಮ್ಮ ಔಷಧವಾಗಲಿ ಎಂದಿದ್ದಾರೆ. ಈ ಸೂತ್ರದ ಪ್ರಕಾರ ಯಾವ ವೇಳೆಯಲ್ಲಿ ಯಾವ ಆಹಾರವನ್ನು ಹೇಗೆ, ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಪ್ರತಿಯೊಬ್ಬರಿಗೂ ಪ್ರಕೃತಿ ಚಿಕಿತ್ಸೆಯಲ್ಲಿ ಆಹಾರ ಕ್ರಮದ ಪಟ್ಟಿಯನ್ನು ನೀಡಲಾಗುತ್ತದೆ

1. ಮುಖ್ಯವಾಗಿ ಅಸ್ತಮಾ ಇರುವವರು ಉಸಿರಾಟಕ್ಕೆ ಸಮಸ್ಯೆ ಆಗುತ್ತಿದ್ದಲ್ಲಿ ರಾತ್ರಿ ಅನ್ನ, ಚಪಾತಿ ಇಂತಹ ಆಹಾರವನ್ನು ಕಡಿಮೆಮಾಡಬೇಕು. ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.

2. ಕಫವನ್ನು ಉಂಟುಮಾಡುವಂತಹ ಹಾಲು, ಮೊಸರು ಇವುಗಳನ್ನು ರಾತ್ರಿ ಮಲಗುವಾಗ ತೆಗೆದುಕೊಳ್ಳದೇ ಹಗಲಿನ ಸಮಯದಲ್ಲೇ ಸೇವಿಸುವುದು ಒಳಿತು.

3. ಅಸ್ತಮಾ ಪೀಡಿತರು ಆಹಾರದ ಬಗೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಕರಿದ ತಿನಿಸು, ಅತಿಯಾದ ಸಿಹಿ, ಬೇಕರಿ ಆಹಾರ, ಭರ್ಜರಿ ಭೋಜನ ಹಾಗೂ ಕೆಲ ರೀತಿಯ ಮಾಂಸಗಳನ್ನು ವರ್ಜಿಸಲೇಬೇಕಾಗುತ್ತದೆ.

4. ಅಸ್ತಮಾ ಇರುವವರು ಬಾಳೆಹಣ್ಣು, ಮೊಸರು ಮೊದಲಾದ ಪದಾರ್ಥಗಳನ್ನು ಸೇವಿಸುವುದರಿಂದ ಅಸ್ತಮ ಉಲ್ಪಣಿಸುತ್ತದೆ. ಕಫ ಕರಗಲು ಮೊಸಂಬಿ, ಕಿತ್ತಳೆ, ಲಿಂಬು ಮುಂತಾದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಆಯಾ ರೋಗಿಯ ಚಿನ್ಹೆಗಳನ್ನು ಗಮನಿಸಿ ಆಹಾರ ಹಾಗೂ ಜ್ಯೂಸ್ ಪಟ್ಟಿಯನ್ನು ನೀಡಬೇಕಾಗುತ್ತದೆ.

ಕೊನೆ ಹನಿ: ಹೀಗೆ ಪ್ರಕೃತಿದತ್ತ, ಸರಳ ಮಿತವ್ಯಯಿ ವಿಧಾನಗಳಿಂದ ಅಸ್ತಮಾವನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಿದೆ. ಅನ್ನವೇ ಅಮೃತ, ಅನ್ನವೇ ವಿಷ – ಆಹಾರವನ್ನು ನಿಸರ್ಗ ನೀಡಿದ ರೂಪದಲ್ಲೇ ಸೇವಿಸಿದರೆ ಅಮೃತ ಅದನ್ನು ವಿಕೃತಿ ಮಾಡಿ ಸೇವಿಸಿದರೆ ಅದೇ ವಿಷ.

Dr-Venkatramana-Hegde-nisargamane

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!