ಗರ್ಭಿಣಿಯರಲ್ಲಿ ಕಂಡುಬರುವ  ರಕ್ತದೊತ್ತಡವನ್ನು ಹೇಗೆ ನಿರ್ವಹಣೆ ಮಾಡಬಹುದು?

ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಅವಧಿಯಲ್ಲಿ ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ ಮುಖ್ಯ ಸಂಗತಿಗಳಲ್ಲಿ ಸೂಕ್ತ ರಕ್ತದೊತ್ತಡ ನಿಯಂತ್ರಣವೂ ಒಂದು. ಗರ್ಭ ಧರಿಸಿದ ವೇಳೆ ಕೆಲವು ವೈದ್ಯಕೀಯ ಸ್ಥಿತಿಗಳು ಹದಗೆಡಬಹುದು. ಉದಾಹರಣೆಗೆ ಹೃದಯ ಕವಾಟ (ಹಾರ್ಟ್ ವಾಲ್ವ್) ರೋಗಿವಿರುವ ಮಹಿಳೆಯರಿಗೆ ಹೃದಯ ವೈಫಲ್ಯವಾದರೆ, ಅಧಿಕ ರಕ್ತದೊತ್ತಡ ಹೊಂದಿರುವ ವನಿತೆಯಲ್ಲಿ ಗರ್ಭಾವಸ್ಥೆ ವೇಳೆ ಕಂಡುಬರುವ ಅಧಿಕ ರಕ್ತದೊತ್ತಡದಿಂದ ಅಧಿಕ ಗಂಡಾಂತರದ ಸಾಧ್ಯತೆಗಳಿರುತ್ತವೆ.

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಎಂದರೇನು?

ಗರ್ಭಧಾರಣೆ ವೇಳೆ, ತೀವ್ರ ಮತ್ತು ಅನಿಯಂತ್ರಿತ ರಕ್ತದೊತ್ತಡವು ಗರ್ಭಿಣಿ ಮತ್ತು ಶಿಶುವಿನ ಆರೋಗದ ಮೇಲೆ ತೊಡಕುಗಳನ್ನು ಉಂಟು ಮಾಡಬಹುದುಗರ್ಭಧರಿಸುವುದಕ್ಕೆ ಮುನ್ನ ಅಥವಾ ಗರ್ಭಧಾರಣೆಯ ಮೊದಲ ಅರ್ಧ (20 ವಾರಗಳಿಗೆ ಮುನ್ನ) ಅವಧಿಯಲ್ಲಿ ಕಂಡುಬರುತ್ತದೆ. ಗರ್ಭಧರಿಸುವುದಕ್ಕೂ ಮುನ್ನ ರಕ್ತದೊತ್ತಡ ನಿಯಂತ್ರಣಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ರಕ್ತದೊತ್ತಡವು ಸಾಮಾನ್ಯವಾಗಿದ್ದರೂ ಕ್ರಾನಿಕ್ ಹೈಪರ್ ಟೆನ್ಷನ್ ಇರುತ್ತದೆ.

ಗರ್ಭಧಾರಣೆ ರಕ್ತದೊತ್ತಡ (ಜೆಸ್ಟೆಷನಲ್ ಹೈಪರ್ಟೆನ್ಷನ್) ಒಂದು ಅಧಿಕ ರಕ್ತದೊತ್ತಡವಾಗಿದ್ದು, ಗರ್ಭಧಾರಣೆ ಎರಡನೇ ಅರ್ಧ (20 ವಾರಗಳ ನಂತರ) ಅವಧಿಯಲ್ಲಿ ಕಂಡುಬರುತ್ತದೆ. ಶಿಶು ಜನನದ ನಂತರ ರಕ್ತದೊತ್ತಡವು ಸಾಮಾನ್ಯವಾಗಿ ತಾನಾಗಿಯೇ ಹೋಗುತ್ತದೆ. ಆದರೂ ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡದ ಅಭಿವೃದ್ದಿಯಾಗುವ ಸಂಭವಾಂಶ ಹೆಚ್ಚಾಗಿರುತ್ತದೆ. ಗರ್ಭಿಣಿಯರಲ್ಲಿ ಕಂಡು ಬರುವ ಅಧಿಕ ರಕ್ತದೊತ್ತಡವು ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಹಾಕಬಹುದು ಹಾಗೂ ಹೃದ್ರೋಗ, ಮೂತ್ರಪಿಂಡ ರೋಗ ಮತ್ತು ಪಾರ್ಶ್ವವಾಯುವಿನಂಥ ಸಂಭವಾಂಶಗಳನ್ನು ಹೆಚ್ಚಿಸಬಹುದು.

ಇತರ ಸಂಭವನೀಯ ತೊಡಕುಗಳು:

  • ಭ್ರೂಣ ಬೆಳವಣಿಗೆ ನಿರ್ಬಂಧ ಅಧಿಕ ರಕ್ತದೊತ್ತಡವು ಪ್ಲೆಸೆಂಟಾ (ಹೊಕ್ಕಳಬಳ್ಳಿ) ಮೂಲಕ ಶಿಶುವಿಗೆ ಪೋಷಕಾಂಶಗಳ ಹರಿಯುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಶಿಶುವಿನ ಬೆಳವಣಿಗೆ ಸಮಸ್ಯೆಗಳು ತಲೆದೋರುತ್ತದೆ.
  • ಗರ್ಭಧಾರಣೆ (ಪ್ರಿಇಕ್ಲಾಮ್ಪ್ಸಿಯಾ) ತೊಡಕು ಸ್ಥಿತಿಯು ಸಾಮಾನ್ಯ ರಕ್ತದೊತ್ತಡ ಇರುವ ಮಹಿಳೆಯರಿಗಿಂತ ದೀರ್ಘಕಾಲದ ಅಧಿಕ ರಕ್ತದೊತ್ತಡ ಇರುವ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  • ಅವಧಿಪೂರ್ವ ಹೆರಿಗೆನಿಮ್ಮ ಹೊಕ್ಕಳಬಳ್ಳಿಯು ನಿಮ್ಮ ಶಿಶುವಿಗೆ ಸಾಕಷ್ಟು ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸದಿದ್ದರೆ ಶಿಶು ಬೆಳವಣಿಗೆ ಸಮಸ್ಯೆಗಳು ತಲೆದೋರಿ ಗರ್ಭಧಾರಣೆ ಮುಂದುವರಿಯಲು ಅವಕಾಶ ನೀಡುವ ಬದಲಿಗೆ ಅವಧಿಗೆ ಮುನ್ನವೇ ಹೆರಿಗೆ ಉತ್ತಮವೆಂದು ನಿರ್ಧರಿಸಲಾಗುತ್ತದೆ.
  • ಹೊಕ್ಕಳಬಳ್ಳಿ ಅಡಚಣೆ ಸ್ಥಿತಿಯಲ್ಲಿ ಗರ್ಭಕೋಶದ ಗೋಡೆಯಿಂದ ಹೊಕ್ಕಳಬಳ್ಳಿಯು ಅವಧಿಗೆ ಮುನ್ನವೇ ಸಂಪರ್ಕ ಕಡಿತ ಹೊಂದುತ್ತದೆ. ಇದರೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಇದಕ್ಕೆ ತಕ್ಷಣ ಚಿಕಿತ್ಸೆಯ ಅಗತ್ಯವಿರುತ್ತದೆ.
  • ಸೆಸರಿಯನ್ ಹೆರಿಗೆ ಹೈಪರ್ಟೆನ್ಷನ್ ಹೊಂದಿರುವ ಮಹಿಳೆಯರು, ಸಾಮಾನ್ಯ ರಕ್ತದೊತ್ತಡ ಇರುವ ಮಹಿಳೆಯರಿಗಿಂತ ಸೆಸರಿಯನ್ ಹೆರಿಗೆಗೆ ಒಳಪಡಬೇಕಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಸೆಸರಿಯನ್ ಹೆರಿಗೆಯು ಸೋಂಕು, ಆಂತರಿಕ ಅಂಗಗಳಿಗೆ ಗಾಯ, ಮತ್ತು ರಕ್ತಸ್ರಾವದ ಸಂಭವಾಂಶಗಳನ್ನು ಹೊಂದಿರುತ್ತದೆ.

ಗರ್ಭಿಣಿಯರಲ್ಲಿ ಕಂಡುಬರುವ ದೀರ್ಘಕಾಲದ ರಕ್ತದೊತ್ತಡವನ್ನು ಹೇಗೆ ನಿರ್ವಹಣೆ ಮಾಡಬಹುದು?

ಗರ್ಭಧಾರಣೆ ಅವಧಿಯಾದ್ಯಂತ ನಿಮ್ಮ ರಕ್ತದೊತ್ತಡವನ್ನು ಕೂಲಂಕಷವಾಗಿ ನಿಗಾ ವಹಿಸಲಾಗುತ್ತದೆ. ಮನೆಯಲ್ಲಿ  ರಕ್ತದೊತ್ತಡದ ಮೇಲೆ ನಿಗಾ ವಹಿಸಬೇಕಾಗುತ್ತದೆ. ಶಿಶುವಿನ ಬೆಳವಣಿಗೆಯನ್ನು ಗಮನಿಸಲು ಗರ್ಭಧಾರಣೆ ಅವಧಿಯಾದ್ಯಂತ ಆಲ್ಟ್ರಾಸೌಂಡ್ ಪರೀಕ್ಷೆಗಳನ್ನು ಕೈಗೊಳ್ಳಬೇಕಾಗುತ್ತದೆ. ಬೆಳವಣಿಗೆ ಸಮಸ್ಯೆಗಳ ಬಗ್ಗೆ ಶಂಕೆ ವ್ಯಕ್ತವಾದಲ್ಲಿ, ಶಿಶುವಿನ ಆರೋಗ್ಯವನ್ನು ನಿಗಾ ವಹಿಸಲು ಹೆಚ್ಚುವರಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ತೀವ್ರ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದ್ದರೆ ಅಥವಾ ನಿಮ್ಮ ಹೈಪರ್ಟೆನ್ಷನ್ಗೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಗರ್ಭಾವಸ್ಥೆಯ ವೇಳೆ ಅಧಿಕ ರಕ್ತದೊತ್ತಡ ಔಷಧಿಗಳು ಆರಂಭಿಸುವ ಅಥವಾ ಮುಂದುವರಿಸುವ ಅಗತ್ಯವಿರುತ್ತದೆ.

ಪ್ರಿಇಕ್ಲಾಮ್ಪ್ಸಿಯಾ ಒಂದು ಗಂಭೀರ ಸ್ವರೂಪದ ರಕ್ತದೊತ್ತಡ ದೋಷವಾಗಿದ್ದು, ಅದು ಮಹಿಳೆಯ ದೇಹದ ಎಲ್ಲ ಅಂಗಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದು ಸಾಮಾನ್ಯವಾಗಿ ಗರ್ಭಧಾರಣೆಯ ತೃತೀಯ ತ್ರೈಮಾಸಿಕ ಅವಧಿಯಲ್ಲಿ ಅಂದರೆ ಗರ್ಭಧರಿಸಿದ ೨೦ ವಾರಗಳ ನಂತರ ಕಂಡುಬರುತ್ತದೆ. ಗರ್ಭಧರಿಸಿದ ೩೨ ವಾರಗಳಿಗೆ ಮುನ್ನ ಇದು ಕಂಡುಬಂದಲ್ಲಿ, ಇದನ್ನು ಮುನ್ನವೇ ಗೋಚರಿಸಿದ ಪ್ರಿಇಕ್ಲಾಮ್ಪ್ಸಿಯಾ ಎಂದು ಕರೆಯಲಾಗುತ್ತದೆ. ಇದು ಪ್ರಸವಾನಂತರದ ಅವಧಿಯಲ್ಲಿ ಸಹ ಕಾಣಿಸಿಕೊಳ್ಳುತ್ತದೆ.

ಗರ್ಭಧರಿಸಿದ ವೇಳೆ ಪ್ರಿಇಕ್ಲಾಮ್ಪ್ಸಿಯಾ ಕಂಡುಬಂದರೆ, ಗರ್ಭದಲ್ಲಿರುವ ಶಿಶು ಅಭಿವೃದ್ದಿಯಾಗದಿದ್ದರೂ ತಕ್ಷಣ ಹೆರಿಗೆ ಮಾಡಿಸುವ ಅಗತ್ಯವಿರುತ್ತದೆ. ಲಘು ಜೆಸ್ಟೆಷನಲ್ ಹೈಪರ್ಟೆನ್ಷನ್ ಅಥವಾ ತೀವ್ರ ಲಕ್ಷಣಗಳಿಲ್ಲದ ಪ್ರಿಇಕ್ಲಾಮ್ಪ್ಸಿಯಾವನ್ನು ಆಸ್ಪತ್ರೆಯಲ್ಲಿ ಅಥವಾ ಹೊರರೋಗಿಗಳಾಗಿ  ನಿರ್ವಹಣೆ ಮಾಡಬಹುದು.

 ರಕ್ತದೊತ್ತಡ ನಿಯಂತ್ರಿಸಲು ಗರ್ಭಿಣಿಯರಿಗೆ ಟಿಪ್ಸ್ :

  • ಪೊಟ್ಯಾಷಿಯಂ ಮತ್ತು ಫೈಬರ್ ಸೇರಿದಂತೆ ಹೃದಯಆರೋಗ್ಯ ಸ್ನೇಹಿ ಆಹಾರ ಸೇವಿಸಬೇಕು
  • ಯಥೇಚ್ಚವಾಗಿ ನೀರು ಕುಡಿಯಬೇಕು.
  • ನಿಯಮಿತವಾಗಿ ವ್ಯಾಯಾಮ ಮಾಡಬೇಕುಪ್ರತಿ ದಿನ ಕನಿಷ್ಟ 30 ನಿಮಿಷಗಳ ವ್ಯಾಯಾಮ
  • ನೀವು ಸೇವಿಸುವ ಸೋಡಿಯಂ(ಉಪ್ಪು) ಪ್ರಮಾಣವನ್ನು ಮಿತಿಗೊಳಿಸಿ.
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿನಿಮ್ಮ ಒತ್ತಡಕ್ಕೆ ಕಾರಣವಾಗುವ ಸಂಗತಿಗಳನ್ನು ತಪ್ಪಿಸಲು ಯತ್ನಿಸಿ.
  • ನೀವು ಧ್ಯಾನಯೋಗವನ್ನು ಸಹ ಪ್ರಯತ್ನಿಸಬಹುದು.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com
http://tathagathearthospital.com/

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!