ಹಂದಿ ಜ್ವರ – ಬೇಡ ಆತಂಕ

 ಹಂದಿ ಜ್ವರ ಎಂದರೇನು ?

ಹಂದಿ ಜ್ವರ - ಬೇಡ ಆತಂಕಹಂದಿ ಜ್ವರ ಅಥವಾ ಸ್ವೈನ್ ಇನ್‍ಫ್ಲುಯೆಂಜಾ ಹಂದಿಗಳಲ್ಲಿ ಕಂಡುಬರುವ ಒಂದು ರೋಗ. ಈ ವೈರಾಣು ಸೋಂಕು ಪ್ರಸ್ತುತ ಜನರ ನಡುವೆ ಹರಡುತ್ತಿರುವ ಕಾರಣ ಈಗ ಇದನ್ನು ಹಂದಿ ಜ್ವರ ಎಂದು ಕರೆಯಲಾಗುತ್ತಿದೆ. ಈ ರೋಗದ ಮೂಲದ ಬಗ್ಗೆ ಈಗಲೂ ಶೋಧ ನಡೆಸಲಾಗುತ್ತಿದೆ. ವಿಶ್ವದಾದ್ಯಂತ ಹಂದಿಗಳಲ್ಲಿ ಸ್ವೈನ್ ಇನ್‍ಫ್ಲುಯೆಂಜಾ ಆಗಾಗ ಉಲ್ಬಣಗೊಳ್ಳುತ್ತಲೇ ಇರುತ್ತದೆ. ಇದು ಸಾಮಾನ್ಯವಾಗಿ ಮನುಷ್ಯನ ಮೇಲೆ ಪರಿಣಾಮ ಬೀರದಿದ್ದರೂ ಸಾಂದರ್ಭಿಕವಾಗಿ ಕಂಡುಬರುತ್ತದೆ. ಹಂದಿಗಳ ಜೊತೆ ಸಂಪರ್ಕ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಈ ಸೋಂಕು ಗೋಚರಿಸುತ್ತದೆ. ಹಂದಿ ಜ್ವರದ ವೈರಾಣುಗಳು ಸಾಮಾನ್ಯವಾಗಿ ಎಚ್1ಎನ್1 ಉಪ ವಿಭಾಗಕ್ಕೆ ಸೇರಿದವಾಗಿರುತ್ತದೆ. ಈ ವೈರಸ್‍ಗಳ ಒಂದು ವಿಧದಿಂದ ಮಾನವರಲ್ಲಿ ಹಂದಿ ಜ್ವರ ಹರಡುತ್ತದೆ.

ಹಂದಿ ಜ್ವರ ಮಾನವರ ಮೇಲೆ ಏಕೆ ಪರಿಣಾಮ ಬೀರುತ್ತದೆ?

ಏಕೆಂದರೆ ಹಂದಿ ಜ್ವರ ವೈರಸ್ ಮಾರ್ಪಾಡುಗೊಂಡಿದ್ದು, ಈಗ ಮಾನವರಿಗೆ ಸೋಂಕು ಉಂಟು ಮಾಡಲು ಹಾಗೂ ಅವರ ನಡುವೆ ಹರಡಲು ಸಮರ್ಥವಾಗಿವೆ.

ಹಂದಿ ಜ್ವರಕ್ಕೆ ಸುಲಭವಾಗಿ ಯಾವ ಮಂದಿ ಗುರಿಯಾಗುತ್ತಾರೆ ?

ಆಸ್ತಮಾ, ಹೃದ್ರೋಗ, ಡಯಾಬಿಟಿಸ್, ರೋಗ ಪ್ರತಿರೋಧಕ ಶಕ್ತಿರಹಿತ ದೋಷಗಳು ಮತ್ತು ಸ್ಥೂಲಕಾಯ ಸೇರಿದಂತೆ ದೀರ್ಘಕಾಲದ ಅನಾರೋಗ್ಯ ಹೊಂದಿರುವ ಮಂದಿಯಲ್ಲಿ ಹಂದಿ ಜ್ವರ ಕಾಣಿಸಿಕೊಂಡ ಅನೇಕ ತೀವ್ರ ಪ್ರಕರಣಗಳು ಇವೆ. ಗರ್ಭಿಣಿಯರು, ಅದರಲ್ಲೂ ನಿರ್ದಿಷ್ಟವಾಗಿ ದ್ವಿತೀಯ ಮತ್ತು ತೃತೀಯ ತ್ರೈಮಾಸಿಕ ಹಂತದಲ್ಲಿರುವ ಮಹಿಳೆಯರಿಗೆ ಹಂದಿ ಜ್ವರದ ತೊಡಕುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಿಮವಾಗಿ, ವೃದ್ಧರು ಹಾಗೂ ದುರ್ಬಲರಲ್ಲಿ ಹಂದಿ ಜ್ವರದ ತೊಡಕುಗಳು ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಅವರು ಸಾಮಾನ್ಯವಾಗಿ ಈ ರೋಗದ ವಿರುದ್ಧ ಹೋರಾಡಲು ಅಲ್ಪ ಸಾಮಥ್ರ್ಯ ಹೊಂದಿರುತ್ತಾರೆ.

ಹಂದಿ ಜ್ವರದ ಹೊಸ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತದೆಯೇ?

h1n1virus1ಹಂದಿ ಜ್ವರದ ಹೊಸ ವೈರಸ್ ಅಧಿಕ ಅಂಟು ರೋಗವನ್ನು ಹೊಂದಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸಾಮಾನ್ಯ ಶೀತ ಮತ್ತು ವಿಷಮಶೀತ ಜ್ವರ (ಫ್ಲೂ) ರೀತಿಯಲ್ಲೇ ಹಂದಿ ಜ್ವರ ಹರಡುತ್ತದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಬಾಯಿ ಅಥವಾ ಮೂಗಿನಿಂದ ಬರುವ ಸಿಂಬಳದ ಮೂಲಕ ವೈರಸ್ ಪಸರಿಸುತ್ತದೆ. ಯಾರಾದರೂ ಕೆಮ್ಮಿದರೆ ಅಥವಾ ಸೀನಿದರೆ ಹಾಗೂ ಕೆಮ್ಮುವಾಗ ಇಲ್ಲವೇ ಸೀನುವಾಗ ಬಾಯಿ ಅಥವಾ ಮೂಗನ್ನು ಮುಚ್ಚಿಕೊಳ್ಳದಿದ್ದರೆ ಆ ಸೂಕ್ಷ್ಮ ಹನಿಗಳು ಒಂದು ಮೀಟರ್ (ಮೂರು ಅಡಿಗಳು) ತನಕ ಹರಡುತ್ತದೆ.  ವ್ಯಕ್ತಿಯ ಸನಿಹದಲ್ಲಿದ್ದಾಗ ಅವರೊಂದಿಗೆ ನೀವು ಉಸಿರಾಡುತ್ತಿರುತ್ತೀರಿ. ಅಥವಾ, ಯಾರಾದರೂ ತಮ್ಮ ಕೈಗಳಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ, ಆ ಸೂಕ್ಷ್ಮ ಹನಿಗಳು ಮತ್ತು ಅದರಲ್ಲಿನ ವೈರಾಣುಗಳು ಬಾಗಿಲ ಹಿಡುಪುಗಳು, ಹ್ಯಾಂಡ್ ರೈಲಿಂಗ್ಸ್, ಫೋನ್, ಕೀಬೋರ್ಡ್‍ಗಳು ಅಥವಾ ಹಸ್ತಲಾಘವದಂಥ ಆ ವ್ಯಕ್ತಿ ಸ್ಪರ್ಶಿಸುವ ಮೇಲ್ಮೈಗಳಿಗೆ ಸುಲಭವಾಗಿ ಪ್ರಸರಣವಾಗುತ್ತದೆ. ಇಂಥ ಮೇಲ್ಮೈಗಳನ್ನು ನೀವು ಸ್ಪರ್ಶಿಸಿ ನಿಮ್ಮ ಮುಖವನ್ನು ಸ್ಪರ್ಶಿಸಿದರೆ ವೈರಾಣು ನಿಮ್ಮ ವ್ಯವಸ್ಥೆಯೊಳಗೆ ಪ್ರವೇಶಿಸಿ ನಿಮ್ಮನ್ನು ಸೋಂಕಿತರನ್ನಾಗಿ ಮಾಡುತ್ತದೆ.

ಮೇಲ್ಮೈಗಳ ಮೇಲೆ ಎಷ್ಟು ಕಾಲ ವೈರಾಣುಗಳು ಜೀವಿಸುತ್ತವೆ?

ಫ್ಲೂ ವೈರಸ್‍ಗಳು ದೃಢ ಮೇಲ್ಮೈ ಮೇಲೆ 24 ಗಂಟೆಗಳ ಕಾಲ, ಹಾಗೂ ಮೃದು ಮೇಲ್ಮೈ ಮೇಲೆ ಸುಮಾರು 20 ನಿಮಿಷಗಳ ಕಾಲ ಜೀವಿಸುತ್ತವೆ.

ಜನರು ಹೆಚ್ಚಾಗಿ ಯಾವಾಗ ಸೋಂಕಿಗೆ ಒಳಗಾಗುತ್ತಾರೆ ?

ಹಂದಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ನಂತರ ಇತರರಿಗೆ ಸೋಂಕಿತ ವ್ಯಕ್ತಿಗಳು ಸೋಂಕನ್ನು ಉಂಟು ಮಾಡುತ್ತಾರೆ. ಆದಾಗ್ಯೂ. ಅವರು ವೈರಸ್‍ಗಳನ್ನು ತಮಗೆ ಅರಿವಿಲ್ಲದೇ ಐದು ದಿನಗಳ ಕಾಲ (ಮಕ್ಕಳಲ್ಲಿ ಏಳು ದಿನಗಳ ಕಾಲ) ಮರೆಮಾಚುವುದನ್ನು ಮುಂದುವರೆಸುತ್ತಾರೆ (ಉದಾಹರಣೆಗೆ ಕೆಮ್ಮು ಮತ್ತು ಸೀನುವಿಕೆ). ಅವರ ರೋಗಲಕ್ಷಣಗಳು ಕಡಿಮೆಯಾಗುತ್ತಿದ್ದಂತೆ ಜನರು ಕಡಿಮೆ ಮಟ್ಟದ ಸೋಂಕುಗಳಿಗೆ ಒಳಗಾಗುತ್ತಾರೆ, ಹಾಗೂ ಒಮ್ಮೆ ಅವರ ಲಕ್ಷಣಗಳು ಹೊರಟು ಹೋದರೆ ಅವರು ಇತರರಿಗೆ ಸೋಂಕು ಉಂಟು ಮಾಡುವುದಿಲ್ಲ.

ಹಂದಿ ಜ್ವರ ಹೊಂದಿದ್ದಾರೆಂದು ಶಂಕಿಸಲಾದ ಜನರ ಜೊತೆ ಸಂಪರ್ಕವನ್ನು ತಪ್ಪಿಸಬೇಕೆ ?

ಹಂದಿ ಜ್ವರ ಲಕ್ಷಣಗಳು ಮತ್ತು ಚಿಹ್ನೆಗಳನ್ನು ಹೊಂದಿರುವ ಎಲ್ಲ ಶಂಕಿತ ಪ್ರಕರಣಗಳನ್ನು ಮನೆಯಲ್ಲಿ ಸ್ವಯಂ ಪ್ರತ್ಯೇಕವಾಗಿ ಇರಿಸುವಂತೆ ಹಾಗೂ ಜನರೊಂದಿಗೆ ಅವರು ಸಂಪರ್ಕ ಹೊಂದದಂತೆ ನಿರ್ಬಂಧಿಸಲಾಗುತ್ತದೆ. ಶಾಲಾ-ಕಾಲೇಜುಗಳು ಅಥವಾ ಕೆಲಸ-ಕಾರ್ಯಗಳಿಗೆ ಹೋಗುವುದು ಸೇರಿದಂತೆ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಬಹುತೇಕ ಮಂದಿ ನಿರ್ವಹಿಸಬಹುದಾಗಿದೆ. ಹಂದಿ ಜ್ವರ ದೃಢಪಟ್ಟ ಒಂದು ಪ್ರಕರಣದೊಂದಿಗೆ ಮಕ್ಕಳು ಶಾಲೆಗೆ ಹಾಜರಾಗುವುದೂ ಇದರಲ್ಲಿ ಒಳಗೊಂಡಿದೆ.

ಹಂದಿ ಜ್ವರದ ಲಕ್ಷಣಗಳೇನು ?

ಜನರಲ್ಲಿ ಕಂಡು ಬರುವ ಹಂದಿ ಜ್ವರ ಲಕ್ಷಣಗಳು ಮತ್ತು ಚಿಹ್ನೆಗಳು ಸಾಮಾನ್ಯ ರೋಗಗಳಲ್ಲಿ ಕಂಡುಬರುವಂತೆಯೇ ಇರುತ್ತದೆ. ಜ್ವರ, ಕ್ಷೋಭೆ, ಹಸಿವು ಇಲ್ಲದಿರುವಿಕೆ ಮತ್ತು ಕೆಮ್ಮು ಸೇರಿದಂತೆ ಸಾಮಾನ್ಯವಾಗಿ ಮನುಷ್ಯರಲ್ಲಿ ಗೋಚರಿಸುವ ಋತುವಿಗೆ ಸಂಬಂಧಪಟ್ಟ ವಿಷಮಶೀತ ಜ್ವರದ ಲಕ್ಷಣಗಳನ್ನು ಹೊಂದಿರುತ್ತದೆ. ಹಂದಿ ಜ್ವರ ಇರುವ ಕೆಲವು ಮಂದಿಯಲ್ಲಿ ನೆಗಡಿಯಿಂದ ಸೋರುವ ಮೂಗು, ಗಂಟಲು ಊತ, ಹುಣ್ಣು, ತಲೆ ಸುತ್ತುವಿಕೆ, ವಾಂತಿ ಮತ್ತು ಬೇಧಿಗಳಂಥ ಚಿಹ್ನೆಗಳು ಸಹ ಕಂಡುಬರುತ್ತವೆ.

ಈ ಲಕ್ಷಣಗಳು ಎಷ್ಟು ದಿನಗಳ ಕಾಲ ಇರುತ್ತದೆ ?

ಯಾವುದೇ ರೀತಿಯ ಇನ್‍ಫ್ಲುಯೆಂಜಾ ಇರಲಿ, ರೋಗ ಚಿಹ್ನೆಗಳು ಮತ್ತು ಲಕ್ಷಣಗಳ ತೀವ್ರತೆ ಮತ್ತು ಅವಧಿಯು ಚಿಕಿತ್ಸೆ ಹಾಗೂ ವ್ಯಕ್ತಿಯ ಸನ್ನಿವೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆರಂಭದಲ್ಲಿ ಈ ಸೋಂಕಿಗೆ ಒಳಗಾದವರು ಒಂದು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ. ಸೋಂಕು ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದುವುದರಿಂದ ಹಂದಿ ಜ್ವರದ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿಕಟ ಸಂಪರ್ಕವನ್ನು ಸೋಂಕು ಹೊಂದಿರುವ ವ್ಯಕ್ತಿಯಿಂದ ತಗಲಬಹುದಾದ ಸಂಭವಕ್ಕೆ ಒಳಪಡುವಿಕೆ ಅಥವಾ ಒಂದು ಗಂಟೆಗಿಂತ ಹೆಚ್ಚು ಅವಧಿ ಹಾಗೂ ಒಂದು ಮೀಟರ್ ಅಥವಾ ಅದಕ್ಕಿಂತ ಕಡಿಮೆ ಅಂತರದೊಳಗೆ ಹಾಗೂ ಹಿಂದಿನ ಏಳು ದಿನಗಳ ಒಳಗೆ ಖಚಿತಗೊಂಡ ಪ್ರಕರಣದಲ್ಲಿ ಸಂಪರ್ಕಕ್ಕೆ ಒಳಪಡುವಿಕೆ ಎಂದು ವ್ಯಾಖ್ಯಾನಿಸಬಹುದು.

ಹಂದಿ ಜ್ವರದಿಂದ ಸಾವು ಹೇಗೆ ಸಂಭವಿಸುತ್ತದೆ ?

ಇತರ ಯಾವುದೇ ಫ್ಲೂನಂತೆ, ನ್ಯೂಮೊನಿಯಾ ರೀತಿಯ ಯಾವುದೇ ತೊಡಕುಗಳು ರೋಗಿಗಳಲ್ಲಿ ಕಾಣಿಸಿಕೊಂಡರೆ ಹಂದಿ ಜ್ವರದಿಂದ ಅವರು ಸಾವಿಗೀಡಾಗಬಹುದು.

ಫೇಸ್‍ಮಾಸ್ಕ್‍ನನ್ನು ಯಾರು ಹಾಕಿಕೊಳ್ಳಬೇಕು ?

ರೋಗಿಗಳಿಂದ ವೈರಸ್ ಸೋಂಕು ತಗುಲುವ ಸಂಭವವನ್ನು ಕಡಿಮೆ ಮಾಡಲು ರೋಗ ಲಕ್ಷಣಗಳಿರುವ ವ್ಯಕ್ತಿಯೊಬ್ಬನೊಂದಿಗೆ ನಿಕಟ ಸಂಪರ್ಕ ಹೊಂದಬೇಕಾದಲ್ಲಿ (ಒಂದು ಮೀಟರ್ ಒಳಗೆ) ಆರೋಗ್ಯ ಆರೈಕೆ ಕಾರ್ಯಕರ್ತರು ಫೇಸ್‍ಮಾಸ್ಕ್‍ನನ್ನು ಧರಿಸುವುದು ಸೂಕ್ತ. ಆದಾಗ್ಯೂ, ಆರೋಗ್ಯವಂತ ಮಂದಿ ಪ್ರತಿದಿನದ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಲು ಫೇಸ್‍ಮಾಸ್ಕ್‍ಗಳನ್ನು ಧರಿಸುವ ಅಗತ್ಯವಿಲ್ಲ. ಒಬ್ಬ ವ್ಯಕ್ತಿಯ ಉಸಿರಾಟದಿಂದ ಕುಂಠಿತಗೊಂಡಾಗ ಕಡಿಮೆ ಪರಿಣಾಮಕಾರಿಯಾಗುವುದರಿಂದ ಫೇಸ್‍ಮಾಸ್ಕ್‍ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ತಮ್ಮ ಮಾಸ್ಕ್‍ನ ಹೊರ ಮೇಲ್ಮೈನನ್ನು ಅವರು ಮುಟ್ಟಿದಾಗ ತಮಗೇ ಸೋಂಕು ತಗುಲಬಹುದು ಅಥವಾ ಹಳೆಯ ಮಾಸ್ಕ್‍ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡದಿದ್ದರೆ ಇತರರಿಗೆ ಸೋಂಕುಗಳು ತಗುಲಬಹುದು. ಅಂತಿಮವಾಗಿ, ಫೇಸ್‍ಮಾಸ್ಕ್‍ನನ್ನು ಧರಿಸುವುದು ಸಮಾಧಾನ ತರಬಹುದು. ಕೈಗಳ ಉತ್ತಮ ಸ್ವಚ್ಚತೆಯತ್ತ ಜನರು ಗಮನಹರಿಸಬೇಕು. ಅನಾರೋಗ್ಯಕ್ಕೆ ಒಳಗಾದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು ಹಾಗೂ ಕೆಮ್ಮಿದಾಗ ಮತ್ತು ಸೀನಿದಾಗ ತಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಬೇಕು.

ಸೋಂಕು ತಗುಲಿದೆ ಎಂದು ಅನ್ನಿಸಿದರೆ ಏನು ಮಾಡಬೇಕು?

ಫ್ಲೂ ರೀತಿಯ ರೋಗ ಚಿಹ್ನೆ ಮತ್ತು ಲಕ್ಷಣಗಳು ಇದ್ದರೆ ಹಾಗೂ ಹಂದಿ ಜ್ವರ ಇರಬಹುದೆಂಬ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬರಬೇಕಾಗುತ್ತದೆ ಎಂದು ಅನಿಸಿದರೆ, ಮನೆಯಲ್ಲೇ ಇರಿ ; ಹಾಗೂ ವೈದ್ಯರನ್ನು ಸಂಪರ್ಕಿಸಿ.

ಹಂದಿ ಜ್ವರವನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದೇ ?

ಹಂದಿ ಜ್ವರವನ್ನು ವೈರಾಣು ಪ್ರತಿರೋಧಕ ಔಷಧಿಗಳ ಮೂಲಕ ಚಿಕಿತ್ಸೆ ನೀಡಬಹುದಾಗಿದೆ ಎಂದು ಪರೀಕ್ಷೆಗಳು ತೋರಿಸಿವೆ. ಆದಾಗ್ಯೂ ಚಿಕಿತ್ಸೆಯನ್ನು ಪರಿಣಾಮಕಾರಿಯನ್ನಾಗಿಸಲು ಆರಂಭಿಕ ಹಂತದಲ್ಲೇ ಔಷಧಗಳನ್ನು ನೀಡಬೇಕು.

ಗರ್ಭಿಣಿಯರಲ್ಲಿ ಹಂದಿ ಜ್ವರವು ವಿಶೇಷ ಗಂಡಾಂತರ ಉಂಟು ಮಾಡುತ್ತದೆಯೇ ?

ಗರ್ಭಧಾರಣೆ ವೇಳೆ, ಅದರಲ್ಲೂ ಎರಡನೇ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ ಯಾವುದೇ ರೀತಿಯ ಫ್ಲೂನಂಥ ತೊಡಕುಗಳ ಸಂಭವ ಹೆಚ್ಚಾಗಿರುತ್ತದೆ.

ಗರ್ಭಿಣಿಯಾಗಿದ್ದರೆ ವೈರಾಣು ಪ್ರತಿರೋಧಕ ಔಷಧಗಳನ್ನು ತೆಗೆದುಕೊಳ್ಳಬಹುದೇ ?

 ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು. ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಔಷಧಿಯನ್ನು ಬಳಸಿ ಭ್ರೂಣವನ್ನು ತಲುಪದಂತೆ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಗರ್ಭಧಾರಣೆ ವೇಳೆ ವೈರಾಣು ಪ್ರತಿರೋಧಕ ಚಿಕಿತ್ಸೆಯ ಗಂಡಾಂತರಗಳ ಬಗ್ಗೆ ತಜ್ಞರ ಸಮೂಹವೊಂದು ಪರಾಮರ್ಶೆ ನಡೆಸಿದ್ದು, ಇದರ ಪರಿಣಾಮ ತುಂಬಾ ಕಡಿಮೆಯದ್ದಾಗಿದ್ದು, ಹಂದಿ ಜ್ವರ ಲಕ್ಷಣದಿಂದ ಉಂಟಾಗುವ ಗಂಡಾಂತರಕ್ಕಿಂತ ತುಂಬಾ ಕಡಿಮೆ ಇರುತ್ತದೆ.

ಪ್ರಯಾಣಿಕರಿಗೆ ನೀಡುವ ಸಲಹೆಗಳೇನು ?

ಪ್ರಯಾಣಕ್ಕೂ ಮುನ್ನ, ತಾವು ಭೇಟಿ ನೀಡುವ ಪ್ರದೇಶದ ಬಗ್ಗೆ ನಿರ್ದಿಷ್ಟ ಮಾಹಿತಿ ಹೊಂದುವುದು ಸೂಕ್ತ. ಸಾರ್ವಜನಿಕ ಸಾರಿಗೆ ಬಳಸುವುದರ ಬಗ್ಗೆ ಹೆಚ್ಚಿನ ಆತಂಕ ಬೇಡ. ಹಾಗೆಯೇ ಸಾರ್ವಜನಿಕ ಸ್ಥಳಗಳನ್ನು ಬಳಸುವುದರಲ್ಲಿ ಹೆಚ್ಚಿನ ಅಪಾಯವೇನು ಇಲ್ಲ. ಯಾರಿಗಾದರೂ ಹಂದಿ ಜ್ವರದ ವಿಪರೀತ ಆತಂಕ ಅಥವಾ ಅನಾರೋಗ್ಯದ ಅನುಭವವಿದ್ದರೆ ಪ್ರಯಾಣಿಸದೆ ಮನೆಯಲ್ಲೇ ಇರುವುದು ಸೂಕ್ತ.

ಹಂದಿ ಮಾಂಸ ತಿನ್ನುವುದು ಸುರಕ್ಷಿತವೇ ?

ಹೌದು. ಸೋಂಕಿಗೆ ಒಳಗಾದ ಪ್ರಾಣಿಗಳಿಂದ ಮಾಂಸವನ್ನು ತಿನ್ನುವ ಮೂಲಕ ಹಂದಿ ಜ್ವರ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದಾಗ್ಯೂ, ಮಾಂಸವನ್ನು ಸರಿಯಾಗಿ ಬೇಯಿಸುವುದು ಅಗತ್ಯ. 70 ಡಿಗ್ರಿ ಸೆಲ್ಷಿಯನ್ (158 ಡಿಗ್ರಿ ಫ್ಯಾರ್ಹೆನ್‍ಹಿಟ್) ಉಷ್ಣಾಂಶವು ವೈರಸ್‍ನನ್ನು ಕೊಲ್ಲುತ್ತದೆ. ಹಂದಿ ಮಾಂಸವು ಪೋರ್ಕ್, ಬೆಕಾನ್, ಮತ್ತು ಹ್ಯಾಮ್ ಹಾಗೂ ಪೋರ್ಕ್ ಉತ್ಪನ್ನಗಳನ್ನು ಒಳಗೊಂಡಿರುತ್ತದೆ.

ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು

 

 

 

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!