ಮಾಸ್ಕ್ ಹೆಚ್ಚಿಸುತ್ತದೆ ರೋಗನಿರೋಧಕ ಶಕ್ತಿ..!

ಮಾಸ್ಕ್ ಹೆಚ್ಚಿಸುತ್ತದೆ ರೋಗನಿರೋಧಕ ಶಕ್ತಿ..! ಸರಿಯಾದ ಮಾಸ್ಕ್ ಧಾರಣೆ ಮಾಡಿಕೊಂಡು ತಾವೂ ಆರೋಗ್ಯವಾಗಿದ್ದು, ಬೇರೆಯವರ ಆರೋಗ್ಯವನ್ನೂ ಕಾಪಾಡಬೇಕೆಂಬುದು ನಮ್ಮ ಕಳಕಳಿ.

ಮಾಸ್ಕ್ ಹೆಚ್ಚಿಸುತ್ತದೆ ರೋಗನಿರೋಧಕ ಶಕ್ತಿ..!ಜಗತ್ತನ್ನೇ ನಡುಗಿಸಿರುವ ಕೊರೋನಾ ವೈರಾಣು ಬೇರೆಯವರಿಗೆ ಹರಡದಂತೆ ಮುಖಕವಚ ಅಥವಾ ಮಾಸ್ಕ್ ಧರಿಸುವುದು ಉತ್ತಮ ಹಾಗೂ ಖಡ್ಡಾಯ ಕೂಡಾ ಆಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ ಈಗ ಬಂದಿರುವ ಅಧ್ಯಯನ ವರದಿಯೊಂದರ ಪ್ರಕಾರ ಮಾಸ್ಕ್ ಧರಿಸುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡಾ ಹೆಚ್ಚಾಗಲಿದೆಯಂತೆ!

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಕಲ್‍ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು ಮಾಸ್ಕ್ ಧರಿಸುವುದರಿಂದ ಮತ್ತೊಂದು ದೊಡ್ಡ ಉಪಯೋಗ ಇದೆ ಎಂದು ಅಭಿಪ್ರಾಯಪಟ್ಟಿದೆ. ಆ ವರದಿಯ ಪ್ರಕಾರ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಫೇಸ್ ಮಾಸ್ಕ್ಗಳು ‘ವೆರೆಯೋಲೇಶನ್’ ನಂತೆ ಕೆಲಸ ಮಾಡಬಹುದು ಎಂದು ಹೇಳಲಾಗಿದೆ.

ವೇರಿಯೊಲೇಷನ್ ಅಥವಾ ಇನಾಕ್ಯುಲೇಷನ್ ಎಂದರೆ ಸಿಡುಬು (ವೇರಿಯೊಲಾ) ವಿರುದ್ಧ ರೋಗಿಯಿಂದ ರಕ್ಷಣಾತ್ಮಕ ಭರವಸೆಯೊಂದಿಗೆ ವ್ಯಕ್ತಿಯನ್ನು ರೋಗ ನಿರೋಧಕಗೊಳಿಸಲು ಮೊದಲು ಬಳಸಿದ ವಿಧಾನ. ಇದರಲ್ಲಿ ಸಿಡುಬಿನ ಗುಳ್ಳೆಗಳಿಂದ ನೀರನ್ನು ತೆಗೆದು ಬೇರೆಯವರಿಗೆ ಕೊಟ್ಟು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ.

ಇದರಿಂದ ವ್ಯಕ್ತಿಗೆ ಸಣ್ಣ ಪ್ರಮಾಣದ ರೋಗ ತಗುಲಿದರೂ ಸಹಾ ಅವನಿಗೆ ಪೂರ್ಣ ಪ್ರಮಾಣದ ರೋಗದಿಂದ ರಕ್ಷಣೆ ಸಿಗುತ್ತದೆ. ಸಿಡುಬಿಗೆ ಲಸಿಕೆ ಕಂಡು ಹಿಡಿಯುವವರೆಗೂ ಈ ವೆರೆಯೋಲೇಶನ್‍ಗೇ ಮೊರೆ ಹೋಗಲಾಗಿತ್ತು. ಈಗ ಕೊರೋನಾ ಸಂದರ್ಭದಲ್ಲಿ ನಾವು ಧರಿಸುವ ಮಾಸ್ಕ್ನಿಂದಲೂ ಸಹಾ ಅಂತಹುದೇ ರಕ್ಷಣೆ ಸಿಗಬಹುದು ಎನ್ನುವುದು ತಜ್ಞರ ಊಹೆಯಾಗಿದೆ.

ಒಳ್ಳೆಯ ಮಾಸ್ಕ್ ಸೋಂಕನ್ನು ದುರ್ಬಲಗೊಳಿಸುತ್ತದೆ :

ಈ ಕುರಿತು ತಜ್ಞರು ಹೇಳುವುದೇನೆಂದರೆ ಡ್ರಾಪ್ಲೆಟ್ ಮೂಲಕ ಹೊರಬರುವ ಸಾಂಕ್ರಾಮಿಕ ಅಂಶಗಳನ್ನು ಮಾಸ್ಕ್ ಫಿಲ್ಟರ್ ಮಾಡುತ್ತದೆ. ಸೀನುವಾಗ ಅಥವಾ ಕೆಮ್ಮುವಾಗ ಮಾಸ್ಕ್ ಧರಿಸಿದ್ದರೆ ಅದರಿಂದ ಹೊರಬರುವ ವೈರಾಣುಗಳ ಪ್ರಮಾಣ ಕೂಡಾ ಕಡಿಮೆಯಿರುತ್ತದೆ. ಹೀಗೆ ಕಡಿಮೆ ಪ್ರಮಾಣದಲ್ಲಿ ಹೊರಬಂದ ಸಾಂಕ್ರಾಮಿಕ ಅಂಶಗಳಿಂದ ಬೇರೆಯವರಿಗೆ ಸೋಂಕು ತಗುಲಿದರೂ ಸಹಾ ಅವರಲ್ಲಿ ವೈರಾಣುವಿನ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಳ್ಳುತ್ತದೆ. ಇದರಿಂದ ತೀವ್ರ ಅನಾರೋಗ್ಯ ಜನರನ್ನು ಬಾಧಿಸುವುದಿಲ್ಲ ಎನ್ನುವುದು ವಿಜ್ಞಾನಿಗಳ ಆಂಬೋಣ.

mask-eye-problem.ಹಾಗೆಯೇ ಮಾಸ್ಕ್ ಧರಿಸುವುದರಿಂದ ಕೊರೋನಾ ಸೋಂಕು ದುರ್ಬಲವಾಗುತ್ತದೆ ಎನ್ನಲು ತಜ್ಞರು ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಅದೇನೆಂದರೆ ಅರ್ಜೆಂಟೈನಾ ಹಡಗಿನಲ್ಲಿ ಇದ್ದವರಿಗೆ ಸರ್ಜಿಕಲ್ ಮಾಸ್ಕ್ ಹಾಗೂ ಎನ್ 95 ಮಾಸ್ಕ್ಗಳನ್ನು ನೀಡಲಾಗಿತ್ತು. ಮಾಸ್ಕ್ ಧಾರಣೆಯ ನಂತರ ಲಕ್ಷಣ ರಹಿತ ಸೋಂಕಿನ ಪ್ರಮಾಣವು ಶೇಕಡಾ 81ರಷ್ಟಿತ್ತು. ಆದರೆ ಸಾರ್ವತ್ರಿಕ ಮಾಸ್ಕ್ ಬಳಕೆ ಇಲ್ಲದ ಸಮಯದಲ್ಲಿ ಬೇರೆ ಹಡಗುಗಳಲ್ಲಿ ಸೋಂಕು ಸ್ಪೋಟಗೊಂಡಾಗ ಲಕ್ಷಣ ರಹಿತ ಸೋಂಕಿನ ಪ್ರಮಾಣವು ಕೇವಲ 20 ಪರ್ಸೆಂಟ್‍ನಷ್ಟು ಇತ್ತು. ಒಳ್ಳೆಯ ಮಾಸ್ಕ್ ಸೋಂಕನ್ನು ದುರ್ಬಲಗೊಳಿಸುತ್ತದೆ ಅನ್ನೋದನ್ನು ಇದು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9366 ಮಂದಿಗೆ ಸೋಂಕು ತಗುಲಿದ್ದು, 93 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟೂ ಸೋಂಕಿತರ ಸಂಖ್ಯೆ 494356 ಆಗಿದೆ. ಒಟ್ಟೂ ಮೃತರ ಸಂಖ್ಯೆ 7629 ಆಗಿದೆ. ಇದುವರೆಗೆ ಒಟ್ಟೂ 383077 ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 103631 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 805 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಸ್ಕ್ ಧರಿಸದೇ ಅಸಡ್ಡೆ ಮಾಡುವವರು, ದಂಡಕಟ್ಟುವ ಭಯಕ್ಕೆ ಹೆಸರಿಗಷ್ಟೇ ಪುಟ್ಟ ಬಟ್ಟೆ ಕಟ್ಟಿಕೊಂಡು ಓಡಾಡುವವರು ಇನ್ನಾದರೂ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಿ ಸರಿಯಾದ ಮಾಸ್ಕ್ ಧಾರಣೆ ಮಾಡಿಕೊಂಡು ತಾವೂ ಆರೋಗ್ಯವಾಗಿದ್ದು, ಬೇರೆಯವರ ಆರೋಗ್ಯವನ್ನೂ ಕಾಪಾಡಬೇಕೆಂಬುದು ನಮ್ಮ ಕಳಕಳಿ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!