ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ವೈದ್ಯಕೀಯ ನೋಬೆಲ್ ಪಾರಿತೋಷಕ ಪ್ರಶಸ್ತಿ

ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ಪ್ರತಿಷ್ಟಿತ ನೋಬೆಲ್ ಪಾರಿತೋಷಕ ಪ್ರಶಸ್ತಿಗಾಗಿ ವೈದ್ಯಕೀಯ ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಮೂರು ಜನ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ಹಾರ್ವೆ ಜೆ. ಆಲ್ಟರ್, ಮಿಶೆಲ್ ಹೌಟನ್ ಮತ್ತು ಚಾಲ್ರ್ಸ್ ಎಂ ರೈಸ್ ಅವರು 2020ರ ಸಾಲಿನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ವೈದ್ಯಕೀಯ ನೋಬೆಲ್ ಪಾರಿತೋಷಕ ಪ್ರಶಸ್ತಿಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ಹಾರ್ವೆ ಜೆ. ಆಲ್ಟರ್, ಮಿಶೆಲ್ ಹೌಟನ್ ಮತ್ತು ಚಾಲ್ರ್ಸ್ ಎಂ ರೈಸ್ ಈ ಮೂರು ಮಂದಿಯನ್ನು ಈ ಬಾರಿಯ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಆಯ್ಕೆ ಮಹಾ ಪ್ರದಾನ ಕಾರ್ಯದರ್ಶಿ ಪೆÇ್ರ. ಥಾಮಸ್ ಪರ್ಲ್ ಮ್ಯಾನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂರು ಮಂದಿ ವಿಜ್ಞಾನಿಗಳು ಹಲವಾರು ವರ್ಷಗಳ ಅನುಭವ ಹೊಂದಿದ್ದು ಹೆಪಟೈಟಿಸ್- ಸಿ ಗೆ ಲಸಿಕೆ ಕಂಡು ಹಿಡಿಯಲು ಹಲವಾರು ವರ್ಷಗಳ ಪ್ರಯತ್ನದ ನಂತರ ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇವರ ಈ ಕಾರ್ಯವನ್ನು ಗುರುತಿಸಿ 2020ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾಗಿರುವ ಹಾರ್ವೆ ಜೆ. ಆಲ್ಟರ್ ಅವರು ಅಮೇರಿಕಾದ ನ್ಯೂಯಾರ್ಕ್‍ನಲ್ಲಿ 1935ರಂದು ಜನಿಸಿದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್, ಬೆಥೆಸ್ಡಾ, ಎಂಡಿ, ಯುಎಸ್‍ಎ ಇವರನ್ನು ಶಿಫಾರಸ್ಸು ಮಾಡಿತ್ತು. ಇನ್ನೊರ್ವ ಸಾಧಕರಾದ ಮೈಕೆಲ್ ಹೋಗ್ಟನ್ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಹುಟ್ಟಿದರು. ಕೆನಡಾದ ಯೂನಿವರ್ಸಿಟಿ ಆಫ್ ಆಲ್ಬರ್ಟಾ ಇವರನ್ನು ಶಿಫಾರಸ್ಸು ಮಾಡಿದರೆ ಅಮೇರಿಕಾದ ಚಾಲ್ರ್ಸ್ ಎಂ ರೈಸ್ ಅವರನ್ನು ರಾಕ್‍ಫೆಲ್ಲರ್ ಯೂನಿವರ್ಸಿಟಿ ಶಿಫಾರಸ್ಸು ಮಾಡಿತ್ತು.

ಏನಿದು ಹೆಪಟೈಟಿಸ್-ಸಿ?

ಹೆಪಟೈಟಿಸ್ ಸಿ ಎಂಬುದು ಹೆಪಟೈಟಿಸ್ ಸಿ ವೈರಸ್ (ಎಚ್‍ಸಿವಿ) ಯಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ; ಇದು ಒಂದು ರೀತಿಯ ವೈರಲ್ ಹೆಪಟೈಟಿಸ್ ಆಗಿದೆ. ಆರಂಭಿಕ ಸೋಂಕಿನ ಸಮಯದಲ್ಲಿ ಜನರು ಸಾಮಾನ್ಯವಾಗಿ ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕೆಲವೊಮ್ಮೆ ಜ್ವರ, ಕಪ್ಪು ಮೂತ್ರ, ಹೊಟ್ಟೆ ನೋವು ಮತ್ತು ಹಳದಿ ಬಣ್ಣದ ಚರ್ಮ ಉಂಟಾಗುತ್ತದೆ. ಆರಂಭದಲ್ಲಿ ಸೋಂಕಿತರಲ್ಲಿ ಸುಮಾರು 75% ರಿಂದ 85% ರಷ್ಟು ಪಿತ್ತಜನಕಾಂಗದಲ್ಲಿ ವೈರಸ್ ಮುಂದುವರಿಯುತ್ತದೆ. ದೀರ್ಘಕಾಲದ ಸೋಂಕಿನ ಆರಂಭದಲ್ಲಿ ಸಾಮಾನ್ಯವಾಗಿ ಯಾವುದೇ ಲಕ್ಷಣಗಳಿಲ್ಲ.

ಆದಾಗ್ಯೂ, ಅನೇಕ ವರ್ಷಗಳಿಂದ, ಇದು ಹೆಚ್ಚಾಗಿ ಯಕೃತ್ತಿನ ಕಾಯಿಲೆ ಮತ್ತು ಸಾಂದರ್ಭಿಕವಾಗಿ ಸಿರೋಸಿಸ್ಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಸಿರೋಸಿಸ್ ಇರುವವರು ಪಿತ್ತಜನಕಾಂಗದ ವೈಫಲ್ಯ, ಪಿತ್ತಜನಕಾಂಗದ ಕ್ಯಾನ್ಸರ್ ಅಥವಾ ಅನ್ನನಾಳ ಮತ್ತು ಹೊಟ್ಟೆಯಲ್ಲಿ ಹಿಗ್ಗಿದ ರಕ್ತನಾಳಗಳಂತಹ ಗಂಭೀರ ತೊಂದರೆಗಳನ್ನು ಉಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವಾದ್ಯಂತ 70 ದಶಲಕ್ಷಕ್ಕೂ ಹೆಚ್ಚು ಹೆಪಟೈಟಿಸ್ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಪ್ರತಿ ವರ್ಷ 400,000 ಸಾವುಗಳು ಸಂಭವಿಸುತ್ತಿವೆ. ದೀರ್ಘಕಾಲದವರೆಗೂ ಕಾಡುವ ಈ ರೋಗವು ಯಕೃತ್ತಿನ ಉರಿಯೂತ ಮತ್ತು ಕ್ಯಾನ್ಸರ್‍ಗೆ ಪ್ರಮುಖ ಕಾರಣವಾಗಿದೆ.

ಪ್ರತಿಷ್ಟಿತ ನೋಬೆಲ್ ಪಾರಿತೋಷಕ

124 ವರ್ಷಗಳ ಹಿಂದೆ  ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟುಕೊಟ್ಟ ಉಯಿಲಿನಂತೆ ಅವರ ಹೆಸರಿನಲ್ಲಿಈ ಬಹುಮಾನವನ್ನು ಕೊಡುತ್ತಾ ಬರಲಾಗಿದೆ. ಅಕ್ಟೋಬರ್ 12 ರವರೆಗೆ ಘೋಷಿಸಲಾಗುವ ಆರು ಬಹುಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೊಡಲಾಗುವ ಈ ಪ್ರಶಸ್ತಿ ಮೊದಲನೆಯದು. ಇತರ ಬಹುಮಾನಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸಗಳಿಗಾಗಿ ಕೊಡಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್  ಸ್ವೀಡಿಷ್ ಕ್ರೋನರ್ (82373173 ರೂಪಾಯಿಗಳು) ಬಹುಮಾನದ ಹಣವನ್ನು ಒಳಗೊಂಡಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಲ್ಲಿಯೇ ನೊಬೆಲ್  ಪ್ರತಿಷ್ಟಿತವೆನಿಸಿಕೊಂಡಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!