ಉತ್ತಮ ಜಲಚಿಕಿತ್ಸೆ – ಉಷಃಪಾನ

ಸ್ವಾಸ್ಠ್ಯರಕ್ಷಣೆಗಾಗಿ, ಸುದೀರ್ಘ ಆರೋಗ್ಯಕರ ಜೀವನಕ್ಕಾಗಿ ಉತ್ತಮ ದಿನಚರಿಯನ್ನು ಪಾಲಿಸುವುದು ಅತ್ಯವಶ್ಯ. ಆಯುರ್ವೇದದಲ್ಲಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಆರೋಗ್ಯದ ದೃಷ್ಟಿಯಿಂದ ಪಾಲಿಸಬೇಕಾದ ನಿಯಮಗಳನ್ನು, ಆರೋಗ್ಯದ ಸಿದ್ದ ಸೂತ್ರಗಳನ್ನು ದಿನಚರಿಯಲ್ಲಿ ನಿರ್ದೇಶಿಸಲಾಗಿದೆ.
ಅದರಂತೆ ಬ್ರಹ್ಮಮುಹೂರ್ತದಲ್ಲಿ ಬೆಳಿಗ್ಗೆ ಏಳುವುದರೊಂದಿಗೆ ದಿನಚರಿ ಪ್ರಾರಂಭವಾಗುವುದು. ಬ್ರಹ್ಮಮುಹೂರ್ತವು ಪ್ರದೇಶದಿಂದ ಪ್ರದೇಶಲ್ಲಿ ಭಿನ್ನವಾದರೂ, ಅಂದಾಜು ಸೂರ್ಯೋದಕ್ಕೆ ಮುಂಚಿನ 2 ಮುಹೂರ್ತ ಅಂದರೆ ಸೂರ್ಯೋದಯಕ್ಕೆ ಮುಂಚಿನ 1.30 ಗಂಟೆಯ ಕಾಲವನ್ನು ಬ್ರಹ್ಮಮುಹೂರ್ತ ಎನ್ನಲಾಗುವುದು. ಆರೋಗ್ಯ ಹಾಗೂ ಆಧ್ಯಾತ್ಮಿಕ ಸಿದ್ದಿಗೆ ಬ್ರಹ್ಮಮುಹೂರ್ತ ಬಹಳ ಪ್ರಶಸ್ತ ಸಮಯವಾಗಿದೆ.
ಈ ಕಾಲದಲ್ಲಿ ಸೇವಿಸುವ ನೀರನ್ನು ಉಷಃಪಾನ ಎನ್ನಲಾಗುವುದು. ರಾತ್ರಿಪರ್ಯಂತ ಶುದ್ದವಾದ ನೀರನ್ನು ಶೇಖರಿಸಿ ಉಷಃ ಕಾಲದಲ್ಲಿ ಅಥವಾ ಬ್ರಹ್ಮಮುಹೂರ್ತದಲ್ಲಿ ಸೇವಿಸಲು ತಿಳಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಉಷಃಪಾನವು ಮಹತ್ವದ್ದಾಗಿದ್ದು, ಮನಸನ್ನು ಉಲ್ಲಾಸಭರಿತವಾಗಿಸಿ, ದೇಹಕ್ಕೆ ನವಶಕ್ತಿಯನ್ನು ತುಂಬುತ್ತದೆ. ಅಲ್ಲದೇ ಹಲವಾರು ಆರೋಗ್ಯದ ಲಾಭವನ್ನು ಉಷಾಪಾನದಿಂದ ಪಡೆದುಕೊಳ್ಳಬಹುದು.
ಆಯುರ್ವೇದದ ಆಚಾರ್ಯರಾದ ಭಾವಪ್ರಕಾಶರು ಉಷಃಪಾನದ ಮಹತ್ವವನ್ನು ತಿಳಿಸುತ್ತಾ, ಯಾರು ಸೂರ್ಯೋದಯಕ್ಕೂ ಮುನ್ನ 8 ಪ್ರಸ್ರುತಿ (ಅಂದಾಜು 1.5 ಲೀ) ನೀರನ್ನು ಸೇವಿಸುವರೋ, ಅವರು ಸರ್ವರೋಗಗಳಿಂದ ಮುಕ್ತರಾಗಿ, ಶಾತಾಯುಷ್ಯ ಜೀವಿಸುವುದರೊಂದಿಗೆ, ದುರ್ಬಲತೆ ಹಾಗೂ ವೃದ್ದಾಪ್ಯದಿಂದ ದೂರವಾಗುತ್ತಾರೆ ಎಂದು ತಿಳಿಸಿದ್ದಾರೆ.
ಸೇವಿಸುವ ವಿಧಾನ
ಹಿಂದಿನರಾತ್ರಿ ಶುದ್ದವಾದ ನೀರನ್ನು ತಾಮ್ರ ಅಥವಾ ಕಂಚಿನ ಪಾತ್ರೆಯಲ್ಲಿ ಶೇಖರಿಸಿಡಬೇಕು. ಬೇಸಿಗೆಯಲ್ಲಿ ಮಡಿಕೆ ನೀರನ್ನು ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ನೀರನ್ನು ಉಪಯೋಗಿಸಬಹುದು. ಬೆಳಿಗ್ಗೆ ಬ್ರಹ್ಮಮುಹೂರ್ತದಲ್ಲಿ ಹಲ್ಲು ಉಜ್ಜದೆ, ಮಲವಿಸರ್ಜನೆ ಮಾಡುವ ಮೊದಲು. ಸುಖಾಸನದಲ್ಲಿ ಕುಳಿತು ಸಣ್ಣ ಸಣ್ಣ ಗುಟುಕುಗಳಾಗಿ ನೀರನ್ನು ಬಾಯಲ್ಲಿ ಇರಿಸಿ ದೇರ್ಘಶ್ವಾಸದೊಂದಿಗೆ ನೀರನ್ನು ಸೇವಿಸಬೇಕು.
ಕೆಮ್ಮು, ದಮ್ಮು, ಶ್ವಾಸಕೋಶತೊಂದರೆಯ ರೋಗಿಗಳು ಕಾಯಿಸಿ ಆರಿಸಿದ ನೀರನ್ನು ಅಥವಾ ಬೆಚ್ಚನೆಯ ನೀರನ್ನು ಸೇವಿಸಬಹುದು. ನೀರನ್ನು ಸೇವಿಸಿದ ತಕ್ಷಣ ಆಹಾರವನ್ನು ಸೇವಿಸಬಾರದು.

ಉಪಯೋಗಗಳು

  • ದೇಹಕ್ಕೆ ಅಗತ್ಯ ನೀರಿನಾಂಶವನ್ನು ಒದಗಿಸುತ್ತದೆ
  • ತ್ರಿದೋಶಗಳಾದ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿರಿಸುತ್ತದೆ
  • ಅನುಪಯೋಗಿ ಮತ್ತು ರೋಗಗ್ರಸ್ತ ಶಾರೀರಿಕ ಧಾತುಗಳಿಗೆ ನವಚೈತನ್ಯವನ್ನು ನೀಡುತ್ತದೆ
  • ಶಾರೀರಿಕ ದ್ರವಾಂಶವನ್ನು ಅಥವ ನೀರಿನಾಂಶವನ್ನು ನಿಯಂತ್ರಿಸುತ್ತದೆ.
  • ರಾತ್ರಿಯಿಡೀ ಬಾಯಲ್ಲಿ ಒಸರುವ ಉಗುಳಿನಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಮಾಡುವ ಗುಣವಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಕರುಳಿಗೆ ಇದು ಸೇರಿ ರೋಗ ನಿಯಂತ್ರಣವಾಗುತ್ತದೆ.

ಹಲವು ರೋಗಗಳಲ್ಲಿ ಇದರ ಉಪಯೋಗಗಳು

  • ಇಡೀ ರಾತ್ರಿ ಏನು ಸೇವಿಸದ ನಂತರ ಪ್ರಾತಃ ಕಾಲದಲ್ಲಿ ಶುದ್ದನೀರನ್ನು ಸೇವಿಸಿದಾಗಿ ದೇಹಕ್ಕೆ ಅಗತ್ಯ ನೀರಿನಾಂಶ ಲಭ್ಯವಾಗುತ್ತದೆ. ಬಹುಪ್ರಮಾಣದ ನೀರು ಗುದದ್ವಾರದಲ್ಲಿ ಒತ್ತಡವನ್ನು ಹಾಕುತ್ತಾ ಮಲವನ್ನು ಮೃದುವಾಗಿಸಿ, ದೇಹದಿಂದ ಸಂಪೂರ್ಣವಾಗಿ ಹೊರಹಾಕುತ್ತದೆ.
  • ರಾತ್ರಿಯಿಡೀ ಒಸರುವ ದೇಹದೊಳಗಿನ ಸ್ರಾವಗಳನ್ನು ಶುದ್ದಿಗೊಳಿಸುವ ಒಂದು ನೈಸರ್ಗಿಕ ವಿಧಾನವಾಗಿದೆ. ದೇಹವನ್ನು ಸಮ ತೋಲನದಲ್ಲಿರಿಸಿ ಕರುಳನ್ನು ಶುದ್ಧಿಗೊಳಿಸುತ್ತಾ, ಪೋಷಕಾಂಶಗಳನ್ನು ದೇಹವು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ಸಹಕಾರಿಯಾಗುತ್ತದೆ.
  • ಮೂತ್ರ ಹಾಗೂ ಮಲವಿಸರ್ಜನೆಯಿಂದ ದೇಹದಲ್ಲಿನ ಕಲ್ಮಶ ಅಥವಾ ಟಾಕ್ಸಿನ್ಸ್ ಅನ್ನು ಸಮರ್ಪಕ ರೀತಿಯಲ್ಲಿ ಹೊರಹಾಕಲಾಗುವುದು. ಅದ್ದರಿಂದ ಚರ್ಮರೋಗ, ಪೈಲ್ಸ್, ಅಲರ್ಜಿ ರೋಗಗಳಲ್ಲಿ ಉಪಯೋಗಕಾರಿ.
  • ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಅತೀ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ನೀರು, ದೇಹದ ಚಯಾಪಚಯದ ದರ (ಮೆಟಬಾಲಿಕ್ ದರ)ವನ್ನು ಹೆಚ್ಚಿಸುತ್ತದೆ. ಸುಮಾರು 500 ಎಂ ಎಲ್ ನೀರು ಶೇಕಡ 30 ಪ್ರತಿಶತ ಚಯಾಪಚಯ ದರವನ್ನು ನೀರು ಸೇವಿಸಿದ 10 ನಿಮಿಷದೊಳಗಾಗಿ ಹೆಚ್ಚಿಸಿ, 30-40 ನಿಮಿಷದಲ್ಲಿ ಗಣನೀಯವಾಗಿ ಏರುತ್ತದೆ ಮತ್ತು ಇದರ ಪ್ರಭಾವವು ಸೇವಿಸಿದ 1 ಗಂಟೆಯವರೆಗೂ ಇರುತ್ತದೆ. ಅದ್ದರಿಂದ ಅತಿಯಾದ ಬೊಜ್ಜುತನ, ತೂಕ ಇಳಿಸುವವರಿಗೆ ಉತ್ತಮ ಚಿಕಿತ್ಸೆ.
  • ಮೂತ್ರಕೋಶವನ್ನು ಪ್ರಚೋದಿಸಿ, ವಿಷಾಂಶವನ್ನು ದೇಹದಿಂದ ಹೊರಹಾಕುವುದರಿಂದ ರಕ್ತಶುದ್ದಿಗೊಳ್ಳುತ್ತದೆ. ಕೊದಲು ಉದುರುವಿಕೆ, ಬಿಳಿಕೂದಲಿನ ಸಮಸ್ಯೆಯನ್ನು ನಿವಾರಿಸಿ ವೃದ್ದಾಪ್ಯವನ್ನು ಮುಂದೂಡುತ್ತದೆ.
  • ದೇಹದಲ್ಲಿನ ವಿಪರೀತ ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ. ಮೆದುಳಿನ ಒತ್ತಡವನ್ನು ಕಡಿಮೆಮಾಡುವುದರಿಂದ ಮೈಗ್ರೇನ್ ತಲೆನೋವು, ಟೆನ್ಷನ್ ತಲೆನೋವಿಗೆ ಇದು ಉಪಯೋಗಕಾರಿ
    ಮಲಬದ್ದತೆಯನ್ನು ನಿವಾರಿಸಿ ದೇಹವನ್ನು ಲಘುವಾಗಿಸಿ, ಮನಸನ್ನು ಆಹ್ಲಾದಕರ ವಾಗಿಸುತ್ತದೆ.
  • ಅಲ್ಲದೆ ವಿಶೇಷವಾಗಿ, ತಲೆನೋವು, ಹುಣ್ಣುಗಳಿಗೆ, ಪೈಲ್ಸ್, ನೇತ್ರವಿಕಾರಗಳಿಗೆ, ಅಸಿಡಿಟಿ, ರಕ್ತಸ್ರಾವದಂತಹ ರೋಗಗಳಿಗೆ ಉಷಾಪಾನ ರಾಮಬಾಣ.

– ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ಞರು, ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊ.: 9964022654   email : drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!