ಫೆಬ್ರವರಿ ತಿಂಗಳ ಆರೋಗ್ಯ ಸಮಾಲೋಚನೆ

ಫೆಬ್ರವರಿ ತಿಂಗಳಲ್ಲಿ ಆರೋಗ್ಯದ ಹಿನ್ನಲೆಯಲ್ಲಿ ನಮ್ಮ ಯುವಮಿತ್ರರು, ಮಹಿಳೆಯರು ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಗಮನಿಸೋಣ.
ಅದೋ ಆ 18ರ ಪೋರ ಹೆಲ್ಮೆಟ್ ಇಲ್ಲದೇ ಅತಿ ವೇಗದಿಂದ ಬೈಕ್ ಓಡಿಸುತ್ತ ಈ ರಸ್ತೆಯಲ್ಲಿ ನುಗ್ಗುತ್ತಿದ್ದಾನೆ. ಇದೋ ಈ 28ರ ಯುವ ದಂಪತಿಗಳು, ಸೀಟ್ ಬೆಲ್ಟ್ ಹಾಕದೇ, ಹೊಸ ಕಾರಿನಲ್ಲಿ ಅತಿ ವೇಗದಿಂದ, ಅತಿ ಹುಮ್ಮಸ್ಸಿನಿಂದ ರಸ್ತೆ ಮೇಲೆ ವಿಮಾನದ0ತೆ ಹಾರುತ್ತಿದ್ದಾರೆ. ಅಯ್ಯಯ್ಯೋ! ಈ ರಸ್ತೆಯ ಅಂಚಿನ ತಿರುವಿನಲ್ಲಿ ಎರಡಕ್ಕೆ ಡಿಕ್ಕಿ. ರಕ್ತ ಹರಿಯಿತು. ಮೂಳೆ ಮುರಿಯಿತು. ಪ್ರಾಣ ಉಳಿಯುತ್ತದೋ ಹೋಗುವುದೋ, ರಸ್ತೆಯ ಬಂಗಾರದ ತಾಸಿನ ನಿಯಮವೇ ಹೇಳಬೇಕು!
ಒಂದೇ ಕ್ಷಣ ಇತ್ತ ಗಮನಿಸಿ:
2017ರಲ್ಲಿ ರಸ್ತೆ ದುರಂತದಲ್ಲಿ 1-47 ಲಕ್ಷ ಜನ ಮರಣ ಹೊಂದಿದರೆ, ಆ ಸಂಖ್ಯೆ 2016ರ 1-50 ಲಕ್ಷಕ್ಕಿಂತ ಸ್ವಲ್ಪ ಕಡಿಮೆ ಆಯ್ತು ಅನಿಸಿತ್ತು. ಆದರೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಂತೆ, ಇದು 2018ರಲ್ಲಿ 1-49 ಲಕ್ಷಕ್ಕೆ ಏರಿದೆ. 2015ರಲ್ಲಿ ಭಾರತ, ರಸ್ತೆ ದುರಂತದ ಗಾಯ ಹಾಗೂ ಮರಣ ಸಂಖ್ಯೆಯನ್ನು, ಅರ್ಧಕ್ಕೆ ಇಳಿಸುವ ಸಂಕಲ್ಪ ಮಾಡಿತ್ತು. ಆದರೆ ಈ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಸಂಬಂಧಿಸಿದ ಎಲ್ಲರಿಗೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಧ್ಯೇಯವಾಕ್ಯ ಯುವಶಕ್ತಿಯಿಂದ ಬದಲಾವಣೆ ತರುವುದು.
31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜನವರಿ 11ರಿಂದ 17ರವರೆಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಕೈಗೊಳ್ಳಬೇಕಾದ ಪ್ರಮಾಣ ಇದು:
ಬೈಕು ಓಡಿಸುವಾಗ ಯಾವಾಗಲೂ ಶಿರಸ್ತ್ರಾಣ (ಹೆಲ್ಮೆಟ್) ಧರಿಸಿರುತ್ತೇನೆ. ಕಾರ್ ಓಡಿಸುವಾಗ ಸದಾ ಸಿಟ್ ಬೆಲ್ಟ್ ಹಾಕಿರುತ್ತೇನೆ. ಕುಡಿದು ವಾಹನ ಚಾಲನೆ ಮಾಡುವುದಿಲ್ಲ. ಆಗ ಫೋನಿನಲ್ಲಿ ಮಾತನಾಡುವುದಿಲ್ಲ, ಸಂದೇಶ ಕಳಿಸುವುದಿಲ್ಲ ಹಾಗೂ ಸ್ವೀಕರಿಸುವುದಿಲ್ಲ. ಅತಿವೇಗದ ಡ್ರೈವಿಂಗ್ ಮಾಡುವುದಿಲ್ಲ. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುತ್ತೇನೆ ಎಂಬ ಪ್ರಮಾಣ ಮಾಡುತ್ತೇನೆ.
356 ದಶಲಕ್ಷ ಯುವಜನರಿರುವ ದೇಶ ನಮ್ಮದು. ಆದರೆ ಈ ಜನಸಾಂದ್ರತೆಯ ಮೂಲಧನವನ್ನು ಗರಿಷ್ಠ ಬಳಸಲಾಗುತ್ತಿಲ್ಲ. ನಮ್ಮ ಮಾನವ ಶಕ್ತಿ ರಸ್ತೆ ಅಪಘಾತಗಳಲ್ಲಿ ಕಳೆದುಹೋಗುತ್ತ್ತಿz. 5ರಿಂದ 29 ವಷದ ವಯೋಮಿತಿಯ ಜನ ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಸಾಯುವ ಮುಖ್ಯ ಕಾರಣ- ರಸ್ತೆ ಅಪಘಾತಗಳು. ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಈ ಆಚರಣೆ ಮಾಡಲು 2011 ರಿಂದ ಆರಂಭಿಸಿದೆ. ಈ ಸಪ್ತಾಹದಲ್ಲಿ ಪೋಲಿಸರು ವಾಹನಗಳನ್ನು ಸುರಕ್ಷತೆಗಾಗಿ ರಸ್ತೆ ಬದಿ ತಪಾಸಣೆ ಮಾಡುತ್ತಾರೆ. ಚೆನ್ನಾಗಿ ನಿರ್ವಹಣೆ ಮಾಡದ ವಾಹನಗಳಿಂದ ಉಂಟಾಗುವ ಅಪಾಯಗಳ ಬಗ್ಗೆ, ಅತಿ ವೇಗದ ಚಾಲನೆ ನಿಯಂತ್ರಣದ ಬಗ್ಗೆ ಎಚ್ಚರಿಸುತ್ತಾರೆ. ಹೇಗೆ ಅತಿವೇಗ, ಅಪಘಾತಗಳು ಹಾಗೂ ಸಾವಿನ ಬಲಿ ತೆಗೆದುಕೊಳ್ಳುತ್ತದೆ ಎಂಬುದು ಸದಾ ನೆನಪಿರಲಿ.
ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ
ಈಗಾಗಲೇ ಅನೇಕ ತಜ್ಞರು, ವೈದ್ಯರು ಹೇಳಿರುವಂತೆ, ಆರಂಭದ ಹಂತಗಳಲ್ಲೇ ಕ್ಯಾನ್ಸರ್‍ಗೆ ಸಕಾಲಿಕ ಸೂಕ್ತ ಚಿಕಿತ್ಸೆ ಪಡೆದರೆ, ಅದು ಖಂಡಿತ ಗುಣವಾಗಬಲ್ಲದು. ನಮ್ಮ ಜೀವನಶೈಲಿ ಬದಲಾಯಿಸಿಕೊಂಡರೆ ಕ್ಯಾನ್ಸರ್ ಬಾರದಂತೆ, ನಮ್ಮನ್ನು ನಾವೇ ಕಾಯ್ದುಕೊಳ್ಳಲು ಖಂಡಿತ ಸಾಧ್ಯ. ತಂಬಾಕು, ಗುಟ್ಕಾ, ಪುಡಿ-ಚೀಟಿ, ಸಿಗರೇಟು, ಬೀಡಿ, ಚುರೂಟ್, ಮದ್ಯ ಇವುಗಳ ಸಹವಾಸ ಖಂಡಿತ ಬೇಡ. ಅತಿಹೆಚ್ಚು ಮಸಾಲೆ ಬಿಡಿ. ಸದ್ಯ ನಾವು ಗಮನಿಸಬೇಕಾದ್ದು 2019ರಿಂದ 2021 ರ ಧ್ಯೇಯವಾಕ್ಯ I ಚಿm ಚಿಟಿಜ I ತಿiಟಟ. ನೇತ್ಯಾತ್ಮಕ ಮನೋಭಾವ ಓಡಿಸಿ. ಕ್ಯಾನ್ಸರ್ ಬಗ್ಗೆ ಏನೂ ಮಾಡಲು ಅಸಾಧ್ಯ ಎಂಬ ಅಪನಂಬಿಕೆ ತೊಲಗಿಸಿ. ನಾನು ಬದಕುತ್ತಿರುವೆ. ನಾನು ಮುಂದೂ ಬದುಕುವೆ ಎಂಬ ಆಶಾಭಾವ ಹರಡುವುದೇ ಈ ಧ್ಯೇಯವಾಕ್ಯದ ಗುರಿ.
10ರಂದು ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ:
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವತಿಯಿಂದ ಎಲ್ಲ ಪೂರ್ವ-ಪ್ರಾಥಮಿಕ ಹಾಗೂ ಶಾಲೆಗಳ 1ರಿಂದ 14 ವರ್ಷದೊಳಗಿನ, 241 ದಶಲಕ್ಷ ಮಕ್ಕಳಿಗೆ ಅವರ ಆರೋಗ್ಯ ಹಾಗೂ ಪೌಷ್ಠಿಕತೆ ರಕ್ಷಣೆಗಾಗಿ, ಜಂತುಹುಳದ ವಿರುದ್ಧ ಔಷಧ ನೀಡಲಾಗುವುದು. ಮಣ್ಣಿನ ಮೂಲಕ ದೇಹದ ಒಳಹೊಕ್ಕುವ ಹಾಗೂ ಕರುಳನ್ನು ಸೇರುವ ಉಪಜೀವಿ ಜಂತುಗಳ ಅಪಾಯ ತಡೆಯುವುದೇ ಇದರ ಉದ್ದೇಶ. ಈ ಅಪಾಯದಿಂದ ರಕ್ತಹೀನತೆ, ಅಪೌಷ್ಠಿಕತೆ ಶಾರೀರಿಕ ಹಾಗೂ ಮಾನಸಿಕ ವಿಕಲತೆ, ಕಡಿಮೆ ಶಾಲಾ ಹಾಜರಾತಿ, ಎಲ್ಲಾ ಉಂಟಾಗುವ ಸಂಭವವಿರುತ್ತದೆ.
ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ:
ಫೆಬ್ರವರಿ 10ರಂದು ಮೊಟ್ಟ ಮೊದಲ ವಿಶ್ವ ದ್ವಿದಳ ಧಾನ್ಯ ದಿನಾಚರಣೆ ಕಳೆದ ವರ್ಷ ವಿಶ್ವ ಸಂಸ್ಥೆ ಆರಂಭಿಸಿದೆ. ಆರೋಗ್ಯಕರ, ಪೌಷ್ಠಿಕ, ಸಸಾರಜನಕ ಶ್ರೀಮಂತ, ದ್ವಿದಳ ಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸಲು ವಿಶ್ವಸಂಸ್ಥೆ ಕರೆ ಇತ್ತಿದೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!