ಮಹಿಳೆಯರ ಕಣ್ಣಿನ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕಣ್ಣಿನ ಅಪಾಯಗಳು ಮತ್ತು ಅದನ್ನು ರಕ್ಷಿಸುವ ಮಾರ್ಗಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡುವುದು ಮುಖ್ಯ.
ಕಳೆದ 20 ವರ್ಷಗಳಲ್ಲಿ ನಡೆಸಿದ ಸಂಶೋಧನೆಯು ಪುರುಷರಿಗಿಂತ ಮಹಿಳೆಯರ ದೃಷ್ಟಿ ಹಾನಿ ಮತ್ತು ನಷ್ಟದ ಅಪಾಯವನ್ನು ಹೇಗೆ ಹೆಚ್ಚು ಹೊಂದಿದೆ ಎಂಬುದನ್ನು ತೋರಿಸುತ್ತದೆ. ವಾಸ್ತವವಾಗಿ, ಪುರುಷರಿಗಿಂತ ಮಹಿಳೆಯರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ 12% ಹೆಚ್ಚು. ಮಹಿಳೆಯರಲ್ಲಿ ನಿಯಂತ್ರಿಸಲು ಸಾಧ್ಯವಾಗದ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುವ ಅನೇಕ ಜೈವಿಕ ಅಂಶಗಳಿವೆ. ಆದರೆ, ಅಪಾಯಗಳನ್ನು ತಿಳಿದುಕೊಳ್ಳುವುದರಿಂದ ದೃಷ್ಟಿ ರಕ್ಷಣೆಯತ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ, ಆರೋಗ್ಯಕರ ಕಣ್ಣುಗಳು ಮತ್ತು ದೃಷ್ಟಿ ಹೊಂದಲು ಸಹಾಯ ಮಾಡುತ್ತದೆ .
ಈಸ್ಟ್ರೊಜೆನ್ (ಸಂತಾನೋತ್ಪತ್ತಿ ಮತ್ತು ಲೈಂಗಿಕ ಬೆಳವಣಿಗೆ), ಪ್ರೊಜೆಸ್ಟರಾನ್ (ಋತುಚಕ್ರ ಮತ್ತು ಗರ್ಭಧಾರಣೆಯನ್ನು ನಿಯಂತ್ರಿಸುತ್ತದೆ) ಮತ್ತುಆಂಡ್ರೊಜೆನ್ (ಫಲವತ್ತತೆ, ಮೂಳೆ ದ್ರವ್ಯರಾಶಿ, ಲೈಂಗಿಕ ಆಸಕ್ತಿ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ) – ಇವು ಮುಖ್ಯ ಹಾರ್ಮೋನ್ ಗಳು. ಈ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಯಿಂದಾಗಿ ಕಣ್ಣು ಮತ್ತು ದೃಷ್ಟಿ ಸಮಸ್ಯೆಗಳು ಉಂಟಾಗಬಹುದು. ಪ್ರೌಢಾವಸ್ಥೆ, ಗರ್ಭಾವಸ್ಥೆ ಮತ್ತು ಋತುಬಂಧ ಸಮಯದಲ್ಲಿ ಮಹಿಳೆಯರಲ್ಲಿ ಅನೇಕ ಹಾರ್ಮೋನ್ ಬದಲಾವಣೆ ಯಾಗುತ್ತದೆ.
ಹುಡುಗಿ ಪ್ರೌಢಾವಸ್ಥೆಯನ್ನು ಪ್ರಾರಂಭಿಸಿದಾಗ, ಅವಳ ದೇಹವು ಹೆಚ್ಚು ಕೋಶ-ಉತ್ತೇಜಿಸುವ ಹಾರ್ಮೋನುಗಳು ಮತ್ತು ಲ್ಯುಟೈನೈಜಿಂಗ್ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಇದು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ. ಋತುಚಕ್ರದ ಸಮಯದಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಬದಲಾಗುತ್ತವೆ. ಈ ಹಾರ್ಮೋನ್ ಬದಲಾವಣೆಗಳು ಅವರ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು.
ಮಹಿಳೆಯು ಗರ್ಭಿಣಿಯಾದಾಗ, ಈಸ್ಟ್ರೊಜೆನ್, ಪ್ರೊಜೆಸ್ಟರಾನ್, human chorionic gonadotropin (hCG) and human placental lactogen (hPL) ಹಾರ್ಮೋನ್ ಮಟ್ಟಗಳು ಗಮನಾರ್ಹವಾಗಿ ಬದಲಾಗುತ್ತವೆ. ಈ ಹಾರ್ಮೋನುಗಳು ಗರ್ಭಾವಸ್ಥೆಯಲ್ಲಿ ಕಣ್ಣುಗಳಲ್ಲಿ ಮತ್ತು ಸುತ್ತಲೂ ಸೂಕ್ಷ್ಮವಾದ, ತಾತ್ಕಾಲಿಕ ಬದಲಾವಣೆಗಳನ್ನು ಉಂಟುಮಾಡಬಹುದು. ಹೆರಿಗೆಯಾದ ನಂತರ ಅಥವಾ ತಾಯಿ ಸ್ತನ್ಯಪಾನ ನಿಲ್ಲಿಸಿದ ನಂತರ ಅವು ಸಾಮಾನ್ಯವಾಗಿ ಪರಿಹರಿಸುತ್ತವೆ. ಈ ಬದಲಾವಣೆಗಳು ಕಣ್ಣಿನ ರೆಪ್ಪೆಗಳು, ಕಾರ್ನಿಯಾ ಮತ್ತು ಕಣ್ಣುಗಳ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರಬಹುದು.
ಋತುಬಂಧದ ನಂತರ, ಅಂಡಾಶಯಗಳು ಕಡಿಮೆ ಪ್ರಮಾಣದಲ್ಲಿ ಹಾರ್ಮೋನ್ ಉತ್ಪಾದಿಸುತ್ತದೆ. ಇದು ಒಣ ಕಣ್ಣಿನ ಸಿಂಡ್ರೋಮ್ ಗೆ ಕಾರಣವಾಗಬಹುದು. ಋತುಬಂಧವು ಗ್ಲುಕೋಮಾದ ಅಪಾಯವನ್ನು ಹೆಚ್ಚಿಸು ವ ಸಾಧ್ಯತೆ ಇದೆ.
ಕಣ್ಣಿನ ಪೊರೆಗಳು, ಗ್ಲುಕೋಮಾ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD), ಅಸ್ಪಷ್ಟ ದೃಷ್ಟಿ. ರೆಟಿನಲ್ ಬೇರ್ಪಡುವಿಕೆ – ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಕಣ್ಣಿನ ಸಮಸ್ಯೆಗಳು. ವಿಶ್ವಾದ್ಯಂತ ಗ್ಲುಕೋಮಾ ಪ್ರಕರಣಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮಧುಮೇಹವು ದೃಷ್ಟಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ಉದಾಹರಣೆಗೆ ಡಯಾಬಿಟಿಕ್ ರೆಟಿನೋಪತಿ. ಅಧಿಕ ರಕ್ತದ ಸಕ್ಕರೆಯಿಂದ ರೆಟಿನಾದ ರಕ್ತನಾಳಗಳಿಗೆ ಹಾನಿಯಾಗುವುದರಿಂದ ಡಯಾಬಿಟಿಕ್ ರೆಟಿನೋಪತಿ ಉಂಟಾಗುತ್ತದೆ. ರೆಟಿನಾದ ಈ ಹಾನಿಗೊಳಗಾದ ರಕ್ತನಾಳಗಳು ಸೋರಿಕೆಯಾಗಲು ಪ್ರಾರಂಭಿಸುತ್ತವೆ, ಇದು ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು. ಡಯಾಬಿಟಿಕ್ ರೆಟಿನೋಪತಿಯು ಮ್ಯಾಕ್ಯುಲಾದಲ್ಲಿ ಊತಕ್ಕೆ ಕಾರಣವಾಗಬಹುದು (ಮ್ಯಾಕ್ಯುಲರ್ ಎಡಿಮಾ). ರೋಗಲಕ್ಷಣಗಳನ್ನು ನಿರ್ವಹಿಸದಿದ್ದಲ್ಲಿ ಮ್ಯಾಕ್ಯುಲರ್ ಎಡಿಮಾ ಮತ್ತು ಡಯಾಬಿಟಿಕ್ ರೆಟಿನೋಪತಿ ಎರಡೂ ಕುರುಡುತನಕ್ಕೆ ಕಾರಣವಾಗಬಹುದು.
Also Read: ಡಯಾಬಿಟಿಕ್ ರೆಟಿನೋಪಥಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಪ್ರಮುಖ ರೋಗ
ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್, ಕಣ್ಣುಗಳಲ್ಲಿ ಅಡೆತಡೆಗಳು ಅಥವಾ ರಕ್ತಸ್ರಾವವನ್ನು ಉಂಟುಮಾಡಬಹುದು , ಇದರಿಂದ ದೃಷ್ಟಿ ಹಾಳಾಗಬಹುದು.
ಮಹಿಳೆಯರು ತಮ್ಮ ದೃಷ್ಟಿಯನ್ನು ಹೇಗೆ ರಕ್ಷಿಸಿಕೊಳ್ಳಬಹುದು?
ನಿಮ್ಮ ದೃಷ್ಟಿಯನ್ನು ರಕ್ಷಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಪ್ರಯತ್ನಗಳು:
• ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಿ. 18 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಕಣ್ಣಿನ ಪರೀಕ್ಷೆಯನ್ನು ಮಾಡಬೇಕು. ನಿಮ್ಮ ಹಿರಿಯರಿಗೆ ಕಣ್ಣಿನ ಸಮಸ್ಯೆ ಇದ್ದರೆ ಪ್ರತಿ ವರ್ಷ ಕಣ್ಣಿನ ಪರೀಕ್ಷೆಯನ್ನು ಮಾಡಬೇಕು. ದೃಷ್ಟಿಯಲ್ಲಿ ಜೆನೆಟಿಕ್ಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ವಕ್ರೀಕಾರಕ ದೋಷಗಳು, ಗ್ಲುಕೋಮಾ ಮತ್ತು ಂಒಆ, ದೃಷ್ಟಿ ಪರಿಸ್ಥಿತಿಗಳು ತಳೀಯವಾಗಿ ಹರಡಬಹುದು.
• ಧೂಮಪಾನ ನಿಲ್ಲಿಸಿ. ಧೂಮಪಾನಿಗಳು ಕಣ್ಣಿನ ಪೊರೆ, ಎಎಮ್ಡಿ, ಉರಿಯೂತದ ಪರಿಸ್ಥಿತಿಗಳನ್ನು ಅನುಭವಿಸಬಹುದು.
• ಹೊರಗೆ ಸನ್ಗ್ಲಾಸ್ ಧರಿಸಿ. ನೀವು ಹೊರಗೆ ಹೋಗುವಾಗ ಸನ್ಗ್ಲಾಸ್ ಧರಿಸಿದರೆ, ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಬಹುದು.
• ಸಮತೋಲಿತ ಆಹಾರವನ್ನು ಸೇವಿಸಿ. ಹಣ್ಣುಗಳು, ಪ್ರೋಟೀನ್, ಜೀವಸತ್ವಗಳು, ತರಕಾರಿಗಳು, ಉತ್ಕರ್ಷಣ ನಿರೋಧಕಗಳು ಮತ್ತು ಸಾಕಷ್ಟು ನೀರು ಕುಡಿಯುವುದು ಕಣ್ಣಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
• ಬ್ರಿಸ್ಕ್ ವಾಕಿಂಗ್, ಬೈಸಿಕಲ್ ರೈಡಿಂಗ್, ವಾಟರ್ ಏರೋಬಿಕ್ಸ್ ಮುಂತಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿ.
ಡಾ.ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com Website : www.narayananethralaya.org