Health Vision

Health Vision

SUBSCRIBE

Magazine

Click Here

ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾಗೆ ಆಯುರ್ವೇದ ಚಿಕಿತ್ಸೆ

ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾಗೆ ಆಯುರ್ವೇದ ಚಿಕಿತ್ಸೆ ಯಾವುದೇ ತೊಡಕುಗಳು ಅಥವಾ ಹಾನಿ ಇಲ್ಲದ ಪರಿಣಾಮಕಾರಿ ಸಿದ್ಧೌಷಧ. ದೀರ್ಘಕಾಲದ ಸವಾರಿ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವಿಕೆ,  ಹಾಗೂ ಲೋಹ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು.

ಆಯುರ್ವೇದವು ಇಂದಿಗೂ ಪ್ರಸ್ತುತವಾಗಿರುವ ಪ್ರಾಚೀನ ವೈದ್ಯಕೀಯ ಪರಂಪರೆ ಮತ್ತು ಯಶಸ್ವಿ ಚಿಕಿತ್ಸೆಯ ಅನುಭವಗಳ ದಾಖಲೆಯಾಗಿದೆ. ಆಯುರ್ವೇದದಲ್ಲಿ ಚಿಕಿತ್ಸೆಯು ಕೇವಲ ರೋಗವನ್ನು ವಾಸಿ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ರೋಗಿಯು ಪರಿಪೂರ್ಣ ಆರೋಗ್ಯ ಹೊಂದಿ ಸಾಮಾನ್ಯ ಸ್ಥಿತಿಗೆ ಮರಳುವ ಗುರಿಯನ್ನು ಹೊಂದಿದೆ. ಆಯುರ್ವೇದದಲ್ಲಿ ಚಿಕಿತ್ಸಾ ವಿಧಾನವು ಔಷಧ, ಪಥ್ಯಾಹಾರ, ದಿನನಿತ್ಯದ ವಾತಾವರಣ ಹಾಗೂ ಮಾನಸಿಕ ಆರೋಗ್ಯ ಈ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸಾ ವಿಧಾನವಾದ ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾ ಸೇರಿದಂತೆ ಗುದದ್ವಾರಕ್ಕೆ ಸಂಬಂಧಿಸಿದ ಅನೇಕ ರೋಗಗಳನ್ನು ವಾಸಿ ಮಾಡಬಹುದಾಗಿದೆ.

ಮೂಲವ್ಯಾಧಿ ಮತ್ತು ಮೂಲವೃಣದಂತ ಗುದದ್ವಾರಕ್ಕೆ ಸಂಬಂಧಿಸಿದ ದೋಷಗಳಿಗೆ ಯಾವುದೇ ತೊಡಕುಗಳು ಅಥವಾ ಹಾನಿ ಇಲ್ಲದೇ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಸಿದ್ಧೌಷಧ ಆಯುರ್ವೇದದಲ್ಲಿದೆ. ಆಧುನಿಕ ಔಷಧಿಗಳ ತಾಂತ್ರಿಕ ಸುಧಾರಣೆಗಳು ಏನೇ ಇದ್ದರೂ, ಪೈಲ್ಸ್ ಮತ್ತು ಫಿಸ್ತುಲಾ ಸೇರಿದಂತೆ ಗುದದ್ವಾರಕ್ಕೆ ಸಂಬಂಧಪಟ್ಟ ರೋಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಹಾಗೂ ನೋವು, ಉರಿ, ರಕ್ತಸ್ರಾವ, ಚಿಕಿತ್ಸೆ ನಂತರ ಅಂಗದ ಮೇಲೆ ಹತೋಟಿ ಇಲ್ಲದಿರುವಿಕೆಯಂತಹ ಹಲವಾರು ತೊಡಕುಗಳು ಕಾಣಿಸಿಕೊಳ್ಳುತ್ತವೆ.

ಮೂಲವ್ಯಾಧಿಗೆ ಕಾರಣಗಳು:

1. ಮಲಬದ್ದತೆ

2. ದೀರ್ಘಕಾಲ ಒರಟಾದ ಕುರ್ಚಿಯಲ್ಲಿ ಒಂದೇ ಸ್ಥಳದಲ್ಲಿ ಕುಳಿತಿರುವಿಕೆ.

3. ಅಧಿಕ ಸವಾರಿ ಅಥವಾ ವಾಹನ ಚಾಲನೆ,ನಿರಂತರ ಸುದೀರ್ಘ ಪ್ರಯಾಣ.

4. ವಿಪರೀತ ಮಾಂಸಾಹಾರ ಮತ್ತು ಸಂಬಾರ ಪದಾರ್ಥಗಳ ಸೇವನೆ.

5. ಅನುವಂಶೀಯ ಕಾರಣ

ರೋಗ ಲಕ್ಷಣಗಳು ಮತ್ತು ಚಿಹ್ನೆಗಳು:

1. ಗುದದ್ವಾರದ ಸ್ಥಳದಲ್ಲಿ ನೋವು ಮತ್ತು ಉರಿಯ ಅನುಭವ

2. ಗುದದ್ವಾರದಲ್ಲಿ ರಕ್ತಸ್ರಾವ

3. ಮಲಬದ್ಧತೆ

4. ಮೂಲವ್ಯಾಧಿಯ ಸಮೂಹ, ಮೊಳೆ ರೋಗ

ರೋಗ ಅಧ್ಯಯನ : ಗುದದ್ವಾರ ಪ್ರದೇಶದ ರಕ್ತನಾಳಗಳು ವಿಸ್ತಾರವಾಗುವಿಕೆಯಿಂದ ತೀವ್ರ ನೋವು, ರಕ್ತಸ್ರವಾಕ್ಕೆ ಕಾರಣವಾಗುತ್ತದೆ.

ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆ:

piles

ಆಯುರ್ವೇದವು ಚಿಕಿತ್ಸೆಯ ನಾಲ್ಕು ಸಾಲುಗಳನ್ನು ವಿವರಿಸುತ್ತದೆ. ಔಷಧಿಗಳು ಕ್ಷಾರಕರ್ಮ, ಶಸ್ತ್ರಕರ್ಮ (ಶಸ್ತ್ರಚಿಕಿತ್ಸೆ) ಹಾಗೂ ಅಗ್ನಿಕರ್ಮ, ಕ್ಷಾರಕರ್ಮ ಚಿಕಿತ್ಸೆಯಲ್ಲಿ ಮುಖ್ಯ ಸಾಲು ಆಗಿದೆ. ಕ್ಷಾರಸೂತ್ರವು ಔಷಧಿಯುಕ್ತ ಸೂತ್ರ. ಸ್ನುಹಿ-ಲಾಟೆಕ್ಸ್ ಮತ್ತು ಅರಿಶಿಣದ ಪುಡಿಯನ್ನು ಏಕರೂಪವಾಗಿ 3.-7 ಬಾರಿ ಲೇಪಿಸಿ ಕ್ಷಾರಸೂತ್ರ ಪೆಟ್ಟಿಗೆಯಲ್ಲಿ ಒದಗಿಸಲಾಗುತ್ತದೆ ಹಾಗೂ ಗಾಳಿ ಹೋಗದ ಶಿಷೆಯನ್ನು ಇರಿಸಲಾಗುತ್ತದೆ. ರೋಗಿಯನ್ನು ಬೋರಲಾಗಿ ಮಲಗಿಸಿ ಮೊಳೆ ಸಮೂಹವನ್ನು ಗುರುತಿಸಲಾಗುತ್ತದೆ ಹಾಗೂ ರಕ್ತಸ್ರಾವವನ್ನು ತಡೆಯಲು ರಕ್ತವಾಹಿನಿಯನ್ನು ಔಷಧಯುಕ್ತ ಸೂತ್ರದಿಂದ (ದಾರ) ಕಟ್ಟಲಾಗುತ್ತದೆ.

ಅಲ್ಪಪ್ರಮಾಣದ ನೋವು ಮತ್ತು ರಕ್ತಸ್ರಾವವಲ್ಲದೇ 10-15 ನಿಮಿಷಗಳಲ್ಲಿ ವಿಧಾನ ಪೂರ್ಣಗೊಳ್ಳುತ್ತದೆ. ಮೊಳೆಗಳು 5-7 ದಿನಗಳಲ್ಲಿ ಉದುರುತ್ತದೆ. ಚಿಕಿತ್ಸೆಗೆ ಒಳಪಟ್ಟ ದಿನದಿಂದಲೇ ರೋಗಿಯು ತನ್ನ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ಒಂದು ವಾರ ಕಾಲ ಔಷಧಿ ನೀಡಲಾಗುತ್ತದೆ. ಪಿಸ್ತುಲಾ ಗುದನಾಳದ ಹೊರಗೆ ಸಂಪರ್ಕ ಹೊಂದುವಂತಹ ನಾಳವಾಗಿರುತ್ತದೆ. ಚಿಕಿತ್ಸೆ ವೇಳೆ ತಪಾಸಣೆ ಮೂಲಕ ನಾಳವನ್ನು ಪತ್ತೆ ಮಾಡಲಾಗುತ್ತದೆ ಹಾಗೂ ದಾರವನ್ನು ಸೇರಿಸಿ ಕೊನೆ ಭಾಗದಲ್ಲಿ ಗಂಟು ಹಾಕಲಾಗುತ್ತದೆ. ನಾಳದ ಉದ್ದದ ಆಧಾರದ ಮೇಲೆ 3-7 ವಾರಗಳ ಕಾಲ ವಾರಕ್ಕೊಮ್ಮೆ ಇದನ್ನು ಬದಲಿಸಬೇಕಾಗುತ್ತದೆ. ಹಾನಿ ಇಲ್ಲದೇ ಇದು ತಾನಾಗಿಯೇ ಗುಣಮುಖವಾಗುತ್ತದೆ.

ರೋಗಿಯ ಪಚನಕ್ರಿಯೆ ಅಥವಾ ಜೀರ್ಣಶಕ್ತಿಯ ಸಾಮಥ್ರ್ಯ ಕುಗ್ಗುವುದರಿಂದ ಮೂಲವ್ಯಾಧಿ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಆಯುರ್ವೇದ ಔಷಧಿಯು ರೋಗಿಯ ಜೀರ್ಣಶಕ್ತಿಯನ್ನು ಸುಧಾರಿಸುವ ಗುರಿಯನ್ನು ಸಹ ಹೊಂದಿರುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಔಷಧಿಯ ಮೂಲಕ ಗುಣಪಡಿಸಬಹುದಾಗಿದೆ. ಉಪ್ಪಿನೊಂದಿಗೆ ಮಜ್ಜಿಗೆಯು ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಹಗುರಗೊಳಿಸುತ್ತದೆ.

ಗಮನಿಸಿ:
1. ಶುಂಠಿ, ಮೆಣಸು, ಸೊಪ್ಪುಗಳು, ಹಸಿರು ತರಕಾರಿಗಳು, ಬಿಸಿ ನೀರಿನ ಸೇವನೆ, ಕಾಟನ್ ಸೀಟ್, ಹತ್ತಿ ಚಾಪೆ ಉಪಯುಕ್ತ.

2. ಸಂಬಾರ ಪದಾರ್ಥಗಳು, ಅಧಿಕ ಆಹಾರ, ಮಾಂಸಾಹಾರ, ಮೊಸರನ್ನು ಸೇವಿಸಬಾರದು.

3. ದೀರ್ಘಕಾಲದ ಸವಾರಿ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವಿಕೆ, ದೀರ್ಘ ಪ್ರಯಾಣ, ಸೋಫಾ. ಸ್ಪಾಂಜ್ ಆಸನಗಳು ಹಾಗೂ ಲೋಹ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು.

ಡಾ. ಎಸ್.ಎಸ್. ಹಿರೇಮಠ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10 ದೂ.: 080-2350 5777, ಮೊಬೈಲ್ : 9341226614 Email : dhanvantari.ayurveda@gmail.com

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com

www.dhanvantarihospital.com

Back To Top