ಮಾನಸಿಕ ಕಾಯಿಲೆ – ಮನಸ್ಸಿದ್ದವರಿಗೆ ಯಾರಿಗಾದರೂ ಬರಬಹುದು.

ಮನಸ್ಸು ಮತ್ತು ಮಾನಸಿಕ ಕಾಯಿಲೆ ಯಾರಿಗಾದರೂ  ಬರಬಹುದು. ಯಾವುದೆ ರೀತಿಯಾದ ಭಯ/ ಚಿಂತೆ/ ಕಳಂಕ ಬೇಡ. ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿದ್ದು ತಜ್ಞ  ಮಾನಸಿಕ ನರರೋಗ ತಜ್ಞರಿಂದ ಪರಿಹರಿಸಿಕೊಳ್ಳಬಹುದಾಗಿದೆ.

mental-stressಖುಷಿ ಅಥವಾ ಆನಂದ ಅಥವಾ ಸಂತೋಷ ಅನ್ನುವುದು ಉದ್ಭವವಾಗುವುದು ನಮ್ಮಲ್ಲಿ ಅತೀ ಉತ್ತುಂಗುದಲ್ಲಿರುವ (ಅಂದರೆ ಮಿದುಳಿಗಿಂತ ಮೇಲಿರುವ) ಅತೀ ಸೂಕ್ಷ್ಮವಾದ ಮನಸ್ಸಿನಿಂದ. ಹಾಗಾದರೆ ಸೂಕ್ಷ್ಮ ಎಂದಾದಲ್ಲಿ ನಮಗೆ ಥಟ್ ಅಂತ ಮನಸ್ಸಿಗೆ (ನೆನಪಿಗೆ) ಹೊಳೆಯುವುದು ಎರಡು ವಿಚಾರ-ಒಂದು ಅದಕ್ಕೆ ಕಾಳಜಿ ಬಹಳ ಬೇಕು ಮತ್ತು ಎರಡನೆಯದು ಅದು ಅತೀ ಬೇಗ ಸಮಸ್ಯೆಗೊಳಗಾಗಬಹುದು. ಅಂದರೆ ಈ ಸದೃಢವಾದ ಶರೀರದ ಮೇಲಿರುವ (ಮಿದುಳಿಗಿಂತ ಮೇಲೆ) ಮನಸ್ಸಿಗೂ ಕೂಡ ಶರೀರದಂತೆ ಸಮಸ್ಯೆಗೊಳಗಾಗಬಹುದು.

ಹಾಗಿದ್ದರೆ ಯಾವುದು ಈ ಕಾಣದ ಮನಸ್ಸಿಗೆ ಕಾಡುವ ಕಾಯಿಲೆ ಅಥವಾ ಸಮಸ್ಯೆ? ಮತ್ತು ಯಾರಲ್ಲಿ ಕಂಡು ಬರುತ್ತದೆ? ಒಂದು ವೇಳೆ ಕಂಡು ಬಂದರೆ ಪರಿಹಾರವಿದೆಯೆ?  ಮಿದುಳಿನ ಕ್ರಿಯೆ ಮನಸ್ಸಿನ ರೂಪದಲ್ಲಿ ಕಾಣಬಹುದು, ಅಂದರೆ ಮನಸ್ಸಿನ ಕ್ರಿಯೆಯಾದ ಅನುಭವಗಳು, ಆಸೆಗಳು, ವಿಚಾರಗಳು, ಸ್ಮರಣೆ, ಉದ್ದೇಶಗಳು ಮತ್ತು ವೈಯಕ್ತಿಕ ಅನುಭವಗಳೆಲ್ಲ ಮಿದುಳಿನ ನರ ಸಮೂಹದಿಂದ ಉತ್ಪತ್ತಿಯಾದರೂ ಮಿದುಳಿನಂತೆ ಅದು ಒಂದು ವಸ್ತುವಲ್ಲ. ಸರಳವಾಗಿ ಹೇಳುವುದಾದರೆ ಅಣು ಮಟ್ಟದ ಭೌತಿಕ ನಿಯಮಗಳಿಂದ ಸ್ವಭಾವ ಮಟ್ಟವನ್ನು ಸಪೂರ್ಣವಾಗಿ ಉಹಿಸಿಕೊಳ್ಳಲಾಗುವುದಿಲ್ಲ.

ಮಿದುಳು ಗ್ರಹಿಕೆ, ಭಾವನೆ ಮತ್ತು ಅರಿವನ್ನು ಪ್ರತಿಬಿಂಬಿಸಿದರೆ ಮನಸ್ಸು ವೈಯಕ್ತಿಕ ಅನುಭವಗಳಾದ ಜಾಗೃತಿ ಮತ್ತು ಅರ್ಥವನ್ನು ಪ್ರತಿಬಿಂಬಿಸುತ್ತದೆ. ಇದರಿಂದ ನಮಗೆ ಅರ್ಥವಾಗುವುದೇನೆಂದರೆ ಮಿದುಳು ಮತ್ತು ಮನಸ್ಸು ಬೇರೆಯಾದರೂ ಅವುಗಳ ಕ್ರಿಯೆ ಒಂದರಮೇಲೊಂದು ಅವಲಂಬಿತವಾಗಿವೆ ಹಾಗು ಪೂರಕವಾಗಿ ಕೆಲಸ ಮಾಡುತ್ತವೆ.

ಈ ಶರೀರದ ಮೇಲೆ ಇರುವ ಒಂದು ಸೂಕ್ಷ್ಮ ಮನಸ್ಸಿಗೂ ಶಾರೀರಿಕ ಕಾಯಿಲೆಯ ಹಾಗೆ ಅನಾರೋಗ್ಯ ಕಾಣಬಹುದು. ಮಾನಸಿಕ ಕಾಯಿಲೆಯು (ಮನಸ್ಸಿಗೆ ಸಂಬಂಧಪಟ್ಟ ಕಾಯಿಲೆ) ಹೆಚ್ಚು-ಕಡಿಮೆ ಯಾವುದೆ ಭೇದ-ಭಾವ ಇಲ್ಲದೆ ಹೆಣ್ಣಾಗಲಿ-ಗಂಡಾಗಲಿ, ಕಿರಿಯರೆ ಬರಲಿ – ಹಿರಿಯರೆ ಇರಲಿ, ಬಡವನಿರಲಿ-ಶ್ರೀಮಂತನಿರಲಿ, ನಗರದಲ್ಲಿರಲಿ-ಗ್ರಾಮದಲ್ಲಿರಲಿ ಯಾರಲ್ಲಿಯಾದರು ಕಾಣಬಹುದು ಅಥವ ಕಾಡಬಹುದು. ಒಟ್ಟಾರೆ ಹೇಳುವುದಾದರೆ ಮನಸ್ಸಿದ್ದವರಿಗೆ ಯಾರಿಗಾದರೂ ಮಾನಸಿಕ ಕಾಯಿಲೆ ಬರಬಹುದು.

1. ಮಕ್ಕಳಲ್ಲಿ ಕಾಣು/ಕಾಡುವಂತಹ ಕಾಯಿಲೆಗಳು:

ಹೆದರುವುದು, ಹೆಬ್ಬೆಟ್ಟು ಚೀಪುವುದು, ಉಗುರು ಕಡಿಯುವುದು, ಹಾಸಿಗೆ ಒದ್ದೆ ಮಾಡುವುದು, ಸ್ವಭಾವದ ಸಮಸ್ಯೆ (ಹಠ ಮಾಡುವುದು, ಕಿರಿಕಿರಿ, ಇದಿರು ಮಾತಾಡುವುದು ಇತ್ಯಾದಿ), ಶಾಲೆಯ ಭಯ, ಪದೇ-ಪದೇ ಕೇಳಿದ್ದೆ ಕೇಳುವುದು (ಗೀಳು ಇರಬಹುದು), ಸುಳ್ಳು ಹೇಳುವುದು, ಕದಿಯುವುದು, ಒಬ್ಬನೆ/ಳೆ ಯಾರ ಜೊತೆ ಬೆರೆಯದೆ ಆಟವಾಡುವುದು, ಅತೀ ಚಟುವಟಿಕೆಯಿಂದಿರುವುದು, ಏಕಾಗ್ರತೆಯ ಕೊರತೆ, ಕಲಿಕಾ ಸಮಸ್ಯೆ, ಪ್ರಾಣಿ ಹಿಂಸೆ, ಕೀಳರಿಮೆ, ಖಿನ್ನತೆ, ಆತ್ಮಹತ್ಯೆ ವಿಚಾರ ಮತ್ತು ಪ್ರಯತ್ನ, ನಿದ್ರಾಹೀನತೆ, ಪ್ರಜ್ಞೆ ತಪ್ಪುವುದು, ದುಷ್ಚಟಗಳು (ಮದ್ಯಪಾನ, ಧೂಮಪಾನ, ಗಾಂಜಾ ಸೇವನೆ ಇತ್ಯಾದಿ), ಅನಾವಶ್ಯಕ ಖರ್ಚು ಹಾಗು ಬೇಜವಾಬ್ದಾರಿತನ.

2. ಹದಿಹರೆಯ ವಯಸ್ಕರಲ್ಲಿ:

ಗುರುತಿನ ಗದ್ದಲ/ ಕಳವಳ , ದುಷ್ಚಟಗಳು (ಮದ್ಯಪಾನ, ಧೂಮಪಾನ, ಮಾದಕ ವಸ್ತು ಸೇವನೆ), ಭಯ (ಸಾಮಾಜಿಕ, ಸಂದರ್ಭಿಕ, ಎತ್ತರ, ಭವಿಷ್ಯದ ಇತ್ಯಾದಿ), ಗೀಳು (ಪದೆ-ಪದೇ ಮಾಡಿದ್ದೆ ಮಾಡುವುದು ಉದಾಹರಣೆಗೆ ಕೈ ತೊಳೆಯುವುದು, ಎಣಿಸುವುದು, ವಿಚಾರ ಇತ್ಯಾದಿ), ತೀವ್ರ ದುಃಖ/ ಖಿನ್ನತೆ ಮತ್ತು ಆತ್ಮಹತ್ಯೆ ವಿಚಾರ ಹಾಗು ಪ್ರಯತ್ನ, ದುಂದು ವೆಚ್ಚ, ಛಿದ್ರಮನಸ್ಥಿತಿ (ಸಂಶಯ ಪಡುವುದು), ಪ್ರಜ್ಞೆ ತಪ್ಪುವುದು ವಯಸ್ಕರಲ್ಲಿ, ದುಷ್ಚಟಗಳು (ಮದ್ಯಪಾನ, ಧೂಮಪಾನ, ಮಾದಕ ವಸ್ತು ಸೇವನೆ), ಭಯ (ಸಾಮಾಜಿಕ, ಸಂದರ್ಭಿಕ, ಎತ್ತರ, ಭವಿಷ್ಯೆಯ ಇತ್ಯಾದಿ), ಗೀಳು (ಪದೇ-ಪದೇ ಮಾಡಿದ್ದೆ ಮಾಡುವುದು ಉದಾಹರಣೆಗೆ ಕೈ ತೊಳೆಯುವುದು, ಎಣಿಸುವುದು, ವಿಚಾರ ಇತ್ಯಾದಿ), ತೀವ್ರ ದುಃಖ/ ಖಿನ್ನತೆ ಮತ್ತು ಆತ್ಮಹತ್ಯೆ ವಿಚಾರ ಹಾಗು ಪ್ರಯತ್ನ, ದುಂದು ವೆಚ್ಚ, ಛಿದ್ರಮನಸ್ಥಿತಿ (ಸಂಶಯ ಪಡುವುದು), ಪ್ರಜ್ಞೆ ತಪ್ಪುವುದು ವಯಸ್ಕರಲ್ಲಿ, ಸಾಂಸಾರಿಕ ಸಮಸ್ಯೆಗಳು, ಲೈಂಗಿಕ ಸಮಸ್ಯೆಗಳು.

3. ವ್ರದ್ಧಾಪ್ಯದಲ್ಲಿ:

ಒಂಟಿತನ, ಸಾವಿನ ಭಯ ವಿಶೇಷವಾದ ಭಯ, ಮರೆವು ಅಥವಾ ಅರಳು-ಮರಳು, ದುಃಖ (ವಿಶೇಷವಾಗಿ ಆತ್ಮೀಯರನ್ನ ಕಳೆದುಕೊಂಡಾಗ)/ ಕೀಳರಿಮೆ/ ಖಿನ್ನತೆ, ಆತ್ಮಹತ್ಯೆ ವಿಚಾರ ಅಥವಾ ಪ್ರಯತ್ನ, ಶಾರೀರಿಕ ಕಾಯಿಲೆಗೆ ಸಂಬಂಧಪಟ್ಟ ಮಾನಸಿಕ ಸಮಸ್ಯೆಗಳು, ಸಂಶಯ, ದುಷ್ಚಟಗಳು (ಮದ್ಯಪಾನ, ಧೂಮಪಾನ ಇತ್ಯಾದಿ), ನಿದ್ರಾಹೀನತೆ.

ಮೇಲಿನ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿದ್ದು ತಜ್ಞ  ಮಾನಸಿಕ ನರರೋಗ ತಜ್ಞರಿಂದ ಪರಿಹರಿಸಿಕೊಳ್ಳಬಹುದಾಗಿದೆ. ಯಾವುದೆ ರೀತಿಯಾದ ಭಯ/ ಚಿಂತೆ/ ಕಳಂಕ ಬೇಡ. ತಿಳಿಯಿರಿ ಮತ್ತು ಸಂಬಂಧಪಟ್ಟವರಿಗೆ ತಿಳಿಸಿರಿ.

ಮನಸ್ಸು ಮತ್ತು ಮಾನಸಿಕ ಕಾಯಿಲೆಯ ವಿಶೇಷ ಸೂಚನೆ:

Stress1. ಮನಸ್ಸು ಮತ್ತು ದೇಹ ಬದುಕಿನ ಅವಿಭಾಜ್ಯ ಅಂಗಗಳು. ಅವೆರಡು ಒಂದಕ್ಕೊಂದು ಪೂರಕ ಹಾಗು ಅವಲಂಬಿತವಾಗಿವೆ. ಒಂದಕ್ಕಾದ ಆಘಾತ ಅಥವಾ ಕಾಯಿಲೆ ಇನ್ನೊಂದರ ಮೇಲೆ ಪ್ರಭಾವ ಪ್ರತಿಬಿಂಬಿಸಬಹುದು.

2. ಮಾನಸಿಕ ಕಾಯಿಲೆಗೆ ಮದ್ದು ಅಥವಾ ಚಿಕಿತ್ಸೆ ಇಲ್ಲ ಅನ್ನುವುದು ಹಳೆಯ ಮಾತು. ಇದಕ್ಕೆ ಖಂಡಿತ ಚಿಕಿತ್ಸೆ ಇದೆ ಈಗಿನ ಮಾತು.

3. ಮಾನಸಿಕ ಕಾಯಿಲೆಯು ಭೂತ ಪ್ರೇತದ ಕಾಟವೆಂದು ಭಯ ಪಡುವುದಾಗಲಿ, ಕಾರಣವಿಲ್ಲದೆ ಮೈಸೊಕ್ಕಿನಿಂದ ಮಾಡುತ್ತಿದ್ದಾನೆ/ ಳೆ ಎಂದು ಅಸಡ್ಡೆ ತೋರುವುದಾಗಲಿ ಮಾಡದೆ, ಮನೆಯವರು ರೋಗಿಯ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಸ್ವಾಭಾವಿಕ ಬದುಕಿಗೆ ಯತ್ನಿಸಬೇಕು.

4. ಮಾನಸಿಕ ಅಸ್ವಸ್ಥರಿಗೆ ನಿಯಮಿತ ಆಹಾರ-ಜೌಷಧಿಗಳನ್ನು ಮನೆಯವರೇ ಸ್ವತಃ ಕೊಡಬೇಕು.

5. ವೈದ್ಯರ ಸಲಹೆ ಇಲ್ಲದೆ ಜೌಷಧಿಗಳನ್ನು ನಿಲ್ಲಿಸುವುದಾಗಲಿ, ಮುಂದುವರೆಸುವುದಾಗಲಿ ಅಥವಾ ಹೆಚ್ಚಿಸುವುದಾಗಲಿ ಮಾಡಬಾರದು.

dr-Bhaskar-Mara

ಡಾ. ಭಾಸ್ಕರ್ ಪು. ಮಾರಾ
ಮಾನಸಿಕ ನರರೋಗ ತಜ್ಞರು ಹಾಗೂ ಯೋಗ ಪ್ರವೀಣರು
ಕ್ಷೇಮಾ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್,
1ನೇ ಮಹಡಿ, ಮಹಂತಶ್ರೀ ಕಾಂಪ್ಲೆಕ್ಸ್,
ಕರ್ನಾಟಕ ಬ್ಯಾಂಕ್ ಪಕ್ಕ, ಕಂಠಿ ವೃತ್ತ,
ಇಳಕಲ್, ಬಾಗಲಕೋಟೆ-587125
ಮೊ: 96206 35142 ಇಮೇಲ್ : bmara21@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!