ಮಗುವಿನ ಬೆಳವಣಿಗೆಯಲ್ಲಿ ಮಸಾಜ್‍ನ ಮಹತ್ವ

 ನಿಮ್ಮ ಮುದ್ದು ಕಂದನ ಬೆಳವಣಿಗೆಯಲ್ಲಿ ಮಸಾಜ್ ಮಹತ್ವದ ಪಾತ್ರ ವಹಿಸುತ್ತದೆ. ಅಮ್ಮನ ಸುಕೋಮಲ ಚೇತೋಹಾರಿ ಸ್ವರ್ಶದ ಮರ್ದನವು ಶಿಶುವಿನ ಬೆಳವಣಿಗೆಗೆ ತುಂಬಾ ಮುಖ್ಯ. ನಿಮ್ಮ ಮಗುವಿಗಾಗಿ ಅನುಸರಿಸಲು ಬಯಸುವ ಕೆಲವು ಪ್ರಾಥಮಿಕ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ.

ಪಾದ ಮತ್ತು ಕಾಲುಗಳಿಗೆ ಆರಾಮ ನೀಡಲು ಮಸಾಜ್ : ಕಾಲಿನ ಮಸಾಜ್ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
  • ಮಗುವಿನ ಕಾಲನ್ನು ನಿಮ್ಮ ಹೆಬ್ಬೆರಳು ಮತ್ತು ಬೆರಳ ತುದಿಗಳಲ್ಲಿ ಹಿಡಿದುಕೊಳ್ಳಿ. ಒಂದು ಕೈಯನ್ನು ಕೆಳಭಾಗದಲ್ಲಿ (ಪೃಷ್ಟದ ಬಳಿ) ಮತ್ತು ಇನ್ನೊಮದು ಕೈಯನ್ನು ಮೇಲ್ಭಾಗದಲ್ಲಿ ಹಿಡಿದುಕೊಳ್ಳಿ.
  • ನಿಮ್ಮ ಹೆಬ್ಬೆರಳು ಮತ್ತು ಬೆರಳು ತುದಿಗಳನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಿ. ನಿಮ್ಮ ಕೈಗಳು ಹಿಂಬದಿಗೆ ಬರಲಿ. ನಿಮ್ಮ ಕೈಗಳ್ಳು ವಿರುದ್ದ ದಿಕ್ಕಿನಲ್ಲಿ ಚಲಿಸಲಿ.
  • ನಿಮ್ಮ ಎರಡೂ ಕೈಗಳ ಬೆರಳುಗಳಿಂದ ಮಗುವಿನ ತೊಡೆಯನ್ನು ಹಿಸುಕಿದಂತೆ ಮಾಡಿ.
  • ಮಗುವಿನ ತೊಡೆಯ ಮೇಲೆ. ಪೃಷ್ಟದ ಬಳಿ ನಿಮ್ಮ ಹೆಬ್ಬೆರಳುಗಳನ್ನು ಒಂದರ ಬದಿಯಲ್ಲಿ ಒಂದನ್ನು ಹಿಡಿದುಕೊಳ್ಳಿ.
  • ಪೃಷ್ಟದಿಂದ ಹಿಂಬದಿವರೆಗೆ, ಒಂದರ ನಂತರ ಒಂದು ಹೆಬ್ಬೆರಳಿನಿಂದ, ಒಂದು ಚಿಕ್ಕ ವೃತ್ತವನ್ನು ಮಾಡಿಕೊಳ್ಳಿ.
ಹೊಟ್ಟೆಗೆ ಆರಾಮ ನೀಡಲು ಉದರ ಮಸಾಜ್ : ಇದು ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
  • ನಿಮ್ಮ ಮಗುವಿನ ಹೊಟ್ಟೆ ಒಂದು ಗಡಿಯಾರದ ರೀತಿ ಇರುತ್ತದೆ ಎಂದು ಭಾವಿಸಿಕೊಳ್ಳಿ.
  • ನಿಮ್ಮ ಬಲಗೈಯನ್ನು 7 ಗಂಟೆಯ ಜಾಗದಲ್ಲಿ ಇಡಿ.
  • ನಿಮ್ಮ ಬಲಗೈಯನ್ನು ನಿಮ್ಮ ಮಗುವಿನ ಹೊಟ್ಟೆಯ ಮೇಲೆ ವೃತ್ತಾಕಾರದಲ್ಲಿ (ಕ್ಲಾಕ್‍ವೈಸ್ ವೃತ್ತದಲ್ಲಿ) 4 ಗಂಟೆಯ ಕಡೆಗೆ ನೇವರಿಸಿ.
  • ಅದೇ ಚಲನೆಯನ್ನು ನಿಮ್ಮ ಎಡಗೈನಿಂದ ಪುನರಾವರ್ತಿಸಿ.

 

ಭುಜ ಮತ್ತು ಎದೆ : ಉಸಿರಾಟದ ಕ್ರಿಯೆ ಹೆಚ್ಚಾಗುತ್ತದೆ ಮತ್ತು ಎದೆಯ ಕಫ ಕಡಿಮೆಯಾಗುತ್ತದೆ.
  • ಎರಡು ಕೈಗಳನ್ನು ಉಪಯೋಗಿಸಿ ನಿಮ್ಮ ಬೆರಳು ತುದಿಗಳು ಮತ್ತು ಹೆಬ್ಬೆರಳಿನಿಂದ ತ್ರಿಕೋನಾಕಾರ ಮಾಡಿ ನಿಮ್ಮ ಅಂಗೈಯನ್ನು ಮಗುವಿನ ಎದೆಯ ಚೆಕ್ಕೆಯ ಮೇಲಿಡಿ. ನಿಮ್ಮ ಬೆರಳು ತುದಿಗಳು ಮಗುವಿನ ಗದ್ದದ ಕಡೆಗಿರಲಿ.
  • ಆ ತ್ರಿಕೋನಾಕಾರದ ಕೈಯನ್ನು ಮಗುವಿನ ಗದ್ದದೆಡೆಗೆ ತನ್ನಿ. ನಂತರ ಕೈಗಳನ್ನು ಪ್ರತ್ಯೇಕಿಸಿ ಮತ್ತು ಅವುಗಳನ್ನು ಎದೆ ತೊಟ್ಟುಗಳ ಸುತ್ತ ನೇವರಿಸಿ. ಮಗುವಿನ ಎದೆಯ ಮೇಲೆ ಹೃದಯದ ಆಕಾರದಲ್ಲಿ ಭಾರ ಹಾಕಿ ತಿಕ್ಕಿರಿ.
  • ನಿಮ್ಮ ಕೈಗಳನ್ನು ಹೃದಯದ ಆಕಾರದಲ್ಲಿ ನೇವರಿಸುತ್ತ ಮಗುವಿನ ಹೊಕ್ಕಳಕ್ಕೆ ಕೈಗಳು ಬಂದು ಕೊನೆಗೊಳ್ಳಲಿ.
ತೋಳುಗಳು ಮತ್ತು ಕೈಗಳು : ಸ್ನಾಯಗಳನ್ನು ಸದೃಢಗೊಳಿಸುತ್ತದೆ. ವಿಷಕಾರಕ ವಸ್ತುಗಳನ್ನು ಹೊರ ಹಾಕುತ್ತದೆ.
  • ವಿಧಾನ 1
  • ಬೆರಳುಗಳನ್ನು ಗದ್ದಕ್ಕೆ ಮುಖ ಮಾಡಿ ನಿಮ್ಮ ಎರಡೂ ಕೈಗಳ ಅಂಗೈಯನ್ನು ನಿಮ್ಮ ಮಗುವಿನ ಎದೆಯ ಮೇಲಿಟ್ಟುಕೊಳ್ಳಿ.
  • ನಿಮ ಎರಡೂ ಕೈಗಳನ್ನು ಒಂದಕ್ಕೊಂದು ಪ್ರತ್ಯೇಕಿಸಿ. ನಿಮ್ಮ ಮಗುವಿನ ಭುಜದಿಂದ ತೋಳುಗಳ ಕಡೆಗೆ ಕೈಗಳಿಗೆ ತಲುಪುವ ತನಕ ಕೆಳಗೆ ತೆಗೆದುಕೊಂಡು ಬನ್ನಿ.
  • ವಿಧಾನ 2
  • ನಿಮ್ಮ ಪ್ರತಿಯೊಂದು ಕೈಯನ್ನು ‘ಸಿ’ ಆಕಾರದಲ್ಲಿ ಇಟ್ಟುಕೊಂಡು ನಿಮ್ಮ ಬೆರಳುಗಳನ್ನು ನಿಮ್ಮ ಮಗುವಿನ ತೋಳಿನ ಮೇಲ್ಭಾಗದ ಸುತ್ತ ಇಟ್ಟುಕೊಳ್ಳಿ. ನಿಮ್ಮ ಹೆಬ್ಬೆರಳು ಮತ್ತು ಬೆರಳ ತುದಿಗಳನ್ನು ಒಮದು ಸಣ್ಣ ಕಪ್ಪು ಹಿಡಿದಂತೆ ಹಿಡಿದುಕೊಳ್ಳಿ.
  • ನಿಮ್ಮ ಮಗುವಿನ ತೋಳಿನಿಂದ ಮಣ್ಣಿಕಟ್ಟಿನವರೆಗೆ ಕೆಳಭಾಗಕ್ಕೆ ತರುತ್ತ ನಿಧಾನವಾಗಿ ಹಿಂಡಿದಂತೆ ಮತ್ತು ಹಿಸುಕಿದಂತೆ ಮಾಡಿ. ನಿಮ್ಮ ಕೈಗಳು ವಿರುದ್ದ ದಿಕ್ಕಿನೆಡೆಗೆ ಚಲಿಸಲಿ.
  • ವಿಧಾನ 3
  • ನಿಮ್ಮ ಮಗುವಿನ ಎಡಗೈಯನ್ನು ನಿಮ್ಮ ಎರಡೂ ಕೈಗಳಿಂದ ಹಿಡಿದುಕೊಳ್ಳಿ (ಸ್ಯಾಂಡ್‍ವಿಚ್ ರೀತಿ)
  • ನಿಮ್ಮ ಬೆರಳುಗಳ ತುದಿಯಿಂದ ನಿಮ್ಮ ಮಗುವಿನ ಕೈನ ಮೇಲ್ಭಾಗದ ಮೇಲೆ ಮಣಿಕಟ್ಟಿನಿಂದ ಬೆರಳುಗಳ ಕಡೆಗೆ ನೇವರಿಸಿ.
  • ಇದೇ ಕ್ರಮವನ್ನು ನಿಮ್ಮ ಮಗುವಿನ ಬ ಗೈಗಾಗಿಯೂ ಅನುಸರಿಸಿ.
ಕಣ್ಣುಗಳಿಗೆ ಆರಾಮ ನೀಡುವ ಮಸಾಜ್
  • ವಿಧಾನ 1
  • ನಿಮ್ಮ ಕೈ ಬೆರಳುಗಳನ್ನು ನಿಮ್ಮ ಮಗುವಿನ ಕೆಳಗಿನ ಕಣ್ಣವೆಯ ಕೆಳಭಾಗಕ್ಕೆ ತನ್ನಿ.
  • ನಿಮ್ಮ ಬೆರಳ ತುದಿಗಳನ್ನು ನಿಮ್ಮ ಮಗುವಿನ ಕಣ್ಣವೆಯ ಮೇಲಿಂದ ಮೇಲೆ ಮತ್ತು ಸುತ್ತಲೂ ನೇವರಿಸಿ
  • ನಿಮ್ಮ ಬೆರಳುಗಳು ಮಗುವಿನ ಕಣ್ಣವೆಗಳ ಮಧ್ಯದಲ್ಲಿ ಕೂಡಿಕೊಳ್ಳಲಿ.
  • ನಿಮ್ಮ ಮಗು ಮಾಡಲು ಅನುವು ಮಾಡಿಕೊಟ್ಟರೆ ಇದೇ ಕ್ರಮವನ್ನು ಮೂರರಿಂದ ಐದು ಬಾರಿ ಪುನರಾವರ್ತನೆ ಮಾಡಿ.
  • ವಿಧಾನ 2
  • ನಿಮ್ಮ ಎರಡೂ ಕೈಗಳ ಬೆರಳ ತುದಿಗಳನ್ನು (ಅಂಗೈ ಕೆಳಗೆ ಮಾಡಿ) ನಿಮ್ಮ ಮಗುವಿನ ಹಣೆಯ ಮಧ್ಯದಲ್ಲಿ ಇಡಿ. ನಿಮ್ಮ ಬೆರಳುಗಳ ತುದಿಗಳು ಮಗುವಿನ ಕೂದಲ ಕೆಳಗಡೆ ಇರಲಿ.
  • ನಿಮ್ಮ ಮಗುವಿನ ಹಣೆಯ ಮೇಲೆ, ಒಂದರ ನಂತರ ಒಂದರಂತೆ ನಿಮ್ಮ ಕೈಗಳನ್ನು ದೂರ ತನ್ನಿ (ನೇವರಿಸುತ್ತ)
  • ನಿಮ್ಮ ಮಗುವಿಗೆ ಇಷ್ಟವಾದಲ್ಲಿ ಅದೇ ಕ್ರಮವನ್ನು ಮೂರರಿಂದ ಐದು ಬಾರಿ ಪುನರಾವರ್ತನೆ ಮಾಡಿ.

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!