ಹಿರಿಯರ ಎಲುಬು ರಕ್ಷಣೆ -ಬೆನ್ನು ಮೂಳೆಯ ಮುರಿತ ಗೂನುಬೆನ್ನಿಗೆ  ಕಾರಣ

ಹಿರಿಯರ ಎಲುಬು ರಕ್ಷಣೆ ಬಹಳ ಮುಖ್ಯ. ಬೆನ್ನೆಲುಬಿನಲ್ಲಿ ಹೆಚ್ಚು ಬಿರುಕು ಅಥವಾ ಕುಸಿತ ಇದ್ದಷ್ಟು ಗೂನು ಬೆನ್ನು ಹೆಚ್ಚಾಗಿ ನೋವು ಇರುತ್ತದೆ. ಇದರಿಂದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ.

back-painಮೂಳೆ ಕೇವಲ ಕ್ಯಾಲ್ಷಿಯಂನ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ ಫಾಸ್ಫೇಟ್‍ನ ಗಟ್ಟಿಯಾದ ರಚನೆ. ಒಳಭಾಗ ಅಥವಾ ಆಸ್ಥಿಮಜ್ಜೆಯು ನಮ್ಮ ರಕ್ತಕೋಶಗಳನ್ನು ಉತ್ಪಾದಿಸುತ್ತದೆ. ಎಲುಬುಗಳು ಅಥವಾ ಮೂಳೆಗಳು (ಹಲ್ಲುಗಳೊಂದಿಗೆ) ದೇಹದ ಕ್ಯಾಲ್ಷಿಯಂನಲ್ಲಿ ಶೇ.99ಕ್ಕಿಂತ ಹೆಚ್ಚು ಸಂಗ್ರಹ ತೊಟ್ಟಿಯಾಗಿ ಕೆಲಸ ಮಾಡುತ್ತದೆ. ಎಲುಬು ಒಂದು ಅಂಗವಾಗಿದ್ದು, ಮೂಲೆ ನಿರಂತರವಾಗಿ ತನ್ನ ಹಳೇ ಆಧಾರಕಟ್ಟನ್ನು ಮುರಿದು ಅದನ್ನು ಬದಲಿಸುತ್ತದೆ. 30 ವರ್ಷಗಳ ತನಕ ಮೂಳೆ ನಾಶ ತಡೆಗಟ್ಟುವ ಕ್ರಿಯೆ ನಡೆಯುತ್ತದೆ. ಆದಾದ ನಂತರ, ಮೂಳೆ ನಾಶ ನಿಧಾನವಾಗಿ ಹಿಡಿತ ಸಾಧಿಸಿ ನಿವ್ವಳ ಮೂಳೆ ನಷ್ಟಕ್ಕೆ ಕಾರಣವಾಗುತ್ತದೆ.

ಬೆನ್ನು ಮೂಳೆಯ ಮುರಿತ ಗೂನುಬೆನ್ನಿಗೆ  ಕಾರಣ

ಉದಾಹರಣೆಗೆ, ವಯಸ್ಸಾದವರ ಗೂನು ಬೆನ್ನು (ಇದನ್ನು ಡಾವೆಜರ್ ಬೋನ್ಸ್ ಅಥವಾ ಧನಿಕನ ವಿಧವೆ ಗೂನು ಬೆನ್ನು ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಬಹುತೇಕ ಮಹಿಳೆಯರಲ್ಲಿ ಕಂಡು ಬರುತ್ತದೆ). ಬೆನ್ನು ಮೂಳೆ ಮುಂಭಾಗದಲ್ಲಿ ಸಾಮಾನ್ಯವಾಗಿ ಮೇಲಿನ ಸಾಲಿನಲ್ಲಿ ಪುಟ್ಟ ಮೂಳೆ ಮುರಿತ ಇದಕ್ಕೆ ಕಾರಣವಾಗುತ್ತದೆ. ಬೆನ್ನು ಮೂಳೆಯ ಮುರಿತದ ತುದಿ ಒತ್ತಡಕ್ಕೆ ಒಳಗಾಗುವುದರಿಂದ ಮೇಲಿನ ಬೆನ್ನುಮೂಳೆ ಮುಂದಕ್ಕೆ ಸ್ಥಳಾಂತರಗೊಂಡು, ಬೆನ್ನುಹುರಿ ಬಾಗುತ್ತದೆ. ಬೆನ್ನುಹುರಿಯ ತುದಿ ಮುಂದಕ್ಕೆ ಬಂದು ಗೂನುಬೆನ್ನಿಗೆ ಅಥವಾ ಕೀಪೋಸಿಸ್‍ಗೆ (ಬಾಗುವಿಕೆ) ಕಾರಣವಾಗುತ್ತದೆ. ಅದಕ್ಕೆಂದೇ ಕೆಳಗೆ ಬಿದ್ದಿರುವ ವಸ್ತುವನ್ನು ಹುಡುಕುವ ವ್ಯಕ್ತಿಯಂತೆ ಅಜ್ಜಿಯ ಗೂನುಬೆನ್ನು ಬಾಗಿರುತ್ತದೆ.

ಬೆನ್ನೆಲುಬಿನಲ್ಲಿ ಹೆಚ್ಚು ಬಿರುಕು ಅಥವಾ ಕುಸಿತ ಇದ್ದಷ್ಟು ಗೂನು ಬೆನ್ನು ಹೆಚ್ಚಾಗಿ ನೋವು ಇರುತ್ತದೆ. ಇದರಿಂದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಗೂನು ಬೆನ್ನು ಇರುವ ವ್ಯಕ್ತಿ ಯಾರನ್ನಾದರೂ ನೋಡಲು ಕ್ರೇನ್‍ನಂತೆ ಕತ್ತನ್ನು ಮೇಲಕ್ಕೆ ಎತ್ತಬೇಕಾಗುತ್ತದೆ. ಇದರಿಂದ ಉಸಿರಾಟಕ್ಕೆ ಕಷ್ಟವಾಗುತ್ತದೆ. ಏಕೆಂದರೆ ಹೊಸ ಬೆನ್ನುಹುರಿಯ ಆಕಾರವು ಶ್ವಾಸಕೋಶ ವಿಸ್ತರಣೆಯನ್ನು ಕಠಿಣವಾಗಿಸುತ್ತದೆ. ಟೊಳ್ಳು ಮೂಳೆಯ ಇತರ ಸಾಮಾನ್ಯ ಕಾರಣಗಳೆಂದರೆ ಕೆಳಗೆ ಬೀಳುವುದರಿಂದ ಪೃಷ್ಟ (ಹಿಪ್) ಮತ್ತು ಸೊಂಟ (ವೇಸ್ಟ್) ಭಾಗಗಳ ಮುರಿತ.

ಪ್ರತಿ ವರ್ಷ 3,00,000 ಪೃಷ್ಟದ ಮೂಳೆ ಮುರಿತ ಪ್ರಕರಣಗಳು ವರದಿಯಾಗುತ್ತಿದ್ದು, ಅದು ತುಂಬಾ ಗಂಭೀರ ಸ್ವರೂಪದ್ದಾಗಿರುತ್ತದೆ. ಪೃಷ್ಟದ ಮೂಳೆ ಮುರಿತಕ್ಕೆ ಒಳಗಾದ ರೋಗಿಗಳಲ್ಲಿ ಶೇ.24ರಷ್ಟು ಹಾಗೂ ಹಿಪ್ ಫ್ರಾಕ್ಚರ್‍ಗೆ ಒಳಗಾದ ವೃದ್ದ ಪುರುಷರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಓಡಾಡಲು ಮತ್ತೆ ಸಾಧ್ಯವಾಗದೇ ಇರುವ ಕಾರಣ ಅವರು ಒಂದು ವರ್ಷದೊಳಗೆ ಸಾವನ್ನಪ್ಪುತ್ತಾರೆ. ಮಹಿಳೆಯರು ಕೂಡ ವಿಶೇಷವಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಮಹಿಳೆಯರ ಮುಟ್ಟಿನ ಅವಧಿ ಕೊನೆಗೊಂಡ ಮೊದಲ ಕೆಲವು ವರ್ಷಗಳಲ್ಲಿ ಮೂಳೆ ಶಕ್ತಿ ಕಳೆದುಕೊಳ್ಳುತ್ತದೆ. ಮೂಳೆ ಬೆಳವಣಿಗೆಗೆ ಉತ್ತೇಜನ ನೀಡುವ ಈಸ್ಟ್ರೋಜೆನ್ ಹಾರ್ಮೋನುಗಳು ಇಳಿಮುಖವಾಗುವುದರಿಂದ ಈ ಸಮಸ್ಯೆ ಕಂಡು ಬರುತ್ತದೆ. ಸಣ್ಣ, ತೆಳು ಮೂಳೆಯ ಮಹಿಳೆಯರಲ್ಲಿ ಈ ಗಂಡಾಂತರ ಹೆಚ್ಚಾಗಿರುತ್ತದೆ.

 oldage-bone ಹಿರಿಯರ ಎಲುಬು ರಕ್ಷಣೆ -ಬೆನ್ನು ಮೂಳೆಯ ಮುರಿತ ಗೂನುಬೆನ್ನಿಗೆ  ಕಾರಣಇತರ ಅಂಶಗಳು

  • ಕಕೇಷಿಯನ್ನರು ಅಥವಾ ಏಷ್ಯಾ ಪೂರ್ವಜರ ಹಿನ್ನೆಲೆ
  • ಟೊಳ್ಳು ಮೂಳೆಯ ಕೌಟುಂಬಿಕ ಹಿನ್ನೆಲೆ
  • ಅನೊರೆಕ್ಸಿಯಾ
  • ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಕಡಿಮೆ ಸೇವನೆ
  • ಉದ್ದೀಪನಗಳ ದೀರ್ಘ ಬಳಕೆ
  • ಧೂಮಪಾನ
  • ಮದ್ಯಪಾನ
  • ಚಟುವಟಿಕೆ ಇಲ್ಲದಿರುವಿಕೆ

ಮೂಳೆ ಸಮಸ್ಯೆಗೆ ಉಪಶಮನ

1. ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಅಧಿಕವಾಗಿರುವ ಆಹಾರವನ್ನು ಸೇವಿಸಿ.

2. ಸೂರ್ಯ ರಶ್ಮಿ ನಮ್ಮ ಚರ್ಮದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ವಾರದಲ್ಲಿ ಕನಿಷ್ಟ ಎರಡು ಬಾರಿ ಸನ್‍ಸ್ಕ್ರೀನ್ ಇಲ್ಲದೇ 5-30 ನಿಮಿಷಗಳ ಕಾಲ ಸೂರ್ಯ ರಶ್ಮಿಯನ್ನು ಶರೀರಕ್ಕೆ ಪಡೆಯುವುದು ಒಳ್ಳೆಯದು. (ಇದನ್ನು ತುಂಬಾ ಮಾಡಿದರೆ, ಅತಿಯಾದ ಸೂರ್ಯ ರಶ್ಮಿ ಜೊತೆ ದೇಹ ಸಂಪರ್ಕಕ್ಕೆ ಬರುವುದರಿಂದ ಚರ್ಮ ಕ್ಯಾನ್ಸರ್‍ನ ಸಾಧ್ಯತೆ ಇರುತ್ತದೆ.)

3. ಮಾಂಸಖಂಡಗಳು, ಸ್ನಾಯಗಳಂತೆ ಮೂಳೆಗಳಿಗೂ ಆರೋಗ್ಯಕರವಾಗಿರಲು ವ್ಯಾಯಾಮ ಅಗತ್ಯ. ಸದೃಢತೆ ನೀಡುವ ಮತ್ತು ತೂಕ ತಡೆಯುವ ವ್ಯಾಯಮ (ವಾಕಿಂಗ್, ಜಾಗಿಂಗ್ ಮತ್ತು ಡ್ಯಾನ್ಸಿಂಗ್) ಟೊಳ್ಳು ಮೂಳೆ ವೃದ್ದಿಯಾಗುವುದನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ನೆರವಾಗುತ್ತದೆ.

4. ನಿಮಗೆ ಆಹಾರ ಅಥವಾ ಸೂರ್ಯ ರಶ್ಮಿಯಿಂದ ಸಾಕಷ್ಟು ಕ್ಯಾಲ್ಷಿಯಂ ದೊರೆಯದಿದ್ದರೆ, ವೈದ್ಯರ ಸಲಹೆಯಂತೆ ಕ್ಯಾಲ್ಷಿಯಂ ಹಾಗೂ ವಿಟಮಿನ್ ಡಿ ಮಾತ್ರೆ ಸೇವಿಸಿ.

5. 65 ವರ್ಷಗಳಿಗಿಂತ ಮೇಲ್ಪಟ್ಟ ವೃದ್ದೆಯರು ಹಾಗೂ ಗಂಭೀರ ಸಮಸ್ಯೆ ಹೊಂದಿರುವ ಸಾಧ್ಯತೆ ಇರುವವರು (ಕೃಶ ಶರೀರ, ಕೌಟುಂಬಿಕ ಹಿನ್ನೆಲೆ, ಮೂಳೆ ಮುರಿತಗಳ ಹಿನ್ನೆಲೆ) ಈ ತೊಂದರೆಯನ್ನು ಮುಂಚಿತವಾಗಿ ತಿಳಿಯಲು ಎಕ್ಸ್-ರೇ ಅಥವಾ ಮೂಳೆಗಳ ಸ್ಕ್ಯಾನ್ ಮಾಡಿಸಿಕೊಳ್ಳಬೇಕು.

6. ನಿಮಗೆ ಓಸ್ಟಿಯೊಪೊರೋಸಿಸ್ ಮೂಳೆ ಸಮಸ್ಯೆಗಳು ಇದ್ದರೆ ಔಷಧಿ ಚಿಕಿತ್ಸೆಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ.

7. ನೀವು ಕೆಳಗೆ ಬೀಳುವುದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಜಾರಿ ಬೀಳಲು ಅವಕಾಶ ನೀಡಬೇಡಿ. ನೀವು ಓಡಾಡುವ ಮಾರ್ಗದಲ್ಲಿ ಜಾರುವಂಥ ಜಾಗಗಳನ್ನು ಸರಿಪಡಿಸಿ. ಜಾರುವುದನ್ನು ತಡೆಯುವ ಸೂಕ್ತ ಪಾದರಕ್ಷೆಯನ್ನು ಬಳಸಿ. ವಯೋವೃದ್ದರು ಓಡಾಡಲು ವಾಕಿಂಗ್ ಸ್ಟಿಕ್ ಅಥವಾ ವಾಕರ್ ಬಳಸುವುದು ಉತ್ತಮ.

Dr-Chalapathi

ಡಾ. ಚಲಪತಿ – ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph:+91-80-49069000 Extn:1147/1366

www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!