ಹಂಟಾ ವೈರಸ್ …. ಭಯಾನಕ ಕಾಯಿಲೆಯ ಮುನ್ಸೂಚನೆಯೇ?

ಹಂಟಾ ವೈರಸ್ .... ಭಯಾನಕ ಕಾಯಿಲೆಯ ಮುನ್ಸೂಚನೆಯೇ?ಬೆಂಗಳೂರಿನ‌ ಗಲ್ಲಿಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಸರಿಯಾಗಿ ವಿಲೇವಾರಿಯಾಗದ ಕಸದ ತೊಟ್ಟಿಗಳು ಇಲಿ ಹೆಗ್ಗಣಗಳನ್ನು ಪೋಷಿಸುವ ಕೇಂದ್ರಗಳು. ಇಲಿಗಳ ಉಪಟಳ ನಗರಕ್ಕೆ ಮಾತ್ರ ಸೀಮಿತವಲ್ಲ, ಹಳ್ಳಿಗಳಿಗೂ ಇಲಿಗಳ ಕಾಟ ತಪ್ಪಿದ್ದಲ್ಲ. ಕೊಳೆತು ನಾರುವ ಕಸದ ಮಧ್ಯ ಬಾಳಿ ಬೆಳೆಯುವ ಇಲಿಗಳಿಂದ ಉಂಟಾಗುವ ಕಾಯಿಲೆಗಳು ಹಲವಾರು. ಚರ್ಮರೋಗದಿಂದ ಹಿಡಿದು ಪ್ಲೇಗ್‌ನಂತಹ ತೀವ್ರ ತರಹದ ವಾಂತಿಭೇದಿ ಹಾಗೂ ಕೆಲ ಮಾರಕ ಜ್ವರಗಳ ಸೊಂಕಿನ ಮೂಲ ಈ ಇಲಿಗಳು ಹೆಗ್ಗಣಗಳು.

ಇಲಿಗಳಿಂದ ಬರುವ ಕಾಯಿಲೆಗಳು :

ಮೊಟ್ಟಮೊದಲನೆ‌ಯದಾಗಿ.
1. ಪ್ಲೇಗ್ ಸುಮಾರು ಲಕ್ಷ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ‌. ಪ್ಲೇಗ್ ಇಲಿಗಳಿಂದ ಹರಡುವ ಮಾರಕ ರೋಗ.
ಇಲಿಗಳು ಆಹಾರ ಪದಾರ್ಥಗಳಲ್ಲಿ ಮಲ ಮೂತ್ರ ಮಾಡಿ ರೋಗಕಾರಕ ಬ್ಯಾಕ್ಟೀರಿಯಾ ವೈರಸ್‌ಗಳನ್ನು ಹರಡುತ್ತವೆ.
2. ಲೆಪ್ಟೊಸ್ಪೈರೋಸಿಸ್ : ಜ್ವರದಿಂದ ಆರಂಭವಾಗಿ, ಜ್ವರ ಮೆದುಳಿಗೇರುವುದರಿಂದ ಹಿಡಿದು ಯಕೃತ್ ಹಾಗೂ ಮೂತ್ರಪಿಂಡ ವೈಫಲ್ಯ ಉಂಟುಮಾಡಿ ಪ್ರಾಣಕ್ಕೆ ಮಾರಕವಾಗುತ್ತದೆ ಈ ಕಾಯಿಲೆ.
3. ರ‌್ಯಾಟ್ ಬೈಟ್ ಫೀವರ್ (ಇಲಿ ಜ್ವರ): ಮಾಮೂಲಿ‌ ಜ್ವರದಂತೆ ಆರಂಭವಾಗಿ, ಹೊಟ್ಟೆಯೊಳಗೆ, ಮೂತ್ರಪಿಂಡಗಳು, ಯಕೃತ್, ಶ್ವಾಕೋಶ, ಮಿದುಳಗಳಲ್ಲಿ ವಿಪರೀತ ಸೊಂಕು ಉಂಟುಮಾಡಿ ಪ್ರಾಣಕ್ಕೆ ಕಂಟಕವಾಗಬಹುದು.
4. ಟುಲಾರೆಮಿಯಾ: ಇಲಿ, ಮೊಲ ಹಾಗೂ ಅಳಿಲು ಇಲಿಯಂತಹ ಕಾಡು ಪ್ರಾಣಿಗಳಿಂದ‌ ಹರಡುತ್ತದೆ .
ಜ್ವರದಿಂದ ಆರಂಭವಾಗಿ ಚರ್ಮದ ಮೇಲೆ ಗಾಯ ಗುಳ್ಳೆಗಳುಂಟಾಗಿ ಕಣ್ಣು, ಬಾಯಿಗಳ ಒಳಭಾಗದಲ್ಲಿ ಹುಣ್ಣುಗಳನ್ನುಮಾಡಿ ತೀವ್ರ ನೋವು ಉಂಟುಮಾಡುವ ಕಾಯಿಲೆ‌ ಇದು.
5.ಹಂಟಾ ವೈರಸ್ ಜ್ವರಗಳು. ಹಂಟಾ ವೈರಸ್ ಎಂಬ ಮಾರಕ‌ ವೈರಸ್‌ನ ಪ್ರಸರಣ. ಹಾಗೂ ಡೆಂಗಿ ಜ್ವರದಂತಹ ಆಂತರಿಕ‌ ಹಾಗೂ ಬಾಹ್ಯ ರಕ್ತಸ್ರಾವ ಉಂಟು ಮಾಡುವ ಜ್ವರಗಳು ಇಲಿಗಳಿಂದ‌ ಬರುತ್ತವೆ. ತೀವ್ರ ಆಂತರಿಕ ರಕ್ತಸ್ರಾವ ಹಾಗೂ ಮೂತ್ರಪಿಂಡದ ವೈಫಲ್ಯಗಳು ಮಾರಕವಾಗಬಹುದು .
6. ಲಾಸ್ಸಾ ಜ್ವರ (ಸಾಮಾನ್ಯವಾಗಿ ಪಾಶ್ಚಿಮ ಆಪ್ರಿಕಾದಲ್ಲಿ ಕಾಣುವ ವೈರಸ್ ಜ್ವರ) ಇಲಿ‌ ತಾಜ್ಯದ ಧೂಳನ್ನು ಉಸಿರಾಡಿದಾಗ ಈ ಜ್ವರ ಬರುತ್ತದೆ. ಜ್ವರದಿಂದ ಆರಂಭವಾಗಿ, ಹೊಟ್ಟೆನೋವು, ಕೈನೋವು, ನರಮಂಡಲಕ್ಕೆ ವ್ಯಾಪಿಸಿ ಮೆದುಳಿನ‌ ಸೋಂಕು ಉಂಟಾಗಿ ಸಾವು ಪರಿಣಮಿಸಬಹುದು.
7. ಸಾಲ್ಮೋನೆಲ್ಲೋಸಿಸ್/ ಟೈಫಸ್ ಜ್ವರಗಳು : ಟೈ‌ಫೈಡ್ ಜ್ವರದಂತಹ ಜ್ವರಗಳು.
8. ಇನ್ನು ಕೆಲವು ಚರ್ಮರೋಗದಂತಹ ಕಡಿಮೆ‌ ತೀವ್ರತೆಯ ಕಾಯಿಲೆಗಳು .

ಪರಿಹಾರ ಕ್ರಮಗಳು
  • ಇಲಿಗಳ ನಿಯಂತ್ರಣವೊಂದೆ ದಾರಿ.
  • ನಮ್ಮ‌ಪರಿಸರದಲ್ಲಿ ತಿನ್ನುವ ವಸ್ತುಗಳು ಇಲಿಗಳನ್ನು ಆಕರ್ಷಿಸಿ, ಪೋಷಿಸಿ ಸಂತಾನಾಭಿವೃದ್ದಿಗೆ ಕಾರಣವಾಗುತ್ತದೆ . ಹಾಗಾಗಿ ಕಸ, ಆಹಾರ ತಾಜ್ಯದ ವೈಜ್ಞಾನಿಕ ವಿಲೇವಾರಿ ಮುಖ್ಯ.
  • ಇಲಿಗಳು ಕಂಡರೆ ಇಲಿಗಳ ಸರಿಯಾದ ನಿಯಂತ್ತಣ ಮಾಡಿ. ಆಹಾರ ಪದಾರ್ಥ, ನೀರು ಉಡುಗೆ ತೊಡುಗೆಗಳು ಇಲಿಗಳ ತಾಜ್ಯ, ಸಂಪರ್ಕದಿಂದ ಮಲಿನವಾಗದಂತೆ ನೋಡಿಕೊಳ್ಳಬೇಕು.

Dr-Salim-Nadafa

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!