ಮೆದುಳಿನ ಆರೋಗ್ಯ- ಯಾವ ಆಹಾರವನ್ನು ಸೇವಿಸಬೇಕು?

ಮೆದುಳಿನ ಆರೋಗ್ಯ ಮತ್ತು ಸಮತೋಲನವನ್ನು ಕಾಪಾಡಲು ವಿಧವಿಧವಾದ ಪೋಷಕಾಂಶಗಳ ಅವಶ್ಯಕತೆಯಿದೆ. ಋತುಮಾನಕ್ಕೆ ತಕ್ಕಂತೆ ಲಭ್ಯವಾಗುವ ಎಲ್ಲಾ ತರಹದ ಹಣ್ಣು ತರಕಾರಿಗಳನ್ನು ಸೇವಿಸಬೇಕೆಂದು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಬಹುದು.

 ಮೆದುಳಿನ ಆರೋಗ್ಯಕ್ಕಾಗಿ ಯಾವ ಆಹಾರವನ್ನು ಸೇವಿಸಬೇಕು?

ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಂಡಿರುವ ಅಂಶವೇನೆಂದರೆ ದಿನನಿತ್ಯ ಸೇವಿಸುವ ಆಹಾರದಲ್ಲಿ ಹೇರಳವಾಗಿರುವ ಶರ್ಕರಗಳು, ಪ್ರೋಟೀನ್ ಹಾಗು ಕೊಬ್ಬಿನಾಂಶಗಳೆಂಬ ಪೋಷಕಾಂಶಗಳು ನಮ್ಮ ಮೆದುಳಿನ ಬೆಳವಣಿಗೆಗೆ ಹಾಗೂ ಮಾನಸಿಕ ಧೃಡತೆಗೆ ಸಹಾಯವಾಗುತ್ತವೆ ಎಂದು ಭಾವಿಸಿರುತ್ತೇವೆ. ಆದರೆ ಅದು ನಮ್ಮ ತಪ್ಪು ಕಲ್ಪನೆ, ಹೇಗೆ ನಮ್ಮ ನಾಲಿಗೆಗೆ ವಿಧವಿಧವಾಧ ರುಚಿಗಳ ಅವಶ್ಯಕತೆಯಿದೆಯೋ ಅದೇ ರೀತಿ ಮೆದುಳಿನ ಆರೋಗ್ಯ ಮತ್ತು ಸಮತೋಲನವನ್ನು ಕಾಪಾಡಲು ವಿಧವಿಧವಾದ ಪೋಷಕಾಂಶಗಳ ಅವಶ್ಯಕತೆಯಿದೆ. ವಿವಿಧ ಬಣ್ಣಗಳ ಹಣ್ಣು ಹಂಪಲುಗಳು, ಹಸಿರು ತರಕಾರಿಗಳು, ಸಿರಿಧಾನ್ಯಗಳು ಹಾಗು ದಿನ ನಿತ್ಯ ಸೇವಿಸುವ ಧವಸ ಧಾನ್ಯಗಳು ಈ ಎಲ್ಲ ಆಹಾರಗಳಲ್ಲಿ ಕಂಡುಬರುವ ಜೀವಸತ್ವಗಳು, ಖನಿಜಾಂಶಗಳು ಮತ್ತು ನಾರಿನಾಂಶಗಳೆಂಬ ಉಪಯುಕ್ತ ಪೋಷಕಾಂಶಗಳು ನಮ್ಮ ದೇಹದ ಸಮತೋಲನ ಕಾಪಾಡುವುದಲ್ಲದೆ ಮೆದುಳಿನ ಬೆಳವಣಿಗೆಯಲ್ಲು ಕಾರ್ಯಮಾಡುತ್ತವೆ.

ನಾವು ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ತರಕಾರಿಗಳು ಎಷ್ಟು ತರತರನಾದ ಬಣ್ಣಗಳನ್ನು ಹೊಂದಿರುತ್ತವೆಯೋ ಅಷ್ಟೇ ತರತರನಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವುಗಳೆಂದರೆ ಪ್ರಮುಖವಾಗಿ ಜೀವಸತ್ವಗಳು, ಖನಿಜಾಂಶಗಳು, ವರ್ಣಗಳು, ನಾರಿನಾಂಶಗಳು ಹಾಗು ಇತರ ಪೋಷಕಾಂಶಗಳು. ಇವುಗಳು ಆಹಾರದ ಬಣ್ಣಗಳಿಗೆ ಕಾರಣವಾಗಿದಲ್ಲದೇ ದೇಹಕ್ಕೆ ರೋಗನಿರೋಧಕ ಶಕ್ತಿಯಂತಹ ಗುಣಗಳನ್ನು ಒದಗಿಸುತ್ತವೆ. ಅದಕ್ಕೆ ನಮ್ಮ ಹಿರಿಯರು ಹಿಂದಿನ ಕಾಲದಿಂದ ಹಿಡಿದು ಈಗಲೂ ಕೂಡ ತಿಳಿಸುವುದೇನೆಂದರೆ, ಋತುಮಾನಕ್ಕೆ ತಕ್ಕಂತೆ ಲಭ್ಯವಾಗುವ ಎಲ್ಲಾ ತರಹದ ಹಣ್ಣು ತರಕಾರಿಗಳನ್ನು ಸೇವಿಸಬೇಕೆಂದು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಬಹುದು.

ಮೆದುಳಿನ ಬೆಳವಣಿಗೆಗೆ ಸೂಕ್ತವಾದ ಆಹಾರಗಳು ಹಾಗೂ ಅವುಗಳಲ್ಲಿರುವ ಪೋಷಕಾಂಶಗಳ ಪ್ರಾಮುಖ್ಯತೆ :

1.ಬಾದಾಮಿ/ Almond : ಬಾದಾಮಿಯನ್ನು ಸಾಮಾನ್ಯವಾಗಿ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿರುವ ಜಿಂಕ್ ಎಂಬ ಖನಿಜಾಂಶವು ಮೆದುಳಿನ ಆರೋಗ್ಯದ ಸಮತೋಲನ ಕಾಪಾಡುತ್ತದೆ, ಹಾಗೆಯೇ ಜೀವಸತ್ವ ಬಿ೬ ಅಂಶವನ್ನು ಒಳಗೊಂಡಿರುವ ಬಾದಾಮಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ನೆನಪಿನ ಶಕ್ತಿಯು ಹೆಚ್ಚಾಗುತ್ತದೆ. ಪ್ರತಿದಿನ ಬಾದಾಮಿಯನ್ನು ಒಂದು ಇಡೀ ರಾತ್ರಿ ನೆನೆಸಿ (ಅಥವಾ 5 ರಿಂದ 6 ಗಂಟೆಗಳ ಕಾಲ), ಮರುದಿನ ಬೆಳಿಗ್ಗೆ ಮೇಲಿನ ಸಿಪ್ಪೆಯನ್ನು ತೆಗೆದು ಸೇವಿಸುವುದರಿಂದ ಮೆದುಳಿನ ಕೋಶಗಳ (Brain cells) ಉತ್ಪಾದನೆ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಾಯಕಾರಿ.

2. ಸಿಪ್ಪೆ ಸಹಿತವಿರುವ ಧಾನ್ಯಗಳು/ Whole grain cereals & pulses : ಸಿಪ್ಪೆ ಸಹಿತ ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ದೇಹಕ್ಕೆ ಅತ್ಯಂತ ಉಪಯುಕ್ತವುಳ್ಳ ಪೋಷಕಾಂಶಗಳು ದೊರೆಯುತ್ತ್ತವೆ. ಅದರಲ್ಲಿಯು ಖನಿಜಾಂಶಗಳು, ಜೀವಸತ್ವಗಳು ಹಾಗೂ ನಾರಿನಾಂಶವು ಹೇರಳವಾಗಿ ಸಿಪ್ಪೆಯ ಭಾಗದಲ್ಲಿ ಶೇಖರಣೆಯಾಗಿರುತ್ತವೆ. ಸಾಮಾನ್ಯವಾಗಿ ನಾವು ಸೇವಿಸುವ ಧಾನ್ಯಗಳು ಸಿಪ್ಪೆ ರಹಿತವಾಗಿದ್ದು ಈ ಮೇಲಿನ ಪೋಷಕಾಂಶಗಳೆಲ್ಲ ಸಂಸ್ಕರಣಾ ಹಂತದಲ್ಲಿ ಸಿಪ್ಪೆ ಸಮೇತ (ತವಡು) ಖಳಚಿಕೊಂಡಿರುತ್ತವೆ. ಆದುದರಿಂದ ಸಿಪ್ಪೆ ಸಹಿತ ಧಾನ್ಯಗಳನ್ನು ಸೇವಿಸುವುದು ಹಾಗೂ ಸೂಕ್ತವಾದ ಆಹಾರ ತಯಾರಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಕೂಡ ಪ್ರಮುಖವಾಗಿದೆ. ಧಾನ್ಯಗಳನ್ನು/ಕಾಳುಗಳನ್ನು ನೆನೆಸಿ, ಮೊಳಕೆಯೊಡೆಸಿ, ನಂತರ ಬಾಂಡಲಿಯಲ್ಲಿ ಹುರಿಯುವುದರಿಂದ ಅಥವಾ ಹುದುಗಿಸುವಿಕೆಯಿಂದ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಒದಗುತ್ತವೆ.

ಸಿಪ್ಪೆ ಸಹಿತ ಧಾನ್ಯಗಳಲ್ಲಿರುವ ನಾರಿನಾಂಶವು ದೇಹದಲ್ಲಿ ಹೆಚ್ಚು ಸಮಯ ಜೀರ್ಣಕ್ರಿಯೆಯಲ್ಲಿ ಭಾಗವಹಿಸುತ್ತದೆ. ಆದುದರಿಂದ ನಮಗೆ ಬೇಗನೆ ಹಸಿವಾಗುವುದಿಲ್ಲ ಮತ್ತು ಹೆಚ್ಚು ಕಾಲ ಕ್ರಿಯಾಶೀಲವಾಗಿರುತ್ತೇವೆ. ಮಕ್ಕಳು ಇಂತಹ ಧಾನ್ಯಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಹಾಗೂ ಮೆದುಳಿಗೆ ಕೂಡ ಅವಶ್ಯಕ ಪ್ರಮಾಣದಲ್ಲಿ ಶಕ್ತಿ ದೊರೆಯುತ್ತಿರುತ್ತದೆ, ಇದರಿಂದ ಮಕ್ಕಳಲ್ಲಿ ಶಕ್ತಿ ಹೀನತೆಯು ಕೂಡ ಉಂಟಾಗುವುದಿಲ್ಲ. ಉದಾಹರೆಣೆಗೆ ಸಿರಿಧಾನ್ಯಗಳ ಬಳಕೆ – ರಾಗಿ, ಜೋಳ, ಸಾವೆ, ನವಣೆ ಇತ್ಯಾದಿ

 ಮೆದುಳಿನ ಆರೋಗ್ಯಕ್ಕಾಗಿ ಯಾವ ಆಹಾರವನ್ನು ಸೇವಿಸಬೇಕು?3.ನೆಲ್ಲಿಕಾಯಿ/ Amla : ’ಮೂರ್ತಿ ಚಿಕ್ಕದಿದ್ದರೂ ಕೀರ್ತಿ ದೊಡ್ಡದು’ ಎನ್ನುವಂತೆ ನೆಲ್ಲಿಕಾಯಿ ನೋಡಲು ಗಾತ್ರದಲ್ಲಿ ಚಿಕ್ಕದಿದ್ದರೂ ಅದರಲ್ಲಿರುವ ಪೋಷಕಾಂಶ ಜೀವಸತ್ವ ಸಿ ಅತ್ಯಂತ ಆರೋಗ್ಯಕಾರಿ. ’ಒಂದು ನೆಲ್ಲಿಕಾಯಿಯನ್ನು ಸೇವಿಸಿದರೆ 20 ಕಿತ್ತಳೆ ಹಣ್ಣುಗಳನ್ನು ಸೇವಿಸಿದಂv’, ಅಂದರೆ ಸುಮಾರು ಇಪ್ಪತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಜೀವಸತ್ವ ಸಿ ದೇಹಕ್ಕೆ ದೊರಕುತ್ತ್ತದೆ. ಹಾಗೆಯೇ ನೆಲ್ಲಿಕಾಯಿಯಲ್ಲಿ ಕಬ್ಬಿಣಾಂಶವು ಕೂಡ ಹೇರಳವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಮೆದುಳಿನ ಆರೋಗ್ಯವು ಸಮತೋಲನದಲ್ಲಿರುತ್ತದೆ. ಕೆಲವೊಮ್ಮೆ ಅತಿಯಾದ ಶ್ರಮ, ಮಾನಸಿಕ ಒತ್ತಡಗಳು ಮೆದುಳಿನ ಕೋಶಗಳನ್ನು ಕೊಂದು ಹಾಕುತ್ತವೆ ಮತ್ತು ಮೆದುಳಿನ ಗಾತ್ರವನ್ನು ಕೂಡ ಕಡಿಮೆ ಮಾಡಿತ್ತವೆ. ಅಂತಹ ಸಮಯದಲ್ಲಿ ಒಂದು ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮೆದುಳಿನ ಕೋಶಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ.

4. ಬೆರ್ರೀಸ್/ Berries : ಬೆರ್ರಿ ಗಳ ಸೇವನೆಯಿಂದ ಮಕ್ಕಳಲ್ಲಿ ನೆನಪಿನ ಶಕ್ತಿ, ಕಲಿಕಾ ಶಕ್ತಿ, ಜ್ಙಾಪಕ ಶಕ್ತಿಯು ಹೆಚ್ಚುತ್ತದೆ. ಇದಕ್ಕೆ ಕಾರಣ ಬೆರ್ರಿಗಳಲ್ಲಿರುವ ಜೀವಸತ್ವಗಳು, ಖನಿಜಾಂಶಗಳು ಮತ್ತು ಪಿಗ್ಮೆಂಟ್‌ಗಳು. ಉದಾಹರೆಣೆಗೆ ಸ್ಟ್ರಾ ಬೆರ್ರಿ, ರಾಸ್ಪ ಬೆರ್ರಿ, ಬ್ಲೂ ಬೆರ್ರಿ, ಬ್ಲಾಕ್ ಬೆರ್ರಿ ಇತ್ಯಾದಿ

5. ನಟ್ಸ್, ಒಣಗಿದ ಹಣ್ಣುಗಳು/ Nuts and dry fruits : ಇಂದಿನ ಕಾಲದಲ್ಲಿ Alzheimer’s disease ಎಂಬ ರೋಗವು ವೃದ್ಧರಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಮಾನ್ಯವಾಗಿದೆ. ಕಾರಣ ಕೆಲಸದ ಒತ್ತಡಗಳು, ಅತೀಯಾದ ಮಾನಸಿಕ ಒತ್ತಡಗಳು. ಆದ್ದರಿಂದ ನಾವು ಎಲ್ಲಾ ತರಹದ ಒಳ್ಳೆಯ ಆಹಾರಗಳನ್ನು ಸೇವಿಸುವುದರಿಂದ ಇಂತಹ ರೋಗಗಳನ್ನು ಬರದಂತೆ ತಡೆಯಬಹುದು. ಅದರಲ್ಲಿಯೂ ಬಾದಾಮಿ, ಗೋಡಂಬಿ, ವಾಲ್ ನಟ್, ಶೇಂಗಾ ಬೀಜಗಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಏಕೆಂದರೆ ಇವುಗಳಲ್ಲಿ ಗುಣಮಟ್ಟವುಳ್ಳ ಪ್ರೋಟಿನ್‌ಗಳಿರುತ್ತವೆ, ಇವುಗಳು ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಮಕ್ಕಳಿಗೆ ಪ್ರೋಟಿನ್‌ಗಳ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ರತಿನಿತ್ಯ ವಿಧವಿಧವಾದ ನಟ್ಸಗಳನ್ನು ಮಕ್ಕಳಿಗೆ ನೀಡಬೇಕು.

6. ಹಸಿರು ತರಕಾರಿಗಳು/ Green leafy vegetables : ಹಸಿರು ತರಕಾರಿಗಳಲ್ಲಿರುವ ಜೀವಸತ್ವ ಎ ಮತ್ತು ಕೆ ಗಳನ್ನು ಸೇವಿಸುವುದರಿಂದ ಮಕ್ಕಳ ಅರಿವಿನ ಶಕ್ತಿಯು ಹೆಚ್ಚಾಗುತ್ತದೆ ಹಾಗೂ ಮೆದುಳಿನ ಖಿನ್ನತೆಯನ್ನು ತಡೆಯುತ್ತವೆ.

7. ಹುದುಗಿಸಿದ ಆಹಾರ ಪದಾರ್ಥಗಳು / Fermented products: ಮೊಸರು, ಇಡ್ಲಿ, ದೋಸೆ ಇತ್ಯಾದಿಗಳಲ್ಲಿರುವ ದೇಹಕ್ಕೆ ಉಪಯುಕ್ತವಾಗುವ ಬ್ಯಾಕ್ಟೇರಿಯಾಗಳು ಮೆದುಳಿನ ಆರೋಗ್ಯವನ್ನು ಕಾಪಾಡುತ್ತವೆ, ಹಾಗೆಯೇ ಮನಸ್ಥಿತಿಯನ್ನು ಬದಲಾಯಿಸುತ್ತವೆ ಮತ್ತು ಖಿನ್ನತೆಯ ವಿರೋಧಿಗಳಾಗಿಯು ಕೂಡ ಕಾರ್ಯನಿರ್ವಹಿಸುತ್ತವೆ.

8. ನೀರು / Water : ಮೆದುಳಿನಲ್ಲಿರುವ ಕೋಶಗಳು ದೇಹದ ಇತರ ಕೋಶಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು ಉಪಯೋಗಿಸುತ್ತವೆ. ಆಹಾರಗಳಿಂದ ದೊರೆಯುವ ಶಕ್ತಿಯು ಎಲ್ಲಾ ಕೋಶಗಳಿಗೆ ಒದಗಬೇಕೆಂದರೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿರಲೇಬೇಕು. ಅದರಲ್ಲಿಯೂ, ಮಕ್ಕಳ ದೇಹದ ಬೆಳವಣಿಗೆ ಹಾಗು ಮೆದುಳಿನ ಕಾರ್ಯಗಳು ಕೂಡ ಅಧಿಕವಾಗಿದ್ದುದರಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಸೂಕ್ತ.ನಾವು ಯಾವಾಗಲು ನಮ್ಮ ದೇಹವನ್ನು ಹೆಚ್ಚು ಜಲಸಂಚಯನ ಮಾಡುವುದರಿಂದ ಮೆದುಳು ಕೂಡ ಅಷ್ಟೇ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.

9. ಮೀನು ಮತ್ತು ಮೀನಿನ ಪದಾರ್ಥಗಳು / Fish and fish products: ಪ್ರತಿಯೊಬ್ಬರು ತಿಳಿದಿರುವಂತೆ ಕೇವಲ ಕೆಲವು ಪದಾರ್ಥಗಳಲ್ಲಿ ದೊರೆಯುವ ಒಮೆಗಾ-3 ಫ್ಯಾಟಿ ಆಸಿಡ್ ಎಂಬ ಕೊಬ್ಬಿನಾಂಶವು ಮೀನಿನಲ್ಲಿ ಹೇರಳವಾಗಿ ದೊರೆಯುತ್ತದೆ. ಇದನ್ನು ಸೇವಿಸುವುದರಿಂದ ಮೆದುಳಿನ ಬೆಳವಣಿಗೆ ಹೆಚ್ಚಾಗುತ್ತದೆ ಅದರಲ್ಲಿಯು ಬೆಳೆಯುವ ಮಕ್ಕಳು ಮೀನನ್ನು ಸೇವಿಸುವುದರಿಂದ ಚುರುಕುತನ, ನೆನಪಿನ ಶಕ್ತಿ, ಏಕಗ್ರತಾ ಶಕ್ತಿಯು ಕೂಡ ಹೆಚ್ಚಾಗುತ್ತದೆ. ಅಷ್ಟೆ ಅಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಚೈತನ್ಯ ಆರ್. ಇಟಗಿ ಕಿರಿಯ ವಿಜ್ಞಾನಿ, ಆಹಾರ ಮತ್ತು ಪೋಷಣೆ `ಶ್ರೀ ದುರ್ಗಾ', ಎಂಐಜಿ-1-57, ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ ಸಮೀಪ, ದೊಡ್ಡನಾಯಕನ್‍ಕೊಪ್ಪ, ಧಾರವಾಡ-580008 ಮೊ.: 9449970666

ಚೈತನ್ಯ ಆರ್. ಇಟಗಿ
ಕಿರಿಯ ವಿಜ್ಞಾನಿ, ಆಹಾರ ಮತ್ತು ಪೋಷಣೆ
`ಶ್ರೀ ದುರ್ಗಾ’, ಎಂಐಜಿ-1-57,
ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ ಸಮೀಪ, ದೊಡ್ಡನಾಯಕನ್‍ಕೊಪ್ಪ, ಧಾರವಾಡ-580008
ಮೊ.: 9449970666

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!