ಕರ್ನಾಟಕ ಹೈಕ್ಸ್ ಚಾರಣಿಕರಿಗೆ ಪ್ರಥಮ ಚಿಕಿತ್ಸಾ ತರಬೇತಿ

ಕರ್ನಾಟಕ ಹೈಕ್ಸ್ ಚಾರಣಿಕರಿಗೆ ತುರ್ತು ವೈಧ್ಯಕೀಯ ಸೇವೆ ಒದಗಿಸುತ್ತಿರುವ ವಿಮೆಡೋ ಸಹಭಾಗಿತ್ವದೊಂದಿಗೆ ಆಧುನಿಕ ಹಾಗೂ ವಿಶೇಷ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

first-aid-training ಕರ್ನಾಟಕ ಹೈಕ್ಸ್ ಚಾರಣಿಕರಿಗೆ ಪ್ರಥಮ ಚಿಕಿತ್ಸಾ ತರಬೇತಿ

ತುಮಕೂರು : ಬೆಂಗಳೂರಿನಲ್ಲಿ ತುರ್ತು ವೈಧ್ಯಕೀಯ ಸೇವೆ ಒದಗಿಸುತ್ತಿರುವ ವಿಮೆಡೋ ಸಹಭಾಗಿತ್ವದೊಂದಿಗೆ ದೇವರಾಯನ ದುರ್ಗದಲ್ಲಿ ದಿನಾಂಕ 13-03-2021 ಮತ್ತು 14-03-2021 ರಂದು ಕರ್ನಾಟಕ ಹೈಕ್ಸ್ ಚಾರಣಿಕರಿಗೆ ಆಧುನಿಕ ಹಾಗೂ ವಿಶೇಷ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು

ಎರಡು ದಿನ ನಡೆದ ಈ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ಕರ್ನಾಟಕ ಹೈಕ್ಸ್ ತಂಡದ ಸದಸ್ಯರನ್ನೊಳಗೊಂಡು ಚಾರಣಗಳ ಸಮಯದಲ್ಲಿ ಚಾರಣಿಕರು ಎದುರಿಸುವ ಸವಾಲು ಮತ್ತು ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಿ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಿಕೊಳ್ಳುವ ವಿಶೇಷ ತರಬೇತಿ ಶಿಬಿರ ಇದಾಗಿತ್ತು.

ದೇವರಾಯನ ದುರ್ಗದ ಬೆಟ್ಟದ ತಪ್ಪಲಿನ ಪರಿಸರದ ಮಧ್ಯೆ ವಿಮೆಡೊ ಅಕಾಡೆಮಿಯ ವಿಶೇಷ ತರಬೇತುದಾರರನ್ನೊಳಗೊಂಡ ತಂಡ ಚಾರಣ ಮಾಡುತ್ತ ನೈಜ ಸವಾಲುಗಳನ್ನು ಸಂಧರ್ಭ ಸಹಿತವಾಗಿ ಆಧುನಿಕತೆಯೊಂದಿಗೆ ಪರಿಣಾಮಕಾರಿಯಾಗಿ ಚಾರಣಿಕರಿಗೆ ತರಭೇತಿ ನೀಡಲಾಯಿತು.

ಈ ಶಿಬಿರಕ್ಕೆ ವಿಮೆಡೋ ಸಂಸ್ಥೆಯ ಸಂಸ್ಥಾಪಕರಾದ ಪ್ರವೀಣ್ ಗೌಡ ರವರು ವಿಮೆಡೋ ಅಕಾಡೆಮಿಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಪ್ರಥಮ ಚಿಕಿತ್ಸಾ ತರಬೇತುದಾರರಾದ ಶಶಿ ಕುಮಾರ್‍ರವರು ವಿಮೆಡೋ ಅಕಾಡೆಮಿಯ ಸಂಯೋಜಕರಾದ ಹಿತೇಶ್‍ರವರು ಭಾಗವಹಿಸಿದ್ದರು

“ಅಧ್ಬುತವಾಗಿ ಹೊಸದಾಗಿ ಸವಾಲುಗಳನ್ನು ಹಾಗೂ ಚಾರಣಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರಿಯಾದ ಮತ್ತು ಆಧುನಿಕ ವಿಧದಲ್ಲಿ ಎದುರಿಸುವ ಸಾಮಥ್ರ್ಯವನ್ನು ಈ ಎರಡು ದಿನದ ತರಬೇತಿಯು ನೀಡಿರುವುದು ಖುಷಿಯಾಗಿದೆ” – ಲಕ್ಷ್ಮೀಶ್ ಗೌಡ (10 ವರ್ಷ ಅನುಭವವುಳ್ಳ ರಾಷ್ಟ್ರೀಯ ಪ್ರಥಮ ದರ್ಜೆ ಚಾರಣಿಕ) ಹೇಳಿದರು.

first-aid-training ಕರ್ನಾಟಕ ಹೈಕ್ಸ್ ಚಾರಣಿಕರಿಗೆ ಪ್ರಥಮ ಚಿಕಿತ್ಸಾ ತರಬೇತಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!