ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರಾ ಒತ್ತಡದ ಬದುಕಿಗೆ ಒಳಗಾಗಿದ್ದಾನೆ. ಸದಾ ಒಂದಲ್ಲ ಒಂದು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಆತನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಲೋ ಬ್ಲಡ್ ಪ್ರೆಷರ್ ಕೂಡ ಒಂದು.ಮುಖ್ಯವಾಗಿ ಅತೀ ಕಡಿಮೆ ರಕ್ತದೊತ್ತಡಕ್ಕೆ ಲೋ ಬಿಪಿ ಎನ್ನುತ್ತೇವೆ. ವೈದ್ಯಕೀಯ ಭಾಷೆಯಲ್ಲಿ `ಹೈಪೊಟೆನ್ಷನ್’ ಎಂದು ಕರೆಯಲ್ಪಡುತ್ತೇವೆ. ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 ಮಟ್ಟದಲ್ಲಿರುತ್ತದೆ. ಅದು 90/60ಗಿಂತ ಕಡಿಮೆ ಇದ್ದಾಗ ಲೋ ಬಿಪಿ ಎನ್ನಲಾಗುವುದು.
ಆರೋಗ್ಯವಂತರಲ್ಲಿ ಅದರಲ್ಲೂ ಅಥ್ಲೀಟ್ಗಳಲ್ಲಿ ಲೋ ಬಿಪಿ ಇರುವುದು ಹೃದಯ ರಕ್ತನಾಳಗಳ ಆರೋಗ್ಯ ಮಟ್ಟದಲ್ಲಿದೆ ಎಂಬುದರ ಸೂಚಕವಾಗಿರುತ್ತದೆ. ಆದರೆ ಲೋ ಬ್ಲಡ್ ಪ್ರೆಷರ್ ವಿಶೇಷವಾಗಿ ಹಿರಿಯ ವಯಸ್ಕರಲ್ಲಿ ಹೃದಯಕ್ಕೆ, ಮೆದುಳಿಗೆ ಅಥವಾ ಇತರೆ ಅಂಗಗಳಿಗೆ ಸರಿಯಾಗಿ ರಕ್ತ ಹೋಗದಿರುವುದರ ಸೂಚಕವಾಗಿರುತ್ತದೆ. ದೀರ್ಘಕಾಲದಿಂದ ಲೋ ಬಿಪಿ ಇದ್ದು ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದ್ದಲ್ಲಿ ಹೆಚ್ಚು ಕಡಿಮೆ ಆಗಿ ಗಂಭೀರ ಸ್ಥಿತಿ ಆಗಬಹುದು.
ಕಾರಣವೇನು?
ಅತೀ ಕಡಿಮೆ ರಕ್ತದೊತ್ತಡಕ್ಕೆ ಕಾರಣ ಸ್ಪಷ್ಟವಿಲ್ಲ. ಗರ್ಭಾಧಾರಣೆ, ಥೈರಾಯಿಡ್ (ಕಡಿಮೆ /ಹೆಚ್ಚಾದಾಗ) ಡಯಾಬಿಟಿಸ್ ಅಥವಾ ಬ್ಲಡ್ ಶುಗರ್ ಕಡಿಮೆಯಾಗುವುದು, ಔಷಧ ಚೀಟಿ ಇಲ್ಲದೆ ಸಿಗುವ ಔಷಧಗಳ ಸೇವನೆ, ಬ್ಲಡ್ ಪ್ರೆಷರ್ ಔಷಧಗಳನ್ನು ಓವರ್ಡೋಸ್ನಲ್ಲಿ ಸೇವಿಸಿದಾಗ, ಹೃದಯ ವೈಪಲ್ಯ, ಹೃದಯದ ಲಯ ತಪ್ಪಿದಾಗ, ರಕ್ತನಾಳಗಳು ವಿಶಾಲ ಅಥವಾ ಅಗಲವಾದಾಗ, ವಿಪರೀತ ಬಿಸಲು ಅಥವಾ ಲಿವರ್ ಕಾಯಿಲೆ ಈ ಕಾರಣಗಳಿಂದ ಲೋ ಬಿಪಿ ಆಗಬಹುದು.
ಇದ್ದಕ್ಕಿದ್ದಂತೆ ಬಿಪಿ ಕಡಿಮೆಯಾದರೆ ಪ್ರಾಣಾಪಾಯ ತರಬಲ್ಲದು. ತೀವ್ರ ರಕ್ತಸ್ರಾವ, ದೇಹದ ಉಷ್ಣತೆ ಅತೀ ಕಡಿಮೆ ಆದಾಗ, ಅತೀ ಉಷ್ಣವಾದಾಗ, ಹೃದಯ ಸ್ನಾಯುವಿನ ಕಾಯಿಲೆ, ಹೃದಯ ವೈಪಲ್ಯವಾದಾಗ, ತೀವ್ರ ರಕ್ತದ ಸೋಂಕು, ವಾಂತಿಯ ಕಾರಣ ಡಿಹೈಡ್ರೇಷನ್ ಆದಾಗ, ಅತಿಸಾರ ಅಥವಾ ಜ್ವರ. ಮದ್ಯಪಾನ, ಔಷಧ ಅಲರ್ಜಿ ಇವು ರಕ್ತದೊತ್ತಡ ಕಡಿಮೆಯಾಗಲು ಕಾರಣಗಳಾಗಿವೆ.
`ಪೋಸ್ಚುರಲ್ ಹೈಪೊಟೆನ್ಷನ್
ಆದರೆ ಇದ್ದಕ್ಕಿದ್ದಂತೆ ಬ್ಲಡ್ ಪ್ರೆಶರ್ ಕಡಿಮೆ ಆದಲ್ಲಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆ ಆದಾಗ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸುತ್ತವೆ. ಇದರಿಂದ ತಲೆ ಸುತ್ತು ಅಥವಾ ಚಕ್ಕರ್ ಬಂದಂತೆ ಆಗುವುದು. ಮಲಗಿದ್ದಾಗ ಇದ್ದಕ್ಕಿದ್ದಂತೆ ಕೂರಲು ಅಥವಾ ನಿಲ್ಲಲು ಹೋದಾಗಲೂ ಕೆಲವರಲ್ಲಿ ಬ್ಲಡ್ ಪ್ರೆಷರ್ ಕಡಿಮೆ ಆಗುವುದು. ಇದನ್ನು `ಪೋಸ್ಚುರಲ್ ಹೈಪೊಟೆನ್ಷನ್ (ಯಾವುದೋ ಭಂಗಿಯಲ್ಲಿ ಅತಿ ಕಡಿಮೆ ರಕ್ತದೊತ್ತಡ) ಎನ್ನುತ್ತಾರೆ.
ವಯಸ್ಸಾಗುತ್ತಿದ್ದಂತೆ ಹೈ ಮತ್ತು ಲೋ ಬಿಪಿಯ ರಿಸ್ಕ್ ಹೆಚ್ಚಾಗುತ್ತಾ ಹೋಗುತ್ತದೆ. ವಯಸ್ಸಿನ ಜೊತೆ ಆಗುವ ಬದಲಾವಣೆಗಳು ಇದಕ್ಕೆ ಕಾರಣ. ಅದಲ್ಲದೆ, ಮೆದುಳಿಗೆ ರಕ್ತ ಸಂಚಲನ ವಯಸ್ಸಾಗುತ್ತ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ರಕ್ತನಾಳದಲ್ಲಿ ಸೃಷ್ಟಿಯಾಗುವ ಅಡ್ಡಗೋಡೆಗಳು. 65 ವರ್ಷ ದಾಟಿದವರು ಶೇ. 10ರಿಂದ 20 ಮಂದಿಯಲ್ಲಿ ಪೋಸ್ಚುರಲ್ ಹೈಪೊಟೆನ್ಷನ್ ಇರುತ್ತದೆ ಎಂದು ಅಂದಾಜಿಸಲಾಗಿದೆ.
ಯಾರ್ಯಾರಿಗೆ ಬರಬಹುದು?
ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧ ತೆಗೆದುಕೊಳ್ಳುವವರಲ್ಲಿ ಪೋಸ್ಚುರಲ್ ಹೈಪೋಟೆನ್ಷನ್ ಅತಿ ಸಾಮಾನ್ಯ. ಗರ್ಭಧಾರಣೆ, ವಿಪರೀತ ಭಾವನ್ಮಾತಕ ವ್ಯಕ್ತಿತ್ವ, ರಕ್ತನಾಳಗಳು ಕಠಿಣವಾದಾಗ ಅಥವಾ ಡಯಾಬಿಟಿಸ್. ಹಿರಿಯ ವಯಸ್ಕರಲ್ಲಿ ಇದು ತೀರಾ ಕಾಡುತ್ತದೆ, ಅದರಲ್ಲೂ ವಿಪರೀತ ಬ್ಲಡ್ಪೆಷರ್ ಇರುವವರಲ್ಲಿ.ಪೋಸ್ಚುರಲ್ ಹೈಪೊಟೆನ್ಷನ್ಗೆ ಕಾರಣಗಳು ಹಲವಾರು- ದೇಹದ ದ್ರವ ಕಡಿಮೆ ಆದಲ್ಲಿ, ಆಹಾರ ಇಲ್ಲದಿದ್ದರೆ, ಬಿಸಿಲಲ್ಲಿ ಬಹುಕಾಲ ನಿಂತಾಗ ಅಥವಾ ತೀರಾ ದಣಿವಾದಾಗ, ಕೆಲವರಲ್ಲಿ ವಯಸ್ಸಿನ ಕಾರಣದಿಂದಲೂ ಔಷಧ, ಆಹಾರ, ಮಾನಸಿಕ ಒತ್ತಡಗಳಿಂದ ಹೀಗಾಗುತ್ತದೆ.ಹಲವಾರು ಔಷಧಗಳು ಹೈಪೊಟೆನ್ಷನ್ ಉಂಟು ಮಾಡುತ್ತದೆ ಎಂದು ಹೇಳಬಹುದು. ಆದ್ದರಿಂದ ಲೋ ಬಿಪಿಯನ್ನು ಯಾರೂ ಕೂಡ ನಿರ್ಲಕ್ಷಿಸಲಾಗದು. ಹಾಗಾಗಿ ಸೂಕ್ತ ವೇಳೆಯಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆಗೆ ಮುಂದಾಗುವುದು ಸೂಕ್ತ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com