ಮಾನವ ಎಂದರೆ ಪಂಚಕೋಶಗಳ ಶರೀರ?

ಮಾನವ ಎಂದರೆ ಪಂಚಕೋಶಗಳ ಶರೀರ ಎಂದು ಹೇಳಲಾಗಿದೆ.ಈ ಕೋಶಗಳ ಪರಿಚಯದಿಂದ ಮನುಷ್ಯನ ಜೀವನ ಹೆಚ್ಚು ಅರ್ಥಪೂರ್ಣವಾಗುತ್ತದೆ. ವ್ಯಕ್ತಿಯನ್ನು ಬಿಡಿಯಾಗಿ ನೋಡದೆ, ಇಡಿಯಾಗಿ ನೋಡುವ ಸಮಗ್ರ ಪರಿಕಲ್ಪನೆ ಇದಾಗಿದೆ.

ಮಾನವ ಎಂದರೆ ಪಂಚಕೋಶಗಳ ಶರೀರ?ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಪ್ರಕಾರ ಮಾನವನನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು ಹೇಳಲಾಗಿದೆ. ಅವುಗಳಿಗೆ ಪಂಚಕೋಶಗಳೆಂದು ಕರೆಯುತ್ತಾರೆ. ಅವು ಈ ಕೆಳಗಿನಂತಿವೆ: ಅನ್ನಮಯ ಕೋಶ (ದೇಹ),  ಪ್ರಾಣಮಯ ಕೋಶ (ಉಸಿರು), ಮನೋಮಯ ಕೋಶ (ಮನಸ್ಸು),  ವಿಜ್ಞಾನಮಯ ಕೋಶ (ಜ್ಞಾನ) ,ಆನಂದಮಯ ಕೋಶ (ಸಂತೋಷ). ವ್ಯಕ್ತಿ ಎಂದಾಕ್ಷಣ ನಮ್ಮ ಕಣ್ಮುಂದೆ ನಿಲ್ಲುವುದು ಆತನ ಶಾರೀರಿಕ ಅಸ್ತಿತ್ವ. ಪ್ರತಿಯೊಬ್ಬರು ತಮ್ಮನ್ನು ತಾನು ಹೀಗೆ ಗುರುತಿಸಿಕೊಳ್ಳುವುದೇ ಹೆಚ್ಚು. ಮಾನವ ಎಂದರೆ ಅವಯವಗಳನ್ನುಳ್ಳ ಶರೀರ ಎಂಬುದೇ ನಮ್ಮೇಲ್ಲರ ಕಲ್ಪನೆಯಾಗಿದೆ. ವ್ಯಕ್ತಿಯ ಅತ್ಯಂತ ಸ್ಥೂಲ ಭಾಗ ಆತನ ಶರೀರ. ಇದಲ್ಲದೆ ಸೂಕ್ಷ್ಮವೂ, ಅತಿ ಸೂಕ್ಷ್ಮವೂ, ವಿಸ್ತøತವೂ ಆದ ಇನ್ನೂ ನಾಲ್ಕು ಅಸ್ತಿತ್ವಗಳು ಮಾನವನಿಗೆ ಉಂಟು ಎಂದು ಯೋಗ ಸೂತ್ರಗಳು ತಿಳಿಸುತ್ತವೆ. ಇವುಗಳನ್ನು ಕೋಶಗಳು ಎನ್ನಲಾಗಿದೆ. ದಶೋಪನಿಷತ್ತುಗಳಲ್ಲಿ ಒಂದಾದ ತೈತ್ತಿರೀಯ ಉಪನಿಷತ್ತು ಈ ಬಗ್ಗೆ ವಿಸ್ತøತ ವಿವರಣೆ ನೀಡುತ್ತದೆ. ಇದನ್ನೇ ‘ಪಂಚಕೋಶ ವಿವೇಕ’ ಎನ್ನುವುದು. ಐದು ಕೋಶಗಳ ಬಗೆಗಿನ ಜ್ಞಾನ ಎಂದರ್ಥ.

1. ಅನ್ನಮಯ ಕೋಶ:

ನಮ್ಮ ಅಸ್ತಿತ್ವದ ಅತ್ಯಂತ ಸ್ಥೂಲವಾದ ಭಾಗ ಇದು. ಜಡ ವಸ್ತುವಿನಿಂದ ಮಾಡಲ್ಪಟ್ಟಿದ್ದು, ಇಲ್ಲಿ ನಮ್ಮ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಅನೇಕ ರೀತಿಯ ಉಸಿರಾಟ ವ್ಯವಸ್ಥೆ, ಜೀರ್ಣ ವ್ಯವಸ್ಥೆ, ನರಮಂಡಲ ವ್ಯವಸ್ಥೆ ಮೊದಲಾದ ವ್ಯೂಹ ವ್ಯವಸ್ಥೆ ಹೊಂದಿದೆ. ಈ ಎಲ್ಲವೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದರೆ, ವ್ಯಕ್ತಿಯನ್ನು ‘ಆರೋಗ್ಯವಂತನಾಗಿದ್ದಾನೆ’ ಎನ್ನುತ್ತೇವೆ. ಈ ವಿಭಿನ್ನ ಅಂಗಗಳ ಕಾರ್ಯ ನಿರ್ವಹಣೆಯಲ್ಲಿ ದೋಷ ಉಂಟಾದರೆ ಅದನ್ನು ಅನಾರೋಗ್ಯದ ಸ್ಥಿತಿ ಎನ್ನುತ್ತೇವೆ.

2. ಪ್ರಾಣಮಯ ಕೋಶ:

ಅನ್ನಮಯ ಕೋಶಕ್ಕಿಂತ ಸೂಕ್ಷ್ಮವೂ, ವಿಸ್ತಾರವೂ ಆದದ್ದು ಪ್ರಾಣಮಯ ಕೋಶವೆನ್ನಲಾಗಿದೆ. ವಿಶ್ವದ ಮೂಲಶಕ್ತಿಯಾದ ‘ಪ್ರಾಣ’ ದಿಂದ ಇದು ಮಾಡಲ್ಪಟ್ಟಿದೆ. ನಮ್ಮ ಸ್ಥೂಲ ಶರೀರದಲ್ಲಿ ರಕ್ತವು ನಾಳಗಳ ಮೂಲಕ ಹರಿಯುವಂತೆ, ಪ್ರಾಣಮಯ ಕೋಶದಲ್ಲಿ ಅತ್ಯಂತ ಸೂಕ್ಷ್ಮವಾದ ಪ್ರಾಣವು ‘ನಾಡಿ’ಗಳು ಎಂಬ ಕಾಲುವೆಗಳ ಮೂಲಕ ಹರಿಯುತ್ತದೆ.ಈ ನಾಡಿಗಳಾಗಳಿ, ಪ್ರಾಣವಾಗಲೀ, ಚಕ್ರವಾಗಲೀ ಸಾಧಾರಣವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಯೌಗಿಕ ಅಭ್ಯಾಸಗಳಿಂದ ಅಂತಃಪ್ರಜ್ಞೆಯನ್ನು ಸೂಕ್ಷ್ಮಗೊಳಿಸಿದರೆ ಇವನ್ನು ಅನುಭವಕ್ಕೆ ತಂದುಕೊಳ್ಳಬಹುದು.

ಇಂತಹ ಲಕ್ಷಾಂತರ ನಾಡಿಗಳಲ್ಲಿ ಹತ್ತು ವಿಶೇಷವಾಗಿ ಅವುಗಳಲ್ಲಿ ಮೂರು ತುಂಬಾ ಮುಖ್ಯವಾದವುಗಳು:  1. ಇಡಾ (ಚಂದ್ರ), 2. ಪಿಂಗಳ (ಸೂರ್ಯ) ಮತ್ತು 3. ಸುಷುಮ್ನಾ. ಈ ಪ್ರಾಣಾಯಾಮ ಕೋಶದಲ್ಲಿ ಪ್ರಾಣದ ಪ್ರವಹನ ಸಮಗತಿಯಲ್ಲಿದ್ದರೆ, ಎಲ್ಲ ಕಡೆಗಳಲ್ಲಿಯೂ ಸಮತೋಲನದಿಂದ ಕೂಡಿದ್ದರೆ, ಅದುವೇ ಆರೋಗ್ಯ. ಈ ಪ್ರವಾಹ ಅಸಮತೋಲನದಿಂದ ಕೂಡಿದ್ದರೆ ಎಂದರೆ ಕೆಲವೆಡೆ ಅತಿಯಾದ ಪ್ರಾಣಪ್ರವಾಹ, ಕೆಲವೆಡೆ ಅತಿ ಕಡಿಮೆ, ಅಥವಾ ಕ್ರಮಬದ್ಧವಾಗಿಲ್ಲದಿದ್ದರೆ, ಈ ಹರಿಯುವಿಕೆಯಲ್ಲಿ ಅಡಚಣೆಗಳಿದ್ದರೆ, ಪ್ರಾಣ ನಾಡಿಯಿಂದ ನಾಡಿಗೆ ಹಾರುತ್ತಿದ್ದರೆ, ಆ ಶರೀರದ ಯಾವ ಭಾಗಗಳಲ್ಲಿ ಹಾಗೆ ಅಸಮತೋಲನವಿದೆಯೋ ಅದಕ್ಕೆ ಸಂಬಂಧಿಸಿದ ಅಂಗಗಳಲ್ಲಿ, ವ್ಯವಸ್ಥೆಗಳಲ್ಲಿ ಅನಾರೋಗ್ಯ ಉಂಟಾಗುತ್ತದೆ.

3. ಮನೋಮಯ ಕೋಶ:

ಮಾನವ ಎಂದರೆ ಪಂಚಕೋಶಗಳ ಶರೀರ?ಇದು ಪ್ರಾಣಮಯ ಕೋಶಕ್ಕಿಂತಲೂ ಸೂಕ್ಷ್ಮವೂ, ವಿಸ್ತøತವೂ ಆಗಿದೆ. ನಮ್ಮ ಚಿಂತನೆಗಳು, ಭಾವನೆಗಳು ಇವುಗಳಿಂದ ಕೂಡಿದ್ದಾಗಿದೆ. ಈ ಕೋಶದಲ್ಲಿ ಚಿಂತನೆಗಳು, ಭಾವನೆಗಳು ಸಾಮರಸ್ಯತೆ, ಸಮತೋಲನದಿಂದ ಇದ್ದಾಗ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ಇಲ್ಲಿನ ಸಮತೋಲನವಿಲ್ಲದಿದ್ದರೆ ವ್ಯಕ್ತಿಯ ಆರೋಗ್ಯವೂ ಕಡೆಡುತ್ತದೆ. ತೀವ್ರವಾದ ಬೇಕು-ಬೇಡಗಳು, ರಾಗ-ದ್ವೇಷಗಳು, ಆಸೆ-ದುರಾಸೆಗಳು ಈ ಸಮತೋಲನವನ್ನು ಕೆಡಿಸಬಲ್ಲವು. ಹಾಗಾದಾಗಅದು ಪ್ರಾಣಮಯ ಕೋಶದ ಮೇಲೆ ಪ್ರಭಾವ ಬೀರಿ, ಅಲ್ಲಿನ ಪ್ರಾಣದ ಹರಿಯುವಿಕೆಯಲ್ಲಿ ಅಡ್ಡಿಯನ್ನುಂಟು ಮಾಡುತ್ತದೆ.ವ್ಯತ್ಯಸ್ತವಾದ ಪ್ರಾಣವು ಶರೀರದ ಮಟ್ಟದಲ್ಲಿ ವ್ಯಾಧಿಯ ರೂಪದಲ್ಲಿ ಪ್ರಕಟವಾಗುತ್ತದೆ. ಹೀಗೆ ಮನೋಮಯ ಕೋಶದಲ್ಲಿ ಉಂಟಾಗುವ ಒತ್ತಡವನ್ನು ‘ಆಧಿ’ ಎನ್ನುತ್ತೇವೆ. ಆಧಿಯ ಸ್ವರೂಪ ಅತಿವೇಗದ್ದು. ಆಧಿಯಿಂದ ವ್ಯಾಧಿ ಉಂಟಾಗುತ್ತದೆ.

4. ವಿಜ್ಞಾನಮಯ ಕೋಶ:

ವಿಜ್ಞಾನಮಯ ಕೋಶವು ಈ ಮೇಲಿನ ಕೋಶಗಳಿಗಿಂತ ಸೂಕ್ಷ್ಮವಾದುದು. ಈ ಕೋಶದಲ್ಲಿ ವ್ಯಕ್ತಿಯು ತನ್ನ ವಿಚಾರ ಶಕ್ತಿಯನ್ನು ಬಳಸುವನು. ನಾವು ಯಾವುದೇ ಕಾರ್ಯವನ್ನು ಮಾಡಬೇಕಾದರೆ, ಮೊದಲು ನಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸಿ ಇದನ್ನು ಮಾಡುವುದು ಸರಿಯೇ ಅಥವಾ ತಪ್ಪೇ, ಇದರಿಂದ ಏನು ಪ್ರಯೋಜನ ಅಥವಾ ಕೆಡುಕೇನು ಇತ್ಯಾದಿ ಎಂದು ವಿಚಾರ ಮಾಡುವುದೇ ಈ ಉನ್ನತ ಸ್ತರದಲ್ಲಿ. ನಾವು ಮಾಡುವ ಪ್ರತಿಯೊಂದು ಕಾಯಕವೂ ಈ ಕೋಶದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಭಿಸಿರುತ್ತದೆ.

5. ಆನಂದಮಯ ಕೋಶ:

ಇದು ಈ ಮೇಲಿನ ನಾಲ್ಕು ಕೋಶಗಳಿಗಿಂತ ಸೂಕ್ಷ್ಮವೂ, ವ್ಯಾಪಕವೂ ಆಗಿದೆ. ನಮ್ಮ ವ್ಯಕ್ತಿತ್ವದ ಎಲ್ಲ ಸ್ತರಗಳಲ್ಲಿ ಅನುಭವವಾಗುವ ಸುಖದ ಮೂಲವೂ ಈ ಆನಂದಮಯ ಕೋಶವಾಗಿದೆ.ಆದರೆ ಅದು ಕ್ಷಣಿಕ ಸುಖ. ನಿರಂತರವಾಗಿ ಈ ಆನಂದದಲ್ಲಿರಬೇಕಾದರೆ ಮನಸ್ಸನ್ನು ಪರಿಶುದ್ಧಗೊಳಿಸಬೇಕು. ಆಗ ನಾವು ನಮ್ಮ ಮೂಲ ಸ್ವರೂಪವಾದ ಆನಂದದಲ್ಲಿ ಪೂರ್ಣ ಆರೋಗ್ಯವನ್ನು ಪಡೆಯಬಲ್ಲೆವು.

ನಾಗರಾಜ್ ಆರ್. ಸಾಲೋಳ್ಳಿ ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.) #57, ಗುರುಕುಲ ಶಾಲೆ ಸಮೀಪ, ಓಂ ನಗರ, ಸೇಡಂ ರಸ್ತೆ, ಕಲಬುರಗಿ-585 105 ದೂ. : 9972776062 ಇಮೇಲ್ : bhoomiyogafoundation2016@gmail.com

ನಾಗರಾಜ್ ಆರ್. ಸಾಲೋಳ್ಳಿ
ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ (ರಿ.)
#57, ಗುರುಕುಲ ಶಾಲೆ ಸಮೀಪ, ಓಂ ನಗರ,
ಸೇಡಂ ರಸ್ತೆ, ಕಲಬುರಗಿ-585 105
ದೂ. : 9972776062
ಇಮೇಲ್ : bhoomiyogafoundation2016@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!