ಅನಿಯಮಿತ ಋತುಸ್ರಾವ ಅಥವಾ ಪೀರಿಯಡ್ಸ್-ಚಿಕಿತ್ಸೆ ಏನು?

  • ಕೆಲವು ಮಹಿಳೆಯರಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸುತ್ತದೆ. ಕೆಲವು ಮಹಿಳೆಯರಲ್ಲಿ ಮಿಸ್‍ಕ್ಯಾರೇಜ್ ಆಗುವ ರಿಸ್ಕ್ ಹೆಚ್ಚು. ಅತಿ ಮುಖ್ಯ ಅಂಶವೆಂದರೆ ಫರ್ಟಿಲಿಟಿ (ಸಂತಾನಶಕ್ತಿ) ಕಡಿಮೆ.ಇಂಜೆಕ್ಷನ್ ಅಂಡಾಶಯವನ್ನು ಉತ್ತೇಜಿಸಬಲ್ಲದು. ಆದರೆ ತಜ್ಞ ವೈದ್ಯರಿಂದ ಇಂಜೆಕ್ಷನ್ ಪಡೆಯುವುದು ಸೂಕ್ತ. ಏಕೆಂದರೆ ಅಂಡಾಶಯವು ಅತಿಯಾಗಿ ಉತ್ತೇಜಿತವಾಗಿ ಮಲ್ಟಿಪಲ್ ಪ್ರೆಗ್ನೆನ್ಸಿ -ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಮಕ್ಕಳ ಗರ್ಭಧಾರಣೆ, ಜೊತೆಗೆ ಪ್ರಾಣಕ್ಕೆ ಸಂಚಕಾರ ತರುವ ಓಎಚ್‍ಸಿಎಸ್ ಎಂಬ ಸ್ಥಿತಿಗೆ ಕಾರಣವಾಗಬಹುದು.ಹಾರ್ಮೋನ್‍ನ ವ್ಯತ್ಯಾಸ ಗುರುತಿಸಲು ರಕ್ತಪರೀಕ್ಷೆ ಅಗತ್ಯವಾಗಬಹುದು. ಅಲ್ಟ್ರಾಸೌಂಡ್ ಮಾಡುವುದರ ಮೂಲಕ ಅಂಡಾಶಯದಲ್ಲಿ ಸಿಸ್ಟ್‍ಗಳಾಗಿರುವುದನ್ನು ಕಾಣಬಹುದು.
  • ಹಲವಾರು ದಿನಗಳವರೆಗೆ ಪೀರಿಯಡ್ಸ್ ನಿಂತಿಲ್ಲವೆಂದಾಗ ಮಹಿಳೆಗೆ ಆತಂಕವಾಗುವುದು ಸಹಜ. ತನಗೇನೋ ಸಮಸ್ಯೆ ಇದೆ ಎಂಬ ಭಯ ಕಾಡುವುದು. ಯಾವುದೋ ಒತ್ತಡದಿಂದ ಹೀಗಾಗುತ್ತಿದೆ ಎಂದು ಭಾವಿಸಿ ವೈದ್ಯರ ಬಳಿ ಹೋದಾಗ ಆ ಸಮಸ್ಯೆ `ಪತ್ತೆ’ ಆಗಿರಬಹುದು. ಅದು ಪಿಸಿಓಎಸ್ ಅಥವಾ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಆಗಿರಬಹುದು.ಅಂಡಾಶಯದಿಂದ ಉತ್ಪನ್ನವಾಗುವ ಹಾರ್ಮೋನ್‍ವ್ಯತ್ಯಾಸದಿಂದ ಹೀಗಾಗುತ್ತದೆ. ಅಂಡಾಶಯವು ಹೆಚ್ಚಿನ ಪ್ರೊಜೆಸ್ಟರಾನ್ ಉತ್ಪಾದಿಸುವುದರಿಂದ ಹೆಚ್ಚಿನ ಅಂಡಾಣು ಸೃಷ್ಟಿಯಾಗುತ್ತದೆ. ಇದರಿಂದ ಅನಿಯಮಿತವಾಗಿ ಅಂಡಾಣುಗಳ ಉತ್ಪಾದನೆ ಆಗುತ್ತದೆ.
    ಲಕ್ಷಣಗಳೇನು?

    1.ಅನಿಯಮಿತ ಋತುಸ್ರಾವ ಅಥವಾ ಪೀರಿಯಡ್ಸ್ ಆಗುವುದಿಲ್ಲ. ಸಂತಾನಹೀನತೆಗೆ ಕಾರಣವಾಗಬಹುದು. ಏಕೆಂದರೆ ಮಹಿಳೆಯಲ್ಲಿ ಯಾವಾಗಲೋ ಒಮ್ಮೆ ಅಂಡಾಣು ಉತ್ಪಾದನೆ ಆಗುವುದರಿಂದ ತೂಕ ಹೆಚ್ಚಾಗುವುದು, ಬೊಜ್ಜು, (ಮುಖ, ಎದೆ, ಕೈ, ಕಾಲುಗಳು) ಬೇಡದ ಜಾಗಗಳಲ್ಲಿ ಕೂದಲ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ.
    2.ಮೊಡವೆ, ಬೊಜ್ಜು ಪಿಸಿಓಎಸ್‍ನ ಕಾರಣವೂ ಹೌದು ಅಥವಾ ಪಿಸಿಓಎಸ್ ಇರುವುದರಿಂದಲೇ ಬೊಜ್ಜು ಕೂಡಾ ಬಂದಿರಬಹುದು.
    3.ಕೆಲವು ಮಹಿಳೆಯರಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸುತ್ತದೆ. ಕೆಲವು ಮಹಿಳೆಯರಲ್ಲಿ ಮಿಸ್‍ಕ್ಯಾರೇಜ್ ಆಗುವ ರಿಸ್ಕ್ ಹೆಚ್ಚು. ಅತಿ ಮುಖ್ಯ ಅಂಶವೆಂದರೆ ಫರ್ಟಿಲಿಟಿ (ಸಂತಾನಶಕ್ತಿ) ಕಡಿಮೆ. ಕೆಲವು ಮಹಿಳೆಯರು ಔಷಧದ ಸಹಾಯ ಇಲ್ಲದೆ ಹೆರುತ್ತಾರೆ, ಕೆಲವರಿಗೆ ಅಗತ್ಯ ಬೀಳಬಹುದು.
    4.ಪಿಸಿಓಎಸ್‍ನಿಂದ ಬಳಲುವ ಮಹಿಳೆಯರಲ್ಲಿ ಅಂಡಾಣುಗಳು ಬೆಳೆಯುವುದು ನಿಲ್ಲುತ್ತವೆ. ಇದರಿಂದ ಇನ್ನೂ ಮೆಚ್ಯೂರ್ ಆಗದ ಕೋಶಗಳು ಅಂಡಾಣುವಿನಿಂದ ಹೊರಹೋಗಲು ವಿಫಲವಾಗುತ್ತವೆ. ಈಸಿಸ್ಟ್‍ಗಳು, ಅಂಡಾಶಯದ ಸುತ್ತಲ ಪರಿಧಿಯಲ್ಲಿ ಮುತ್ತಿನ ಸರದಂತೆ ಸೇರಿಕೊಂಡು, ಸಹಜವಾದ ಹಾರ್ಮೋನ್‍ನ ಕೆಲಸಕ್ಕೆ ಅಡ್ಡಿಯಾಗುತ್ತವೆ.ಇದರಿಂದ ಇನ್ನಷ್ಟು ಸಿಸ್ಟ್‍ಗಳು ಬೆಳೆದು ಅಂಡಾಶಯ ತನ್ನ ಗಾತ್ರದಲ್ಲಿ ದೊಡ್ಡದಾಗುವುದಕ್ಕೆ ಕಾರಣವಾಗುತ್ತದೆ.
    ಅನಿಯಮಿತ ಋತುಚಕ್ರ
    ಅನಿಯಮಿತ ಋತುಸ್ರಾವವೇ ಮುಖ್ಯ ತೊಂದರೆ ಆಗಿದ್ದಾಗ, ಪರಿಹಾರ ಎಂದರೆ ಗರ್ಭನಿರೋಧಕ ಮಾತ್ರೆಗಳ ಸೇವನೆ. ಈ ಮಾತ್ರೆಗಳ ಸೇವನೆಯಿಂದ ಋತುಚಕ್ರವು ಸರಿಯಾದ ಸಮಯದಲ್ಲಿ ಆಗುತ್ತದೆ. ಆದರೆ ತಾಯಿಯಾಗ ಬಯಸುವವರಿಗೆ ಈ ಮಾತ್ರೆಗಳ ಸೇವನೆಹೊಂದುವುದಿಲ್ಲ.ಈ ಮಾತ್ರೆಗಳಿಂದ ಮೊಡವೆ ಮತ್ತು ಬೇಡದ ಜಾಗದಲ್ಲಿ ಕೂದಲು ಬೆಳೆಯುವುದನ್ನು ತಪ್ಪಿಸಬಹುದು. ಅತಿಯಾದ ತೂಕ ಇಳಿಸುವುದರಿಂದ ಪಿಸಿಓಎಸ್‍ನ ಹಲವು ಸಮಸ್ಯೆಗಳನ್ನು ಹತೋಟಿಯಲ್ಲಿಡಬಹುದು.
    ಸಂತಾನಹೀನತೆ
    ಅನಿಯಮಿತ ಅಥವಾ ಯಾವಾಗಲೋ ಒಮ್ಮೆ ಆಗುವ ಅಂಡಾಣು ಉತ್ಪಾದನೆ ಸಂತಾನಾಭಿವೃದ್ಧಿಯಲ್ಲಿ ಅಡೆತಡೆ ಉಂಟು ಮಾಡಬಹುದು. ಕೆಲ ಔಷಧಗಳಿಂದ ಕೃತಕವಾಗಿ ಅಂಡಾಣು ಉತ್ಪಾದನೆ ಮಾಡಬಹುದು. ಮಾತ್ರೆಗಳು ವಿಫಲವಾದಲ್ಲಿ ಹಾರ್ಮೋನ್ ಇಂಜೆಕ್ಷನ್ ಸಹಾಯಬೇಕಾಗುತ್ತದೆ.
    ಇಂಜೆಕ್ಷನ್ ಅಂಡಾಶಯವನ್ನು ಉತ್ತೇಜಿಸಬಲ್ಲದು. ಆದರೆತಜ್ಞ ವೈದ್ಯರಿಂದ ಇಂಜೆಕ್ಷನ್ ಪಡೆಯುವುದು ಸೂಕ್ತ. ಏಕೆಂದರೆ ಅಂಡಾಶಯವು ಅತಿಯಾಗಿ ಉತ್ತೇಜಿತವಾಗಿ ಮಲ್ಟಿಪಲ್ ಪ್ರೆಗ್ನೆನ್ಸಿ ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಮಕ್ಕಳ ಗರ್ಭಧಾರಣೆ, ಜೊತೆಗೆ ಪ್ರಾಣಕ್ಕೆ ಸಂಚಕಾರ ತರುವ ಓಎಚ್‍ಸಿಎಸ್ ಎಂಬ ಸ್ಥಿತಿಗೆ ಕಾರಣವಾಗಬಹುದು.
    ಅತಿಯಾದ ಕೂದಲು
    ವ್ಯಾಕ್ಸಿಂಗ್, ಬ್ಲೀಚಿಂಗ್ ಮುಂತಾದ ತಂತ್ರಗಳಿಂದ ಆ ಕ್ಷಣಕ್ಕೆ ಕೂದಲು ತೆಗೆಯಬಹುದು. ಆದರೆ ಮತ್ತೆ ಬೆಳೆಯುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಸಹಾಯವಾಗುತ್ತದೆ. ಆದರೆ ವೈದ್ಯರ ಸಲಹೆ ಅತ್ಯಗತ್ಯ. ಪಿಸಿಓಎಸ್ ಇರುವವರಿಗೆ ಹೃದ್ರೋಗ, ವಯಸ್ಸಾಗುತ್ತಿದ್ದಂತೆ ಸಕ್ಕರೆ ಕಾಯಿಲೆ ಬರಬಹುದಾದ ಅವಕಾಶ ಹೆಚ್ಚು. ಅದರಲ್ಲೂ ಗರ್ಭಿಣಿಯಾಗಿದ್ದಾಗ, ಪಾಶ್ರ್ವವಾಯು ಅಥವಾ ಗರ್ಭಕೋಶದ ಕ್ಯಾನ್ಸರ್‍ಆಗುವ ಸಂಭವ ಕೂಡ ಹೆಚ್ಚು.
    ಪತ್ತೆ ಹೇಗೆ?
    ಪಿಸಿಓಎಸ್‍ನ ಲಕ್ಷಣಗಳು ಎಲ್ಲರಿಗೂ ಸುಪರಿಚಿತ, ಆದರೆ ಕಾರಣಮಾತ್ರ ಅಪರಿಚಿತ. ಹಾರ್ಮೋನ್ ರೋಗ ಲಕ್ಷಣಗಳಿಂದ ವೈದ್ಯರು ಪಿಸಿಓಎಸ್ ಆಗಿದೆಯೇ ಎಂದು ಶಂಕಿಸಬಹುದು. ಹಾರ್ಮೋನ್‍ನ ವ್ಯತ್ಯಾಸ ಗುರುತಿಸಲು ರಕ್ತಪರೀಕ್ಷೆ ಅಗತ್ಯವಾಗಬಹುದು. ಅಲ್ಟ್ರಾಸೌಂಡ್ ಮಾಡುವುದರ ಮೂಲಕ ಅಂಡಾಶಯದಲ್ಲಿ ಸಿಸ್ಟ್‍ಗಳಾಗಿರುವುದನ್ನು ಕಾಣಬಹುದು.ಕೆಲವೊಮ್ಮೆ ಲ್ಯಾಪ್ರೋಸ್ಕೋಪಿ ಪರೀಕ್ಷೆ ಉದರ ಪರೀಕ್ಷೆ ಮಾಡುವಾಗ ಆಕಸ್ಮಾತ್ತಾಗಿ ಕಾಣಿಸಬಹುದು.
    ಹೀಗೆಂದರೆ ಮಹಿಳೆಯರ ಉದರದೊಳಗೆ ಟೆಲಿಸ್ಕೋಪ್‍ನಂತಹ ಉಪಕರಣ ಹಾಕಿ ಕಿಬ್ಬೊಟ್ಟೆ ಮತ್ತು ಹೊಟ್ಟೆಯಭಾಗದ ಪರಿವೀಕ್ಷಣೆ ಮಾಡಬೇಕಾಗುತ್ತದೆ.
    ಚಿಕಿತ್ಸೆ
    ಯಾವ ಕಾರಣದಿಂದ ಹೀಗಾಗಿದೆ ಎಂಬುದರ ಮೇಲೆ ಚಿಕಿತ್ಸೆ ನಿರ್ಧರಿತ. ಬೊಜ್ಜು ಇಳಿಸುವುದು, ಜೀವನ ಶೈಲಿಯ ಬದಲಾವಣೆ, ಪಥ್ಯ, ವ್ಯಾಯಾಮ ಮತ್ತು ಅನಿಯಮಿತ ಪೀರಿಯಡ್‍ಗಳನ್ನು ಸರಿಪಡಿಸುವುದಕ್ಕೆ ಗಮನಕೊಡುವುದು ಸೂಕ್ತ. ತಜ್ಞ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ಅನುವಾಗುವುದು ಒಳ್ಳೆಯದು.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!