ಜೀವನಶೈಲಿ ಮತ್ತು ಅನಾರೋಗ್ಯ

 

ಡಿ.ಎ. ಕಲ್ಪಜ

ಜೀವನಶೈಲಿ ಅಥವಾ ಲೈಫ್‍ಸ್ಟೈಲ್ ಒಬ್ಬ ವ್ಯಕ್ತಿ, ಸಮೂಹ ಅಥವಾ ಸಂಸ್ಕøತಿಯ ವಿಶಿಷ್ಟ ಮಾರ್ಗವಾಗಿದ್ದು, ಆರೋಗ್ಯ, ಸಂಬಂಧಗಳು, ಹಣಕಾಸುಗಳು ಹಾಗೂ ಇತರ ವಾಸ್ತವ ಜೀವನದ ವಿಷಯಗಳೂ ಆಗಿವೆ. ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯವು ಜೀವನದ ಗುಣಮಟ್ಟವಾಗಿದ್ದು, ಇದು ವ್ಯಕ್ತಿಯ ದೈಹಿಕ ಸ್ಥಿತಿ, ಅವರ ಮಾನಸಿಕ ಮತ್ತು ಭಾವನಾತ್ಮಕ ಸಂದ್ಪನೆಗಳ ನಡುವೆ ಚಲನಾತ್ಮಕ ಪ್ರಭಾವ ಹಾಗೂ ಪರಸ್ಪರ ಅವಲಂಬನೆಯನ್ನು ಒಳಗೊಂಡಿದೆ. ಜನರು ಬದುಕುವ ಮಾರ್ಗ, ಅವರ ಅಭ್ಯಾಸಗಳು ಮತ್ತು ನಡವಳಿಕೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ಅನೇಕ ಜನರು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ತಮ್ಮ ಜೀವನಶೈಲಿಯನ್ನು ಗಂಭೀರವಾಗಿ ಪರಿಶೀಲಿಸುತ್ತಾರೆ. ಆನಾರೋಗ್ಯಕ್ಕೆ ಒಳಗಾಗುವಿಕೆ ಅಥವಾ ಗಾಯಗೊಳ್ಳುವಿಕೆ ಜೀವನಕ್ಕೆ ಗಂಭೀರ ಸ್ವರೂಪದಲ್ಲಿ ಅಡ್ಡಿಪಡಿಸಿ, ದಿನನಿತ್ಯದ ಚಟುವಟಿಕೆಗಳಿಗೆ ಅಡಚಣೆ ಉಂಟು ಮಾಡುತ್ತದೆ ಹಾಗೂ ಕೆಲಸ ಕಾರ್ಯಗಳು, ಸಂಬಂಧಗಳು ಹಾಗೂ ವಿರಾಮದ ಬದುಕಿಗೆ ತೊಂದರೆ ನೀಡುತ್ತದೆ. ಇನ್ನು ಕೆಲವು ಜೀವನ ಶೈಲಿ ಅಂಶಗಳು ಚೇತರಿಕೆಗೆ ಅಡ್ಡಿ ಉಂಟುಮಾಡುವ ಅಥವಾ : ಅನಾರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಹಾಗೂ ರೋಗ ಲಕ್ಷಣ-ಚಿಹ್ನೆಗಳನ್ನು ಹೆಚ್ಚಿಸುವ ಮೂಲಕ ಈಗಾಗಲೇ ಇರುವ ಒತ್ತಡದ ಸನ್ನಿವೇಶವನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ.ನಕರಾತ್ಮಕ ಆಲೋಚನೆ ಮತ್ತು ಚಿಂತೆಗಳು, ಒತ್ತಡ ಮತ್ತು ಭಾವೋದ್ವೇಗ, ಆಹಾರ, ವ್ಯಾಯಾಮ, ಬೊಜ್ಜು, ಧೂಮಪಾನ, ಮಾದಕ ವಸ್ತುಗಳು, ಔಷಧಿಗಳು, ನಿದ್ರೆ ಹಾಗೂ ಸಾಮಾಜಿಕ ಸಹಕಾರ ಇವುಗಳು ಜೀವನಶೈಲಿಯ ಭಾಗಗಳಾಗಿವೆ.ನಿಮಗೆ ನಿಜವಾಗಲೂ ಆರೋಗ್ಯದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂಬ ಮನಸ್ಸಿದ್ದರೆ, ನೀವು ಸಂಪೂರ್ಣವಾಗಿ ಪರಿವರ್ತಿಸಿಕೊಳ್ಳಲೇಬೇಕಾದ ಜೀವನಶೈಲಿ ಇಲ್ಲಿದೆ.ಜೀವನದಲ್ಲಿ ಅನುಸರಿಸಬೇಕಾದ ಕೆಲವು ಮಾರ್ಪಾಡುಗಳೆಂದರೆ

  • ನಿಮ್ಮ ಜೀವನವನ್ನು ಪುನರ್ ನಿರ್ದೇಶನ ಮಾಡಿಕೊಳ್ಳಿ : ಅಂದರೆ, ಜೀವನ ಸಾಗುವ ದಿಕ್ಕನ್ನು ಸರಿಪಡಿಸಿ ಅಥವಾ ಬದಲಾಯಿಸಿ. ಚಿಂತನೆ, ಆಲೋಚನೆಗಳನ್ನು ಬದಲಿಸಿ ನಿಮ್ಮ ಜೀವನವನ್ನು ಮಾರ್ಪಡಿಸಿಕೊಳ್ಳಿ.
  • ದೈಹಿಕ ಮತ್ತು ಮಾನಸಿಕವಾಗಿ ನಿಮ್ಮ ಜೀವನವನ್ನು ಸಮತೋಲನ ಮಾಡಿಕೊಳ್ಳಿ : ಹೀಗಾಗಿ, ಅಧಿಕ ಪೌಷ್ಠಿಕಾಂಶ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ, ಹೆಚ್ಚು ನಿದ್ರೆ ಮಾಡಿ, ನಿಯತವಾಗಿ ವ್ಯಾಯಾಮ ಮಾಡಿ.
  • ಕ್ರಿಯಾಶೀಲತೆ ಮತ್ತು ಸ್ವಯಂ ವೃದ್ಧಿ ಕಾರ್ಯತಂತ್ರಗಳಿಗೆ ಪ್ರೋತ್ಸಾಹ ನೀಡಿ : ದೇಹದತ್ತ ಗಮನವಹಿಸುವಿಕೆ, ತೂಕ ನಿರ್ವಹಣೆ, ವ್ಯಕ್ತಿತ್ವ ವಿಕಸನ, ದೇಹ ಭಾಷ್ಯ, ಸ್ವಯಂ ಉತ್ತೇಜನ ಹಾಗೂ ಸುಧಾರಿತ ಸಂವಹನ ಕೌಶಲ್ಯಗಳನ್ನು ಕಾರ್ಯರೂಪಕ್ಕೆ ತನ್ನಿ.
  • ಮಾನಸಿಕ ಸೌಂದರ್ಯ ಮತ್ತು ಸಾಮಥ್ರ್ಯ ಸುಧಾರಣೆ : ಸ್ವಯಂ ಸ್ಫೂರ್ತಿ, ಸ್ವ-ಪ್ರೇರಣೆ, ಆತ್ಮವಿಶ್ವಾಸ ಹಾಗೂ ಆತ್ಮ ಸ್ಥೈರ್ಯದ ಮೂಲಕ ಇದನ್ನು ಸಾಧಿಸಬಹುದಾಗಿದೆ.
  • ಮನಸ್ಸಿನ ನಿಯಂತ್ರಣ : ಧ್ಯಾನ, ನಮ್ಮ ಚಿಂತನೆಗಳನ್ನು ಗಮನಿಸುವಿಕೆ ಹಾಗೂ ದೃಶ್ಯೀಕರಣ ಸೃಷ್ಟಿ ಮೂಲಕ ಇದನ್ನು ಕಾರ್ಯಗತಗೊಳಿಸಬಹುದಾಗಿದೆ.
  • ನಕರಾತ್ಮಕ ಆಲೋಚನೆಗೆ ಆಸ್ಪದ ಬೇಡ : ನಕರಾತ್ಮಕ ಚಿಂತನೆ-ಆಲೋಚನೆಗಳಿಗೆ ಅವಕಾಶ ನೀಡದಿರುವಿಕೆ, ಕೋಪ ನಿಯಂತ್ರಣ, ಭಯ-ಆತಂಕ ಮತ್ತು ಖಿನ್ನತೆ-ಹತಾಶೆ ನಿವಾರಣೆ ಮತ್ತು ಒತ್ತಡ ನಿಯಂತ್ರಣದ ಮೂಲಕ ಇದು ಸಾಧ್ಯ.
  • ಸಾಮಾಜಿಕ ಏಕತೆ : ವೈವಾಹಿಕ ಸ್ಥಾನಮಾನ, ಸ್ವಯಂಸೇವಾ ಸಂಘ-ಸಂಸ್ಥೆಗಳೊಂದಿಗೆ ಸದಸ್ಯತ್ವ ಹಾಗೂ ಬಂಧು-ಮಿತ್ರರೊಂದಿಗೆ ಒಡನಾಟದ ಆಧಾರದ ಮೇಲೆ ಸಾಮಾಜಿಕ ಸಂಪರ್ಕಗಳ ವ್ಯಕ್ತಿಗತ ವರದಿಯಿಂದ ಸಾಮಾಜಿಕ ಏಕತೆ ಸಾಧ್ಯ.

ಮಾನವರಾಗಿ ನಾವು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಸಣ್ಣಪುಟ್ಟ ವಿಷಯಗಳನ್ನು ದೊಡ್ಡ ಸಮಸ್ಯೆಯಾಗಿ ಮಾಡುವುದನ್ನು ತಪ್ಪಿಸಬೇಕು. ಜೀವನದಲ್ಲಿ ಯಾವುದೂ ನಿಖರವಲ್ಲ. ಈ ದೇಹವು ನಿಮ್ಮ ಮನಸು ಮತ್ತು ನಿಮ್ಮ ಆತ್ಮದ ದೇಗುಲ.ಆರೋಗ್ಯಕರ ಜೀವನಶೈಲಿ ಹೊಂದುವುದು ಪ್ರಜ್ಞಾಪೂರ್ವಕ ನಿರ್ಧಾರ. ಇದನ್ನು ನಿರ್ಲಕ್ಷಿಸಿದವರು ಅನೇಕ ಅನಾರೋಗ್ಯ ಅತಂಕಗಳಿಗೆ ಗುರಿಯಾಗುತ್ತಾರೆ. ನೀವು ಆರೋಗ್ಯಕರ ಜೀವನಶೈಲಿಗೆ ಒಳಪಡಲು ತುಂಬಾ ಚಿಕ್ಕವರೂ ಅಲ್ಲ ಇಲ್ಲವೇ ತುಂಬಾ ವಯಸ್ಸಾದವರೂ ಅಲ್ಲ. ಹೀಗಾಗಿ ಜೀವನಶೈಲಿಯ ಪ್ರಾಮುಖ್ಯತೆಯನ್ನು ಮನಗಂಡು ಈಗಿನಿಂದಲೇ ಕಾರ್ಯತತ್ಪರರಾಗಿ. ಆರೋಗ್ಯ. ಸಂತೋಷ ಮತ್ತು ನೆಮ್ಮದಿ ನಿಮ್ಮದಾಗಲಿ.

-ಡಿ.ಎ. ಕಲ್ಪಜ
ಪ್ರಧಾನ ಸಂಪಾದಕರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!