ಕೂದಲು ಆರೋಗ್ಯದ ಕನ್ನಡಿ

ಕೂದಲು ಆರೋಗ್ಯದ ಕನ್ನಡಿ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಹೀಗಾಗಿ ಕೂದಲನ್ನು ನೀವು ಆರೈಕೆ ಮಾಡಬೇಕಾಗುತ್ತದೆ.

Sridanwantriಕೂದಲ ಆರೈಕೆಯು ಆರೋಗ್ಯ ಆರೈಕೆಯ ಒಂದು ಅವಿಭಾಜ್ಯ ಅಂಗ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಕೂದಲಿನ ವಿಧ ಹಾಗೂ ಅದರ ಬಣ್ಣ ಮತ್ತು ಬೆಳವಣಿಗೆಯು ಅನುವಂಶಿಯತೆ ಮತ್ತು ದೇಹ ಸಂಯೋಜನೆಯನ್ನು ಅವಲಂಬಿಸಿರುತ್ತದೆ. ವಾತ ಪ್ರಕೃತಿ ಇರುವ ವ್ಯಕ್ತಿಯ ಕೂದಲು ತಿಳಿ ಕಪ್ಪು, ಕಡಿಮೆ ಬೆಳವಣಿಗೆ ಮತ್ತು ಸುಲಭವಾಗಿ ಸೀಳುತ್ತದೆಯಾದರೆ, ಪಿತ್ತ ಪ್ರಕೃತಿ ವ್ಯಕ್ತಿಯ ಕೂದಲು ಕಂದು ಅಥವಾ ತಿಳಿ ಕಪ್ಪು ಬಣ್ಣ ಹೊಂದಿದ್ದು ಬೇಗನೆ ಉದುರುತ್ತದೆ ಅಥವಾ ಬಿಳಿಯಾಗುತ್ತದೆ. ಕಫ ಪ್ರಕೃತಿಯಲ್ಲಿ ಕೂದಲು ಕಡು ಕಪ್ಪಾಗಿದ್ದು ಬೆಳವಣಿಗೆಯಲ್ಲಿ ದಟ್ಟವಾಗಿರುತ್ತದೆ. ಯಾವುದೇ ಔಷಧಿಯುಕ್ತ ತೈಲವನ್ನು ಲೇಪಿಸುವುದರೊಂದಿಗೆ ಈ ಮೂಲ ಲಕ್ಷಣಗಳು ಬದಲಾಗುವುದಿಲ್ಲ. ಆದರೆ, ಸೂಕ್ತ ಆರೋಗ್ಯ ಆರೈಕೆ ಮಾಡುವುದರಿಂದ ಕೂದಲಿನ ಆರೋಗ್ಯವನ್ನು ಬಹು ದೀರ್ಘ ಕಾಲ ನಿರ್ವಹಣೆ ಮಾಡಬಹುದಾಗಿದೆ. ದಿನನಿತ್ಯದ ಜೀವನ ಶೈಲಿಯಲ್ಲಿ ಶಿಸ್ತನ್ನು ಪಾಲಿಸಬೇಕು. ಇದು ಆಯ್ಕೆ ಮಾಡಿದ ತೈಲವನ್ನು ಲೇಪಿಸುವ ಮೂಲಕ ಸೂಕ್ತ ಆರೋಗ್ಯ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ನೆನಪಿಡಿ ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಪ್ರತಿಬಿಂಬ.

ನಿಮ್ಮ ಕೂದಲನ್ನು ಉತ್ತಮವಾಗಿ ತಿಳಿಯಿರಿ

ಕೂದಲು ಚರ್ಮ ಕೋಶಗಳಿಂದ ಹೊರಗೆ ಬೆಳೆಯುವ ಒಂದು ತಂತು ಬೆಳವಣಿಗೆಯಾಗಿದೆ. ಸಾಮೂಹಿಕವಾಗಿ ಇದೊಂದು ಇಂಥ ತಂತುಗಳ್ಳುಳ್ಳ ರಚನೆಯು ನೆತ್ತಿಯನ್ನು ಮುಚ್ಚಲ್ಪಟ್ಟಿರುತ್ತದೆ. ಕೂದಲು ಚರ್ಮ ಮತ್ತು ಹಿಡಿಕೆಯಲ್ಲಿರುವ ಒಂದು ಬೇರನ್ನು ಒಳಗೊಂಡಿರುತ್ತದೆ. ಈ ಬೇರು ‘ಕೂದಲು ಕೋಶಕ’ದಲ್ಲಿ ಹಿಡಿದಿಡಲ್ಪಟ್ಟಿರುತ್ತದೆ ಹಾಗೂ ಇದರ ಬುಡದಲ್ಲಿ ಇದು ಕೂದಲ ಬುರುಡೆಯಾಗಿ ವಿಸ್ತಾರಗೊಂಡಿದ್ದು, ಇದು ಕೂದಲು ಗುಳ್ಳೆ ಅಥವಾ ಬೆಳವಣಿಗೆ ಬಿಂದುವನ್ನು ಒಳಗೊಂಡಿದೆ. ರಕ್ತನಾಳಗಳು ಮತ್ತು ನರ್ವ್ ಫೈಬರ್‍ನೊಂದಿಗೆ ಪೂರೈಕೆಯಾಗಿರುತ್ತದೆ. ಈ ಮೂಲ ಅಂಗಾಂಶಗಳಲ್ಲಿನ ವ್ಯತ್ಯಾಸವು ಪ್ರತಿ ವ್ಯಕ್ತಿಯ ಕೂದಲಿನಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

ಕೂದಲು ಉದುರುವಿಕೆ  ಕಾರಣಗಳು

1. ಬೊಕ್ಕತಲೆ: ಸಾಮಾನ್ಯವಾಗಿ ಬೊಕ್ಕತಲೆ ಅನುವಂಶಿಯವಾಗಿದ್ದು, ಚಿಕಿತ್ಸೆಯಿಂದ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಹಾರ್ಮೋನು ಚಿಕಿತ್ಸೆ ಅಥವಾ ಕೂದಲು ಕಸಿ ವಿಧಾನವು ಸ್ವಲ್ಪ ರಿಲೀಫ್ ನೀಡಬಹುದು. ಆರಂಭದಲ್ಲಿ ಉದುರುವ ಕೂದಲನ್ನು ಸೂಕ್ತ ಕೂದಲಿನ ಆರೈಕೆ ಮೂಲಕ ನಿಯಂತ್ರಿಸಬಹುದು.

2. ತಲೆ ಹೊಟ್ಟು: ತಲೆ ಹೊಟ್ಟು ಅಥವಾ ಡ್ಯಾನ್‍ಡ್ರಾಫ್‍ಗೆ ಆಯುರ್ವೇದದಲ್ಲಿ ‘ದಾರುಣಕಂ’ ಎಂದು ಕರೆಯಲ್ಪಡಲಿದ್ದು, ಇದಕ್ಕೆ ವಿಶೇಷ ಚಿಕಿತ್ಸೆಯ ಅಗತ್ಯವಿದೆ. ಇದು ನೆತ್ತಿಯ ಚರ್ಮದ ಮೃತ ಬಾಹ್ಯ ಪದರಗಳ ಪುಡಿ ಅಥವಾ ಹೊಟ್ಟುಗಳ ಸೇರ್ಪಡೆಯಾಗಿದೆ. ಪದೇ ಪದೇ ತಲೆ/ನೆತ್ತಿಯನ್ನು ಕೆರೆದುಕೊಳ್ಳುವುದು ಹಾಗೂ ನೆತ್ತಿಯಿಂದ ಬಿಳಿ ಕಣಗಳು ಉದುರುವುದು ತಲೆ ಹೊಟ್ಟಿನ ಚಹ್ನೆಯಾಗಿರುತ್ತದೆ. ನೆತ್ತಿಯಲ್ಲಿ ಎಣ್ಣೆ ಮತ್ತು ಧೂಳು ಶೇಖರಣೆಗೊಳ್ಳುವುದು ಕೂದಲ ಅಂಗಾಂಶಗಳು ನಿಧಾನವಾಗಿ ಹದಗೆಡುವುದಕ್ಕೆ ಎಡೆ ಮಾಡಿಕೊಟ್ಟು ಕೂದಲು ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಪರೀತ ಅಥವಾ ಅಸಮರ್ಪಕ ತೈಲ ಬಳಕೆಯು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ.

ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರೆ ಕಾರಣಗಳು

1.ಹೆರಿಗೆ ನಂತರದ ಅವಧಿ: ಸ್ತ್ರೀಯರಲ್ಲಿ ಹೆರಿಗೆ ನಂತರದ ಅವಧಿಯಲ್ಲಿ ವಿವಿಧ ಕಾರಣಗಳಿಂದ ಕೂದಲು ಉದುರುವುದು ಸಾಮಾನ್ಯವಾಗಿರುತ್ತದೆ. ಕೆಲವು ಹಾರ್ಮೋನುಗಳ ಗೈರು, ಅಸಮರ್ಪಕ ಋತುಚಕ್ರ ಅವಧಿಗಳು, ಅಧಿಕ ರಕ್ತಸ್ರಾವ ಇತ್ಯಾದಿಯಿಂದಾಗಿ ರಕ್ತದ ಕೊರತೆ, ತ್ವರಿತ ಕೂದಲು ನಷ್ಟ ಇವುಗಳು ಪ್ರಮುಖ ಕಾರಣವಾಗುತ್ತವೆ. ಇದನ್ನು ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

2. ಅವಧಿಗೆ ಮುನ್ನ ನೆರೆ ಕೂದಲು-ಸಾಮಾನ್ಯವಾಗಿ ಈ ಸಮಸ್ಯೆಗೆ ಚಿಕಿತ್ಸೆ ಇಲ್ಲ, ಏಕೆಂದರೆ ಇದು ಅನುವಂಶಿಯ ಗುಣಲಕ್ಷಣವನ್ನು ಹೊಂದಿರುತ್ತದೆ. ಆದರೆ, ಕೂದಲಿನ ಬೇರಿನ ಬೆಳವಣಿಗೆಗೆ ನೆರವಾಗುವ ಔಷಧಿಗಳು ಸ್ವಲ್ಪ ಸುಧಾರಣೆ ನೀಡುತ್ತದೆ. ಅಧಿಕ ಮಾನಸಿಕ ಒತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ಅವಧಿಗೆ ಮುನ್ನವೇ ನೆರೆ ಕೂದಲು ಇರುವುದನ್ನು ಸಹ ಕಾಣಬಹುದಾಗಿದೆ. ಅವಧಿಗೆ ಮುನ್ನವೇ ಕೂದಲು ಬೆಳ್ಳಗಾಗುವ ತೀವ್ರತೆಯನ್ನು ಸೂಕ್ತ ಚಿಕಿತ್ಸೆ ಮೂಲಕ ಕಡಿಮೆ ಮಾಡಬಹುದು.

ನಿಮ್ಮ ಕೂದಲಿನ ಆರೈಕೆ

ಕೂದಲು ಆರೋಗ್ಯದ ಕನ್ನಡಿ

1. ತಲೆ ಮೇಲೆ ಬಿಸಿ ನೀರು ಬಳಕೆಯು ನೆತ್ತಿಗೆ ಒಳ್ಳೆಯದಲ್ಲ.

2. ಕೂದಲು ಒದ್ದೆ ಇರುವಾಗ ಬಾಚಬಾರದು.

3. ಡಿಟರ್ಜೆಂಟ್ ಆಥವಾ ರಾಸಾಯನಿಕ ಮೂಲದ ಶಾಂಪೂಗಳನ್ನು ಬಳಸುವುದು ತಪ್ಪಿಸಿ.

4. ದಾಸವಾಳ, ಸೀಗೆಕಾಯಿಯಂಥ ನೈಸರ್ಗಿಕ ಘಟಕಾಂಶಗಳಿರುವ ಶಾಂಪೂವನ್ನು ಆಯ್ಕೆ ಮಾಡಿಕೊಳ್ಳಿ.

5. ಸೂಕ್ತ ರೀತಿ ಹೇರ್ ಆಯಿಲ್ ಲೇಪಿಸುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕೂದಲ ಆರೈಕೆ ಮತ್ತು ಶುಚಿತ್ವ

1. ಸಾಕಷ್ಟು ನೀರು ಕುಡಿಯಿರಿ ಹಾಗೂ ಯೆಥೇಚ್ಚವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇದು ಆರೋಗ್ಯಕರ ಕೂದಲು ನಿರ್ವಹಣೆ ಮಾಡಲು ಉತ್ತಮ ಮಾರ್ಗ.

2. ಕೆಫೇನ್‍ಯುಕ್ತ ಪೇಯಗಳು, ತುಂಬಾ ಮಸಾಲೆ ಪದಾರ್ಥಗಳು, ಹುರಿದ ತಿಂಡಿಗಳು ಮತ್ತು ಅಂಟು ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸಿ.

3. ನಿಯತ ಮಲ ವಿಸರ್ಜನೆಯಾಗುವಂತೆ ನೋಡಿಕೊಳ್ಳಿ.

4. ಕೂದಲನ್ನು ಆಗಾಗ ಸ್ವಚ್ಚಗೊಳಿಸುವಿಕೆ ಮತ್ತು ಬ್ರಷ್ ಮಾಡುವಿಕೆ ತುಂಬಾ ಮುಖ್ಯ. ಬ್ರಷ್ ಮಾಡುವುದರಿಂದ ಅದು ಸಬಾಷಿಯಸ್ ಗ್ರಂಥಿಯನ್ನು ಉದ್ದೀಪನಗೊಳಿಸಿ, ಕೂದಲ ಹೊಳಪಿಗೆ ಕಾರಣವಾಗುವ ನೈಸರ್ಗಿಕ ತೈಲವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

5.  ಕೂದಲಿಗೆ ಕಾಂತಿ ಮತ್ತು ಹೊಳಪು ನೀಡಲು ನಿಂಬೆಯ ಸ್ಪರ್ಶ ತುಂಬಾ ಒಳ್ಳೆಯದು. ಅರ್ಧ ಲೋಟ ನೀರಿಗೆ ಒಂದು ಟೇಬಲ್ ಚಮಚ ನಿಂಬೆ ರಸ ಸೇರಿಸಿ. ನಿಮ್ಮ ನೆತ್ತಿಯನ್ನು ಸ್ವಚ್ಚಗೊಳಿಸಿದ ನಂತರ ಈ ದ್ರಾವಣದೊಂದಿಗೆ ನಿಮ್ಮ ಕೂದಲನ್ನು ನೆನೆಸಿ.

6. ಸಾಮಾನ್ಯ ಕೂದಲಿಗೆ ಹೆನ್ನಾವನ್ನು ಅಗಾಗ ಬಳಸುವುದರಿಂದ ಕೂದಲಿಗೆ ಉತ್ತಮ ಆರೋಗ್ಯ ಒದಗಿಸುತ್ತದೆ.

7. ಮೊಸರಿನೊಂದಿಗೆ ನೆಲ್ಲಿ ಮತ್ತು ಸೀಗೆಕಾಯಿ ಪುಡಿಯನ್ನು ಮಿಶ್ರಣ ಮಾಡುವುದರಿಂದ ಅದು ಅತ್ಯುತ್ತಮ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.

8. ಮೊಸರು, ನಿಂಬೆ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಮೃದುವಾಗಿ ಲೇಪಿಸಿ ಹಾಗೂ ಅರ್ಧಗಂಟೆ ಬಿಟ್ಟು ನಂತರ ನಿಮ್ಮ ಕೂದಲನ್ನು ತೊಳೆದರೆ ಉತ್ತಮ ಫಲಿತಾಂಶ ಲಭಿಸುತ್ತದೆ.

ಡಾ. ಎಸ್.ಎಸ್. ಹಿರೇಮಠ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10 ದೂ.: 080-2350 5777, ಮೊಬೈಲ್ : 9341226614 Email : dhanvantari.ayurveda@gmail.com

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com

www.dhanvantarihospital.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!