ನೈಸರ್ಗಿಕ ಆರೋಗ್ಯಕರ ಆಹಾರ

ಸಂತುಲಿತ ಹಗುರ ಅಹಾರಗಳ ಉಪಯೋಗ ಮತ್ತು ಪ್ರಯೋಜನಗಳು ಹಲವಾರು. ಔಷಧಿಯುಕ್ತ ಮತ್ತು ಸ್ವಾಭಾವಿಕೆ ಆಹಾರ ಪದಾರ್ಥಗಳು ನೈಸರ್ಗಿಕ ಆರೋಗ್ಕಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ ಮತ್ತು ಸಹಕಾರಿಯಾಗಿದೆ.

ಔಷಧಿಯುಕ್ತ ಮತ್ತು ನಿಸರ್ಗದತ್ತವಾದ ಆಹಾರ ಪದಾರ್ಥಗಳು ಅಗತ್ಯ ಖನಿಜಗಳು, ಪ್ರೋಟಿನ್‍ಗಳು, ಸಮೃದ್ದ ವಿಟಮಿನ್‍ಗಳು ಹಾಗೂ ಪ್ರಮುಖ ಆಂಟಿ ಆಕ್ಸಿಡಂಟ್‍ಗಳ ನೈಸರ್ಗಿಕ ಮೂಲವನ್ನು ಒಳಗೊಂಡಿದೆ. ಇವು ರಕ್ತ ಸಂಚಾರವನ್ನು ಸುಧಾರಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ದಗೊಳಿಸಿ ರೋಗ ಪ್ರತಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಇದು ದೇಹವನ್ನು ಪುನಶ್ಚೇತನಗೊಳಿಸಿ ಹಲವಾರು ರೋಗಗಳ ನಿರ್ಮೂಲನೆಗೆ ನೆರವಾಗುತ್ತದೆ. ಬೊಜ್ಜು, ಸ್ಥೂಲಕಾಯ ಹಾಗೂ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಸಹಕಾರಿ. ದೇಹವು ಶಕ್ತಿಯುತವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕರವಾಗಿಡಲು ಇವು ಸಹಾಯ ಮಾಡುತ್ತವೆ.
ಮೆಂತ್ಯ (ಫೆನುಗ್ರೀಕ್) : ಇದು ಪ್ರೊಟೀನ್‍ಗಳು, ವಿಟಮಿನ್ ಸಿ, ನಿಯಾಸಿನ್ ಮತ್ತು ಪೋಟ್ಯಾಷಿಯಂನನ್ನು ಒಳಗೊಂಡಿರುತ್ತದೆ. ಇದು ಅನೇಕ ದೋಷಗಳನ್ನು ಸರಿಪಡಿಸುತ್ತದೆ. ಕೊಲೆಸ್ಟರಾಲ್, ಮಧುಮೇಹ, ಮಲಬದ್ದತೆ, ಹೈಟ್ರೈಗ್ಲಿಸರೈಡ್ಸ್, ಸಂಧಿವಾತ, ಆಸ್ತಮಾ, ಉದರ ದೋಷ, ಉಸಿರಾಟ ತೊಂದರೆ ಹಾಗೂ ಮೂತ್ರಪಿಂಡ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿ.
ಬೆಳ್ಳುಳ್ಳಿ : ಇದನ್ನು ದಿವ್ಯ ಔಷಧ ಎಂದೇ ಪರಿಗಣಿಸಲಾಗಿದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತ ನಾಳಗಳನ್ನು ಅಗಲಗೊಳಿಸುತ್ತದೆ, ನಾಡಿ ಬಡಿತವನ್ನು ಕಡಿಮೆ ಮಾಡುತ್ತದೆ, ಅಸಮರ್ಪಕ ಹೃದಯ ಬಡಿತವನ್ನು ಸರಿಪಡಿಸುತ್ತದೆ. ಮಂಪರು, ಉಸಿರಾಟ ತೊಂದರೆ ಹಾಗೂ ಅನಿಲ ಸೇರುವುದನ್ನು ತಡೆಗಟ್ಟುತ್ತದೆ.
ತುಪ್ಪ (ಹಸುವಿನ ಶುದ್ಥ ತುಪ್ಪ) : ತುಪ್ಪ ಸಮೃದ್ದ ಆಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುತ್ತದೆ. ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಚೇತರಿಕೆಗೆ ಉತ್ತೇಜನ ನೀಡುತ್ತದೆ. ದೈಹಿಕ ಸಾಮಥ್ರ್ಯ ತ್ವರಿತವಾಗಿ ಪುನರ್ ಸ್ಥಾಪನೆಯಾಗಿಸುವ ಹಾಗೂ ದುರ್ಬಲತೆಯಿಂದ ನರಳುವವರನ್ನು ಕ್ಷಿಪ್ರವಾಗಿ ಚೇತರಿಸುವ ಗುಣ ಇದಕ್ಕಿದೆ. ಅಧಿಕ ಉದರ ಆಮ್ಲವನ್ನು ಸಮತೋಲನ ಮಾಡುವ ಹಾಗೂ ಹೊಟ್ಟೆಯಲ್ಲಿನ ಶ್ಲೇಷ್ಮ ಹೊದಿಕೆಯನ್ನು ನಿರ್ವಹಿಸಲು ಇದು ಸಹಕಾರಿ. ತುಪ್ಪವು ದೇಹದಲ್ಲಿನ ಲಿಪಿಡ್ ಪೊರೆಯನ್ನು ಪುನಶ್ಚೇತನಗೊಳಿಸಿ ದುರ್ಬಲ ಜೀರ್ಣತೆಯನ್ನು ಸರಿಪಡಿಸುತ್ತದೆ. ಇದು ನೆನೆಪಿನ ಶಕ್ತಿ, ಬುದ್ದಿಮತ್ತೆಯನ್ನು ಹೆಚ್ಚಿಸಿ, ಮೆದುಳಿನ ಕಾರ್ಯಗಳನ್ನು ವೃದ್ದಿಸುತ್ತದೆ.
ಶುಂಠಿ : ಇದರ ನೈಸರ್ಗಿಕ ಘಟಕಾಂಶಗಳು ಉತ್ತಮ ಪ್ರಮಾಣದ ಪೋಟ್ಯಾಷಿಯಂ, ಮ್ಯಾಗ್ನೆಸಿಯಂ, ಕಾಪರ್, ಮ್ಯಾಂಗನೀಸ್‍ನನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುವ ಚೇತರಿಕೆ ಶಕ್ತಿಯನ್ನು ಹೊಂದಿರುತ್ತದೆ. ಇದು ಮಂಪರು, ತಲೆ ಸುತ್ತುವಿಕೆ, ಶಿರೋಭ್ರಮಣೆ, ವಾಂತಿ ಒಳಗೊಂಡಂತೆ ಚಲನ ಅಸ್ವಸ್ಥತೆಯ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಸಹಕಾರಿ. ಪಚನ ಕ್ರಿಯೆ ತೊಂದರೆ, ಮೈಗ್ರೇನ್, ಸಂಧಿವಾತ, ಅಧಿಕ ರಕ್ತದೊತ್ತಡಗಳನ್ನು ತಡೆಗಟ್ಟುವಲ್ಲೂ ಇದು ಸಹಕಾರಿ. ವಾಯಬಾಧೆಯನ್ನು ನಿಯಂತ್ರಿಸಿ ಅತಿಸಾರವನ್ನು ತಡೆಗಟ್ಟುತ್ತದೆ ಹಾಗೂ ಶೀತ ಲಕ್ಷಣ, ಅಲರ್ಜಿ ಇತ್ಯಾದಿಯ ತೀವ್ರತೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.
ಜೇನು : ಇದು ಪ್ರಮುಖ ಪೋಷಕಾಂಶವಾಗಿದ್ದು, ಕಬ್ಬಿಣ, ಕ್ಯಾಲ್ಷಿಯಂ, ಫಾಸ್ಫರಸ್, ಪೋಟ್ಯಾಷಿಯಂನನ್ನು ಒಳಗೊಂಡಿದ್ದು, ಅನೇಕ ದೋಷಗಳನ್ನು ಗುಣಪಡಿಸುವ ಮತ್ತು ತಡೆಗಟ್ಟುವ ಬಹುತೇಕ ಸಿದ್ದ ಶಕ್ತಿಯನ್ನು ಒದಗಿಸುತ್ತದೆ. ಇದು ಕಣ್ಣುಗಳಿಗೆ ಒಳ್ಳೆಯದು, ಆಸ್ತಮಾ ನಿವಾರಣೆಗೆ ಸಹಕಾರಿ. ಶ್ವಾಸಕೋಶ ರೋಗಗಳ ನಿವಾರಣೆ, ಕಫ ತೆಗೆದು ಹಾಕುವಿಕೆಗೆ ಉತ್ತಮವಾದ ನೈಸರ್ಗಿಕ ಔಷಧಿ. ಇದು ಕೂದಲು ಬೆಳವಣಿಗೆಗೂ ಸಹಕಾರಿ. ಮಲಬದ್ದತೆ ಹಾಗೂ ವಿಪರೀತ ಹುಳಿತೇಗು ನಿವಾರಣೆಗೆ ಸೂಕ್ತ. ಜೇನು ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತಕಣಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ.
ಜೀರಿಗೆ : ರಕ್ತವನ್ನು ಶುದ್ದಗೊಳಿಸಿ ಹಿಮೋಗ್ಲೋಬಿನ್ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಅಜೀರ್ಣ, ಹೊಟ್ಟೆನೋವು ಮತ್ತು ಹೃದಯ ಸಂಬಂಧಿ ದೋಷಗಳ ನಿವಾರಣೆಗೆ ಇದು ಪ್ರಯೋಜನಕಾರಿ.
ನಿಂಬೆ: ರಕ್ತನಾಳಗಳು ಹಾಗೂ ಆರ್ಟರಿಗಳನ್ನು ಬಲಗೊಳಿಸುತ್ತದೆ ಹಾಗೂ ಆಂತರಿಕ ಮೂಲವ್ಯಾಧಿಯನ್ನು ತಡೆಗಟ್ಟುತ್ತದೆ. ಮೂತ್ರಪಿಂಡ, ಮೂತ್ರಕೋಶ ಹಾಗೂ ಉದರ ದೋಷಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ. ಅನೇಕ ರೋಗಗಳಿಗೆ ಇದು ಉಪಶಮನಕಾರಿ. ಇದು ಶಕ್ತಿಶಾಲಿ ಬ್ಯಾಕ್ಟೀರಿಯಾ ಪ್ರತಿರೋಧಕವಾಗಿದ್ದು, ಕಫವನ್ನು ನಿರ್ಮೂಲನೆ ಮಾಡುತ್ತದೆ ಹಾಗೂ ಮಲಬದ್ದತೆಯನ್ನು ಉಪಶಮನಗೊಳಿಸಿ ವಾಂತಿಯನ್ನು ತಡೆಗಟ್ಟುತ್ತದೆ.
ನಿಂಬೆ ಎಲೆಗಳು : ಇದು ಜೀರ್ಣಕ್ರಿಯೆ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಉತ್ತೇಜನ ನೀಡುತ್ತದೆ. ರಕ್ತದಿಂದ ವಿಷಯುಕ್ತ ವಸ್ತುಗಳನ್ನು ಹೊರ ಹಾಕಿ ಆರೋಗ್ಯಕರ ರೀತಿಯಲ್ಲಿ ರಕ್ತ ಪರಿಚಲನೆಗೆ ನೆರವಾಗುತ್ತದೆ. ಶ್ವಾಸಕೋಶ ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಗೆ ಇದು ಸಹಕಾರಿ. ಏಡ್ಸ್, ಕ್ಯಾನ್ಸರ್, ಡಯಾಬಿಟಿಸ್, ನರ ದೌರ್ಬಲ್ಯ, ರಕ್ತ ದೋಷಗಳು ಮತ್ತು ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿ.
ಅರಿಶಿಣ : ಇದು ರಕ್ತ ಶುದ್ದೀಕರಣಗೊಳಿಸಿ ಲಿವರ್ ಕಾರ್ಯ ನಿರ್ವಹಣಾ ಶಕ್ತಿಯನ್ನು ವೃದ್ದಿಸುತ್ತದೆ. ಇಡೀ ದೇಹವನ್ನು ಆರೋಗ್ಯ ಮತ್ತು ಕ್ರಿಯಾಶೀಲವಾಗಿರಿಸುವಲ್ಲಿ ಇದು ಸಹಕಾರಿ. ನೆಗಡಿ, ಶೀತ, ಕೆಮ್ಮು, ಊತ, ವಾಯುಬಾಧೆ, ಡಯಾಬಿಟಿಸ್, ಗಾಯ ಮತ್ತು ಚರ್ಮ ರೋಗ ಉಪಶಮನಕ್ಕೆ ಅರಿಶಿಣ ನೆರವಾಗುತ್ತದೆ.

ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ ೬೬,
ಶಾನ್‌ಬಾನ್ ಟ್ರೇಡರ‍್ಸ್ ಎದುರು, ತಡಂಬೈಲು
ಸುರತ್ಕಲ್-575014 ದೂ:9482249762
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!