ಜೀವನಶೈಲಿ ಮತ್ತು ಸಂತಾನೋತ್ಪತ್ತಿ (ಫಲವತ್ತತೆ)

ಜೀವನಶೈಲಿ ಮತ್ತು ಸಂತಾನೋತ್ಪತ್ತಿ (ಫಲವತ್ತತೆ). ಈ ಲೇಖನದಲ್ಲಿ, ಜೀವನಶೈಲಿ ಮತ್ತು ಸಂತಾನೋತ್ಪತ್ತಿಯ ಸಂಬಂಧವನ್ನು ಅರ್ಥಮಾಡಿಕೊಳೋಣ. ಕೆಲವು ಅಭ್ಯಾಸಗಳು ಮತ್ತು ಆಯ್ಕೆಗಳು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಅಥವಾ ಅಡ್ಡಿಪಡಿಸಬಹುದು.

jeevanashyli mattu santanotpatti

ಒಂದು ವರ್ಷದ ಅಸುರಕ್ಷಿತ ಸಂಭೋಗದ ನಂತರವೂ ಗರ್ಭಧರಿಸಲು ಅಸಮರ್ಥರಾದರೆ ಬಂಜೆತನವೆಂದು ಪರಿಗಣಿಸಲಾಗುತ್ತದೆ. ಈಗ ಇದು ಹೆಚ್ಚು ದಂಪತಿಗಳನ್ನು ಕಾಡುತ್ತಿರುವ ವಿಶ್ವದ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ನಮ್ಮ ಜೀವನಶೈಲಿಯು, ಪುರುಷರು ಮತ್ತು ಮಹಿಳೆಯರ, ಫಲವತ್ತತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ಕ್ರಮಗಳು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವ ಜೀವನಶೈಲಿ ಅಂಶಗಳು
• ತೂಕ: ಸ್ಥೂಲಕಾಯ ಅಥವಾ ಅತಿ ತೆಳ್ಳಗಿರುವುದು ಬಂಜೆತನಕ್ಕೆ ಕಾರಣವಾಗುತ್ತದೆ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಂಜೆತನ ನಿವಾರಿಸಲು ಅಗತ್ಯ.
• ಆಹಾರ ಮತ್ತು ಪೋಷಣೆ: ಫಲವತ್ತತೆಯಲ್ಲಿ ಆಹಾರ ಸೇವನೆ ಪದ್ಧತಿ ಬಹು ಮುಖ್ಯ. ಹೆಚ್ಚಾಗಿ ಸ್ಥೂಲಕಾಯ ನಾವು ತಿನ್ನುವ ಆಹಾರದಿಂದ ಉಂಟಾಗುತ್ತದೆ. ಇದರಿಂದಾಗುವ ಹಾರ್ಮೋನ್ ಅಸಮತೋಲನ ಅಂಡೋತ್ಪತ್ತಿ ಮತ್ತು ವೀರ್ಯ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಹೆಚ್ಚಿನ ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಇದ್ದರೆ ಇನ್ಸುಲಿನ್ ರೆಸಿಸ್ಟೆನ್ಸ್ ಆಗುವುದರಿಂದ ಇದು ಬಂಜೆತನಕ್ಕೂ ಕಾರಣವಾಗಬಹುದು. ಅಲ್ಲದೆ, ಸಂಸ್ಕರಿಸಿದ ಪ್ಯಾಕೇಜ್ಡ್ ಆಹಾರ ಮತ್ತು ಪಾನೀಯಗಳು, ಮದ್ಯಪಾನ , ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ಪುರುಷರು ಮತ್ತು ಮಹಿಳೆಯರ ಬಂಜೆತನಕೆ ಕಾರಣವಾಗುತ್ತದೆ.
• ಧೂಮಪಾನ, ಮದ್ಯಪಾನ ಮತ್ತು ಮಾದಕ ವ್ಯಸನ: ಧೂಮಪಾನವು ಅಂಡಾಣು ಮತ್ತು ವೀರ್ಯಕ್ಕೆ ಹಾನಿ ಮಾಡುತ್ತದೆ. ಪುರುಷರಲ್ಲಿ ಇದು ವೀರ್ಯವನ್ನು ಕಡಿಮೆ ಮಾಡಬಹುದು ಮತ್ತು ನಿಮಿರು ದೌರ್ಬಲ್ಯಕೂ ಕಾರಣವಾಗುತ್ತದೆ. ಅತಿಯಾದ ಮದ್ಯ ಪಾನ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಲೈಂಗಿಕ ಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಮಹಿಳೆಯರ ಧೂಮಪಾನ ಅಂಡಾಶಯಕ್ಕೆ ಹಾನಿಯಾಗಿ ಸಂತಾನೋತ್ಪತ್ತಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ಗರ್ಭಪಾತ ಮತ್ತು ಅಪಸ್ಥಾನೀಯ ಗರ್ಭಧಾರಣೆಯ (ಭ್ರೂಣ ಗರ್ಭಾಶಯದ ಹೊರಗಿರುವುದು, ಅಂದರೆ ಫಾಲೋಪಿಯನ್ ಟ್ಯೂಬ್ ಅಥವಾ ಅಂಡಾಶಯದಲ್ಲಿ) ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಋತುಚಕ್ರದಲ್ಲಿ ಏರುಪೇರು ಉಂಟಾಗಿ ಅಂಡೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ.
• ಒತ್ತಡ ಮತ್ತು ಮಾನಸಿಕ ಆರೋಗ್ಯ: ಒತ್ತಡ ಹೆಚ್ಚಾದಾಗ ಅನಿಯಮಿತ ಮುಟ್ಟು ಮತ್ತು ಅನೋವ್ಯುಲೇಶನ್‌ಗೆ (Anovulation – ಹಾರ್ಮೋನ್ ಅಸಮತೋಲನವಾಗಿ ಅಂಡಾಶಯದ ಅಸಮರ್ಥತೆಗೆ) ಕಾರಣವಾಗುತ್ತದೆ. ಒತ್ತಡವು ಪುರುಷರಲ್ಲಿ ವೀರ್ಯ ಉತ್ಪಾದನೆ ಮತ್ತು ವೀರ್ಯದ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಒತ್ತಡವು ಹಾರ್ಮೋನುಗಳ ಅಸಮತೋಲನ, ಲೈಂಗಿಕತೆ ಯಲ್ಲಿ ನಿರಾಸಕ್ತಿ, ವೀರ್ಯ ಮತ್ತು ಅಂಡೋತ್ಪತ್ತಿ ಗಳಲ್ಲಿ ಸಮಸ್ಯೆ ಯಾಗುತ್ತದೆ.

Milann Fertility Centre seve mattu sowlabya
• ವ್ಯಾಯಾಮ: ಗರ್ಭಧಾರಣೆಗೆ ಜಡ ಜೀವನಶೈಲಿ ಅಥವಾ ತೀವ್ರವಾದ ವ್ಯಾಯಾಮ ಎರಡೂ ಒಳ್ಳೆಯದಲ್ಲ. ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಹಾಗು ಪುರುಷರಲ್ಲಿ ವೀರ್ಯದ ಗುಣಮಟ್ಟದಲ್ಲಿ ಸಮಸ್ಯೆಯಾಗುತ್ತದೆ. ತೀವ್ರವಾದ ವ್ಯಾಯಾಮ ವೃಷಣ ಚೀಲದ ತಾಪಮಾನ ಹೆಚ್ಚಾಗಿ (Testicular Hyperthermia) ವೀರ್ಯ ಉತ್ಪಾದನೆಗೆ ಹಾನಿಗೆ ಕಾರಣವಾಗಬಹುದು. ಮಹಿಳೆಯರಲ್ಲಿ, ದೇಹದ ತೂಕ ಅತಿ ಕಡಿಮೆಯಾಗಬಹುದು ಅಥವಾ ಅಮೆನೋರಿಯಾ (ಮುಟ್ಟಿನ ಅನುಪಸ್ಥಿತಿ) ಗೆ ಕಾರಣವಾಗುವ ಸಾಧ್ಯತೆ ಹೆಚ್ಚು .
• ನಿದ್ರೆ: ನಿದ್ರೆಯ ಗುಣಮಟ್ಟ ಮತ್ತು ಅಸಮರ್ಪಕ ನಿದ್ರೆಯಿಂದ ಹಾರ್ಮೋನ್ ವ್ಯತ್ಯಾಸವಾಗಿ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ.
• ಪರಿಸರ: ಕೆಲವು ಮಾಲಿನ್ಯಕಾರಕಗಳು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲದವರೆಗೆ ಕೀಟನಾಶಕಗಳು, ಭಾರೀ ಲೋಹಗಳು, endocrine disrupting chemicals (EDCs) ಗೆ ಒಡ್ಡಿಕೊಳ್ಳುವುದರಿಂದ ಫಲವತ್ತತೆಗೆ ಹಾನಿಯಾಗಬಹುದು. ಬಿಸಿನೀರಿನ ತೊಟ್ಟಿಗಳು (ಹಾಟ್ ಟಬ್ ಗಳು) ಅಥವಾ ಬಿಗಿಯಾದ ಒಳ ಉಡುಪುಗಳು ವೃಷಣ ಚೀಲದ ತಾಪಮಾನ ಹೆಚ್ಚಾಗಿ, ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಎಕ್ಸ್ ರೇ (ಕ್ಷ ಕಿರಣ) ಕೂಡ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಲಿನ್ಯದ ಪ್ರದೇಶದಲ್ಲಿ ವಾಸಿಸುವುದು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಏರ್ ಪ್ಯೂರಿಫೈಯರ್‌ಗಳ ಬಳಕೆಯನ್ನು ಕಡಿಮೆ ಮಾಡಿ.
• ವಯಸ್ಸು: ವಯಸ್ಸಾಗುತ್ತಿದ್ದಂತೆ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು. ಸುಮಾರು 33-35 ವರ್ಷಗಳ ನಂತರ ಅಂಡಾಣುಗಳು ಕಡಿಮೆಯಾಗುವುದರ ಜೊತೆಗೆ ಅದರ ಶಕ್ತಿಯು ಕಡಿಮೆಯಾಗುತ್ತದೆ.

Dr Vandana Ramanathan

ಡಾ.ವಂದನಾ ರಾಮನಾಥನ್
ರೆಪ್ರೊಡ್ಯೂಕ್ಟಿವ್ ಮೆಡಿಸಿನ್
ಮಿಲನ್ ಫರ್ಟಿಲಿಟಿ ಸೆಂಟರ್

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!