ಹಲಸಿನ ಪಾಕ ಸ್ಪರ್ಧೆ- nGV Natural Industry ಆಯೋಜನೆ

ಹಲಸಿನ ಪಾಕ ಸ್ಪರ್ಧೆ ಹಲಸಿನ ಅಡುಗೆ ವೈವಿಧ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬೆಂಗಳೂರಿನ nGV Natural Industry Pvt Ltd  ವೈದ್ಯಲೋಕ ಮಾಸಿಕದ ಜೊತೆಗೂಡಿ ಆಯೋಜಿಸಿದೆ. ನೀವು ತಯಾರಿಸುವ ಹಲಸಿನ ಗುಜ್ಜೆ, ಹಲಸಿನ ಬೀಜ, ತೊಳೆ ಹಾಗು ಹಣ್ಣಿನ ಅಡುಗೆಯ ಹಂತದ ತಯಾರಿಕೆಯ ಫೋಟೋವನ್ನು ಹಾಗು ಸಾಧ್ಯವಾದಲ್ಲಿ ವಿಡಿಯೋವನ್ನು ಆಯೋಜಕರಿಗೆ ಕಳುಹಿಸಬೇಕು.

ಹಲಸಿನ ಪಾಕ ಸ್ಪರ್ಧೆ- nGV Natural Industry ಆಯೋಜನೆ

ಬೆಂಗಳೂರು: ಹಲಸು – ಎಳೆ ಕಾಯಿಯಿಂದ (ಗುಜ್ಜೆ ಹಲಸು) ಸಿಹಿಯಾದ ಹಣ್ಣಿನವರೆಗೆ ವಿವಿಧ ರೀತಿಯ ರುಚಿಕರ ಅಡುಗೆ ತಯಾರಿಸಲು ಬಳಸುವ ಸುಮಧುರ ಹಣ್ಣು, ಮಾತ್ರವಲ್ಲ ತರಕಾರಿಯೂ ಕೂಡ. ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ಗಾತ್ರ, ವಿನ್ಯಾಸ, ರುಚಿ, ಬಳಕೆಯ ಬಗ್ಗೆ ಯೋಚಿಸಿದರೆ ಹಲಸು ನಿಜವಾದ ಮಹಾರಾಜ. ಗಾತ್ರದಲ್ಲಿ ಮಾತ್ರವಲ್ಲ ಪೋಷಕಾಂಶದ ವಿಚಾರದಲ್ಲೂ..

ಹಲಸಿನ ಪ್ರತಿಯೊಂದು ಭಾಗವು ಉಪಯೋಗಕಾರಿ, ಎಲೆ, ಎಳೆ ಹಲಸು, ಕಾಯಿ, ಹಣ್ಣು ಮತ್ತು ಬೀಜವು ಕೂಡ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಕಬ್ಬಿಣ, ಹಾಗು ಫೈಬರ್ ಅಂಶಗಳಿವೆ. ಆದರೆ ನಾವು ಇಂತಹ ಉತ್ತಮ ಆರೋಗ್ಯಕರ ಅಂಶಗಳನ್ನೊಳಗೊಂಡ, ಯಥೇಚ್ಚವಾಗಿ ಲಭ್ಯವಿರುವ ಈ ಹಲಸನ್ನು ಸರಿಯಾಗಿ ಬಳಸುತ್ತಿಲ್ಲ.

Also Read: Jackfruit a super fruit with full of nutrition

ಈ ನಿಟ್ಟಿನಲ್ಲಿ ಹಲಸಿನ ಅಡುಗೆ ವೈವಿಧ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬೆಂಗಳೂರಿನ nGV Natural Industry Pvt Ltd ಹಲಸಿನ ಪಾಕ ಸ್ಪರ್ಧೆಯನ್ನು ಆಯೋಜಿಸಿದ್ದು ನಮ್ಮ ಹೆಮ್ಮೆಯ ವೈದ್ಯಲೋಕ ಮಾಸಿಕದ ಜೊತೆಗೂಡಿ. ಆರೋಗ್ಯಕರ ಸಾಂಪ್ರದಾಯಿಕ ತರಕಾರಿಗಳನ್ನು ನಗರ ಪ್ರದೇಶದ ದಿನನಿತ್ಯದ ಅಡುಗೆಯಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನ nGV Natural Industry Pvt Ltd – ಸ್ಟಾರ್ಟ್ ಅಪ್ ಕಂಪನಿ ಸುಲಭವಾಗಿ ಉಪಯೋಗಿಸುವ ರೀತಿಯಲ್ಲಿ ರೆಡಿ ಟು ಕುಕ್ (Ready to Cook) ಆಗಿ ಗ್ರಾಹಕರನ್ನು ಆಕರ್ಷಿಸಿದೆ.

ಬಾಳೆದಿಂಡು, ಬಾಳೆ ಹೂ, ಎಳೆಬಿದಿರು (ಕಳಲೆ), ಎಳೆ ಹಲಸಿನ ಕಾಯಿ (ಗುಜ್ಜೆ ಹಲಸು), ಸುವರ್ಣ ಗೆಡ್ಡೆ, ಕೆಸವಿನ ಗೆಡ್ಡೆ, ಸಿಹಿ ಕುಂಬಳಕಾಯಿ ಇತ್ಯಾದಿ ತರಕಾರಿಗಳು ನಮ್ಮ ಹಿತ್ತಲ ಬೆಳೆಯಾಗಿ ದಿನ ನಿತ್ಯದ ಅಡುಗೆಯ ತರಕಾರಿಯಾಗಿತ್ತು. ಆದರೆ ಈ ತರಕಾರಿಗಳನ್ನು ಉಪಯೋಗಿಸಲು ತಯಾರಿ ಮಾಡಲು ಕಷ್ಟವಾದ ಕಾರಣ ಕ್ರಮೇಣ ಬಳಕೆಯು ಕಡಿಮೆಯಾಗಿದೆ. nGV Natural ಸಂಸ್ಥೆಯ ಮೂಲಕ ಜನರು ಸುಲಭವಾಗಿ ಸಾಂಪ್ರದಾಯಿಕ ತರಕಾರಿಗಳನ್ನು ಉಪಯೋಗಿಸಲು ಸಾಧ್ಯವಾದದ್ದು ಸಂತೋಷದ ವಿಷಯ.

ನೀವು ತಯಾರಿಸುವ ಹಲಸಿನ ಗುಜ್ಜೆ, ಹಲಸಿನ ಬೀಜ, ತೊಳೆ ಹಾಗು ಹಣ್ಣಿನ ಅಡುಗೆಯ ಹಂತದ ತಯಾರಿಕೆಯ ಫೋಟೋವನ್ನು ಹಾಗು ಸಾಧ್ಯವಾದಲ್ಲಿ ವಿಡಿಯೋವನ್ನು ಆಯೋಜಕರಿಗೆ ಕಳುಹಿಸಬೇಕು. ಕಡೆಯ ದಿನಾಂಕ ಮೇ 25 2022. ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ಸಂಖ್ಯೆ:

ಸೌಖ್ಯ ಮೋಹನ್ 97394 53236/ ಪವಿತ್ರ ನವೀನ್ 63613 93996

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!