Health Vision

Health Vision

SUBSCRIBE

Magazine

Click Here

ನಾರಾಯಣ ಹೆಲ್ತ್ ನಿಂದ ಚೇಂಜ್ ಆಫ್ ಹಾರ್ಟ್ ಅಭಿಯಾನ

ಬೆಂಗಳೂರು: ನಾರಾಯಣ ಹೆಲ್ತ್, ವಿಶ್ವ ಹೃದಯ ದಿನದ ಅಂಗವಾಗಿ ಚೇಂಜ್ ಆಫ್ ಹಾರ್ಟ್ ಎಂಬ ಒಂದು ವಾರದ ಅಭಿಯಾನ ಹಮ್ಮಿಕೊಂಡಿದೆ. ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿಸಂಗ್ರಹ ಚಿತ್ರಕಲಾ ಪ್ರದರ್ಶನ, ಸಾರ್ವಜನಿಕ ವೇದಿಕೆಗಳಲ್ಲಿ ಹಾರ್ಟ್ ಅಂಡ್ ಸೈಕಲ್ ಪ್ರತಿಷ್ಠಾಪನೆ, ಪ್ರಮುಖ ಸ್ಥಳಗಳಲ್ಲಿ ವಾಕಥಾನ್ ಮತ್ತು ಹೃದಯ ಪುನಶ್ಚೇತನ ಶಿಬಿರ ಒಳಗೊಂಡಿದೆ.

ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿಸಂಗ್ರಹ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ, 56 ಮಂದಿ ಉದಯೋನ್ಮುಖ ಕಲಾವಿದರ 100ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಕಲಾಕೃತಿಗಳ ಮಾರಾಟದಿಂದ ಬಂದ ಹಣದ ಶೇಕಡ 50ರಷ್ಟನ್ನು ನಾರಾಯಣ ಹೃದಯಾಲಯ ಚಾರಿಟಬಲ್ ಟ್ರಸ್ಟ್‍ಗೆ ಸಮರ್ಪಿಸಲಾಗುವುದು.

ಇನ್ನೊಂದು ಆಸಕ್ತಿದಾಯಕ ಹೃದಯ ಮತ್ತು ಸೈಕಲ್ ಅಳವಡಿಕೆ ಸಮಾರಂಭವನ್ನು ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಮತ್ತು ವೈಟ್‍ಫೀಲ್ಡ್‍ನ ಗ್ಲೋಬಲ್ ಟೆಕ್‍ಪಾರ್ಕ್ ಅವರಣದಲ್ಲಿ ನಡೆಸಲಾಗುವುದು. ಇದರ ಮುಖ್ಯವಾದ ಉದ್ದೇಶವೆಂದರೆ, ಹೃದಯಪೂರ್ವಕ ಹೃದಯ ಮತ್ತು ಆರೋಗ್ಯಕರ ನಡವಳಿಕೆಯ ನಡುವಿನ ಸಂಬಂಧವನ್ನು ತಿಳಿಸುವುದು. ಇದರಲ್ಲಿ ಪಾಲ್ಗೊಳ್ಳುವ ರೋಗಿಗಳು ಸೈಕಲ್ ಪೆಡಲ್ ತುಳಿದುಕೊಂಡು, ಅಳವಡಿಸಿರುವ ಹೃದಯ ಚಿತ್ರದ ಬಳಿಗೆ ಬರಬೇಕು. ಇದೇ ವೇಳೆ ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್‍ನಲ್ಲಿ, ವಾಕಾಥಾನ್ ಕೂಡಾ ಆಯೋಜಿಸಲಾಗಿದೆ. ಈ ವಾಕಥಾನ್, ಸೆಪ್ಟೆಂಬರ್ 30ರಂದು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಇದನ್ನು ಆಯೋಜಿಸಲಾಗಿದೆ.

Back To Top