ಮಳೆಗಾಲದಲ್ಲಿ ಆರೋಗ್ಯ ಕಾಳಜಿ ಹಾಗೂ ಅಹಾರ

ಎನ್.ವ್ಹಿ ರಮೇಶ್
ಕಾರ್ಯಕ್ರಮ ಸಂಯೋಜಕರು,
ಆರೋಗ್ಯ ನಂದನ ಯೋಜನೆ.
ಮೊ: 98455-65238

ಮಳೆಗಾಲದ ಪ್ರವೇಶ:- ಬೇಸಿಗೆಯ ಕಾವಿನಿಂದ ಮುಕ್ತಿ ಎಂದುಕೊಳ್ಳುತ್ತಾರೆ ಜನ ಮಳೆಗಾಲ ಬಂದಾಗ. ಈ ಕಾಲ. ಮಳೆಗಾಲದಲ್ಲಿ ಹರಿವ ನೀರಿನಲ್ಲಿ ಕಾಗದದ ಮಟ್ಟ ದೋಣಿಗಳನ್ನು ತೇಲಿ ಬಿಡುವಾಗ ಹೊರಗೆ ಮಳೆ ಸುರಿದಾಗ, ಬಿಸಿ ಬಿಸಿ ಪಕೋಡಾಗಳನ್ನು, ಮಿಚ್ಚಿ, ಭಜೆ, ಬೋಂಡಾ, ಬಜ್ಜಿಗಳನ್ನು, ಸಮೋಸಗಳನ್ನು ಸ್ಯಾಂಡ್‍ವಿಜ್‍ಗಳನ್ನು ತಿನ್ನುವ ಬಯಕೆ. ಮಳೆ ಇದ್ದಾಗ ಜೀವನ ಸುಂದರ ಹಾಗೂ ವರ್ಣರಂಜಿತ ಕಪ್ಪು ಮೋಡಗಳು, ಶಕ್ತಿಯುತ ಗಾಳಿ, ಭಾರಿ ಮಳೆ, ಆಕರ್ಷಕ ಹವಾಮಾನ, ಆದರೆ ಈ ಶೃಂಗಾರಮಯ ಸಾಹಸ ಶಿಶುಗಳು ಹಾಗೂ ಶಾಲಾ ಮಕ್ಕಳನ್ನು ಹೊಂದಿದ ಪ್ರತಿದಿನ ಪಾಲಕರಿಗೆ ನಿದ್ರಾಹೀನ ರಾತ್ರಿಗಳಾಗುತ್ತವೆ. ಮಕ್ಕಳಿಗೆ ಹಗಲೂ ರಾತ್ರಿ ಮೈ ಮುಚ್ಚುವ ಬಟ್ಟೆಗಳನ್ನು ಹಾಕಿ ರಾತ್ರಿ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಿಸಿ ಜ್ವರವನ್ನು ಆಲಕ್ಷಿಸಬೇಡಿ. ಸತತ ಮಳೆ, ಪ್ರವಾಹ ತುಂಬಿ ಉಕ್ಕಿ ಹರಿಯುವ ಒಳ ಚರಂಡಿಗಳ ಕೊಳೆತ ಕಸ, ಅನೇಕ ರೋಗಗಳನ್ನು ತರುತ್ತವೆ. ಆದರೆ ತಣ್ಣನೆಯ ಶೀತ ಹವೆ, ಆಹಾರದಲ್ಲಿ ವಿಷ, ಅತಿ ಭೇದಿ, ಆಮಶಂಕೆ, ಕಾಲರಾ, ಅಪಾಯ ತರುತ್ತದೆ. ಮಳೆಗಾಲದ ಆಹಾರ:- ಆರೋಗ್ಯಕರ ಜೀವನ ಶೈಲಿಗೆ, ಪೌಷ್ಠಿಕ ಹಾಗೂ ಶುದ್ಧ ಆಹಾರ ತಿನ್ನಬೇಕು. ಈ ಕಾಲದಲ್ಲಿ ನಾವು ತಿನ್ನುವ ಆಹಾರ ಹಾಗೂ ಕುಡಿಯುವ ನೀರಿನ ಬಗ್ಗೆ, ಕಾಳಜಿ ವಹಿಸಬೇಕು. ಮಕ್ಕಳಿಗೆ ಡಾಲ್, ಹೆಸರುಬೇಳೆ ಕಿಚಡಿ, ಎಣ್ಣೆ ಹಾಕಿ ಹುರಿದ ಸಸ್ಯಹಾರ ಪದಾರ್ಥಗಳು ಪರಾಠ, ದೋಸೆ, ಇಡ್ಲಿ, ಸಾಂಬಾರ್, ಹಬೆಯಲ್ಲಿ ಬೆಂದ ಮೇಥಿ ಮುತಿಯಾ ಕೊಡಬೇಕು. ಕಚ್ಚಾ, ಬೇಯಿಸದ ಹಸಿ ತರಕಾರಿ, ಚಟ್ನಿ, ಸ್ಯಾಂಡ್‍ವಿಜ್, ಅದರ ಮೇಲೆ ಹರಡುವ ಗೊಜ್ಜು ಕೊಡಲೇಬಾರದು. ಚಾಟ್ಸ್ ಹಾಗೂ ಕರಿದ ಪಕೋಡಾ ಬಿಟ್ಟು ಬಿಡಿ. ರಸ್ತೆ ಬದಿಯ ಮಾರಾಟಗಾರರು ಮಾರುವ ಐಸ್‍ಕ್ರೀಂ, ಶರಬತ್ತು ಕುಡಿಯಲೇ ಬೇಡಿ. ಅಲ್ಲದೇ ಈಗ ಇದರಿಂದ ಕಾಯಿಲೆ ಬರುವ ಸಂಭವ ಹೆಚ್ಚು. ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಲು, ಆಕ್ರೋಟು ಕಾಯಿ, ಅಗಸೆ ಬೀಜಗಳು, ಶೇಂಗಾ, ಮೊಸರು, ಸೋಯಾ ಅವರೆ, ತೋಫು ನಾಯಿಕೊಡೆ, ಬಾದಾಮಿ, ಮೊಳಕೆ ಕಾಳುಗಳು, ಪೂರ್ಣ ಧಾನ್ಯಗಳಾದ ರಾಗಿ, ಜೋಳ, ಸಜ್ಜೆ ಬಳಸಿ. ಮಾಂಸಾಹಾರಿಗಳು ಹೆಚ್ಚು ಎಚ್ಚರವಹಿಸಿ, ಮಾಂಸ, ಮೀನು, ಸ್ವಚ್ಛವಾಗಿ ತಂದು, ಚೆನ್ನಾಗಿ ತೊಳೆದು, ತಯಾರಿಸುವ ಅಡಿಗೆ ಮನೆ ಹಾಗೂ ಪಾತ್ರೆಗಳನ್ನು ಸ್ವಚ್ಛವಿರಿಸಬೇಕು. ಹಣ್ಣುಗಳು:- ಮಾನ್ಸೂನ್‍ನಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನಬೇಕು. ಕ್ರಿಮಿಗಳಿಂದ ತಪ್ಪಿಸಿಕೊಳ್ಳಲು, ಸ್ವಚ್ಛ ನೀರಿನಿಂದ ತರಕಾರಿಗಳನ್ನು ತೊಳೆದು, ಉಗಿ ಹಾಯಿಸಿ. ತರಕಾರಿ ಹಾಗೂ ಹಣ್ಣುಗಳನ್ನು ತುಸು ಬಿಸಿ ನೀರಿನಲ್ಲಿ ಉಪ್ಪು ಹಾಕಿ, ಸ್ವಲ್ಪ ನೆನೆಸಿ, ಚೆನ್ನಾಗಿ ತೊಳೆಯಿರಿ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು ಬಿಟ್ಟರೆ, ಬೇರೆ ಹಣ್ಣು, ತರಕಾರಿಗಳನ್ನು, ಹಸಿ ತರಕಾರಿಗಳನ್ನು ಬೇಯಿಸದೇ ತಿನ್ನಬೇಡಿ. ಕಾಳಿನಂತಹ ಆಹಾರ ಧಾನ್ಯಗಳು, ಎಣ್ಣೆ ಹಾಗೂ ಬೀಜಗಳನ್ನು ತೇವವಾದ ವಾತಾವರಣದಲ್ಲಿ ಬಿಟ್ಟರೆ, ಅದು ರೋಗಕಾರಕ ಶಿಲೀಂದ್ರಗಳಿಂದ ಸೋಂಕು ಪಡೆದಿರಬಹುದು. ಬಳಸುವ ಮೊದಲು ಇವುಗಳನ್ನು ಕೂಲಂಕುಷ ಪರಿಶೀಲಿಸಿ. ಬೇಯಿಸಿದ ಹಾಗೂ ಹಸಿ ತರಕಾರಿಗಳನ್ನು ಚೆನ್ನಾಗಿ ಮುಚ್ಚಿ, ಸರಿಯಾದ ರೀತಿ ರಕ್ಷಿಸಿ, ಸಂಗ್ರಹಿಸಿ. ಮೂರು ಚಮಚ ಉಪ್ಪನ್ನು ಬಿಸಿ ನೀರಲ್ಲಿ ಹಾಕಿ, ಎಲ್ಲಾ ತರಕಾರಿಗಳನ್ನು, ವಿಶೇಷವಾಗಿ ಹಸಿರು ತರಕಾರಿಗಳನ್ನು, ಕತ್ತರಿಸುವ ಮೊದಲು, ಪೊಟ್ಯಾಷಿಯಂ ಪರಮಾಂಗ್‍ನೇಟ್ ಹಾಕಿ ತೊಳೆಯಿರಿ. ತರಕಾರಿಗಳನ್ನು ಚಿಕ್ಕ ಚೂರಾಗಿ ಕತ್ತರಿಸದೇ, ಮಧ್ಯಮ ಗಾತ್ರದಲ್ಲಿ ಹಚ್ಚಿ. ಇದರಿಂದ ಪೌಷ್ಠಿಕಾಂಶ ಕಳೆದು ಹೋಗುತ್ತದೆ. ಕತ್ತರಿಸಿದನಂತಹ ತರಕಾರಿಗಳನ್ನು ನೀರಿನಲ್ಲಿ ನೆನೆಸಬೇಡಿ. ಈ ಮಾನ್ಸೂನ್‍ನಲ್ಲಿ ತಿಂಡಿ, ಊಟ ಬಿಸಿ ಬಿಸಿ ಸೇವಿಸಿ. ಮಾನ್ಸೂನ್ ಕಾಲದಲ್ಲಿ ರಸ್ತೆಯಲ್ಲಿ ಸಿಗುವ ಶೀಘ್ರ ಆಹಾರ ತಿಂಡು, ಊಟ ಪದಾರ್ಥಗಳನ್ನು ತಿನ್ನಬಾರದು. ಹೆಚ್ಚು ಜನ, ಆಗಾಗ ಅಜೀರ್ಣ ಸಮಸ್ಯೆ ಎದುರಿಸುತ್ತಾರೆ. ಈ ಕಾಲದಲ್ಲಿ ಗಾಳಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು, ಪರಿಸರದಲ್ಲಿ ಅತ್ಯಂತ ಚೆನ್ನಾಗಿ ಕ್ರಿಯಾತ್ಮಕವಾಗಿದ್ದು, ನೀವು ತಿನ್ನುವಾಗ ಅದರ ಜೊತೆ ಅವೂ ನಿಮ್ಮ ದೇಹದೊಳಗೆ ಹೊಕ್ಕಬಹುದು. ಹೀಗಾಗಿ ರಸ್ತೆಯಲ್ಲಿ ತಯಾರಿಸುವ ಎಣ್ಣೆಯಲ್ಲಿ ಕರಿದ, ಹೆಚ್ಚು ಎಣ್ಣೆ ಹಾಕಿ ತಯಾರಿಸುವ ಆಹಾರ ಪದಾರ್ಥಗಳನ್ನು ತಿನ್ನಬೇಡಿ. ಈ ಸಮಯದಲ್ಲಿ ಮಾರಾಟಗಾರರು ಹೊರಗಿಟ್ಟು, ಮಾರುವ ಕತ್ತರಿಸಿದ ಹಣ್ಣುಗಳು ಹಾಗೂ ತರಕಾರಿಗಳನ್ನು ಕೊಳ್ಳಬೇಡಿ. ಈ ಕಾಲದಲ್ಲಿ ಪಿಯರ್ಸ್, ಮಾವು, ಸೇಬು ಹಾಗೂ ದಾಳಿಂಬೆ ಹಣ್ಣುಗಳನ್ನು ಸೇವಿಸಿ. ನಿಮ್ಮ ಮುಖದ ಮೇಲೆ ಮೊಡವೆಗಳನ್ನು ಉಂಟುಮಾಡಬಹುದಾದ ಕರಬೂಜ ಹಾಗೂ ಕಲ್ಲಂಗಡಿ ತಿನ್ನಬೇಡಿ. ಹೆಚ್ಚು ಮಾವಿನ ಹಣ್ಣುಗಳನ್ನು ತಿಂದರೂ ಮೊಡವೆ ಉಂಟಾಗುತ್ತವೆ. ಒಣ ಆಹಾರ:- ಹೆಚ್ಚು ಹೆಚ್ಚು ಒಣ ಪದಾರ್ಥಗಳಾದ ಅವರೆಕಾಳು, ಹಿಟ್ಟು, ಗೋವಿನ ಜೋಳ ಬಳಸಿ. ಹೆಚ್ಚು ನೀರುಳ್ಳ ಆಹಾರ ಪದಾರ್ಥ ಬಳಸಿದರೆ, ಹೆಚ್ಚು ಊದಿಕೊಳ್ಳಬಹುದು. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ:- ಈ ಕಾಲದಲ್ಲಿ ನಿಮ್ಮ ದೇಹದಲ್ಲಿ ಕಡಿಮೆಯಾಗಬಹುದಾದ ಪ್ರತಿರೋಧಕ ಶಕ್ತಿಯನ್ನು, ಮನೆ ಔಷಧಿಗಳಿಂದ ಹೆಚ್ಚಿಸಿ. ಗೊಜ್ಜು ತಯಾರಿಸುವಾಗ, ಎಣ್ಣೆ ಬಿಸಿಯಾದಾಗ, ಲವಂಗ ಅಥವಾ ಬೆಳ್ಳುಳ್ಳಿ ಹಾಕಿ, ಬಾಡಿಸಿ, ಅದನ್ನು ಆಹಾರದಲ್ಲಿ ಬಳಸಿ. ಅಧಿಕ ರಕ್ತದ ಒತ್ತಡದಿಂದ ದೂರವಿರಿ:- ಅಧಿಕ ರಕ್ತ ಒತ್ತಡವಿದ್ದವರು ಆಹಾರದಲ್ಲಿ ಕಡಿಮೆ ಉಪ್ಪು ತಿನ್ನಿ. ಈ ಕಾಲದಲ್ಲಿ ದೇಹದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆ. ಹೆಚ್ಚು ಉಪ್ಪು ತಿಂದರೆ ಈ ಸಮಸ್ಯೆ ಹೆಚ್ಚುತ್ತದೆ. ಕಹಿ ತರಕಾರಿಗಳು:- ನಿಮ್ಮ ಆಹಾರದಲ್ಲಿ ಕಹಿ ಪದಾರ್ಥಗಳಿರಲೇಬೇಕು. ಬೇವು, ಹಾಗಲಕಾಯಿ ಇವುಗಳನ್ನು ತಿಂದರೆ ಚರ್ಮದ ಸೊಂಕುಗಳು ಹಾಗೂ ಅಲರ್ಜಿ ಬರುವುದಿಲ್ಲ. ಈ ಕಹಿ ತರಕಾರಿಗಳನ್ನು ಬೇಯಿಸಿ ತಿನ್ನಲಾಗದಿದ್ದರೆ, ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿ ರುಚಿ ತಂದುಕೊಡುತ್ತದೆ. ಈ ಕಾಲದಲ್ಲಿ ಕಲ್ಲಂಗಡಿ, ಲಸ್ಸಿ, ಅನ್ನ ಇವು ದೇಹವನ್ನು ಊದಿಸುತ್ತವೆ. ಹಾಲು ಕುಡಿಯಬೇಡಿ. ಹಾಲಿನ ಇತರ ರೂಪಗಳಾದ ಮೊಸರು ಹಾಗೂ ಸಿಹಿ ಪದಾರ್ಥಗಳನ್ನು ತಿನ್ನಿ. ಹಾಲು ಕುಡಿಯಲೇಬೇಕಾದರೆ 100 ಡಿಗ್ರಿ ಸೆಲ್ಶಿಯಷ್‍ಗೆ ಕಾಸಿ ನಂತರ ಕುಡಿಯಿರಿ. ಇದರಿಂದ ಹಾನಿಕಾರಕ ಕ್ರಿಮಿಗಳು ನಿಮ್ಮ ದೇಹ ಪ್ರವೇಶಿಸುವುದಿಲ್ಲ. ಈ ಕಾಲದಲ್ಲಿ ವಾತಾವರಣ ಅತಿ ಬಿಸಿ ಅಥವಾ ಅತಿ ತಂಪು ಇರದ್ದರಿಂದ, ನೀವು ಮಸಾಲೆ ಆಹಾರ ಬಯಸಬಹುದು. ಆದರೆ ಇದನ್ನು ತಿಂದರೆ, ಚರ್ಮದ ಕಡಿತ ಹಾಗೂ ಅಲರ್ಜಿ ಉಂಟಾಗಬಹುದು. ಇಂಗಾಲದ ಆಮ್ಲ ಹಾಕಿರುವ ಪಾನೀಯಗಳು ದೇಹದಲ್ಲಿಯ ಖನಿಜಗಳ ಮಟ್ಟ ಇಳಿಸುತ್ತವೆ. ಇವು ಮತ್ತೆ ದೇಹದಲ್ಲಿಯ ಕಿಣ್ವಗಳನ್ನು ಪ್ರತಿಬಂಧಿಸಿ ಅಜೀರ್ಣತೆ ಉಂಟುಮಾಡುತ್ತವೆ. ಜೀರ್ಣವಾಗುವುದು ನಿಧಾನ. ಆದ್ದರಿಂದ ನಿಧಾನವಾಗಿ ತಿನ್ನಬೇಕು. ಕೊತ್ತಂಬರಿ ಬೀಜ, ಅರಿಶಿನಪುಡಿ, ಮೆಣಸು ಬಳಸಿ. ಹಣ್ಣುಗಳು, ಮೂಲಂಗಿಯಂತಹ ಗಜ್ಜರಿ ತರಕಾರಿ, ಬಾಳೆಹಣ್ಣು, ಸೇಬು, ಪಿಯರ್ಸ್, ಲಿಚಿ, ಇವುಗಳ ಸೇವನೆ ಇವು ನಿಮ್ಮ ದೇಹ ಪ್ರತಿರೋಧಕಕತ್ವ ಹೆಚ್ಚಿಸಿ, ಜೀರ್ಣತೆ ಸುಧಾರಿಸುತ್ತವೆ. ತಾಜಾ ಹಾಗೂ ಸ್ವಚ್ಚ ಆಹಾರ ತಿನ್ನಿ. ಅಡಿಗೆ ಮೊದಲು ಎಲ್ಲ ತರಕಾರಿ ತಿನ್ನುವ ಮೊದಲು ಎಲ್ಲ ಹಣ್ಣುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸೊಪ್ಪು ತರಕಾರಿಗಳನ್ನು ಉಪ್ಪು ನೀರು ಅಥವಾ ಹಬೆಯಿಂದ ತೊಳೆಯಿರಿ. ಕಲುಷಿತ ಹಾಗೂ ಹಳಸಿದ ಆಹಾರ ತಿನ್ನಬೇಡಿ. ನಿಂತ ನೀರಿನಲ್ಲಿ ಮುಖಾಲಂಕಾರ:- ನಿಂತ ನೀರಿನಲ್ಲಿ ಮುಖಕ್ಕೆ ಮುಖಾಲಂಕಾರ ಕವಚ ಹಾಕಬೇಡಿ. ನಿಮ್ಮ ಮನೆಯಲ್ಲಿ ಅಥವಾ ಹೊರಗೆ ನಿಂತ ನೀರಲ್ಲಿ ಇದನ್ನು ಹಾಕಿದರೆ, ಚಳಿಜ್ವರ ಅಥವಾ ಡೇಂಗು ಬರಬಹುದು. ಬಳಸದ ಹೌದು, ಹೂವಿನ ಕುಂಡಗಳು ಹಾಗೂ ಹವಾತಂಪು ಮಾಡಲು ಬಳಸುವ ಕೂಲರ್ಸ್‍ಗಳಲ್ಲಿಯೇ ನೀರನ್ನು ಆಗಾಗ ತೆಗೆದು ಹೊರಗೆಸೆದು, ಅವುಗಳನ್ನು ಒಣಗಿಸಬೇಕು. ಮಳೆಗಾಲದಲ್ಲಿ ಬರುವ ಕಾಯಿಲೆಗಳು:- ಮಳೆಗಾಲದಲ್ಲಿ ಜೀರ್ಣಶಕ್ತಿ ಕುಂದುತ್ತದೆ. ಹೀಗಾಗಿ ಸಮತೋಲನ ಲೆಕ್ಕ ತಪ್ಪುತ್ತದೆ. ಹಸಿವಿಲ್ಲದಾಗ ತಿನ್ನುವುದರಿಂದ ದೂರವಿರಿ. ಚಳಿಗಾಲದಲ್ಲಿ ಬೇಕೆನಿಸಿದ್ದನ್ನು ತಿಂದರೂ ಅದು ಜೀರ್ಣವಾಗುತ್ತದೆ. ಅದರೆ ಮಳೆ ಬರುವಾಗ ಅಜೀರ್ಣತೆಗೆ ಆಹ್ವಾನ ಕೊಟ್ಟಂತೆ. ಕಲುಷಿತ ಆಹಾರದಿಂದ ಈ ಕಾಲದಲ್ಲಿ ಚಳಿಜ್ವರ ಹಾಗೂ ಕಾಮಾಲೆ ಸಾಮಾನ್ಯ. ಟೈಫಾಯ್ಡ್, ಫ್ಲೂ, ನೆಗಡಿ, ಕೆಮ್ಮು ಈ ಕಾಲದಲ್ಲಿ ಬರುತ್ತವೆ. ಇನ್‍ಪ್ಲ್ಯೂಯಂಜಾ ಬಂದರೆ, ನೀವು ನಿಮ್ಮ ಕೆಮ್ಮು ಹಾಗೂ ಸೀನಿನಿಂದ, ಇತರರಿಗೆ ಸೋಂಕು ಮಾಡುತ್ತೀರಿ. ಆದ್ದರಿಂದ ಫ್ಲೂ ಹರಡದಿರಲು ಕಾಯಿಲೆ ಮನುಷ್ಯರು ತನ್ನ ಬಾಯಿ ಹಾಗೂ ಮೂಗನ್ನು ಸ್ವಚ್ಛ ಕರವಸ್ತ್ರದಿಂದ ಚೆನ್ನಾಗಿ ಮುಚ್ಚಿಕೊಳ್ಳಿ. ಗುಂಪಿನಿಂದ ಜನದಟ್ಟಣಿ ಸ್ಥಳಗಳಿಂದ ದೂರವಿರಿ. ಶಾಲಾ-ಕಾಲೇಜು, ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಕ್ಷಣ, ನಿಮ್ಮ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಿರಿ. ಸೋಂಕು ನಿವಾರಕಗಳನ್ನು ಬಳಸಿ. ಹೃದಯ ರೋಗಗಳು ಮಧುಮೇಹ, ಪುಪ್ಪಸದ ಸೋಂಕುಗಳು, ಸಂಧಿವಾತ ಈ ಕಾಲದಲ್ಲಿ ಹೆಚ್ಚುತ್ತವೆ.
ಮಳೆಗಾಲದಲ್ಲಿ ನಿಮ್ಮ ರಕ್ಷಣೆಗಾಗಿ ಆರೋಗ್ಯ ಸೂತ್ರಗಳು:-
1. ಆರೋಗ್ಯಕರ ಆಹಾರ ಸೇವಿಸಿ:- ಈ ಕಾಲದಲ್ಲಿ ಬರುವ ರೋಗಗಳು ಹೆಚ್ಚಾಗಿ ನೀರಿನಿಂದ ಬರುತ್ತವೆ. ಅದಕ್ಕೆ ಕುಡಿಯುವ ನೀರನ್ನು ಕುದಿಸಿ, ಆರಿಸಿ, ಸೋಸಿ ಕುಡಿಯಿರಿ. ರಸ್ತೆಯಲ್ಲಿಯ ಕುಲ್ಫಿ, ಗೋಲಾ, ಪಾನೀಪುರಿ, ಬೇಲ್‍ಪುರಿ, ದಹಿಪುರಿ, ಮಸಾಲೆಪುರಿ, ಗೋಬಿ ಮಂಚೂರಿ, ಮುಂತಾದ ನಿಮ್ಮ ಮೆಚ್ಚಿನ ರಸ್ತೆ ಆಹಾರ ತ್ಯಜಿಸಿ.
2. ನಿಮ್ಮ ಚಟುವಟಿಕೆ ಏನೇ ಇದ್ದರೂ ಸಾಕಷ್ಟು ನೀರು ಕುಡಿಯಿರಿ:- ಹೆಚ್ಚು ನೀರು ಕುಡಿಯಿರಿ. ಮಾನ್ಸೂನಿನಲ್ಲಿ ಬಂದ ಬೆವರು ಬೇಗ ಆವಿಯಾಗಿ ಹೋಗುವುದಿಲ್ಲ. ಹವೆಯ ಆದ್ರ್ರತೆ ಮಟ್ಟ ಹೆಚ್ಚಿದ್ದು, ಇದು ವ್ಯಕ್ತಿಯ ದೇಹದ ಉಷ್ಣಾಂಶ ಹೊರ ಹಾಕುವುದನ್ನು ತಡೆಯುತ್ತದೆ. ಪ್ರತಿ ಬಾರಿ ನೀರಿನ ಬಾಟಲಿ ಜೊತೆಗೆ ಒಯ್ಯಿರಿ. ಕೃತಕ ಇಂಗಾಲದ ಆಮ್ಲ ಇರುವ ಪೇಯಗಳು, ಕೆಫಿನ್ ಇರುವ ಕಾಫಿ ಹಾಗೂ ಟೀ, ಮದ್ಯಪಾನ ಮುಂತಾದ ದ್ರವಗಳಲ್ಲಿ, ಮೂತ್ರವರ್ಧಕಗಳಿವೆ. ಇಂಥ ಪದಾರ್ಥಗಳಲ್ಲಿ ಬಳಸಿರುವ ರಕ್ಷಣಾ ವಸ್ತುಗಳು ಹಾಗೂ ಸಕ್ಕರೆಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ವಿರುದ್ಧದ ಗುಣಧರ್ಮ ಇರುವ ಗಿಡ ಮೂಲಿಕೆ ಚಹಾ ಬಹಳ ಉತ್ತಮ.
3. ಮಳೆಯಲ್ಲಿ ಓಡಾಡುವುದನ್ನು ಬಿಟ್ಟು ಬಿಡಿ:- ಎಷ್ಟೇ ಸೆಳೆದರೂ, ಮಳೆಯಲ್ಲಿ ನಡೆದರೆ, ವೈರಲ್ ಕಾಯಿಲೆಗಳು, ಲೆಪ್ಟೋಸ್ಪಿರೋಸಿಸ್ ಎಂಬ ನಾಯಿಗಳು ಮತ್ತಿತರ ಸಸ್ತನಿಗಳಿಗೆ ಬರುವ ರೋಗ ಬರಬಹುದು. ಸಕ್ಕರೆ ರೋಗಿಗಳು ಹೆಚ್ಚಿನ ಕಾಳಜಿ ವಹಿಸಿ. ಬರೀ ಕಾಲಿನಿಂದ ನಡೆಯಬೇಡಿ. ಅಗ ನೆಲವು, ಎಲ್ಲ ರೀತಿಯ ಕ್ರಿಮಿಗಳಿಂದ ತುಂಬಿ ತುಳುಕುತ್ತದೆ. ಕಾಲು ಹಾಗೂ ಉಗುರುಗಳಲ್ಲಿ ಶಿಲೀಂದ್ರ ಸೋಂಕು ಆಗಬಹುದು. ನಿಮ್ಮ ಪಾದಗಳು ನೆನೆದರೆ ಅವುಗಳನ್ನು ತಕ್ಷಣ ಒಣಗಿಸಿ. ಒದ್ದೆ ಕಾಲು ಚೀಲ ಹಾಗೂ ಬೂಟುಗಳನ್ನೇ ಹಾಕಿಕೊಂಡಿರಬೇಡಿ. ಪಾದ ಒದ್ದೆಯಾದರೆ ತಕ್ಷಣ ಒಣಗಿಸಿ. ನಿಮ್ಮ ಬಟ್ಟೆಗಳು ಒದ್ದೆಯಾದರೆ, ಹವಾನಿಯಂತ್ರಿತ ವಾತಾವರಣದಲ್ಲಿ ಕೂರಬೇಡಿ. ಹವಾನಿಯಂತ್ರಿತ ಕೋಣೆಯಲ್ಲಿ ಒದ್ದೆ ತಲೆ ಕೂದಲು ಹಾಗೂ ಬಟ್ಟೆಗಳೊಂದಿಗೆ ಹೋಗಬೇಡಿ. ತಕ್ಷಣದ ಹವಾಮಾನ ಬದಲಾವಣೆ ತಪ್ಪಿಸಿ. ಇದರಿಂದ ನೆಗಡಿ ಹಾಗೂ ಕೆಮ್ಮು ಬರುತ್ತದೆ. ನೀವು ಬೆವರಿದ್ದರೆ ತಕ್ಷಣ ಸ್ನಾನ ಮಾಡಬೇಡಿ. 5-10 ನಿಮಿಷ ವಿಶ್ರಾಂತಿ ನಂತರ ಸ್ನಾನ ಮಾಡಿ. ಒದ್ದೆ ಬಟ್ಟೆಗಳನ್ನು ಬೇಗ ಬದಲಿಸಬೇಕು. ಕಚೇರಿಯಲ್ಲೂ ಒಂದು ಜೊತೆ ಬಟ್ಟೆ ಹಾಗೂ ಪಾದರಕ್ಷೆ ಇಟ್ಟಿರುವುದು ಒಳ್ಳೆಯದು.
4. ಮನೆಯ ಒಳಗೆ ತೇವವಿರಬಾರದು:- ಮನೆಯ ಒಳಗೆ ತೇವವಿರುವ ಗೋಡೆಗಳು ಇರಬಾರದು. ತೇವವಿರುವ ಗೋಡೆಗಳು ಶಿಲೀಂದ್ರ ಬೆಳೆಯಲು ಮನೆಯಾಗುತ್ತವೆ. ನೀವು ಅಸ್ತಮಾ ಅಥವಾ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರೆ, ಇದು ಹೆಚ್ಚಿನ ತೊಂದರೆ ಕೊಡುತ್ತದೆ.
5. ಮನೆಯಲ್ಲಿ ಸೊಳ್ಳೆ ನಿವಾರಕ ಇಡಿ:- ತುಂಬಿಟ್ಟ ನೀರು ಮಲೇರಿಯಾ ಹರಡುವ ಸೊಳ್ಳೆಗಳು ಹಾಗೂ ಕ್ರಿಮಿಗಳಿಗೆ ಹಬ್ಬವಿದ್ದಂತೆ. ಯಾವಾಗಲೂ ಸೊಳ್ಳೆ ನಿವಾರಕ ಧರಿಸಿ ಅಥವಾ ಜೊತೆಯಲ್ಲೇ ಒಯ್ಯಿರಿ.
6. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ:- ಸಂಜೆ ಕಛೇರಿಯಿಂದ ಮನೆಗೆ ಬಂದೊಡನೆ ಮತ್ತೊಮ್ಮೆ ಸ್ನಾನ ಮಾಡಿ. ಇದರಿಂದ ಹವಾಮಾನದ ಆದ್ರ್ರತೆಯಿಂದ, ನಿಮ್ಮ ಮೈಯಲ್ಲಿರುವ ಕೊಳೆ ಹಾಗೂ ಬೆವರಿನಿಂದ ಬರಬಹುದಾದ ಸೋಂಕುಗಳಿಂದ, ರಕ್ಷಣೆ ಸಿಗುತ್ತದೆ.
7. ನಿಮ್ಮ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ:- ಕಣ್ಣಿನ ಸೋಂಕುಗಳಾದ, ಕೆಂಗಣ್ಣು ಬೇನೆ, ಒಣಕಣ್ಣು, ಪಾರದರ್ಶಕದ ಪಟಲದ ಹುಣ್ಣು, ಈ ಕಾಲದಲ್ಲಿ ಸಾಮಾನ್ಯ. ಅಲಕ್ಷಿಸಿದರೆ ಅಂಧತ್ವದತ್ತ ಸಾಗಿಸುತ್ತವೆ. ಕೊಳೆ ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ. ಟಿ.ವಿ ಹಾಗೂ ಕಂಪ್ಯೂಟರ್ ಪರದೆ ಮುಂದೆ ಹೆಚ್ಚು ಕಾಲ ಕಳೆಯುವವರು, ಕಣ್ಣು ಕೆಂಪಗಾಗುವುದು, ತುರಿಕೆ ಅಥವಾ ಕೆರಳಿಕೆ ಅನುಭವಿಸಬಹುದು. ಆಗ ತಕ್ಷಣ ಕಣ್ಣಿನ ತಜ್ಞರ ಬಳಿ ಧಾವಿಸಿ.
8. ಸೂಕ್ಷ್ಮಾಣು ಜೀವಿಗಳ ದಾಳಿ:- ಈ ಕಾಲದಲ್ಲಿ ನೀರಿನಲ್ಲಿಯ ಸೂಕ್ಷ್ಮಾಣು ಜೀವಿಗಳು ನಮ್ಮ ಮೇಲೆ ದಾಳಿ ಮಾಡಬಹುದು ಅಥವಾ ನಮ್ಮ ದೇಹದ ಪ್ರತಿರೋಧಕ ಶಕ್ತಿ ಕಡಿಮೆಯಾಗಬಹುದು.
9. ಛತ್ರಿ:- ಹೊರಗೆ ಹೋಗುವಾಗ ಮರೆಯುವುದೇ ಛತ್ರಿ. ಮಳೆಕೋಟು ಜೊತೆಗೆ ಒಯ್ಯಿರಿ.
10. ಮಕ್ಕಳ ಕಾಳಜಿ:- ಮಕ್ಕಳನ್ನು ಮಳೆ ಹಾಗೂ ಮಳೆ ನೀರಿನಲ್ಲಿ ಆಡದಂತೆ ನೋಡಿಕೊಳ್ಳಿ.
11. ನೀರು ಹಾರೀತು ಎಚ್ಚರಿಕೆ!:- ರಸ್ತೆಯಲ್ಲಿ ಮಳೆ ನೀರು ನಿಂತಿರುವ ಜಾಗದ ಬಳಿ ನಡೆಯಬೇಡಿ. ಸಂಚಾರದಲ್ಲಿರುವ ಜನ ಹಾಗೂ ವಾಹನಗಳಿಂದ ಆ ನೀರು ನಿಮ್ಮ ಮೇಲೆ ಎರಚಬಹುದು.
12. ನಿಮ್ಮ ದೇಹವನ್ನು ಬಿಸಿ ಹಾಗೂ ಒಣವಾಗಿರಿಸಿ:- ನೆಗಡಿ ಹಾಗೂ ಕೆಮ್ಮು ಬಾರದಂತೆ ಎಚ್ಚರವಹಿಸಿ.
13. ಕೊಚ್ಚೆ ಗುಂಡಿಯಲ್ಲಿ ಇಳಿಯಬೇಡಿ:- ಅದು ಅನಿವಾರ್ಯವಾದರೆ ತಕ್ಷಣ ನಿಮ್ಮ ಕಾಲುಗಳನ್ನು ಮೃದು ಹಾಗೂ ಒಣ ಟವೆಲ್‍ನಿಂದ ಒರೆಸಿಕೊಳ್ಳಿ. ಕ್ರೀಡಾಪಟುಗಳ ಪಾದಗಳ ಶಿಲೀಂದ್ರ ಸೋಂಕುಗಳಾಗುತ್ತವೆ. ತೇವವು ಮಧುಮೇಹಿಗಳ ಕಾಲು ಬೆರಳುಗಳನ್ನು ಹಾಳು ಮಾಡುತ್ತದೆ.
14. ಹಿರಿಯರು ಹಾಗೂ ಮಕ್ಕಳ ಕಾಳಜಿ ಮಾಡಿ.
15. ಸಡಿಲವಾದ ಹತ್ತಿಯ ಬಟ್ಟೆ ಧರಿಸಿ. ಮನೆಯನ್ನು ಸ್ವಚ್ಛವಾಗಿರಿಸಿ.
16. ನೀಲಗಿರಿ ಎಣ್ಣೆ:- ನೀಲಗಿರಿ ಎಣ್ಣೆಯ ಸುವಾಸನೆ, ಉಸಿರಾಟ ಸುಲಭ ಮಾಡಿ, ಇಡೀ ದೇಹವನ್ನು ಹಗುರಗೊಳಿಸುತ್ತದೆ. ನಿಮ್ಮ ಮೂಗು ಕಟ್ಟಿದಾಗ, ಫ್ಲೂ ಬಂದಾಗ, ಇತರ ರೋಗಗಳಿಂದ ಬಳಲಿದಾಗ, ನೀಲಗಿರಿ ಎಣ್ಣೆ ನಿಮ್ಮ ಉತ್ತಮ ಮಿತ್ರ. ನೀರು ಬೆರಸಿ ಇದನ್ನು ಮೃದು ಮಾಡಿ, ನಂತರ ಒಂದು ಪಾತ್ರೆಯಲ್ಲಿ ಬಿಸಿ ನೀರಲ್ಲಿ ಇದನ್ನು ಹಾಕಿ, ಇಡೀ ಮುಖಕ್ಕೆ ಟವೆಲ್ ಮುಚ್ಚಿ, ಬರುವ ಉಗಿಯನ್ನು ನಿಮ್ಮ ಮೂಗಿನಿಂದ ಎಳೆದುಕೊಳ್ಳಿ. ಎಲ್ಲೇ ಹೋದರೂ, ನಿಮ್ಮ ಕರವಸ್ತ್ರದಲ್ಲಿ ನೀಲಗಿರಿ ತೈಲದ ಕೆಲವು ಹನಿಗಳನ್ನು ಹಾಕಿ, ನಿಮ್ಮ ಜೊತೆಗೇ ಇಟ್ಟುಕೊಳ್ಳಿ. ನಿಮ್ಮ ಕತ್ತು ಹಾಗೂ ತಲೆ ಮೇಲೆ ಇದನ್ನು ಹಚ್ಚಿಕೊಳ್ಳಿ.
17. ಮಳೆಗಾಲದಲ್ಲಿ ಮನೆ ಔಷಧಿ:- ಚಿಕ್ಕಂದಿನಿಂದ ನನ್ನ ತಾಯಿ ಮಾಡುತ್ತಿದ್ದ, ಮುಂದೆ ನಾನು ಕಳೆದ 60 ವರ್ಷಗಳಿಂದ ಮನೆಯಲ್ಲೇ ಬಿಸಿ ಬಿಸಿಯಾಗಿ, ತಾಜಾ ಆಗಿ ಮಾಡಿ ಕುಡಿಯುವ ಕಷಾಯ ಮಾಡುವ ಬಗ್ಗೆ, ನಿಮ್ಮೊಂದಿಗೆ ಈಗ ಹಂಚಿಕೊಳ್ಳುವೆ. ಬೇಕಾದ ಪದಾರ್ಥಗಳು:- ಕೊತ್ತಂಬರಿ ಬೀಜ, ಮೆಣಸು, ಜೀರಿಗೆ, ಹಸಿ ಅಥವಾ ಒಣ ಶುಂಠಿ, ಅರಿಶಿನಪುಡಿ, ಏಲಕ್ಕಿ, ತುಳಸಿ, (ಸಿಕ್ಕರೆ, ಗೌಟಿ ಚಾ ಎಂಬ ಪೊದೆಯಲ್ಲಿ ಬೆಳೆಯುವ ಎಲೆ) ಬೆಲ್ಲ ಹಾಗೂ ಹಾಲು.
ಮಾಡುವ ವಿಧಾನ:- ನೀರನ್ನು ಚೆನ್ನಾಗಿ ಕಾಯಿಸಿ. 1 ಹಿಡಿ ಕೊತ್ತಂಬರಿ ಬೀಜ, 8-10 ಮೆಣಸು ಹಾಕಿ. ಇದನ್ನು ಇಡಿಯಾಗಿ ಅಥವಾ ಸ್ವಲ್ಪ, ಪುಡಿಯಾಗಿ ಸಹ ಹಾಕಬಹುದು. ¼ ಚಮಚ ಅರಿಸಿನಪುಡಿ, ಜಜ್ಜಿದ ಶುಂಠಿ ಚೂರು ಅಥವಾ ಪುಡಿ ಹಾಕಿ. 5-6 ಏಲಕ್ಕಿ ಕುಟ್ಟಿ ಅದರ ಪುಡಿ ಹಾಕಿ. ಜೊತೆಗೆ ಸುವಾಸನೆಗಾಗಿ ಸಿಪ್ಪೆಗಳನ್ನು ಹಾಕಿ. ನಿಮಗೆ ಕುಡಿಯಲು ಹಿಡಿಸುವಷ್ಟು ಬೆಲ್ಲ ಹಾಕಿ. ಕೆಲವರಿಗೆ ಬಹಳ ಘಾಟು ಘಾಟಾಗಿ ಖಾರ ಬೇಕು. ಬೇರೆಯವರಿಗೆ ಇದು ಕುಡಿಯಲು ಬಹಳ ಸ್ಟ್ರಾಂಗ್ ಆಗುತ್ತೆ. ಕೆಲವರಿಗೆ ಅರ್ಧ ಸಿಹಿ ಇಷ್ಟವಾಗುತ್ತೆ. ಎಲ್ಲಾ ಒಟ್ಟಾಗಿ ಹಾಕಿ ಚೆನ್ನಾಗಿ ಕುದಿಸಿ. 15-20 ನಿಮಿಷ ಜೋರಾಗಿ ಕುದಿದ ಮೇಲೆ, 10 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ ಕೆಳಗಿಡಿ. ಹಾಲನ್ನು ಬಿಸಿ ಮಾಡಿ. ಕುದಿಯುವ ಸಮಯದಲ್ಲಿ ಇನ್ನೊಂದು ಲೋಟಾ ಅಥವಾ ಪಾತ್ರೆಗೆ ಕುದಿಸಿದ ಕಷಾಯವನ್ನು ಬೇಕಾದ ಪ್ರಮಾಣದಲ್ಲಿ ಹಾಕಿ, ನಿಮಗೆ ಬೇಕಾದಷ್ಟು ಹಾಲು ಬೆರಸಿ. ಈ ಕಷಾಯವನ್ನು ಬಿಸಿಬಸಿಯಾಗಿ ಕುಡಿಯಿರಿ. ಉಳಿದ ಕಷಾಯ ಬೇರೆ ಇಟ್ಟು, ಬೇಕಾದಾಗ ಮತ್ತೆ ಬಿಸಿ ಮಾಡಿ, ಕುಡಿಯುವಾಗ ಮಾತ್ರ, ಹಾಲು ಬೆರಸಿ. ಒಟ್ಟೂ ಕಷಾಯಕ್ಕೆ ಹಾಲು ಬೆರಸಬೇಡಿ. ಹಾಲು ಹಾಕಿ ಕುದಿಸಿದರೆ, ಬೆಲ್ಲ ಇರುವುದರಿಂದ, ಇದು ಒಡೆದು ಹೋಗುತ್ತದೆ. ಗಂಟಲು ಕೆರೆತ:- ಗಂಟಲು ಕೆರೆತ ತಡೆದುಕೊಳ್ಳುವುದು ಸುಲಭವಲ್ಲ. ಇದು ಸೂಕ್ಷ್ಮಾಣುಜೀವಿಗಳು ಉಂಟುಮಾಡುವ ಸೋಂಕಿನಿಂದ, ಫ್ಲೂ ತರಹದ ಲಕ್ಷಣಗಳಾದ ಜ್ವರ, ಚಳಿ ಹಾಗೂ ನೋವು ಕಂಡುಬರುತ್ತದೆ. ತಿನ್ನಲು, ನುಂಗಲು ಬಹಳ ಕಷ್ಟವಾದ್ದರಿಂದ, ತಿನ್ನುವುದೇ ಬೇಡ ಅನ್ನಿಸುತ್ತದೆ. ಆದರೆ ಪೌಷ್ಠಿಕ ಆಹಾರವೇ ನಿಮ್ಮ ದೇಹಕ್ಕೆ ಶಕ್ತಿ ಕೊಡುವ ಇಂಧನ. ಇದರಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯ. ಈ ಮುಂದೆ ಹೇಳಲಾಗಿರುವ 10 ಆಹಾರಗಳು ಕಾಯಿಲೆಗಳನ್ನು ಹೊಡೆದೋಡಿಸಲು, ಗಂಟಲು ಕೆರೆತದೊಂದಿಗೆ ಹೋರಾಡಲು ಸಹಾಯ ಮಾಡುತ್ತವೆ. ಬಾಳೆಹಣ್ಣು:- ಆಮ್ಲರಹಿತ ಮೃದು ಹಣ್ಣು, ನಿಮ್ಮ ಗಂಟಲಲ್ಲಿ ಮೆತ್ತಗೆ ಇಳಿಯುವುದರಿಂದ ನುಂಗಲು ಸುಲಭ. ಗ್ಲೈಸಿಮಿಕ್ ಇಂಡಕ್ಸ್ ಕಡಿಮೆ ಇರುವ, ಅದರೆ ಜೀವಸತ್ವಗಳಾದ ಬಿ6, ಪೊಟ್ಯಾಷಿಯಂ ಹಾಗೂ ವಿಟಮಿನ್ ಸಿ ಇರುವ, ಬಾಳೆಹಣ್ಣು ಉತ್ತಮ. ಚಿಕನ್ ಸೂಪ್:- ಗಂಟಲು ಕೆರೆತಕ್ಕೆ ಬಹು ಹಿಂದಿನ ಕಾಲದ ಪರಿಹಾರ. ಬಿಸಿ ಬಿಸಿ ಚಿಕನ್ ಸೂಪ್ ಮೃದುವಾದ, ಉರಿಯೂತ ವಿರುದ್ಧದ ಗುಣಗಳನ್ನು ಹೊಂದಿದ್ದು, ಪ್ರತಿ ಜೀವಕಗಳನ್ನು ಹೊಡೆದೋಡಿಸುತ್ತದೆ. ದಟ್ಟಣಿಯಿಂದ ಪಾರು ಮಾಡುತ್ತದೆ. ಲೋಳೆ ಪೊರೆಗಳ ಸಂಪರ್ಕದಲ್ಲಿ ಬರುವ ವೈರಸ್‍ಗಳು, ಹಾಗೂ ಸೂಕ್ಷ್ಮಾಣು ಜೀವಿಗಳ ಕ್ರಿಯೆಯನ್ನು ಇದು ಮಿತಿಗೊಳಿಸುತ್ತದೆ. ಗಜ್ಜರಿ, ಈರುಳ್ಳಿ, ಅಜವಾನ ಗೆಡ್ಡೆಕೋಸು, ಗೆಣಸು ಹಾಗೂ ಬೆಳ್ಳುಳ್ಳಿಗಳನ್ನು ಹೆಚ್ಚು ಬಳಸಿರಿ. ಇವುಗಳ ಪೌಷ್ಠಿಕ ಲಾಭಗಳು ಹಾಗೂ ಗುಣಪಡಿಸುವ ಶಕ್ತಿಗಳನ್ನು, ಬಲ್ಲವರೇ ಬಲ್ಲರು. ನಿಂಬೆ ರಸ ಹಾಗೂ ಜೇನುತುಪ್ಪಗಳ ಮಿಶ್ರಣ:- ಗಂಟಲು ಸರಿಪಡಿಸುವ ಅತ್ಯುತ್ತಮ ವಿಧಾನ. ನಿಂಬೆ ರಸ ಹಾಗೂ ಜೇನುತುಪ್ಪ ಮಿಶ್ರಣ, ಉರಿಯೂತದ ಗಂಟಲಿಗೆ ಒಂದು ಉತ್ತಮ ವಿಧಾನ. ಉರಿಯೂತ ಕಡಿಮೆಯಾಗಿ ಗಂಟಲಿಗೆ ಆರಾಮವಾಗುತ್ತದೆ. ಉಲ್ಬಣವಾಗಿದ್ದ ಗಂಟಲಿಗೆ ತಂಪು ನೀಡಿ ಯವುದೇ ದಟ್ಟಣಿ ತಡೆ ಇದ್ದರೆ, ಅದನ್ನು ತೆಳ್ಳಗಾಗಿಸುತ್ತದೆ. ಸಿಕ್ಕಾಪಟ್ಟೆ ಮಿಶ್ರಣ ಮೊಟ್ಟೆ:- ಸಿಕ್ಕಾಪಟ್ಟೆ ಮಿಶ್ರಣ ಮೊಟ್ಟೆ ಹಾಗೂ ಮೊಟ್ಟೆಯ ಬಿಳಿಯ ಭಾಗದಿಂದ ಮಾಡಿದ ಮೃದು ಸಸಾರಜನಕವನ್ನು ಜೀರ್ಣಿಸಿಕೊಳ್ಳುವುದು ಸುಲಭ. ಇದರ ಬಳಕೆಯಿಂದ ಉರಿಯೂತ ಹಾಗೂ ಗಂಟಲು ಕೆರೆತದ ನೋವು ಕಡಿಮೆಯಾಗುತ್ತದೆ. ಆದರೆ ಇದಕ್ಕೆ, ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸಿದರೆ, ಅದು ನೋವು ಹೆಚ್ಚಿಸಬಹುದು. ಶುಂಠಿ ಹಾಗೂ ಜೇನುತುಪ್ಪದ ಚಹಾ:- ಕಿರಿಕಿರಿ ಹಾಗೂ ಕೆರೆಯುವ ಗಂಟಲನ್ನು ಶಾಂತಗೊಳಿಸಲು, ಒಂದು ಕಪ್ ಬಿಸಿ ಟೀ. ಶುಂಠಿ ಹಾಗೂ ಜೇನುತುಪ್ಪಗಳಿಂದ ತಯಾರಿಸಿ. ಕುಡಿದಾಗ ಇದು ಗಂಟಲಿಗೆ ಹಿತವಾಗಿ ಸಹಾಯ ಮಾಡುತ್ತದೆ. ಟೀ ಸವಿಯುವಾಗ, ಅದರ ಉಗಿಯನ್ನು ಉಸಿರಲ್ಲಿ ಎಳೆದುಕೊಂಡಾಗ, ಅದು ದಟ್ಟಣಿ ತೆಳುಮಾಡಿ, ಎದೆಯ ಬಿಗಿತ ಹಗುರ ಮಾಡುತ್ತದೆ. ಜೇನುತುಪ್ಪ ಗಂಟಲನ್ನು ಆವರಿಸಿ, ಕೆರಳಿಕೆ ತಡೆಯುತ್ತದೆ. ಕೆಮ್ಮು ನಿಂತು ಸಮಾಧಾನ ದೊರೆಯುತ್ತದೆ. ಓಟ್‍ಮೀಲ್:- ಕರಗುವ ಉತ್ತಮ ನಾರು ಪದಾರ್ಥವಾಗಿರುವ ಓಟ್ಸ್. ಕೆಟ್ಟ ಎಲ್.ಡಿ.ಎಲ್ ಕೊಬ್ಬಿನ ಮಟ್ಟ ಇಳಿಸುತ್ತದೆ. ಸಸಾರಜನಕದ ಅಂಶ ಹೆಚ್ಚಿರುವ ಇದು, ನಿಮ್ಮನ್ನು ಹೆಚ್ಚಿನ ಕಾಲದವರೆಗೆ ತೃಪ್ತರನ್ನಾಗಿರಿಸುತ್ತದೆ. ಇದಕ್ಕೆ ಬಾಳೆಹಣ್ಣು ಅಥವಾ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲನ್ನು ಹಿತಗೊಳಿಸುತ್ತದೆ. ಈ ಆಹಾರದ ಗ್ಲೈಸಿಮಿಕ್ ಇಂಡೆಕ್ಸ್ ಕಡಿಮೆ. ತಿಂಡಿಗಿಂತ ಮೊದಲಿನ ಆದರ್ಶ ಆಹಾರ. ಪ್ರತಿನಿತ್ಯದ ತಾಲೀಮಿಗೆ ಇದು ತೊಂದರೆ ಮಾಡುವುದಿಲ್ಲ. ಋಷಿ ಎಲೆಗಳು:- ಇದೊಂದು ಔಷಧಿಯ ಗಿಡಮೂಲಿಕೆ. ಹಿಂದಿನಿಂದ ಇದು ಗುಣಪಡಿಸುವ ಗುಣಧರ್ಮ ಹೊಂದಿದೆ. ಇದರಲ್ಲಿ ಆಮ್ಲಜನಕ ನಿರ್ವಹಣೆ ಮಾಡುವ ಕಿಣ್ವಗಳಿದ್ದು, ಸಸ್ಯ ರಸಾಯನಿಕಗಳು, ಫೆನಾಲಿಕ್ ಆಮ್ಲ ಇವೆ. ಟೀ ಅಥವಾ ಸೂಪ್‍ಗಳಿಗೆ, ಆಹಾರ ಪದಾರ್ಥಗಳಿಗೆ ಇದನ್ನು ಸೇರಿಸಿದರೆ, ಅತ್ಯುತ್ತಮ ರುಚಿ ಹಾಗೂ ಸುವಾಸನೆ ಬರುತ್ತದೆ. ಇಡಿ ಗೋಧಿ ಪಾಸ್ತಾ:- ಮೃದುವಾದ ಗೋಧಿಹಿಟ್ಟಿನಿಂದ ಮಾಡಿದ ಇಟಾಲಿಯನ್ ತಿಂಡಿ ಪಾಸ್ತಾ, ಬಹಳಷ್ಟು ಪೌಷ್ಠಿಕ ದ್ರವ್ಯಗಳನ್ನು ಹೊಂದಿದ್ದು, ಗಂಟಲು ಕೆರೆತಕ್ಕೆ ಒಳ್ಳೆಯದು. ಬಿಸಿ ಪಾಸ್ತಾವನ್ನು ಕಡಿಮೆ ಕೊಬ್ಬಿನ ಗೊಜ್ಜಿನೊಂದಿಗೆ ತಿಂದರೆ ಹಿತ. ನಾರು, ಕಬ್ಬಿಣ, ಸತುವು, B1, B2, B3  ಹಾಗೂ E ಜೀವಸತ್ವಗಳು ಇದರಲ್ಲಿವೆ. ಕುದಿಸಿದ ಗಜ್ಜರಿಗಳು:- ಕಾಯಿಲೆ ಬಂದಾಗ ಗಜ್ಜರಿಗಳಿಂದ ಉತ್ತಮ ಪರಿಹಾರ ಸಿಗುತ್ತದೆ. ಆದರೆ ಅವುಗಳನ್ನು ಚೆನ್ನಾಗಿ ಕುದಿಸಬೇಕು. ಅಥವಾ ಹಬೆಯಲ್ಲಿ ಹಾಯಿಸಬೇಕು. ಹಸಿ ಗಜ್ಜರಿಗಳು ನಿಮ್ಮ ಗಂಟಲು ಕೆರೆತಕ್ಕೆ ಅಪಾಯಕಾರಿ. ಅವು ನಿಮ್ಮ ನೋವನ್ನು ಹೆಚ್ಚಿಸಬಹುದು. ಪೋಷಕಾಂಶಗಳಿಂದ ತುಂಬಿರುವ ಗಜ್ಜರಿಗಳಲ್ಲಿ, ಜೀವಸತ್ವಗಳಾದ A, C, K,  ನಾರು ಹಾಗೂ ಪೊಟ್ಯಾಶಿಯಂ ಇವೆ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!