ಹೊಸ ವರ್ಷದ ಹೊಸಿಲಲ್ಲಿ ಬೇವು, ಬೆಲ್ಲ ತಿಂದು ಆರೋಗ್ಯ ಸೂತ್ರಗಳನ್ನು ಜಪಿಸೋಣ

ಓದುಗ ಮಿತ್ರರೇ, ಮಾರ್ಚ್ 25ರಂದು ಯುಗಾದಿ ಆಚರಿಸುವ ಮುನ್ನ, ಆ ಹಬ್ಬದಂದು ಸಾಂಕೇತಿಕವಾಗಿ ತಿನ್ನುವ ಬೇವು ಬೆಲ್ಲದ ಹಿನ್ನೆಲೆಯಲ್ಲಿ, ಬರುವ ದಿನಗಳಲ್ಲಿ ನಾವು ಜಪಿಸಬೇಕಾದ ಆರೋಗ್ಯ ಸೂತ್ರಗಳನ್ನು, ಈ ತಿಂಗಳು ಆಚರಿಸಲಿರುವ ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ತಿಳಿದು ಈ ಸಂದೇಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣವೇ?

ಯುಗಾದಿ ಹಾಗೂ ಬೇವು ಬೆಲ್ಲ: ಭಾರತೀಯ ಸಂಸ್ಕತಿ ಹಾಗೂ ಆರ್ಯುವೇದ ಸಾರುವಂತೆ, ಹೊಸ ವರ್ಷದ ಮುಂಜಾನೆ ತಲೆ, ಮೈ, ಕೈಗಳಿಗೆ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವ ಹಿನ್ನೆಲೆ, ತಲೆ ಕೂದಲು ಹಾಗೂ ಮೈಯ ಚರ್ಮದ ಒಳಗೆ ಎಣ್ಣೆಯ ಮಜ್ಜನ – ನಂತರ ಕಡಲೆಹಿಟ್ಟು, ಸೀಗೆಕಾಯಿಪುಡಿ ಹಾಗೂ ಚುಜ್ಜಲಪುಡಿ ಮಿಶ್ರಣದಿಂದ ತಲೆ ಉಜ್ಜಿದಾಗ, ತಲೆ ಹೊಟ್ಟು, ಮೈ ಉರಿತ, ಚರ್ಮದ ಒಣಗುವಿಕೆ ದೂರವಾಗುತ್ತವೆ. ಬೇವು-ಬೆಲ್ಲ, ಕಹಿ-ಸಿಹಿಗಳ ಮಿಶ್ರಣ. ಗೀತೆಯ ಸಂದೇಶದಂತೆ (ಸುಖ ದುಃಖೇ ಸಮೇಕೃತ್ವಾ, ಲಾಭಾಲಾಭೌ ಜಯ ಜಯೌ) ಸುಖದುಃಖಗಳನ್ನು ಯಾರು ಸಮಾನವಾಗಿ ಕಾಣುತ್ತಾರೋ, ಜಯ-ಅಪಜಯ, ಲಾಭ-ನಷ್ಟಗಳನ್ನು ಸಮಾನವಾಗಿ ಭಾವಿಸಲು ಶಕ್ತರಾಗಿರುತ್ತಾರೋ, ಅವರಿಗೆ ಯಾವುದೇ ಉದ್ವಿಗ್ನತೆ, ಮಾನಸಿಕ ಒತ್ತಡ ಇರುವುದಿಲ್ಲ.
ಅಂತರ್‍ರಾಷ್ಟ್ರೀಯ ಯೋಗ ಉತ್ಸವ: ಈ ವರ್ಷ ಮಾರ್ಚ್ 1ರಿಂದ 7ರವರೆಗೆ, ಉತ್ತರಾಖಂಡ್ ರಾಜ್ಯದ ರಿಷಿಕೇಶ್‍ನಲ್ಲಿ ಅಂತರ್‍ರಾಷ್ಟ್ರೀಯ ಯೋಗ ಉತ್ಸವ ನಡೆಯಲಿದೆ. ಭಾರತ ಸರಕಾರದ ಆಯುಷ್ ಇಲಾಖೆ, ಉತ್ತರಾಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಪಾರಮಾರ್ಥ ನಿಕೇತನ ಆಶ್ರಮ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಘಟಿಸಲಾಗುವ ಈ ಉತ್ಷವದಲ್ಲಿ, ಪ್ರಪಂಚದ ಮೂಲೆ ಮೂಲೆಗಳಿಂದ ಯೋಗಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಕಲಿಕಾರ್ಥಿಗಳು ಭಾಗವಹಿಸಲಿದ್ದು, ಇಲ್ಲಿ ಧ್ಯಾನ, ಮುದ್ರೆಗಳು, ಸಂಸ್ಕøತ ಮಂತ್ರಪಠಣ, ರೇಖಿ, ಭಾರತೀಯ ತತ್ವಶಾಸ್ತ್ರಿಗಳ ಬಗೆಗೆ ತರಬೇತಿ ಸಿಗಲಿವೆ.
ಮಾರ್ಚ್1ರಂದು ಶೂನ್ಯ ತಾರತಮ್ಯ ದಿನಾಚರಣೆ : ಲಿಂಗ ತಾರತಮ್ಯ ಹಾಗೂ ಅಸಮಾನತೆಗಳಿಂದ, ಮಹಿಳೆಯರು ಹಾಗೂ ಹುಡುಗಿಯರಿಗೆ, ಶೋಷಣೆ ಉಂಟಾಗಿ, ಏಡ್ಸ್ ಪ್ರತಿಕ್ರಿಯೆಗೆ ಗಂಭೀರ ಪರಿಣಾಮ ತಂದಿದೆ. ಬೀಜಿಂಗ್25 ಸಮಾವೇಶದಿಂದ ಸಪ್ಟೆಂಬರ್‍ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮಹತ್ವದ ಸಮಾವೇಶದವರೆಗೆ, ಈ ಕ್ಷೇತ್ರದಲ್ಲಿ ವಿಶ್ವ ಪ್ರಯತ್ನ ನಡೆದಿದೆ.
3ರಂದು ವಿಶ್ವ ವನ್ಯಜೀವಿ ದಿನ: ಈ ವರ್ಷದ ಧ್ಯೇಯವಾಕ್ಯ ಭೂಮಿ ಮೇಲಿನ ಎಲ್ಲ ಜೀವಿಗಳ ಸುಸ್ಥಿರತೆ. ಈ ವರ್ಷ ಜೈವಿಕ ವೈವಿಧ್ಯತೆಯ ಮಹಾವರ್ಷ. ಜೈವಿಕ ವೈವಿಧ್ಯತೆ ಹಾಗೂ ಜನರ ಜೀವನ ಇವುಗಳ ಭಾಗವಾಗಿ, ವನ್ಯಜೀವಿ ಹಾಗೂ ಸಸ್ಯ ತಳಿಗಳನ್ನು ಒಳಗೊಂಡಿದ್ದು, ಇರುವ ಸ್ವಾಭಾವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಬಗ್ಗೆ ಸಹ ಯೋಚಿಸಿ, ವನ್ಯಜೀವಿಗಳ ರಕ್ಷಣೆಯಿಂದ ಜನರಿಗಾಗುವ ಲಾಭಗಳ ಬಗ್ಗೆ ಜನ ಅರಿಯುವಂತೆ ಮಾಡುವುದೇ ಈ ದಿನಾಚರಣೆ ಉದ್ದೇಶ.
ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಮಾರ್ಚ್ 4 ರಿಂದ: ಈ ವರ್ಷ 46ನೇ ಭಾರತೀಯ ರಾಷ್ಟ್ರೀಯ ಸುರಕ್ಷಣಾ ಸಪ್ತಾಹ. 1972ರಲ್ಲಿ ಆರಂಭಿಸಲಾದ ಈ ಆಚರಣೆಯನ್ನು ಕೈಗಾರಿಕೆಗಳು ಕಾರ್ಮಿಕ ಸಂಘಗಳು, ಸರಕಾರದ ಇಲಾಖೆಗಳು, ಸ್ವಯಂಸೇವಾ ಸಂಘಗಳು, ಸಂಬಂಧಿಸಿದ ಸಂಸ್ಥೆಗಳು ಹಾಗೂ ಮಾಧ್ಯಮ ಒಟ್ಟಾಗಿ ಆಚರಿಸುತ್ತಿವೆ. ಇದರ ಉದ್ದೇಶ ಸುರಕ್ಷತಾ ಅರಿವನ್ನು ಹೆಚ್ಚಿಸುವುದು ಹಾಗೂ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು. ಕೆಲಸದ ಸಂಸ್ಕøತಿ ಹಾಗೂ ಜೀವನ ಶೈಲಿಗಳಲ್ಲಿ ಸುರಕ್ಷತೆ ಹಾಗೂ ಆರೋಗ್ಯಗಳನ್ನು, ಸಂಬ0ಧಿಸಿದ ನಿಯಮಗಳು ಹಾಗು ಕ್ರಮಗಳ ಮೂಲಕ ಪಾಲಿಸಬೇಕು.
ಮಾರ್ಚ್ 8ರಂದು ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಂದಿನಿಂದ ಅಂತರ್‍ರಾಷ್ಟ್ರೀಯ ಮಹಿಳಾ ಸಪ್ತಾಹದ ಆಚರಣೆ. ಈ ವರ್ಷದ ಧ್ಯೇಯ ವಾಕ್ಯ ಸಮಾನತೆಯ ವಿಶ್ವ ಸಕ್ರಿಯತೆ ವಿಶ್ವ.
ಬದಲಾವಣೆಗಾಗಿ ಗಟ್ಟಿಯಾಗಿರಿ: ಇಂದು ಲಿಂಗ ಸಮಾನತೆಯ ನಾಯಕತ್ವ ನಮ್ಮ ಗುರಿ, ನಾವು ಗಂಡಸರು, ಮಹಿಳೆಯರು ಮುನ್ನುಗ್ಗಲು, ಪ್ರಪಂಚ ಆರ್ಥಿಕತೆಗಳಿಗೆ ನೀಡಿರುವ ಅನಿಯಮಿತ ಅವಕಾಶಗಳನ್ನು ಬಳಸಿಕೊಳ್ಳಲು ನೆರವಾಗಬೇಕು. ಮಹಿಳೆಯ ಆರ್ಥಿಕ ಸಬಲೀಕರಣದತ್ತ 2018ರಲ್ಲಿ ವಿಶ್ವದ ನಾಯಕರು ಸುಸ್ಥಿರ ಅಭಿವೃದ್ಧಿಯ ಗುರಿಗಳು, ಲಿಂಗ ಸಮಾನತೆ ಹಾಗೂ ಎಲ್ಲ ಮಹಿಳೆಯರು ಹಾಗೂ ಬಾಲಕಿಯರ ಸಬಲೀಕರಣ, ಈ ಗುರಿಯತ್ತ ಹೋಗಲು, ಅಸಮಾನತೆ ಶೋಷಣೆಗಳನ್ನು ತೊಲಗಿಸುವತ್ತ ಗಮನ ಕೇಂದ್ರೀಕರಿಸಿದರು. ಎಷ್ಟೇ ಓದಿದ್ದರೂ, ಡಾಕ್ಟರ್, ಆ್ಯಕ್ಟರ್, ಇಂಜಿನಿಯರ್, ಅಧಿಕಾರಿ, ಬ್ಯಾಂಕ್ ಅಧಿಕಾರಿಯಾಗಿದ್ದರೂ, ತಂದೆ, ಸೋದರರು, ಗಂಡ ಇವರಿಗಿಂತ, ಉನ್ನತ ಸ್ಥಾನ ಸಂಬಳ ಹೊಂದಿದ್ದರೂ, ಇನ್ನೂ ಬಹಳಷ್ಟು ಮಹಿಳೆಯರು, ಕುಟುಂಬದಲ್ಲಿ ವರನ ಆಯ್ಕೆ, ಮದುವೆ, ಸಂಬಳ ತಂದು ಮನೆಯಲ್ಲಿ ಕೊಡುತ್ತಾ, ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಲೈಂಗಿಕ ಸಂಬಂಧ, ಮಗು ಯಾವಾಗ ಬೇಕು? ಎಷ್ಟು ಬೇಕು? ಮೊದಲ ಮಗು ಹೆಣ್ಣಾದರೆ ಮುಂದೆ, ಈ ಎಲ್ಲ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಿಲ್ಲ. ಬಹಳಷ್ಟು ಹಳ್ಳಿಗಳಲ್ಲಿ ದೂರದಿಂದ ನೀರು ಹೊತ್ತು ತರುವುದು ಇನ್ನು ನಿಂತಿಲ್ಲ. ಸರಕಾರದ ಅನೇಕ ಯೋಜನೆಗಳಿದ್ದರೂ, ಮಹಿಳೆಯ ಆರೋಗ್ಯ, ಪೌಷ್ಠಿಕತೆ ಆಹಾರ, ಎಲ್ಲದರಲ್ಲೂ ಆಕೆಗೆ, ಕೊನೆಯ ಸ್ಥಾನವಾಗಿದೆ. ಕಲಿತವರು- ಕಲಿಯದವರು, ನಗರ-ಹಳ್ಳಿಯವರು, ಉದ್ಯೋಗಸ್ತರು-ಗೃಹಿಣಿ, ಈ ಎಲ್ಲರಿಗೂ ಸಮಾನತೆ ಬಂದರೆ ಮಾತ್ರ, ಸಬಲತೆಗೆ ನಿಜವಾದ ಅರ್ಥ.
ಮಾರ್ಚ್ 11 ರಂದು ಹೋಳಿ ಹುಣ್ಣಿಮೆ: ಬಣ್ಣದೋಕುಳಿ ಆಡುವ ಉತ್ಸಾಹಿ ಯುವ ಮನಸ್ಸುಗಳೇ, ನಿಮ್ಮ ಉತ್ಸಾಹ ಹಾಗೇ ಇರಲಿ. ಆದರೆ ಈಗ ಹೇಳುವ ಕೆಲವು ಮುಂಜಾಗರೂಕತಾ ಕ್ರಮಗಳಿಂದ ನಿಮ್ಮ ಚರ್ಮ, ಮುಖ, ಕಣ್ಣು, ಹಾಗೂ ತಲೆ ಕೂದಲು ರಕ್ಷಣೆ ಮಾಡಿಕೊಳ್ಳಲು ಮರೆಯಬೇಡಿ.
1.ಬಣ್ಣದಾಟ ಆಡಿದ ನಂತರ, ತಲೆಗೂದಲು, ನೆತ್ತಿ, ಮುಖ, ಕತ್ತು, ಭುಜಗಳು, ತೋಳುಗಳು, ಕಾಲುಗಳು, ಬಣ್ಣದಾಟಕ್ಕೆ ತೆರೆದಿದ್ದ ಮೈಯ ಎಲ್ಲ ಭಾಗಗಳಿಗೂ, ಎರಡು ಪದರು ಎಣ್ಣೆ ಹಚ್ಚಿರಿ.
2.ಕಿವಿ, ಹೊಕ್ಕಳು, ಕೈ ಬೆರಳುಗಳು ಕಾಲುಬೆರಳ ಅಂಚುಗಳು, ಇವುಗಳನ್ನ ತೆಂಗು, ಆಲಿವ್, ಸಾಸಿವೆ ಅಥವಾ ಎಳ್ಳು ಎಣ್ಣೆಯಿಂದ ಚೆನ್ನಾಗಿ ತೊಳೆಯಿರಿ.
ಮಹಿಳೆಯರು ತಲೆದೂದಲನ್ನು ಕಟ್ಟಿರಿ. ಉಗುರುಗಳ ಸಂದಿಗಳಲ್ಲಿ ಬಣ್ಣ ಉಳಿಯದಿರಲಿ.
3.ಗಂಡಸರು ಹೋಳಿಗೆ 2-3 ದಿನ ಮೊದಲು, ದಾಡಿ ಮಾಡಿಕೊಳ್ಳಬೇಡಿ, ಕಣ್ಣಿಗೆ ಕಾಂಟಾಕ್ಸ್ ಲೆನ್ಸ್ ಹಾಕಿಕೊಳ್ಳಬೇಡಿ.
4. 4 ಚಮಚ ಕಡಲೆಹಿಟ್ಟು, ಅರ್ಧ ಚಮಚ ಅರಿಶಿನ ಪುಡಿ. 2 ಚಮಚ ತಾಜಾ ಮೊಸರು, ನಿಂಬೆರಸದ ಕೆಲ ಹನಿಗಳು ಇವುಗಳ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಒಳ್ಳೆಯದು.
5.ಚರ್ಮದ ಕಡಿತ- ಉರಿ ಹೋಗಲು, ಜೇನುತುಪ್ಪ-ರೋಸ್ ನೀರು ಹಾಗೂ ಕೆಲಾಮಿನ್ ಲೋಶನ್ ಸೇರಿಸಿ ಹಚ್ಚಿ. ಸೇಬು ಹಾಗೂ ಸೌತೆಕಾಯಿ ರಸಗಳನ್ನು ಸೇರಿಸಿ ಹಚ್ಚಿ ಚಿಕ್ಕು ಹಣ್ಣಿನ ಸಿಪ್ಪೆ ತೆಗೆದು ಜಜ್ಜಿ ಮುಖಕ್ಕೆ ಹಚ್ಚಿರಿ.
ಮಾರ್ಚ್11ರಂದೇ ಧೂಮಪಾನ ರಹಿತ ದಿನ: ನಿತ್ಯ ಜೀವನದಲ್ಲಿ ಧೂಮ್ರಪಾನ ಮಾಡುವುದರಿಂದಾಗುವ ಆರೋಗ್ಯ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಲು, ಧೂಮ್ರಪಾನ ಬಿಡಬಯಸುವವರಿಗೆ ನೆರವು ನೀಡಲು, ಈ ದಿನ ಆಚರಿಸುತ್ತಾರೆ.
ಮಾರ್ಚ್ 12 ರಂದು ವಿಶ್ವ ಮೂತ್ರಪಿಂಡಗಳ ದಿನಾಚರಣೆ: ಅಂತರ್‍ರಾಷ್ಟ್ರೀಯ ಮೂತ್ರಪಿಂಡ ಶಾಸ್ತ್ರ ಸಮಾಜ ಹಾಗೂ ಅಂತರ್‍ರಾಷ್ಟ್ರೀಯ ಮೂತ್ರಪಿಂಡ ಪ್ರತಿಷ್ಠಾನಗಳ ಒಕ್ಕೂಟ ಒಟ್ಟಾಗಿ, ವಿಶ್ವಮಟ್ಟದಲ್ಲಿ ಪ್ರತೀವರ್ಷ, ಎಲ್ಲ ಆರೋಗ್ಯ ಸಂಸ್ಥೆಗಳೂ ಸೇರಿ ಆಚರಿಸುತ್ತಿರುವ ಈ ದಿನಾಚರಣೆಯ ಮುಖ್ಯ ಉದ್ದೇಶ, ಪ್ರತಿಬಂಧಿಸಬಹುದಾದ ಅಥವಾ ಗುಣಮಾಡಬಹುದಾದ ಮೂತ್ರಪಿಂಡದ ಕಾಹಿಲೆಗಳ ಬಗ್ಗೆ ಶ್ರೀ ಸಾಮಾನ್ಯರಿಗೆ ಅರಿವು ನೀಡುವುದೇ ಆಗಿದೆ.
ಮಾರ್ಚ್ 14ರಂದು ವಿಶ್ವ ಕ್ಷಯರೋಗ ದಿನ: ಈ ವರ್ಷದ ಧ್ಯೇಯ ಇದು ಸಮಯ. ನನ್ನ ಬಂಧುಗಳೊಬ್ಬರು ಸೈನ್ಯದಲ್ಲಿದ್ದಾಗ ಸಿಗರೇಟು ಸೇದಿದ್ದ ಪರಿಣಾಮ, ಅವರಿಗೆ 30 ವರ್ಷಗಳ ನಂತರ ಕ್ಷಯರೋಗ ಬಂದಿತ್ತೆಂಬುದು ಗಮನಿಸಬೇಕಾದ ಸಂಗತಿ.ಇಂದು 12ರಿಂದ 17 ವರ್ಷದ ಸಾವಿರಾರು ಯುವಜನ ಪ್ರತಿದಿನ ಧೂಮ್ರಪಾನ ಆರಂಭಿಸುತ್ತಿದ್ದಾರೆ. ಕೆಲವರು ಕುತೂಹಲಕ್ಕೆ ಆರಂಭಿಸಿದರೆ, ಇತರರು ತಾವು ಬೆಳೆದಿದ್ದೇವೆ, ಹರೆಯ ಬಂದಿದೆ ಎಂದು ತೋರಿಸಲು, ಈ ಚಟ ಆರಂಭಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳಾದ ಕೆಮ್ಮು, ಗಂಟಲು ಕೆರೆತ ಆರಂಭವಾಗಿ ಬಾಯಿಯ ದುರ್ವಾಸನೆ, ಬಟ್ಟೆಯ ದುರ್ವಾಸನೆ ಮುಂದುವರೆಯುತ್ತದೆ. ಮುಂದೆ ಭೀಕರ ಆರೋಗ್ಯ ಸಮಸ್ಯೆಗಳಾದ ಹೃದಯ ಕಾಹಿಲೆ, ನಿಮೋನಿಯಾ, ಪಾಶ್ರ್ವವಾಯು, ಕ್ಯಾನ್ಸರ್‍ನ ವಿವಿಧ ರೂಪಗಳಲ್ಲಿ ಬಾಯಿ ಕ್ಯಾನ್ಸರ್ ಬರುತ್ತದೆ. ಆದ್ದರಿಂದ ಬೀಡಿ-ಸಿಗರೇಟು-ತಂಬಾಕು-ಧೂಮ್ರಪಾನ- ಮದ್ಯಪಾನ ತ್ಯಜಿಸಿ. ಧೂಮ್ರಪಾನ ಚಟದಿಂದ ದೂರ ಮಾಡಲು ಚಟ ಬಿಡಿಸುವ ತರಬೇತಿ ಬೇಕಾಗಬಹುದು. ಕ್ಷಯರೋಗದ ಬಗ್ಗೆ ಆವಶ್ಯಕ ಕನಿಷ್ಠ ಜ್ಞಾನ ನೀಡುವಾಗ, ಇದು ಬರುವ ಕಾರಣಗಳು, ತಡೆಯುವಿಕೆ ಹಾಗೂ ಉಪಚಾರದಿಂದ ಗುಣ, ಇವುಗಳ ಬಗ್ಗೆ ಜನರಿಗೆ ಅರಿವು ನೀಡುವುದೇ ಈ ದಿನಾಚರಣೆ ಉದ್ದೇಶ. ಗಾಳಿಯಿಂದ ಹರಡುವ ಸಾಮಾನ್ಯವಾಗಿ ಪುಪ್ಪಸಗಳಿಗೆ ಅಂಟಿಕೊಳ್ಳುವ ಈ ರೋಗ, ಪ್ರತಿದಿನ 4000 ಜನರನ್ನು ಕೊಲ್ಲಬಲ್ಲದು.ಕಡಿಮೆ ಆದಾಯದ ಗುಂಪಿನಲ್ಲಿರುವ ಜನರಿಗೆ ಬರುವ ಈ ರೋಗವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಪಡಿಸಬಹುದು.
ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನಾಚರಣೆ: ಈ ವರ್ಷದ ಧ್ಯೇಯ, ಸುಸ್ಥಿರ ಗ್ರಾಹಕ ಗ್ರಾಹಕರ ಹಕ್ಕುಗಳ ರಕ್ಷಣೆ. ್ದಸಾಕಷ್ಟು ಆಹಾರ, ಬಟ್ಟೆ, ವಸತಿ, ಆರೋಗ್ಯ ಕಾಳಜಿ, ಶಿಕ್ಷಣ, ಸಾರ್ವಜನಿಕ ಸೌಲಭ್ಯಗಳು, ನೀರು ಹಾಗೂ ಸ್ವಚ್ಛತೆ, ಇಂದಿನ ಗ್ರಾಹಕರಿಗೆ ಸಿಗಲೇಬೇಕಾದ ಹಕ್ಕುಗಳು. ನಾವು ತಿನ್ನುವ ಆಹಾರ, ನಾವು ತೆಗೆದುಕೊಳ್ಳುವ ಔಷಧಿ, ನಮ್ಮ ಮನೆಗಳಲ್ಲಿ ಬಳಸುವ ಉತ್ಪನ್ನಗಳು, ಒಟ್ಟಿನಲ್ಲಿ ನಾವು ಪ್ರತಿನಿತ್ಯ ಬಳಸುವ ವಸ್ತುಗಳನ್ನು ಗಮನಿಸಿ. ವಿಶ್ವದಾದ್ಯಂತ ಮರಣದ 10 ಮುಖ್ಯ ಕಾರಣಗಳಲ್ಲಿ 4 ಕಾರಣಗಳು ಅನಾರೋಗ್ಯಕರ ಆಹಾರ ಬಳಕೆಗೆ ಸಂಬಂಧಿಸಿವೆ. ಎಲ್ಲ ಗ್ರಾಹಕರ ಹಕ್ಕು ಕೇವಲ ಆಹಾರವಲ್ಲ ಆರೋಗ್ಯಕರ ಆಹಾರ.
ಗ್ರಾಹಕ ರಕ್ಷಣಾ ಕಾಯಿದೆ ಪ್ರಕಾರ ಗ್ರಾಹಕರ ಜೀವ ಹಾಗೂ ಆಸ್ತಿಗೆ ಹಾನಿಕಾರಕವಾಗಬಲ್ಲ ವಸ್ತುಗಳು ಹಾಗೂ ಸೇವೆಗಳ ಮಾರುಕಟ್ಟೆ ವಿರುದ್ದ ಗ್ರಾಹಕರಿಗೆ ಹಕ್ಕಿನ ರಕ್ಷಣೆ ಕೊಡಲಾಗಿದೆ. ಗ್ರಾಹಕರ ಹಕ್ಕಿನಂತೆ ಜನ ವಸ್ತುಗಳು ಹಾಗೂ ಸೇವೆಗಳ ಗುಣಮಟ್ಟ, ಗಟ್ಟಿತನ, ತೂಕ, ಪರಿಶುದ್ಧತೆ, ಇವುಗಳ ಬಗ್ಗೆ ತಿಳಿಯಲೇಬೇಕು.ಕಂತುಗಳಲ್ಲಿ ಸಿಗುವ ಬಟ್ಟೆ, ಒಂದಕ್ಕೆ ಒಂದು ಉಚಿತ ಎಂಬ ಜಾಹೀರಾತು, ದರದಲ್ಲಿ ಕಡಿತ, ಸೋವಿ ಮಾರಾಟ ಎಂಬ ಫಲಕಗಳು, ಬೆಲೆ ಕಡಿಮೆ, ರಶೀತಿ ಬೇಡವೆಂದರೆ ಸ್ವಲ್ಪ ಕಡಿಮೆ ದರ, ಈ ರೀತಿಯ ಮರುಳು ಮಾಡುವಿಕೆಯಿಂದ, ನೂರಾರು ಗ್ರಾಹಕರು, ಪ್ರತಿನಿತ್ಯ ಮೋಸ ಹೋಗುತ್ತಿದ್ದಾರೆ. ಉಚಿತ ಕೊಡುವ ಚÀಮಚಾ, ಕರವಸ್ತ್ರ, ಒಂದನ್ನು ಕೊಂಡರೆ ಇನ್ನೊಂದು ಉಚಿತ ಎಂಬ ತಳ್ಳುವರಿ ಮಾರಾಟ, ಗ್ರಾಹಕರನ್ನು ವಿಶೇಷವಾಗಿ ಮಹಿಳೆಯರನ್ನು, ಬಡವರನ್ನು, ಆಕರ್ಷಿಸುವ ತಂತ್ರಗಳಷ್ಟೇ. ಯಾರಾದರೂ ಲಾಭವಿಲ್ಲದೇ, ನಷ್ಟ ಮಾಡಿಕೊಂಡು ಮಾರಾಟ ಮಾಡುತ್ತಾರೆಯೇ ಯೋಚಿಸಿ!
ಮಾರ್ಚ್ 16ರಂದು ರಾಷ್ಟ್ರೀಯ ಲಸಿಕಾ ದಿನ: 1995ರಲ್ಲಿ ಬಾಯಿಂದ ಹಾಕುವ ಮೊದಲ ಪೋಲಿಯೋ ಲಸಿಕೆ ಕೊಟ್ಟ ದಿನ ಇದು. ಸೋಂಕುರೋಗಗಳನ್ನು ತಡೆಯುವ ಅತಿ ಪರಿಣಾಮಕಾರಿ ವಿಜ್ಞಾನವೇ ಲಸಿಕೆ. ಸಿಡುಬು, ಧನುರ್ವಾತ, ವಿಶ್ವದಿಂದ ಮಾಯವಾಗಲು ಕಾರಣ ಇದೇ. ವಿಶ್ವದಲ್ಲೇ ಅತ್ಯಂತ ಬೃಹತ್ ಲಸಿಕಾ ಕಾರ್ಯಕ್ರಮ ನಮ್ಮ ದೇಶದಲ್ಲೇ.
ಮಾರ್ಚ್ 17ರಂದು ವಿಶ್ವ ನಿದ್ರಾ ದಿನ: ನಮ್ಮ ದೇಹ ಆರೋಗ್ಯವಾರಲು ನಾವು ಪ್ರತಿ ದಿನ ನಿಗದಿತ ಅವಧಿಯ ಒಳ್ಳೆಯ ನಿದ್ರೆ ಮಾಡಬೇಕು. ಈ ವರ್ಷದ ಧ್ಯೇಯವಾಕ್ಯ ಒಳ್ಳೆಯ ನಿದ್ರೆ ಮಾಡಿ, ಜೀವನ ಪೋಷಿಸಿ. 2008ರಿಂದ ವಿಶ್ವ ನಿದ್ರಾ ಔಷಧಿ ಸಂಘದ ವಿಶ್ವ ನಿದ್ರಾ ದಿನ ಸಮಿತಿ ಈ ದಿನಾಚರಣೆ ಏರ್ಪಡಿಸುತ್ತಿದ್ದು, ಇದರ ಉದ್ದೇಶ ಎಲ್ಲರಿಗೂ ಒಳ್ಳೆಯ ಹಾಗೂ ಆರೋಗ್ಯಪೂರ್ಣ ನಿದ್ರೆಯ ಲಾಭಗಳನ್ನು ತಿಳಿಸಿ, ನಿದ್ರಾ ಸಮಸ್ಯೆಗಳ ಭಾರ, ಅದಕ್ಕಾಗಿ ಔಷಧ, ಶಿಕ್ಷಣ ಹಾಗೂ ಸಾಮಾಜಿಕ ಆಯಾಮಗಳ ಬಗ್ಗೆ ಅರಿವು ನೀಡುವುದಾಗಿದೆ. ತೂಕಡಿಸುತ್ತ ರಸ್ತೆಯಲ್ಲಿ ವಾಹನ ನಡೆಸುವುದರಿಂದ ಅಪಘಾತಗಳಾಗುತ್ತಿವೆ. ಸುಲಭ ಉಸಿರಾಟ, ವಿಶ್ರಾಂತಿದಾಯಕ ನಿದ್ರೆ ಹಾಗೂ ಆರೋಗ್ಯಪೂರ್ಣ ದೇಹ ಎಂಬುದೇ ನಿದ್ರೆಯ 3 ಮೂಲ ವಿಷಯಗಳು. ಇದಕ್ಕಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲು, ಶಾಂತತೆ ಇದ್ದು, ಟಿ.ವಿ ಹಾಗೂ ಮೊಬೈಲ್ ಇರಬಾರದು, ನೀವು ಗಾಢ ನಇದ್ರೆಯಲ್ಲಿರುವಾಗ, ನಿಮ್ಮ ದೇಹದ ತಾಪಮಾನ ಕೊಂಚ ಕಡಿಮೆಯಾಗುತ್ತದೆ, ನಿಮ್ಮ ನಿದ್ರಾ ಕೋಣೆಯ ಉಷ್ಣತಾಮಾನ ಅತಿ ಬಿಸಿ ಅಥವಾ ಅತಿ ತಂಪು ಇದ್ದರೆ ನಮ್ಮ ದೇಹ ಒದ್ದಾಡುತ್ತದೆ. ಒಳ್ಳೆಯ ಉಸಿರಾಟಕ್ಕೆ ವಾತಾವರಣದಲ್ಲಿ ಶುದ್ಧತೆ ಇರಬೇಕು.
ಮಾರ್ಚ್20ರಂದು ಅಂತರ್ ರಾಷ್ಟ್ರೀಯ ಸಂತಸ ದಿನ: ಒಟ್ಟಾಗಿದ್ದರೆ ಸಂತಸ. ನಮ್ಮಲ್ಲಿರುವ ಸಾಮಾನ್ಯತೆ ಮೇಲೆ ಕೇಂದ್ರೀಕರಿಸಿ, ನಮ್ಮನ್ನು ವಿಭಾಗಿಸುವ-ವ್ಯತ್ಯಾಸ ಅಲಕ್ಷಿಸುವ ವಿಚಾರ ಇಲ್ಲಿದೆ. ಪ್ರತಿಯೊಬ್ಬರ ಬಯಕೆ ಸಂತಸವಾಗಿರುವುದು. ನಾವೆಲ್ಲ ಒಟ್ಟಾಗಿದ್ದಾಗ ಜೀವನ ಹೆಚ್ಚು ಸಂತಸ.
ಮಾರ್ಚ್ 21ರಂದು ವಿಶ್ವ ಅರಣ್ಯ ದಿನ: ಈ ಸಲದ ಧ್ಯೇಯವಾಕ್ಯ ಅರಣ್ಯ ಹಾಗೂ ಜೈವಿಕ ವೈವಿಧ್ಯ.ಭೂಮಿಯ ಮೇಲೆ ಜೀವನ ಚಕ್ರದ ಸಮತೋಲನಕ್ಕೆ, ಅರಣ್ಯಗಳ ಮಹತ್ವ ಹಾಗೂ ಕೊಡುಗೆ ಬಗ್ಗೆ, ಸಮುದಾಯದಲ್ಲಿ ಸಾರ್ವಜನಿಕ ಅರಿವು ಮೂಡಿಸುವುದೇ ಈ ದಿನಾಚರಣೆ ಉದ್ದೇಶ. ನಮ್ಮ ದಿನನಿತ್ಯದ ಜೀವನದಲ್ಲಿ ಕಚ್ಛಾ ಸಾಮಗ್ರಿಗಳು ಹಾಗೂ ಸ್ಥಳೀಯ ಉದ್ಯೋಗಿಗಳ ಮೂಲ, ಹಾಗೂ ರಾಷ್ಟ್ರೀಯ ಆದಾಯದ ಮೂಲವಾಗಿದೆ ಅರಣ್ಯಗಳು, ನೆರಳು, ವಸತಿ, ಆಹಾರ, ಶುದ್ಧ ಗಾಳಿ ಹಾಗೂ ನೀರು ರಕ್ಷಣೆ, ಮಣ್ಣಿನ ಸವಕಳಿ ತಡೆಯುವ, ಸಾವಿರಾರು ವನ್ಯ ಮೃಗಗಳು ಹಾಗೂ ಮರಗಳು ಇವೆಲ್ಲ ಚೆನ್ನಾಗಿ ಮುಂದುವರೆಯಲು, ಅರಣ್ಯರಕ್ಷಣೆ ಬಹಳ ಮುಖ್ಯ, ನಾನು ಆಕಾಶವಾಣಿಯಲ್ಲಿದ್ದಾಗ ಬಾನುಲಿ ಮೂಲಕ ಹಾಗೂ ರಂಗದ ಮೇಲೆ, ಕಾಡಿನ ಕರೆ, ಕಾಡಿನ ಕಥೆ, ಮರ ಹೇಳಿದ ಕಥೆ, ಆನೆ ಹೇಳಿದ ಕಥೆ ಮುಂತಾದ ರೂಪಕಗಳು, ಕಾಡಿನ ಸಿರಿ ಮಾಲಿಕೆ, ಕಾಡಿನಲ್ಲಿ ಒಂದು ರಾತ್ರಿ ಎಂಬ ನನ್ನ ನಾಟಕ, ಇವುಗಳನ್ನು ರೇಡಿಯೋ ಮೂಲಕ ಪ್ರಸಾರ ಹಾಗೂ ರಂಗದಲ್ಲಿ ಅನೇಕ ಪ್ರದರ್ಶನಗಳನ್ನು ನಿರ್ದೇಶಿಸಿ ಅಭಿನಯಿಸಿದ್ದೇನೆ.
ಮಾರ್ಚ್ 22ರಂದು ವಿಶ್ವ ಜಲ ದಿನ: ಈ ವರ್ಷದ ಧ್ಯೇಯವಾಕ್ಯ ಪ್ರಕೃತಿ ಹಾಗೂ ಹವಾಮಾನ ಬದಲಾವಣೆಯಲ್ಲಿ ನೀರಿನ ಮಹತ್ವ.. ಹವಾಮಾನ ಬದಲಾವಣೆಯಿಂದ ನೀರಿನ ಮೇಲಾಗುವ ಪರಿಣಾಮಗಳಿಗೆ ಹೊಂದಿಕೊಂಡು, ಜೀವಿಗಳ ಆರೋಗ್ಯ ರಕ್ಷಿಸಿ ಉಳಿಸುವುದಾಗಿದೆ. ನೀರಿನ ಹೆಚ್ಚು ದಕ್ಷತೆಯ ಬಳಕೆ, ಹಸಿರುಮನೆ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ಜೀವ ಉಳಿಸುವ ಜೀವ ಹನಿ ಹನಿಗೆ ಬೆಲೆ ಕಟ್ಟಲಾಗದು. ಮರಳುಗಾಡಿನಲ್ಲಿ ವಾಸಿಸುವವರಿಗೆ ಕೇಳಿನೋಡಿ. ಬಾಯಾರಿಕೆಯಾದಾಗ, ದಾಹ ಅತಿಯಾದಾಗ, ಬಿಸಿಲಿನ ಝಳ, ಮೈಯಲ್ಲಿನ ನೀರು ಬೆವರಿನ ರೂಪದಲ್ಲಿ- ಮೂತ್ರದ ರೂಪದಲ್ಲಿ ಹೊರಸೆಳೆದಾಗ, ದೇಹಕ್ಕೆ ಮತ್ತೆ ಮತ್ತೆ ನೀರು ತುಂಬಲೇಬೇಕು. ಇಲ್ಲದಿದ್ದರೆ ದೇಹದ ನಿರ್ಜಲೀಕರಣವಾಗುತ್ತದೆ. ಸತತ ವಾಂತಿ, ಭೇಧಿಯಾದಾಗ ದೇಹದ ನಿರ್ಜಲೀಕರಣದ ಸಮಸ್ಯೆಗಳನ್ನು ಪರಿಹರಿಸಲು, ಪುನರ್ ಜಲೀಕರಣ. ಆದರೆ ನೀರನ್ನು ಗಂಗೆ, ಕಾವೇರಿ ತಾಯಿ ಎಂದು ಕರೆವ ನಾವು, ಆಕೆಯ ಪಾವಿತ್ರ್ಯತೆ, ರಕ್ಷಣೆ, ಸ್ವಚ್ಛತೆಗಾಗಿ ಎನು ಮಾಡುತ್ತಿದ್ದೇವೆ? ಪೂಜೆಯ ಸಂದರ್ಭಗಳಲ್ಲಿ, ನದಿಗಳನ್ನು ದೇವತೆ ಎಂದು ಪೂಜಿಸುವ ನಾವು, ನೀರನ್ನು ಹೇಗೆ ಕಾಯುತ್ತಿದ್ದೇವೆ ಕೆಲಕಾಲ ಯೋಚಿಸಿ.
ಪ್ರತಿನಿತ್ಯ ಮನೆನಲ್ಲಿಗಳಿಂದ, ಸಾರ್ವಜನಿಕ ನಲ್ಲಿಗಳಿಂದ ನೀರು ಸತತ ಸೆಳೆದು ಬಳಸುತ್ತಿರುವ ಜನ, ಇಡೀ ದಿನ ನಲ್ಲಿಗಳನ್ನು ತೆಗೆದಿಡದೇ, ಅತ್ಯಂತ ಆವಶ್ಯಕತೆಯಿರುವಷ್ಟೇ ನೀರು ಬಳಸಿ, ಉಳಿದ ಸಮಯ ನಳ ಗಟ್ಟಿಯಾಗಿ ನಿಲ್ಲಿಸಿಡಲು ಕರೆ ನೀಡಲಾಗಿದೆ, ವಿದ್ಯುತ್ ಕೈ ಕೊಟ್ಟು ನೀರು ಬಾರದಿದ್ದಾಗ, ಎಲ್ಲ ಎಷ್ಟು ಕಷ್ಟಪಟ್ಟು, ಇರುವ ಹನಿ ಹನಿ ನೀರಿನ ಗರಿಷ್ಟ ಪ್ರಯೋಜನ ತೆಗೆದುಕೊಳ್ಳುತ್ತೇವೆಯೋ, ಇದೇ ಎಚ್ಚರಿಕೆ ಕಾಳಜಿಯನ್ನು, ನೀರು ಲಭ್ಯವಿರುವಾಗಲೂ ನಾವೆಲ್ಲ ತೋರಿಸಬೇಕು, ಬಾಯಾರಿಕೆ ತಣಿಸುವ ಜಲದೇವಿ ಬತ್ತಿ ಮಾಯವಾಗದಂತೆ, ಸದಾ ನಳನಳಸುತ್ತಿರಲು, ಪ್ರತೀ ಮನೆಯ ಅಡಿಗೆ ಮನೆ ಬಚ್ಚಲುಮನೆ, ಶೌಚಾಲಯ, ಕಛೇರಿ, ಕೈಗಾರಿಕೆ, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿಯ ಶೌಚಾಲಯ ಕುಡಿಯುವ ನೀರಿನ ನಲ್ಲಿಗಳು, ಇಲ್ಲ್ಲೆಲ್ಲ ಪ್ರತಿದಿನ ಪ್ರತಿಕ್ಷಣ ನಾವೆಲ್ಲರೂ, ಎಲ್ಲರೂ ನೀರನ್ನು ರಕ್ಷಿಸಲೇಬೇಕಾಗಿದೆ.

ನನ್ನ ಬಾಲ್ಯದಿಂದ, ರೇಡಿಯೋ ಪ್ರಸಾರ ಹಾಗೂ ರಂಗಭೂಮಿ ಪ್ರದರ್ಶನಗಳ ಮೂಲಕ, ನೀರಿನ ರಕ್ಷಣೆ ಬಗ್ಗೆ ರೂಪಕ, ನಾಟಕ ಉಪನ್ಯಾಸಗಳನ್ನು ಪ್ರಸ್ತುತಪಡಿಸಿದ್ದೇನೆ, ಜಲದೇವಿ, ಗಂಗಾದೇವಿಗೆ ನಮನ, ನೀರೇ ನಮ್ಮಮ್ಮ ತಾಯಿ, ಎಂಬ ನಾಟಕಗಳ ರಂಗಪ್ರದರ್ಶನಗಳಲಿ.್ಲ ರಾಜಸ್ಥಾನ್ ಬಿಟ್ಟರೆ, ಬರುವ ದಿನಗಳಲ್ಲಿ ಭಾರತ ದೇಶದಲ್ಲೇ ಎರಡನೇಯದಾಗಿ, ಕರ್ನಾಟಕ ಮರುಭೂಮಿ ಆಗುತ್ತಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದೇನೆ. ಭೂಮಿಗೆ ಗಂಗೆಯನ್ನು ತಂದ ಭಗೀರಥನ ಪ್ರಯತ್ನವನ್ನೂ ಮರಗಳನ್ನು ಕಡಿದು, ಕಾಡು ಕಡಿದು ಮಳೆ ಕಡಿಮೆ ಆಗಿರುವುದಕ್ಕೂ, ಅಭಿವೃದ್ಧಿ ಚಟುವಟಿಕೆಗಳು ಪರಿಸರದ ಮೇಲೆ ಮಾಡುತ್ತಿರುವ ಘಾಸಿಯನ್ನೂ ನಾವು ಪ್ರತಿನಿತ್ಯ ಇಲ್ಲಿ ಕೈ ಪಂಪುಗಳ ನೀರಿನ ಅಪವ್ಯಯ ಮಾಡಿ, ಸೊಳ್ಳೆ ಹುಟ್ಟಿಗೆ ಕಾರಣವಾಗಿ ಮಲೇರಿಯಾ, ಫೈಲೇರಿಯಾ, ಡೆಂಗು ಬರಲು ಕಾರಣೀಭೂತರಾಗಿರುವುದನ್ನೂ ಪಾತ್ರಗಳು ಹಾಗೂ ಸನ್ನಿವೇಶಗಳ ಮೂಲಕ ನಿವೇದಿಸಿದ್ದೇನೆ. 12 ಕವಿತೆಗಳಲ್ಲಿ ನೀರಿನ ಮಹತ್ವದ ಬಗ್ಗೆ ಹೇಳಿ, ಅವುಗಳನ್ನು ಗಾಯಕರಿಂದ ಹಾಡಿಸಿ, ಶಾಲಾ ವಿದ್ಯಾರ್ಥಿಗಳ ಮೂಲಕ ಸಮೂಹ ಗೀತೆ, ಸಮೂಹ ನೃತ್ಯ, ಚರ್ಚಾಕೂಟ ಮಾಡಿಸಿ, ಜಲಪ್ರಜ್ಞೆಯ ಸಂದೇಶ ಸತತ ಪ್ರಸಾರ ಮಾಡಿದ್ದೇನೆ.
ಮಾರ್ಚ್ 23ರಂದು ವಿಶ್ವ ಹವಾಮಾನ ದಿನಾಚರಣೆ: 1957ರಲ್ಲಿ ಸ್ಥಾಪಿಸಲ್ಪಟ್ಟಿರುವ ವಿಶ್ವ ಹವಾಮಾನ ಸಂಘ ಉತ್ತಮ ಜೀವನ ಹಾಗೂ ಭವಿಷ್ಯಕ್ಕಾಗಿ ಹವಾಮಾನದ ಮೇಲೆ ಸತತ ಗಮನವಿರಿಸಿದೆ. ಭೂಮಿಯ ಮೇಲೆ ವಾತಾವರಣದ ಪ್ರತಿಕ್ರಿಯೆ, ಇದರಿಂದ ಹವಾಮಾನ- ನೀರಿನ ಸಂಪನ್ಮೂಲಗಳ ಹಂಚಿಕೆ ಮೇಲಾಗುವ ಪ್ರಭಾವ, ಇವುಗಳ ಬಗ್ಗೆ ಸದಾ ಗಮನವಿರಿಸುವುದೇ ಇದರ ಕಾರ್ಯ, ಹಡಗುಗಳ ಸಂಚಾರದ ಪ್ರಾವೀಣ್ಯತೆ ಹಾಗೂ ಸುರಕ್ಷಕತೆ, ಜನರ ಕಲ್ಯಾಣ, ನೀರಿನ ಸುರಕ್ಷತೆ, ಆಹಾರ ಸುಕ್ಷತೆ, ಸಾರಿಗೆ ಇವುಗಳ ಬಗ್ಗೆ ಸತತ ಪರೊಶೀಲಿಸಿ, ಸ್ವಾಭಾವಿಕ ಅವಘಡಗಳ ಮಧ್ಯೆ ಜೀವ ಹಾಗೂ ಆಸ್ತಿ ರಕ್ಷಿಸಲು ಮುನ್ನೆಚ್ಚರಿಕೆ ಕೊಡುತ್ತದೆ.
ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ: ರಂಗಭೂಮಿ ಮೂಲಕ ಆರೋಗ್ಯ ಸಂದೇಶವನ್ನು, ದಿಟ್ಟವಾಗಿ, ಮನಮುಟ್ಟುವಂತೆ ಮನರಂಜನೆ ಮಾದರಿಯಲ್ಲೇ ಕೊಡಬಲ್ಲ ಹಲವಾರು ಪ್ರಯೋಗಗಳು ವಿಶ್ವದಾದ್ಯಂತ ನಡೆದಿದ್ದು, ಇಂಥ ಸಾವಿರಾರು ಪ್ರಯೋಗಗಳನ್ನು ಮಾಡಿದ್ದೇನೆಂಬ ಅಭಿಮಾನ ನನ್ನದಾಗಿದೆ.
23ರಂದು ವಿಶ್ವ ಹವಾಮಾನ ದಿನ: ಈ ದಿನದ ಧ್ಯೇಯವಾಕ್ಯ ಹವಾಮಾನ ಹಾಗೂ ನೀರು. ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೋ ಗುಟ್ರೆಸ್ ಹೇಳುವಂತೆ ನಮ್ಮ ಕಾಲದ ವಿಶೇಷ ಹೆದರಿಕೆ ಎಂದರೆ, ಹವಾಮಾನ ಬದಲಾವಣೆಯೇ. ಈ ಹಿನ್ನೆಲೆಯಲ್ಲಿ ಪ್ಯಾರಿಸ್ ಹವಾಮಾನ ಒಪ್ಪಂದ ಗಮನಾರ್ಹ. ಇಂಗಾಲದ ಹೊರಸೂಸುವಿಕೆ ವಿಶ್ವದಲ್ಲಿ ಹೆಚ್ಚುತ್ತಿದೆ. ಇದು ವಿಶ್ವ ತಾಪಮಾನದಲ್ಲಿ ಪ್ರತಿ ವರ್ಷ ದಾಖಲೆಯಾಗುತ್ತಿದೆ. 2020ರ ಒಳಗೆ ಹವಾಮಾನದ ಗುರಿಗಳನ್ನು ಮುಟ್ಟಲು ಎಲ್ಲರಿಂದ ಬಲಯುತ ಕ್ರಿಯೆ ನಿರೀಕ್ಷಿಸಲ್ಪಟ್ಟಿದೆ. ವಿಶ್ವದಲ್ಲಿ 700 ಹವಾಮಾನ ಬದಲಾವಣೆ ತಗ್ಗಿಸುವಿಕೆ ಹಾಗೂ ಅಳವಡಿಕೆ ಯೋಜನೆಗಳಿವೆ. ಅರಣ್ಯಗಳ ರಕ್ಷಣೆ, ನೈಸರ್ಗಿಕ ಭೂ ಪ್ರದೇಶದ ಹೊರಮೈ ಕಾಪಾಡುವಿಕೆಗಳಿಂದ, ಇಂಗಾಲ ಹೆಚ್ಚುವಿಕೆ ನಿಯುಂತ್ರಣವಾಗುತ್ತದೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!