ಮೂತ್ರದಲ್ಲಿ ರಕ್ತಸ್ರಾವಕ್ಕೆ ಕಾರಣವಾಗುವ ಹೆಮಟುರಿಯಾ

ಮೂತ್ರದಲ್ಲಿ ರಕ್ತವನ್ನು ನೋಡಿದರೆ ಗಾಬರಿ-ಆತಂಕಕ್ಕೆ ಕಾರಣವಾಗುತ್ತದೆ. ಮೂತ್ರದಲ್ಲಿ ರಕ್ತ ಬರುವುದನ್ನು ವೈದ್ಯಕೀಯವಾಗಿ ಹೆಮಟುರಿಯಾ ಎನ್ನುವರು. ಆದಾಗ್ಯೂ ಇದು ಯಾವಾಗಲೂ ಅತಂಕದ ವಿಷಯವಲ್ಲ. ಶ್ರಮದಾಯಕ ವ್ಯಾಯಾಮ ರಕ್ತದಲ್ಲಿ ಮೂತ್ರಕ್ಕೆ ಕಾರಣವಾಗಬಹುದು. ಆಸ್ಪಿರಿನ್ ಸೇರಿದಂತೆ ಅನೇಕ ಸಾಮಾನ್ಯ ಔಷಧಿಗಳಿಂದಲೂ ಇದು ಆಗಬಹುದು. ಆದರೆ ಮೂತ್ರದಲ್ಲಿ ರಕ್ತಸ್ರಾವವಾಗುವುದು ಒಂದು ಗಂಭೀರ ಸಮಸ್ಯೆಯನ್ನು ಸಹ ಸೂಚಿಸಬಹುದಾಗಿದೆ.
ಮೂತ್ರದಲ್ಲಿ ಎರಡು ರೀತಿಯ ರಕ್ತಗಳಿರುತ್ತವೆ. ನೀವು ನೋಡಬಹುದಾದ ರಕ್ತವನ್ನು ಗ್ರಾಸ್ ಹೆಮಟುರಿಯಾ ಎನ್ನುವರು. ಸೂಕ್ಷ್ಮದರ್ಶಕದಿಂದ ಮಾತ್ರ ಕಾಣುವ ಯೂರಿನರಿ ಬ್ಲಡ್‍ನನ್ನು ಮೈಕ್ರೋಸ್ಕೋಪಿಕ್ ಹೆಮಾಟುರಿಯಾ ಎಂದು ಕರೆಯಲಾಗುತ್ತದೆ ಹಾಗೂ ವೈದ್ಯರು ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಕಂಡು ಬರುತ್ತದೆ.
ಮೂತ್ರದಲ್ಲಿ ರಕ್ತ ವೀಕ್ಷಣೆ ಚಿಹ್ನೆ ಎಂದರೆ ಗುಲಾಬಿ, ಕೆಂಪು ಅಥವಾ ಕೋಲಾ ಬಣ್ಣದ ಮೂತ್ರ. ಅಂದರೆ ಇದು ಕೆಂಪು ರಕ್ತ ಕಣಗಳು ಇರುವಿಕೆಯಿಂದ ಕಂಡುಬರುತ್ತದೆ. ಕೆಂಪು ಮೂತ್ರವನ್ನು ಉತ್ಪಾದಿಸಲು ಇದು ತುಂಬಾ ಕಡಿಮೆ ರಕ್ತವನ್ನು ಪಡೆದುಕೊಳ್ಳುತ್ತದೆ ಹಾಗೂ ಸ್ರಾವವು ಸಾಮಾನ್ಯವಾಗಿ ಉರಿ ಅಥವಾ ನೋವಿನಿಂದ ಕೂಡಿರುವುದಿಲ್ಲ. ಮೂತ್ರದಲ್ಲಿ ಹೆಪ್ಪುಗಟ್ಟಿದ ರಕ್ತಗಳನ್ನು ವಿಸರ್ಜಿಸಿದರೆ, ಅದು ನೋವು ಅಥವಾ ಉರಿಗೆ ಕಾರಣವಾಗಬಹುದು. ಅನೇಕ ಸಲ, ಇತರ ಚಿಹ್ನೆ ಅಥವಾ ಲಕ್ಷಣಗಳಿಲ್ಲದೆಯೂ ರಕ್ತ ಮೂತ್ರ ಉಂಟಾಗಬಹುದು. ಅನೇಕ ಪ್ರಕರಣಗಳಲ್ಲಿ, ಮೂತ್ರದಲ್ಲಿನ ರಕ್ತವನ್ನು ಸೂಕ್ಷ್ಮದರ್ಶಕದಿಂದ ಮಾತ್ರ ನೋಡಲು ಸಾಧ್ಯ.(ಮೈಕ್ರೋಸ್ಕೋಪಿಕ್ ಹೆಮಾಟುರಿಯಾ).
ಕೆಲವು ಔಷಧಿಗಳು ಹಾಗೂ ಬೀಟ್‍ರೂಟ್, ರ್ಹೂಬರ್ಬ್ ಮತ್ತು ಚೆರ್ರಿಗಳಂಥ ಕೆಲವು ಆಹಾರ ಪದಾರ್ಥಗಳು ಮೂತ್ರ ಕೆಂಪಾಗಲು ಕಾರಣವಾಗುತ್ತದೆ. ಔಷಧಿಗಳು, ಆಹಾರ ಅಥವಾ ವ್ಯಾಯಾಮದಿಂದ ಉಂಟಾಗುವ ಮೂತ್ರದ ಬಣ್ಣ ಬದಲಾವಣೆಯು ಕೆಲವು ದಿನಗಳ ಒಳಗೆ ಹೋಗುತ್ತದೆ. ಆದಾಗ್ಯೂ, ಮೂತ್ರದಲ್ಲಿ ಕಂಡು ಬರುವ ಕೆಂಪು ಬಣ್ಣ ಅಥವಾ ರಕ್ತಕ್ಕೆ ಔಷಧಿಗಳು ಅಥವಾ ವ್ಯಾಯಾಮ ಎಂಬ ಸ್ವಯಂ ನಿರ್ಧಾರಕ್ಕೆ ಬರಬಾರದು.

ಕಾರಣಗಳು

ಹೆಮಾಟುರಿಯಾ ಅಥವಾ ಮೂತ್ರದಲ್ಲಿ ರಕ್ತ ಕಂಡು ಬರುವಿಕೆಯಲ್ಲಿ ಮೂತ್ರಪಿಂಡಗಳು ಅಥವಾ ನಿಮ್ಮ ಮೂತ್ರ ನಾಳದ ಇತರ ಭಾಗಗಳು, ಮೂತ್ರದಲ್ಲಿ ರಕ್ತಕಣಗಳು ಸೋರುವಂತೆ ಮಾಡುತ್ತವೆ. ಈ ಸೋರಿಕೆಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ :

  • ಮೂತ್ರ ನಾಳ ಸೋಂಕುಗಳು
  • ಮೂತ್ರಪಿಂಡ ಸೋಂಕುಗಳು
  • ಬ್ಲಾಡರ್ ಅಥವಾ ಕಿಡ್ನಿ ಸ್ಟೋನ್
  • ಪ್ರೊಸ್ಟೇಟ್ ದೊಡ್ಡದಾಗುವಿಕೆ
  • ಕ್ಯಾನ್ಸರ್

ಅನುವಂಶೀಯ ದೋಷಗಳು

  • ಮೂತ್ರಪಿಂಡಕ್ಕೆ ಗಾಯ
  • ಔಷಧಿಗಳು
  • ಶ್ರಮದಾಯಕ ವ್ಯಾಯಾಮ.

ಸಂಭವಾಂಶಗಳು
ಮಕ್ಕಳು, ಯೌವ್ವನಾವಸ್ಥೆಯಲ್ಲಿರುವವರು ಒಳಗೊಂಡಂತೆ ಬಹುತೇಕ ಯಾರಿಗಾದರೂ ಮೂತ್ರದಲ್ಲಿ ಕೆಂಪು ರಕ್ತ ಕಣಗಳು ಇರಬಹುದು.
ವಯಸ್ಸು: 50 ವರ್ಷಕ್ಕೆ ಮೇಲ್ಪಟ್ಟ ಅನೇಕ ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೇಟ್ ಗ್ರಂಥಿಯಿಂದಾಗಿ ಸಾಂದರ್ಭಿಕವಾಗಿ ಹೆಮಾಟುರಿಯಾ ಕಂಡು ಬರಬಹುದು.
ಲಿಂಗ: ಎಲ್ಲ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚಿನಷ್ಟು ವನಿತೆಯರು ಬಹುಶ: ಕೆಲವು ಮೂತ್ರ ಸ್ರಾವದಿಂದಾಗಿ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಮ್ಮೆಯಾದರೂ ಮೂತ್ರ ನಾಳ ಸೋಂಕಿಗೆ ಒಳಗಾಗುತ್ತಾರೆ. ಯುವಕರು ಕಿಡ್ನಿ ಸ್ಟೋನ್‍ಗಳು ಹಾಗೂ ಮೂತ್ರದಲ್ಲಿ ರಕ್ತಕ್ಕೆ ಕಾರಣವಾಗುವ ಅನುವಂಶೀಯ ನೆಫ್ರಿಟಿಸ್‍ನ ಒಂದು ರೂಪವಾದ ಅಲ್‍ಪೋರ್ಟ್ ಸಿಂಡ್ರೋಮ್ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇತ್ತೀಚಿನ ಸೋಂಕು: ವೈರಾಣು ಅಥವಾ ಬ್ಯಾಕ್ಟೀರಿಯಾ ಸೋಂಕು ನಂತರ (ಪೋಸ್ಟ್ ಇನ್‍ಫೆಕ್ಷಿಯಸ್ ಗ್ಲೊಮೆರುಲೊನೆಫ್ರಿಟಿಸ್) ಮೂತ್ರಪಿಂಡ ಉರಿಯೂತವಿದ್ದರೆ ಅದು ಮಕ್ಕಳಲ್ಲಿ ಗೋಚರಿಸುವ ಮೂತ್ರ ರಕ್ತಕ್ಕೆ ಕಾರಣಗಳಲ್ಲಿ ಒಂದಾಗಿದೆ.
ಕೌಟುಂಬಿಕ ಹಿನ್ನೆಲೆ: ಮೂತ್ರಪಿಂಡ ರೋಗಗಳು ಅಥವಾ ಮೂತ್ರಪಿಂಡ ಕಲ್ಲುಗಳ ಕೌಟುಂಬಿಕ ಹಿನ್ನೆಲೆ ಹೊಂದಿದ್ದರೆ, ಯೂರಿನರಿ ಬ್ಲೀಡಿಂಗ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕೆಲವು ಔಷಧಿಗಳು: ಆಸ್ಪಿರಿನ್, ನಾನ್‍ಸ್ಟಿರಾಯ್ಡ್ ಆಂಟಿ-ಇನ್‍ಫ್ಲಮೆಟರಿ ಪೈನ್ ರಿಲೀವರ್‍ಗಳು ಹಾಗೂ ಪೆನ್ಸಿಲಿನ್‍ನಂಥ ಆಂಟಿಬಯೋಟಿಕ್‍ಗಳು ಮೂತ್ರದಲ್ಲಿ ರಕ್ತದ ಸಂಭವವನ್ನು ಹೆಚ್ಚಿಸುತ್ತದೆ.
ಶ್ರಮದಾಯಕ ವ್ಯಾಯಾಮ: ದೀರ್ಘ ಅಂತರದ ಓಟಗಾರರು ಯೂರಿನರಿ ಬ್ಲೀಡಿಂಗ್‍ಗೆ ಒಳಗಾಗುತ್ತಾರೆ. ಈ ಸ್ಥಿತಿಯನ್ನು ಜಾಗರ್ಸ್ ಹೆಮಾಟುರಿಯಾ ಎನ್ನುತ್ತಾರೆ. ಆದರೆ, ಶ್ರಮದಾಯಕ ವ್ಯಾಯಾಮ ಮಾಡುವ ಯಾರಿಗೆ ಬೇಕಾದರೂ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಪರೀಕ್ಷೆಗಳು ಮತ್ತು ರೋಗ ನಿರ್ಧಾರಗಳು

ಮೂತ್ರದಲ್ಲಿ ರಕ್ತ ಕಂಡುಬರುವುದಕ್ಕೆ ಕಾರಣಗಳನ್ನು ತಿಳಿಯಲು ಈ ಕೆಳಕಂಡ ಪರೀಕ್ಷೆಗಳು ಮತ್ತು ತಪಾಸಣೆಗಳು ಪ್ರಮುಖ ಪಾತ್ರ ವಹಿಸುತ್ತವೆ.

  • ದೈಹಿಕ ಪರೀಕ್ಷೆ
  • ಮೂತ್ರ ಪರೀಕ್ಷೆಗಳು
  • ಇಮೇಜಿಂಗ್ ಟೆಸ್ಟಿಂಗ್
  • ಸೈಸ್ಟೋಸ್ಕೋಪಿ

ಈ ಪರೀಕ್ಷೆಗಳ ನಂತರವೂ, ಮೂತ್ರ ರಕ್ತ ವಿಸರ್ಜನೆಗೆ ಕಾರಣಗಳು ಗೊತ್ತಾಗದಿದ್ದರೆ ನಿಯತ ಫಾಲೊ-ಅಪ್ ಪರೀಕ್ಷೆಗಳಿಗೆ ಶಿಫಾರಸ್ಸು ಮಾಡುತ್ತಾರೆ.

ಚಿಕಿತ್ಸೆಗಳು ಮತ್ತು ಔಷಧಿಗಳು

ಹೆಮಾಟುರಿಯಾಗೆ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಬದಲಿಗೆ ವೈದ್ಯರು ಪರಿಸ್ಥಿತಿ ಆಧಾರದ ಮೇಲೆ ಚಿಕಿತ್ಸೆಗೆ ಒತ್ತು ನೀಡುತ್ತಾರೆ. ಉದಾಹರಣೆಗೆ ಮೂತ್ರ ನಾಳ ಸೋಂಕು ನಿವಾರಿಸಲು ಆಂಟಿಬಯೋಟಿಕ್‍ಗಳು, ದೊಡ್ಡದಾದ ಪ್ರೊಸ್ಟೇಟ್ ಗ್ರಂಥಿಯನ್ನು ಕಿರಿದಾಗಿಸಲು ಔಷಧಗಳ ಸಲಹೆ, ಅಥವಾ ಬ್ಲಾಡರ್ ಅಥವಾ ಕಿಡ್ನಿ ಸ್ಟೋನ್‍ಗಳನ್ನು ಒಡೆಯಲು ಶಾಕ್ ವೇವ್ ಥೆರಪಿ ಇವುಗಳನ್ನು ಇದು ಒಳಗೊಂಡಿರುತ್ತದೆ. ಹೆಮಾಟುರಿಯಾ ತಡೆಗಟ್ಟಲು ಸಾಮಾನ್ಯವಾಗಿ ಸಾಧ್ಯವಿಲ್ಲದಿದ್ದರೂ, ರೋಗಕ್ಕೆ ಕಾರಣವಾಗುವ ಕೆಲವು ಸಂಭವಾಂಶವನ್ನು ತಡೆಗಟ್ಟುವ ಕಾರ್ಯತಂತ್ರಗಳು ಇವುಗಳನ್ನು ಒಳಗೊಂಡಿವೆ :
1.ಯೆಥೇಚ್ಚ ನೀರು ಸೇವನೆ, ಮೂತ್ರ ವಿಸರ್ಜನೆಗೆ ಒತ್ತಡವಾದಾಗ ಅಥವಾ ಲೈಂಗಿಕ ಕ್ರಿಯೆ ನಂತರ ಆದಷ್ಟು ಬೇಗ ಮೂತ್ರ ವಿಸರ್ಜಿಸುವಿಕೆ, ಮೂತ್ರ ವಿಸರ್ಜನೆ ನಂತರ ಮುಂದಿನಿಂದ ಹಿಂದಿನ ತನಕ ಒರೆಸುವಿಕೆ ಹಾಗೂ ಉರಿ, ಕಿರಿಕಿರಿ ಉಂಟು ಮಾಡುವ ಮಹಿಳೆಯರ ಶುಚಿತ್ವ ಉತ್ಪನ್ನಗಳನ್ನು ತಪ್ಪಿಸುವಿಕೆ-ಈ ಕ್ರಮಗಳು ನಿಮ್ಮ ಮೂತ್ರ ನಾಳ ಸೋಂಕು ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
2.ಕಿಡ್ನಿ ಸ್ಟೋನ್‍ಗಳ ಸಾಧ್ಯತೆಯನ್ನು ಕಡಿಮೆ ಮಾಡಲು, ಸಾಕಷ್ಟು ನೀರು ಕುಡಿಯಿರಿ ಮತ್ತು ಉಪ್ಪು ಬಳಕೆಯನ್ನು ಮಿತಿಗೊಳಿಸಿ, ಪ್ರೊಟಿನ್ ಮತ್ತು ಆಕ್ಸಲೇಟ್ ಒಳಗೊಂಡ ಪಾಲಕ ಮತ್ತು ರ್ಹೂಬರ್ಬ್‍ನಂಥ ಆಹಾರ ಸೇವಿಸಿ.
3.ಧೂಮಪಾನ ನಿಲ್ಲಿಸಿ. ರಾಸಾಯನಿಕಗಳಿಗೆ ದೇಹ ಒಳಪಡುವುದನ್ನು ತಪ್ಪಿಸಿ, ಯೆಥೇಚ್ಚವಾಗಿ ನೀರು ಸೇವಿಸಿ. ಇವುಗಳು ನಿಮ್ಮ ಬ್ಲಾಡರ್ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
4.ಮೂತ್ರಪಿಂಡ ಕ್ಯಾನ್ಸರ್‍ನನ್ನು ಕಡಿಮೆ ಮಾಡಲು, ಧೂಮಪಾನ ನಿಲ್ಲಿಸಿ, ಆರೋಗ್ಯಕರ ತೂಕವನ್ನು ನಿರ್ವಹಣೆ ಮಾಡಿ, ಆರೋಗ್ಯಕರ ಆಹಾರ ಸೇವಿಸಿ, ಕ್ರಿಯಾಶೀಲರಾಗಿರಿ ಮತ್ತು ವಿಷಯುಕ್ತ ರಾಸಾಯನಿಕಗಳಿಂದ ದೂರವಿರಿ.

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!