ಹಿತ್ತಲ ಗಿಡ ಬಸಳೆ- ಆರೋಗ್ಯಕರ ಹಸಿರು ಎಲೆಗಳ ತರಕಾರಿ

ಹಿತ್ತಲ ಗಿಡ ಬಸಳೆ ತುಂಬಾ  ಪೋಷಕಾಂಶಗಳನ್ನು ಹೊಂದಿದೆ – ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಬಸಳೆಯಲ್ಲಿ ಇರುವ  ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ   ಮತ್ತು ರಕ್ತಹೀನತೆಯನ್ನು ತಡೆಯಲು ಪ್ರಯೋಜನಕಾರಿಯಾಗಿದೆ.

Hittala giḍa basaḷe

ಬಸಳೆ ಒಂದು ಬಳ್ಳಿ, ಆರೋಗ್ಯಕರ ಹಸಿರು ಎಲೆಗಳ ತರಕಾರಿಯಾಗಿದ್ದು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ. ಕೆಂಪು ಬಸಳೆ, ಬಿಳಿ ಬಸಳೆ ಎಂದು ಎರಡು ವಿಧ. ಬಿಳಿ ಬಸಳೆ ಹೆಚ್ಚು ಜನಪ್ರಿಯ. ಉಪೋದಿಕಾ, ಪೋತಕಿ, ಅಮೃತವಲ್ಲರಿ ಮುಂತಾದವು ಇದಕ್ಕಿರುವ ಇನ್ನಿತರ ಹೆಸರುಗಳು. ಇದನ್ನು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.

ತಂಪಾಗಿರುವ ಪ್ರದೇಶದಲ್ಲಿ ಬಲಿತ ಕಾಂಡವನ್ನು ನೆಡುವುದರಿಂದ ಬೆಳೆಸಬಹುದು. ಮೂರು ನಾಲ್ಕು ತಿಂಗಳಲ್ಲಿ ಉಪಯೋಗಿಸಲು ಯೋಗ್ಯವಾದ ಮಟ್ಟಕ್ಕೆ ಬೆಳೆಯುತ್ತದೆ. ಬಸಳೆಯಲ್ಲಿ ಇರುವ  ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ   ಮತ್ತು ರಕ್ತಹೀನತೆಯನ್ನು ತಡೆಯಲು ಪ್ರಯೋಜನಕಾರಿಯಾಗಿದೆ.

 

1. ಇದು ತುಂಬಾ  ಪೋಷಕಾಂಶಗಳನ್ನು ಹೊಂದಿದೆ – ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಬಸಳೆ ವಿಟಮಿನ್ ಎ, ಸಿ ಮತ್ತು ಇ ಅನ್ನು ಹೊಂದಿದೆ, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ತಮ ದೃಷ್ಟಿಗೆ  ಅವಶ್ಯಕವಾಗಿದೆ. ಬಸಳೆಯಲ್ಲಿ ಇರುವ  ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ   ಮತ್ತು ರಕ್ತಹೀನತೆಯನ್ನು ತಡೆಯಲು ಪ್ರಯೋಜನಕಾರಿಯಾಗಿದೆ.

2. ಬಸಳೆ ರುಚಿಯಲ್ಲಿ ಸಿಹಿ ಅಂಟು ಸ್ವಭಾವ, ಪುಷ್ಟಿಕರ, ಕಬ್ಬಿಣ ಮತ್ತು ಪೌಷ್ಠಿಕಾಂಶಗಳಿಂದ  ಕೂಡಿರುವುದರಿಂದ ಮಕ್ಕಳು ಮತ್ತು ಗರ್ಭಿಣೀಯರಿಗೆ ಬಲು ಒಳ್ಳೆಯದು. ಉಷ್ಣ ಕಡಿಮೆ ಮಾಡುವ ಬಸಳೆ, ವಾತ ಶಮನಕಾರಿ, ಮಲಬದ್ಧತೆಯ ನಿವಾರಕ, ಹೊಟ್ಟೆಯುರಿ, ಬಾಯಿ ಹುಣ್ಣುಗಳಿಗೆ ಉತ್ತಮ ಔಷಧ.

3. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡಿ    ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಗರ್ಭಿಣಿಯರು  ಸವಿಸಿದರೆ  ಮಗುವಿನ ನರ ಬೆಳವಣಿಗೆಗೆ ಸಹಾಯ ಮಾಡುತ್ತದೆ.

4. ವಾತ ಸಮಸ್ಯೆ, ಮಲಬದ್ಧತೆ, ಹೊಟ್ಟೆಯುರಿ, ಬಾಯಿ ಹುಣ್ಣಿದ್ದಾಗ ಬಸಳೆ ಸೊಪ್ಪಿನ ಪಲ್ಯಮಾಡಿ ಉಪಯೋಗಿಸುವುದು. ಒಳ್ಳೆಯದು. ಪಲ್ಯಮಾಡುವಾಗ ಹೆಸರುಕಾಳು ಅಥವಾ ತೊಗರಿ ಬೇಳೆಯನ್ನು ಸೇರಿಸಬಹುದು.

5. ಸೊಪ್ಪನ್ನು ತುಪ್ಪ ಅಥವಾ ಎಣ್ಣೆಯ ಜೊತೆಗೆ ಹುರಿದು ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಸೇರಿಸಿ ಸ್ವಲ್ಪ ಅರೆಯಬೇಕು. ಅದಕ್ಕೆ ಆರರಿಂದ ಎಂಟು ಭಾಗ ಹುಳಿಯಿಲ್ಲದ ಮೊಸರು ಸೇರಿಸಿ ಜೀರಿಗೆ ಒಗ್ಗರಣೆ ಕೊಟ್ಟರೆ ತಂಬಳಿ ಅಥವಾ ಮೊಸರು ಬಜ್ಜಿ ಸಿದ್ಧ. ಬಿಸಿ ಅನ್ನ ಅಥವಾ ಬಿಸಿ ಮುದ್ದೆಯೊಂದಿಗೆ ಬಲು ರುಚಿ.

6. ದಿಢೀರ ದೋಸೆಗೆ ಎಲೆಗಳನ್ನು ಮೊದಲು ಬಿಸಿನೀರಿನಲ್ಲಿ ತೊಳೆಯಬೇಕು. ಒಂದು ಹಿಡಿ ಬಸಳೆ ಸೊಪ್ಪಿಗೆ 4 ಹಿಡಿ ನೆಂದಿರುವ ಅಕ್ಕಿಯನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ತಿರುವಬೇಕು ತಿರುವಿದ ಹಿಟ್ಟನ್ನು ನೇರವಾಗಿ ಕಾವಲಿಯ ಮೇಲೆ ಹಾಕಬೇಕು.

7. ಬಾಯಿ ಹುಣ್ಣಾದಾಗ ಒಂದೆರಡು ಬಸಳೆ ಎಲೆಗಳಿಗೆ ಉಪ್ಪಿನ ಹರಳೊಂದನ್ನು ಸೇರಿಸಿ ಅಗಿದು ತಿನ್ನಬಹುದು.

Also read : ಡಾ ವೆಂಕಟ್ರಮಣ ಹೆಗಡೆ ಅವರ ಇತರ ಲೇಖನಗಳು

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!