ಲಕ್ಷ್ಮಿತಾರು- ಅಮೃತ ಸಂಜೀವಿನಿ

ಇಂಗ್ಲೀಷ್ : ಸೀಮಾರೂಬ, ಪಾರಡೈಸ್ ಟ್ರೀ
ಬೊಟಾನಿಕಲ್ : ಸೀಮಾರೂಬ ಗ್ಲೌಕಾ
ಹಿಂದಿ : ಲಕ್ಷ್ಮಿತಾರು
ಲಕ್ಷ್ಮಿತಾರು ಎಂಬ ಎಲೆಗಳು ನಮಗೆ ನಿಸರ್ಗವು ನೀಡಿರುವ ಒಂದು ಅದ್ಭುತವಾದ ವರದಾನವಾಗಿದೆ. ಇದರಲ್ಲಿ ಇರುವಂತಹ ಔಷಧೀಯ ಗುಣಗಳು ಮಾನವನಿಗೆ ಅಮೃತ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತದೆ. ತಾಯಿಯ ಗರ್ಭವು ಮಗುವಿಗೆ ವಜ್ರ ಕಚವದಂತೆ ಹೇಗೆ ಕೆಲಸ ಮಾಡುತ್ತದೆಯೋ, ಮಗುವು ಗರ್ಭದಿಂದ ಆಚೆ ಬಂದು ಮಣ್ಣು ಸೇರುವ ತನಕ ಲಕ್ಷ್ಮೀತಾರು ಎಲೆಗಳು ತಾಯಿಯಂತೆ ಹಾಗೂ ತಾಯಿ ಗರ್ಭದಂತೆ ರಕ್ಷೆಯನ್ನು ಮಾನವನಿಗೆ ನೀಡುತ್ತದೆ. ಆದ್ದರಿಂದ ಈ ಮರವನ್ನು ತಾಯಿಗೆ ಹೋಲಿಸಲಾಗಿದೆ. ತಾಯಿ ಲಕ್ಷ್ಮೀತಾರು ಎಂದೇ ಪ್ರಸಿದ್ಧಿಯಾಗಿದೆ. ಸಂಜೀವಿನಿ ಪರ್ವತವೆಂದೆ ಹೆಸರಾಗಿರುವ ಸಹ್ಯಾದ್ರಿ ತಪ್ಪಲ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಈ ಮರಗಳು ಕಾಣಸಿಗುತ್ತವ.
ಲಕ್ಷ್ಮೀತಾರುವಿನ ಸಮೂಲಾಗ್ರದಿಂದ ತಯಾರಿಸಲಾದ ಕಷಾಯವನ್ನು ಔಷಧ ರೂಪದಲ್ಲಿ ಸೇವನೆ ಮಾಡುವುದರಿಂದ ಆಗುವಂತಹ ಉಪಯೋಗಗಳು : ಅಸ್ತಮಾ, ಶ್ವಾಸಕೋಶದ ಸೋಂಕು, ಸಂದಿವಾತ, ಯಕೃತ್ (ಲಿವರ್) ಸಂಬಂಧಿತ ಖಾಯಿಲೆಗಳು, ಸ್ತನಗಳ ಕ್ಯಾನ್ಸರ್, ಮಲೇರಿಯಾ, ಚಿಕೂನ್ ಗುನ್ಯಾ, ಸ್ವೈಸ್ ಫ್ಲೂ, ಸರ್ಪಸುತ್ತು, ಕಾಮಾಲೆ ರೋಗ, ಗರ್ಭಕೋಶದ ಗುಳ್ಳೆಗಳು (ಪಿಸಿಒಡಿ), ಋತುಬಂಧಕ್ಕೆ ಸಂಬಂಧಿತ ಕಾಯಿಲೆಗಳು, ಪ್ರಾಸ್ಟೇಟ್ ಗ್ರಂಥಿಯ ಎಲ್ಲಾ ವಿಧವಾದ ಕಾಯಿಲೆಗಳು, ಕೆಮ್ಮು ಕಫ, ನೆಗಡಿ, ಸೋಂಕು, ಬಾಯಿಯಿಂದ ಬರುವ ದುರ್ವಾಸನೆ, ವಸಡಿನ ರಕ್ತಸ್ರಾವ, ಹುಳುಕು ಹಲ್ಲುಗಳು, ಹಲ್ಲುನೋವು, ಬಾಯಿ ಹುಣ್ಣು ಹಾಗೂ ಪ್ರಥಮ ಮತ್ತು ದ್ವಿತೀಯ ಹಂತದ ಕ್ಯಾನ್ಸರ್‌ನಂತ ಮಾರಕ ಕಾಯಿಲೆಗಳು ಇದರಿಂದ ಗುಣವಾಗುತ್ತದೆ.
ಇದರ ಔಷಧಿಯನ್ನು ಸರಳವಾಗಿ ಮನೆಯಲ್ಲೇ ತಯಾರಿಸಬಹುದಾಗಿದೆ. ತಯಾರಿಸುವ ವಿಧಾನವು ತುಂಬಾ ಸರಳವಾಗಿದೆ. ಲಕ್ಷ್ಮಿತಾರುವಿನಿಂದ ತಯಾರಾದ ಔಷಧಿಯನ್ನು ಪ್ರತಿಯೊಬ್ಬರು ಪ್ರತಿನಿತ್ಯ ಮೂರು ಬಾರಿ ಸೇವಿಸಬೇಕು. ಎಲ್ಲಾ ವಿಧವಾದ ಕಾಯಿಲೆಗಳನ್ನು ನಿಯಂತ್ರಿಸಲು ಪ್ರತಿವರ್ಷ 45 ದಿನಗಳ ಕಾಲ ಲಕ್ಷ್ಮೀತಾರುವಿನ ಮಾಸವನ್ನು ಆಚರಿಸಬೇಕು. ಅಂದರೆ ವರ್ಷದಲ್ಲಿ ಯಾವ ಋತುವಿನಲ್ಲಾದರೂ ಜನವರಿ ಅಥವಾ ಯುಗಾದಿಯ ನಂತರ ಅಥವ ಜೂನ್ ತಿಂಗಳಲ್ಲಿ ಸತತವಾಗಿ 45 ದಿನಗಳ ಕಾಲ ಮನೆಯ ಎಲ್ಲಾ ಸದಸ್ಯರು ಲಕ್ಷ್ಮೀತಾರುವಿನ ಸಮೂಲಾಗ್ರ ಕಷಾಯವನ್ನು ಸೇವಿಸುವುದರಿಂದ ಆಯುಷ್ಯ ವೃದ್ಧಿಯಾಗಿ ಜೀವನವಿಡೀ ಆರೋಗ್ಯವಂತರಾಗಿ ಜೀವಿಸಲು ಸಹಕಾರಿಯಾಗಿದೆ.
ವಿಶೇಷ ಸೂಚನೆ: ಅಸ್ತಮಾ ಹಾಗೂ ಕ್ಯಾನ್ಸರ್ ಕಾಯಿಲೆ ಇರುವವರು ಲಕ್ಷ್ಮೀತಾರುವಿನ ಕಷಾಯ ಸೇವನೆಯಿಂದ ಪೂರ್ಣ ಗುಣ ಹೊಂದುವರು.
ಪಥ್ಯ: ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಹಾಗೂ ಮಾಂಸ ಆಹಾರದಿಂದ ದೂರವಿರಬೇಕು.
ಈ ಮರದಿಂದ ತಯಾರಿಸಲಾದ ಬಾಗಿಲು, ನಿಲುವು, ಕಿಟಕಿಗಳು, ಅಡಿಗೆ ಮನೆಯ ಪರಿಕರಗಳ ಬಳಕೆಯಿಂದ ಉತ್ತಮ ಆರೋಗ್ಯ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಸುವುದು.ಲಕ್ಷ್ಮೀತಾರು ಸಮೂಲಾಗ್ರದಿಂದ ತಯಾರಾದ ಗೊಬ್ಬರವು ದೇಶೀ ಗೋವಿನ ರಸಗೊಬ್ಬರಕ್ಕೆ ಸಮಾನವಾಗಿರುತ್ತದೆ.
ಈ ಎಲೆಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಯಾದ ವಿವೇಕ್ ಆನಂದ್ ಎನ್ನುವವರು ಪೂರೈಸುತ್ತಿದ್ದಾರೆ. ಕೇವಲ ಸಾರಿಗೆ ವೆಚ್ಚವನ್ನು ಭರಿಸಿದರೆ ಸಾಕು ಎಲೆಗಳು ಲಭ್ಯವಾಗುತ್ತದೆ. ಬಡವರಿಗೆ ಉಚಿತವಾಗಿ ಈ ಎಲೆಗಳನ್ನು ಪೂರೈಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಸೌಮ್ಯ ಟಿ.ಎಸ್., ಮೊ: 9242085304

ಕೆ.ವಿ. ರಾಜಶೇಖರ
ರೇಖಿಮಾಸ್ಟರ್, ಸೂಜೋಕ್ ಥೆರಪಿಸ್ಟ್
ಡ್ರಗ್‌ಲೆಸ್ ಥೆರಪಿ ಸೆಂಟರ್,

ಎಸ್‌ಎಎಸ್ ಮೆಡಿಕಲ್ಸ್ ಹಿಂಭಾಗ,

ಬಗಲಗುಂಟೆ ಮುಖ್ಯರಸ್ತೆ, ಬೆಂಗಳೂರು-560073
ಮೊ. : 9343036153

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!