ನಾಡಿ ಸ್ವರ : ಸಮಗ್ರ ಆರೋಗ್ಯ ತಿಳಿಸುವ ಹೊಸ ಆವಿಷ್ಕಾರ

ಪರ್ಯಾಯ ಚಿಕಿತ್ಸಾ ವಿಧಾನ; ಔಷಧ ರಹಿತ ಚಿಕಿತ್ಸೆ

ಹಿಂದಿನಿಂದ ಭಾರತೀಯ ವೈದ್ಯ ಪದ್ಧತಿಯಲ್ಲಿ, ವೈದ್ಯರು ವ್ಯಕ್ತಿಯ ನಾಡಿ ಪರೀಕ್ಷಿಸಿ, ಅವರ ದೇಹದ ಸ್ಥಿತಿ, ಬಂದಿರುವ ಕಾಹಿಲೆ, ಹೆಣ್ಣಾದರೆ ಆಕೆ ಗರ್ಭಿಣಿಯೇ, ಈ ರೀತಿ ಎಲ್ಲ ವಿವರಗಳನ್ನು ನಿಖರವಾಗಿ ಹೇಳುತ್ತಿದ್ದರು.ಕುಟುಂಬ ವೈದ್ಯರು, ಹಳೆಕಾಲದ ಅಳಲೆಕಾಯಿ ಪಂಡಿತರು, ಈಗಿನ ಅನೇಕ ವೈದ್ಯರಂತೆ ಸಾಲು ಸಾಲು ಲ್ಯಾಬ್ ಟೆಸ್ಟ್‍ಗಳು, ಎಕ್ಸ್‍ರೇ, ಸ್ಕ್ಯಾನಿಂಗ್ ಮಾಡಿಸುವ ಚೀಟಿ ಬರೆಯುತ್ತಿರಲಿಲ್ಲ.ರೋಗಿಯ ಮೇಲೆ ಟ್ರಯಲ್ ಅಂಡ್ ಎರರ್ ವಿಧಾನದಲ್ಲಿ ಔಷಧಿ/ಮಾತ್ರೆಗಳ, ಚುಚ್ಚುಮದ್ದುಗಳ ಪ್ರಯೋಗವನ್ನು ಮಾಡುತ್ತಿರಲಿಲ್ಲ.
ಸಂಸರು ಬರೆದಿರುವ ಮೈಸೂರು ಅರಮನೆಯ ಇತಿಹಾಸಕ್ಕೆ ಸಂಬಂಧಿಸಿದ, ರಣಧೀರ ಕಂಠೀರವರ ಜೀವನ ಕಥೆ -ವಿಗಡ ವಿಕ್ರಮರಾಯ ನಾಟಕ ಹಾಗೂ ಬಹು ಹಿಂದೆ ಕನ್ನಡ ಚಲನಚಿತ್ರ ಪರದೆ ಮೇಲೆ ವಿಜೃಂಭಿಸಿದ ರಣಧೀರ ಕಂಠೀರವ ಚಿತ್ರದಲ್ಲೂ, ಪಂಡಿತರು ರಾಜರ ನಾಡಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದ ವಿವರಗಳನ್ನು ಓದಿದ್ದೆ. ಹಾಗೂ ನೋಡಿದ್ದೆ. ಕಾಲಕ್ಕೆ ತಕ್ಕಂತೆ ಆಧುನಿಕತೆಯ ಬೇಡಿಕೆಗಳಂತೆ ಈ ಪದ್ಧತಿ ಅಪ್ ಡೇಟ್ ಮಾಡಲು ಸಾಧ್ಯವೇ ಎಂಬ ಯೋಚನೆ ಕೆಲವರಿಗೆ ಬಂದ ಪರಿಣಾಮ ಅದರ ಬಗ್ಗೆ ತಿಳಿದುಕೊಳ್ಳಲು ಕಳೆದ ವಾರ ನಾನು ಸ್ವತಃ ಹೋಗಿ, ಬೆಂಗಳೂರಿನ ಅನೇಕ ರೋಗಿಗಳು, ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಈ ಕ್ಷೇತ್ರದ ತಜ್ಞರನ್ನುಭೇಟಿಯಾದ ಪರಿಣಾಮ ಈ ಲೇಖನ.
ಔಷಧವಿಲ್ಲದೇ ನಿಮ್ಮನ್ನು ನೀವೇ ಗುಣಪಡಿಸಿಕೊಳ್ಳಿ ಎಂಬ ಫಲಕ ಈ ತಜ್ಞರ ಮೇಜಿನ ಮೇಲಿತ್ತು. ವೈದ್ಯರ ಆಗಮನದ ಮೊದಲು ಅಲ್ಲಿಗೆ ಬಂದಿದ್ದ ಕೆಲವು ರೋಗಿಗಳು-ಕಮ್- ವಿದ್ಯಾರ್ಥಿಗಳನ್ನು ಮಾತಾಡಿಸಿದೆ. ಸಾಫ್ಟ್ ವೇರ್ ಇಂಜಿನಿಯರ್ ವೀರೇಶ್ ಸ್ವ ಆಸಕ್ತಿಯಿಂದ ಇಲ್ಲಿ ಆಕ್ಯುಪ್ರೆಷರ್, ಆಕ್ಯುಪಂಚರ್, ಕಲರ್ ಥೆರಪಿಗಳನ್ನು ಅಭ್ಯಸಿಸುತ್ತಿದ್ದಾರೆ. ಇವರ ಪತ್ನಿ ಭಾರತಿ ಸಿರಗುಪ್ಪದಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ವಿವೃತ್ತ ಆಡಿಟರ್ ಎಸ್.ಪಿ.ಸುಧೀಂದ್ರ ಮಧುಮೇಹಿ. 16 ವರ್ಷ ಆಲೋಪಥಿ ಚಿಕಿತ್ಸೆ ಪಡೀತಿದ್ರು. 2 ವರ್ಷಗಳ ಹಿಂದೆ 2017ರಲ್ಲಿ ಏನಾದರೂ ಸಾಧಿಸಬೇಕೆಂಬ ಸ್ವ ಆಸಕ್ತಿಯಿಂದ ಇಲ್ಲಿಗೆ ಬಂದು ಕಲಿಯುತ್ತಾ, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ.ಪಿ.ಓ.ದಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಸುಧೀಂದ್ರ ಸಂದುಗಳಲ್ಲಿ ವೈರಲ್ ಆರ್ಥಿರೈಟಸ್ ಸಮಸ್ಯೆಯಿಂದ ಅನೇಕ ವರ್ಷಗಳಿಂದ ಬಳಲುತ್ತ, ನೋವು ನಿವಾರಕಗಳನ್ನು ನುಂಗಿ ನುಂಗಿ ಸುಸ್ತಾಗಿದ್ದರಂತೆ. 2 ತಿಂಗಳಿಂದ ಇಲ್ಲಿಗೆ ಬಂದು, ಎಲ್ಲಾ ಮಾತ್ರೆ ನಿಲ್ಲಿಸಿ, ಇಲ್ಲಿ ಚಿಕಿತ್ಸೆ ಪಡೆಯುತ್ತಾ ಗುಣ ಹೊಂದುತ್ತಿದ್ದಾರೆ.
ಆಕ್ಯುಪ್ರೆಷರ್ ಬಗ್ಗೆ ಡಾಕ್ಡರ್ ನಾರಾಯಣ್ ಅವರನ್ನ ಕೇಳಿದೆ. ಇದಕ್ಕೆ ಅವರು ಹೇಳಿದ್ದು –“5000 ವರ್ಷಗಳ ಹಿಂದೆ ಸೂಚೀಭೇದ ಎಂದು ಕರೆಯುತ್ತಿದ್ದರು. ದೇಹದ ಶಕ್ತಿ ಕೇಂದ್ರಗಳು 700 ಯಾವುದೋ ಪಾಯಿಂಟ್‍ಗಳಲ್ಲಿ ಶಕ್ತಿ ನಿಶ್ಚಲವಾಗಿರುತ್ತೆ. ಅಲ್ಲಿ ಸೂಜಿ ಚುಚ್ಚಿ ಅವುಗಳನ್ನು ಜಾಗೃತ ಮಾಡಲಾಗುತ್ತೆ.
ವರಮಾ (ಮರ್ಮ) ಚಿಕಿತ್ಸೆ, ಪ್ರತೀವ್ಯಕ್ತಿಯ ದೇಹದಲ್ಲಿರುವ 108 ಪಾಯಿಂಟ್‍ಗಳಲ್ಲಿ ನಡೆಯುತ್ತೆ. ತಮಿಳುನಾಡು- ಕೇರಳಗಳಲ್ಲಿ, ಎಲ್ಲಿ ಸಮುದ್ರವಿದೆಯೋ, ಅಲ್ಲಿಯ ಸಮಸ್ಯೆಗಳಿಗೆ ಈ ಚಿಕಿತ್ಸೆ ನಡೆಯುತ್ತೆ.
ಸೀಡ್ ಥೆರಪಿಯಲ್ಲಿ ವಿವಿಧ ಕಾಳುಗಳಿವೆ. ಹೆಸರುಕಾಳು, ರಾಜಮಾ ಹಾಗೂ ಮೆಂತ್ಯ ತಂಪು. ಮೆಣಸು ಉಷ್ಣ. ಅಕ್ಕಿ ಆಹಾಶ ತತ್ವ. ಉಪ್ಪು ನೋವು ಸೆಳೆಯುತ್ತೆ. ಯಾವ ಕೇಂದ್ರಗಳಲ್ಲಿ ಯಾರಿಗೆ ಯಾವ ನೋವಿದೆಯೋ ಅದನ್ನು ನಿವಾರಿಸಲು ಇವುಗಳನ್ನು ಬಳಸಿ ಕಾಳು ಚಿಕಿತ್ಸೆ ಮಾಡಲಾಗುತ್ತೆ.
ಕಲರ್ ಥೆರಪಿ:– ಸ್ಕೆಚ್ ಪೆನ್‍ಗಳ ಬಣ್ಣದಲ್ಲಿ 10 ಮೂಲತತ್ವಗಳ ಬಳಕೆ ಮಾಡ್ತೀವಿ. 5 ಶಾರೀರಿಕ 5ಮೆಟಾಫಿಸಿಕಲ್.5 ಮೂಲ +1 ಚಿಕಿತ್ಸೆ ಸಹ ಲಭ್ಯವಿದೆ. ಶುಶ್ರುತನ ಕಾಲದಲ್ಲೇ ಮೆದುಳಿನ ಶಸ್ತ್ರ ಚಿಕಿತ್ಸೆಯಿತ್ತು. ಆಲೋಪತಿ ಮಾನವನ ದೇಹವನ್ನು ಒಂದು ಯಂತ್ರದ ರೀತಿ ನೋಡುತ್ತೆ. ವೇದದ ಒಂದು ಶಾಖೆ ಆಯುರ್ವೇದ. 20 ವರ್ಷಗಳಿಂದ ಗಮನಿಸಿರುವಂತೆ ನಾಡಿ ಪರೀಕ್ಷೆ ಮುಖ್ಯ. ಆಲೋಪತಿಯಲ್ಲಿ ನೂರಾರು ಪರೀಕ್ಷೆ ಹೆಳುತ್ತಾರೆ. ಆದರೆ ದೇಹದ ಪಂಚಭೂತಗಳ ಸ್ಥಿತಿ ಗಮನಿಸಿ, ಎಲ್ಲೆಲ್ಲಿ ಅವು ನಿಶ್ಚಲವಾಗಿದೆ ನೋಡಿ, ಅವುಗಳನ್ನು ಜಾಗೃತಗೊಳಿಸಬೇಕಾಗಿದೆ. ಆಹಾರ, ಜೀವನಶೈಲಿ ಮಾನಸಿಕ ಹಾಗೂ ಆಧಾತ್ಮಿಕ ಸ್ಥಿತಿ ಗಮನಿಸಬೇಕು.

ಡಾ.ಕೆ.ಬಸವರಾಜ್ ಅವರನ್ನು ಅವರ ಈ ನಾಡಿಯಂತ್ರದ ಬಗ್ಗೆ, ನಾನು ನಾನಾ ಪ್ರಶ್ನೆಗಳನ್ನು ಕೇಳಿದಾಗ, ಅವರು ನೀಡಿದ ಉತ್ತರಗಳನ್ನು ಒಂದು ಕ್ರಮದಲ್ಲಿ ಇಲ್ಲಿ ದಾಖಲಿಸಿದ್ದೇನೆ. “ಆಲೋಪತಿ ಬಿಟ್ಟು ಉಳಿದ ಎಲ್ಲ ವೈದ್ಯರಿಗೂ ಈ ಯಂತ್ರ ಉಪಯುಕ್ತವಾಗುತ್ತೆ”. ವ್ಯಕ್ತಿಯ ದೇಹ ಪಂಚಭೂತಗಳಿಂದ ಆಗಿದ್ದು ಎಂದು ನಮಗೆಲ್ಲ ಗೊತ್ತಲ್ವೇ.ಈ ಡಾಕ್ಟರು ಹೇಳಿದಂತೆ “ವ್ಯಕ್ತಿಯ ದೇಹದ ಪಂಚಭೂತಗಳಲ್ಲಿ ಆಗುವ ವ್ಯತ್ಯಾಸವೇ ಮೂಲ ಕಾರಣ. ಇದನ್ನು ಹುಡುಕಿ, ಯೋಗ್ಯ ಉಪಚಾರ ಕೊಟ್ಟರೆ. ಸಮಸ್ಯೆ ಹತ್ತೇ ಇರಲಿ, ನೂರು ಇರಲಿ, ಎಲ್ಲ ಸಮಸ್ಯೆಗಳಿಗೂ ಚಿಕಿತ್ಸೆ ದೊರೆಯುತ್ತದೆ. ಪುರಾತನ ವೈದ್ಯಪದ್ಧತಿ, ವ್ಯಕ್ತಿಗೆ ಏನು ತೊಂದರೆ? ಆತನ ದೈಹಿಕ ತೊಂದರೆಯ ಮೂಲಕಾರಣ ಹುಡುಕಿ ಚಿಕಿತ್ಸೆ ನೀಡುತ್ತೆ.

   

ಈ ನಾಡಿಯಂತ್ತಕ್ಕೆ ಕೊಂಡಿಯಾಗಿರುವ ತಾಂತ್ರಿಕ ವ್ಯವಸ್ಥೆ ವಿವರವಾದ ವಿಶ್ಷೇಷಣಾ ವರದಿ ನೀಡುತ್ತದೆ”. ಓದುಗರೇ ಈ ಯಂತ್ರದಿಂದ ಹೊರಬರುವ ವರದಿಯ ಸ್ಯಾಂಪಲ್ ನಿಮಗೆ ನೀಡಲು, ಇತರ ರೋಗಿಗಳ ವಿವರ ಕೊಡಲು ಬಾರದು ಎಂದು ಈ ವೈದ್ಯರು ಹೇಳಿದಾಗ, ಸವಾಲಾಗಿ ನನಗೆ ಉತ್ತರಗಳು ಬೇಕೆನಿಸಿ, ನನ್ನದೇ ನಾಡಿ ಪರೀಕ್ಷೆ ಆ ಯಂತ್ರದಿಂದ ಮಾಡಿಸಿದೆ. ಓದುಗರಿಗೆ ಸರಿಯಾದ ಸಂಪೂರ್ಣ ಮಾಹಿತಿ ಕೊಡುವುದೇ ನನ್ನ ಉದ್ದೇಶ. ಹಾಗೂ ಇದು ಎಷ್ಟರ ಮಟ್ಟಿಗೆ ನನಗೆ ಮನವರಿಕೆಯಾಗುತ್ತದೆ ಎಂದು ಪರೀಕ್ಷಿಸಲು, ಹಾಗೂ ನಿಮಗೆ ಖಾತ್ರಿ ಪಡಿಸಲು ನನ್ನ ನಾಡಿ ಪರೀಕ್ಷೆ ವಿವರಗಳನ್ನು ಇಲ್ಲಿ ಕೊಡುತ್ತಿರುವೆ. ವರದಿಯ ಮೊದಲ ಪುಟದಲ್ಲಿ ವಿವಿಧ ಬಣ್ಣಗಳಲ್ಲಿ ನನ್ನ ದೇಹದ ಪಂಚಭೂತ ತತ್ವಗಳ ವಿಶ್ಲೇಷಣೆಯಿತ್ತು. ಆ ವೈದ್ಯರು ವಿವರಿಸಿದ್ದನ್ನ ನನ್ನ ಮಾತುಗಳಲ್ಲಿ ನಿಮಗೆ ವಿವರಿಸುತ್ತಿರುವೆ. ನನ್ನ ಅಗ್ನಿ ತತ್ವ ಉಳಿದ ತತ್ವಗಳಿಗಿಂತ ಹೆಚ್ಚಿದೆ. (ಕೆಂಪು ಬಣ್ಣದ ಭಾಗ). ಅಂದರೆ ಶಾಖ, ಉಷ್ಣ ಹೆಚ್ಚು. ಇದರಿಂದ ಮಾನಸಿಕ ಒತ್ತಡ, ರಕ್ತದ ಒತ್ತಡದ ಏರಿಳಿತ, ನಿದ್ರಾ ತೊಂದರೆಗಳು, ಆ್ಯಸಿಡಿಟಿ, ಗ್ರಾಸ್ಟ್ರಿಕ್ ತೊಂದರೆಗಳಿವೆ. ತಾಪಮಾನ ಉಷ್ಣತೆ ಕಡಿಮೆ ಮಾಡಿದ್ರೆ, ಒಂದೇ ಪಾಯಿಂಟ್ ಪರಿಹಾರ. ಎರಡನೆಯದು ಹಳದಿ ಬಣ್ಣದ ಭೂತತ್ವ. ಆಹಾರಕ್ಕೆ ಸಂಬಂಧಿಸಿ ಜೀರ್ಣಾಂಗದ ವ್ಯವಸ್ಥೆ ತೊಂದರೆ ಸೂಚಿಸುತ್ತಿದೆ. 3ನೇ ಜಲತತ್ವವನ್ನು ನೀಲಿ ಬಣ್ಣ ಪ್ರತಿನಿಧಿಸಿದೆ. ಜಲತತ್ವ ಜಾಸ್ತಿ ಇದ್ದು, ರೆಸ್ಟ್ ಲೆಸ್‍ನೆಸ್, ಮೂಳೆಗಳ ಸಾಂದ್ರತೆ ಕಡಿಮೆ ಆಗಿದೆ. ಹಾಗೆಯೇ ಆಕಾಶ ಹಾಗೂ ವಾಯು ತತ್ವಗಳ ವಿವರಗಳು ಇರುತ್ತದೆ. ಮುಂದಿನ ಪುಟದಲ್ಲಿ ದೇಹದ ಪ್ರಕೃತಿ ವಿಶ್ಷೇಷಣೆ ಇದೆ. ವಾತ, ಪಿತ್ತ, ಕಫ. ಈ ಮೂರರಲ್ಲಿ ನನ್ನ ದೇಹದಲ್ಲಿ ಕಫ ಪ್ರಕೃತಿ ಜಾಸ್ತಿ ಇದೆ. ಹಾಗೆಯೇ ವರದಿಯ ಮುಂದಿನ ಭಾಗದಲ್ಲಿ ದೇಹದ ಕಾರ್ಯಕ್ಷಮತೆ ವಿವರಿಸುತ್ತದೆ. ನನ್ನ ಸ್ನಾಯುಗಳು ಹಾಗೂ ಮಾಂಸಖಂಡದ ಚಲನೆ ಕಡಿಮೆಯಾಗಿದೆ. ಸುಸ್ತಾಗಿದೆ. ಸ್ನಾಯುಗಳು ಬಿಗಿಯಾಗಿವೆ. ಇದಕ್ಕಾಗಿ ನಡಿಗೆ, ವ್ಯಾಯಾಮ ಮಾಡಬೇಕು. ಪಡೆಯುವ ಸಾಮಥ್ರ್ಯ ಅಳವಡಿಕೆ ಕಡಿಮೆ ನನ್ನದು. ಸಾಧಾರಣ. ಆದರೆ ಪೌಷ್ಟಿಕತೆ ಕಡಿಮೆ ಅಥವಾ ಹೆಚ್ಚಾದರೆ ಕೊಬ್ಬು, ಕೊಲೆಸ್ಟರಾಲ್ ಹೆಚ್ಚುತ್ತೆ. ವಿಶ್ರಾಂತಿರಹಿತತನ, ನಿದ್ರಾಭಂಗ ಇವೆ. ದೇಹದ ವಿಷಕಾರಿ ವಸ್ತುಗಳ ಡಿ ಟಾಕ್ಸಿಫಿಕೇಶನ್ ಹಾಗೂ ಬೇಡದ್ದನ್ನು ವಿಸರ್ಜಿಸುವ ಸ್ಥಿತಿ ಚೆನ್ನಾಗಿದೆ. ಈ ಯಂತ್ರದ ವಿಶೇಷತೆ ವ್ಯಕ್ತಿಯ (ರೋಗಿಯ) ಯೋಚನಾಲಹರಿ ವಿವರಿಸುತ್ತೆ.
ಇದರಿಂದ ವ್ಯಕ್ತಿಯ ಮನೋವ್ಯಾಪಾರ ಹಾಗೂ ಮಾನಸಿಕ ಸ್ಥಿತಿ ಅರಿವಾಗುತ್ತದೆ. ಏನಾದರೂ ಮಾನಸಿಕ ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕೂ ಈ ವರದಿ ದಾರಿ ಮಾಡಿಕೊಡುತ್ತದೆ. ಈ thought process ದಾಖಲಾತಿ ಅನನ್ಯ. ಇನ್ನೂ ಯೋಚಿಸಿಲ್ಲ ವಿಭಾಗದಲ್ಲಿ, ಮನದ ಆಳದಲ್ಲಿರುವ ಭಯ ಹಾಗೂ ಮಾನಸಿಕ ಅವ್ಯವಸ್ಥೆಗಳ ಬಗ್ಗೆ ತಿಳಿಸುತ್ತೆ. ಇಲ್ಲಿರುವ ಚಿಕಿತ್ಸಾ ವಿಧಾನಗಳಾವುವು ಎಂದು ನಾನು ಕೇಳಿದ್ದಕ್ಕೆ ಅವರು ನೀಡಿದ ಉತ್ತರ ಆಕ್ಯುಪ್ರೆಷರ್, ಸೀಡ್ ಥೆರಪಿ (ಕಾಳು ಚಿಕಿತ್ಸೆ, ಕಲರ್ ಥೆರಪಿ (ಬಣ್ಣದ ಚಿಕಿತ್ಸೆ).ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ರೋಗಿ ಇವುಗಳನ್ನು ಅಳವಡಿಸಿಕೊಳ್ಳಬಹುದು. ಇಲ್ಲಿಗೆ ಬಂದು ಈ ನಾಡಿ ಯಂತ್ರದ ವರದಿ ಪಡದೊಡನೆ ಈ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಆರಂಭವಾಗುತ್ತದೆ. ನಿಮ್ಮ ದೇಹದ ಸ್ಥಿತಿ, ಇರುವ ರೋಗ ಅಥವ ನೋವಿನ ಪ್ರಮಾಣ ಆಧರಿಸಿ ಅವರು ಹೇಳಿದ ಸಮಯಕ್ಕೆ, ಹೇಳಿದಷ್ಟು ಸಲ ಇಲ್ಲಿಗೆ ಬರಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಯೋಗ ಹಾಗೂ ಪ್ರಾಣಾಯಾಮದ ಬಗ್ಗೆ ಸಹ ಇಲ್ಲಿ ತಿಳಿಸಿಕೊಡುತ್ತಾರೆ. ಹೆಚ್ಚಿನ ಯಾವುದೇ ತಪಾಸಣೆಗಳು, ರಕ್ತ ಹಾಗೂ ಮೂತ್ರ ಪರೀಕ್ಷೆಗಳು, ಎಕ್ಸರೇ ಹಾಗೂ ಸ್ಕ್ಯಾನಿಂಗ್‍ಗಾಗಿ ಇಲ್ಲಿ ಬರೆದುಕೊಡುವುದಿಲ್ಲ. ಇಲ್ಲಿ ಔಷಧರಹಿತವಾಗಿ, ನೋವು ನಿವಾರಕ ಮಾತ್ರೆ ಅಥವಾ ಚುಚ್ಚುಮದ್ದು ಇಲ್ಲದೇ ಪರ್ಯಾಯ ಚಿಕಿತ್ಸಾ ವಿಧಾನ ನಿಮಗೆ ಕಂಡುಬರುತ್ತದೆ.

ಡಾ. ಕೆ. ಬಸವರಾಜ್ ಅವರ ಪರಿಚಯ 

ಬಿ.ಇ (ಎಲೆಕ್ಟ್ರಾನಿಕ್ಸ್), ಕಂಪ್ಯೂಟರ್ ವಿಜ್ಞಾನದಲ್ಲಿ ಎಂ.ಟೆಕ್ ಹಾಗೂ ಪಿ.ಎಚ್.ಡಿ ಮಾಡಿರುವ ಬಸವರಾಜ್ ಸಂಶೋಧನೆಯಲ್ಲಿ ತೊಡಗಿದ್ದಾಗ, ಅವರನ್ನು ಪರ್ಯಾಯ ಔಷಧಿ ಕ್ಷೇತ್ರ ಸೆಳೆಯಿತು. ಹಿಂದಿನಿಂದ ನಾಡಿ ಕ್ಷೇತ್ರದ ಬಗ್ಗೆ ಆಸಕ್ತಿ ಬಂದು 10 ವರ್ಷ ಪಲ್ಸ್ ಅಭ್ಯಾಸ ಮಾಡಿ, 5 ವರ್ಷಗಳಿಂದ ಪಲ್ಸ್ ತಪಾಸಣೆ ಅಭ್ಯಾಸ ಮಾಡಿದ್ದಾರೆ. ಹೊರಗಿನ ಲಕ್ಷಣಗಳನ್ನು ನೋಡಿ ಔಷಧಿ ಕೊಡುವ ಬದಲು ರೋಗದ ಮೂಲ ಕಾರಣ ಪತ್ತೆ ಹಚ್ಚುವುದು ಮುಖ್ಯ ಎನಿಸಿತ್ತು. ಆಕ್ಯುಪಂಕ್ಚರ್‍ನಲ್ಲಿ ಎಂ.ಡಿ. ಮಾಡಿದ್ದಾರೆ. 5 ವರ್ಷಗಳಿಂದ ನಾಡಿ ಪರೀಕ್ಷೆಗೆ ಒಂದು ಆಧುನಿಕ ಯಂತ್ರ ಅಳವಡಿಸಿ, ಅದರ ಮೂಲಕ ಒಬ್ಬ ವ್ಯಕ್ತಿಯ ಕೈ ನಾಡಿ ಬಳಿ ಯಂತ್ರದ ನಾಳದ ಒಂದು ತುದಿ ತಗಲಿಸಿದಾಗ, ವ್ಯಕ್ತಿಯ ಸಂಪೂರ್ಣ ವಿವರಗಳು ದಾಖಲಾಗಿ, ವಿವರವಾದ ವರದಿ ಹೊರಬರುವಂತಹ ಒಂದು ವ್ಯವಸ್ಥೆ ರೂಪಿಸಿದ್ದಾರೆ. 2013ರಲ್ಲಿ ವಿನ್ಯಾಸ ಮಾಡಿ, ತಂತ್ರಜ್ಞ ಮಂಜುನಾಥ ಅವರ ಸಹಕಾರದಿಂದ, ಈ ವರ್ಷ ಒಂದು ಸಾಫ್ಟ್‍ವೇರ್ ಮಾಡಿ, 25-5-2018ರಂದು ಬೆಂಗಳೂರಿನಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಇದನ್ನು ಜನರೆದುರು ಪ್ರದರ್ಶಿಸಿದರು. ಆಗಸ್ಟ್ 5  2018 ರಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಈ ಯಂತ್ರವನ್ನ ಲಾಂಚ್ ಮಾಡಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಡಾ. ಕೆ. ಬಸವರಾಜ್
ಬಸವ ಅಕಾಡೆಮಿ, 451-452, 80 ಅಡಿ ರಸ್ತೆ, ಎಸ್‍ಬಿಎಂ ಬ್ಯಾಂಕ್ ಕಾಲೋನಿ, ಬನಶಂಕರಿ 1ನೇ ಹಂತ, ಬೆಂಗಳೂರು
Mobile : 9008277740

www.nadiswara.com

http://www.basavaacademy.com/
Email :basavaacupuncture@gmail.com

ಲೇಖಕರು :

ಎನ್.ವಿ. ರಮೇಶ್
ನಿವೃತ್ತ ಕಾರ್ಯಕ್ರಮ ನಿರ್ವಾಹಕ
ಆಕಾಶವಾಣಿ
ಮೊ.: 9845565238

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!